ದೆಹಲಿ ಬಹುಮುಖ್ಯ ಗಡಿಗಳ ಹೆದ್ದಾರಿಗಳಲ್ಲಿ ನಡೆಯುತ್ತಿರುವ ಬೃಹತ್ ರೈತ ಪ್ರತಿಭಟನೆಯು ಪಂಜಾಬ್‌ನ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದಲ್ಲದೆ “ರಾಷ್ಟ್ರೀಯ ಭದ್ರತೆಗೆ” ಅಪಾಯವನ್ನುಂಟು ಮಾಡುತ್ತದೆ. ಹಾಗಾಗಿ ಆದಷ್ಟು ಬೇಗ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯ ನಂತರ ಹೇಳಿದ್ದಾರೆ.
“ರೈತರು ಮತ್ತು ಕೇಂದ್ರದ ನಡುವೆ ಚರ್ಚೆಗಳು ನಡೆಯುತ್ತಿವೆ, ಇದನ್ನು ಪರಿಹರಿಸಲು ನಾನು ಏನೂ ಇಲ್ಲ. ಗೃಹ ಸಚಿವರೊಂದಿಗಿನ ನನ್ನ ಸಭೆಯಲ್ಲಿ ನಾನು ನನ್ನ ವಿರೋಧವನ್ನು ಪುನರುಚ್ಚರಿಸಿದ್ದೇನೆ ಮತ್ತು ಇದು ನನ್ನ ರಾಜ್ಯದ ಆರ್ಥಿಕತೆ ಮತ್ತು ರಾಷ್ಟ್ರದ ಸುರಕ್ಷತೆಯ ಮೇಲೆ ಪರಿಣಾಮ ಬೀರುವುದರಿಂದ ಸಮಸ್ಯೆಯನ್ನು ಬಗೆಹರಿಸುವಂತೆ ವಿನಂತಿಸಿದೆ” ಎಂದು ಅಮರಿಂದರ್ ಸಿಂಗ್ ಹೇಳಿದರು.
ಇದನ್ನೂ ಓದಿ: ದೆಹಲಿ ಚಲೋ: ಹೋರಾಟದಲ್ಲಿ ತಮ್ಮದೆ ಛಾಪು ಮೂಡಿಸಿದ ರೈತ ಮಹಿಳೆಯರು!
ಪಂಜಾಬ್ ಮುಖ್ಯಮಂತ್ರಿ ದೆಹಲಿಯಲ್ಲಿ ಅಮಿತ್ ಷಾ ಅವರೊಂದಿಗೆ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಮತ್ತು ಸರ್ಕಾರದ ನಡುವೆ ಪ್ರಸ್ತುತ ನಿಲುವನ್ನು ಪರಿಹರಿಸುವ ಮಾರ್ಗಗಳ ಕುರಿತು ಚರ್ಚೆ ನಡೆಸಿದರು. ಅಮರಿಂದರ್ ಸಿಂಗ್ ಪ್ರತಿಭಟನಾಕಾರರನ್ನು ಸಕ್ರಿಯವಾಗಿ ಬೆಂಬಲಿಸುತ್ತಿದ್ದಾರೆ ಎಂದು ಆಡಳಿತಾರೂಡ ಬಿಜೆಪಿಯ ಹಲವಾರು ನಾಯಕರು ಆರೋಪಿಸಿದ್ದಾರೆ.
ಸಂಸತ್ತಿನ ತುರ್ತು ಅಧಿವೇಶನವನ್ನು ಕರೆಯಲು ಮತ್ತು ವಿವಾದಾತ್ಮಕ ಕಾನೂನುಗಳನ್ನು ವಾಪಾಸು ಪಡೆಯಲು ಇಂದಿನ ಮಾತುಕತೆ “ಕೊನೆಯ ಅವಕಾಶ” ಎಂದು ಆಕ್ರೋಶಗೊಂಡ ರೈತರು ನಿನ್ನೆ ಹೇಳಿದ್ದಾರೆ. ಹೋರಾಟವು ಇಂದಿಗೆ ಎಂಟನೇ ದಿನಕ್ಕೆ ಕಾಲಿಟ್ಟುದ್ದು ಪ್ರತಿಭಟನಾ ನಿರತ ರೈತರು ದೆಹಲಿಯ ಐದು ಗಡಿಗಳನ್ನು ನಿರ್ಬಂಧಿಸಿದ್ದಾರೆ.


