ಉತ್ತರ ಪ್ರದೇಶದಲ್ಲಿ ಹಲವು ವಿರೋಧಗಳ ನಡುವೆಯೇ ಜಾರಿಗೆ ತರಲಾದ ಹೊಸ ಮತಾಂತರ ವಿರೋಧಿ ಸುಗ್ರೀವಾಜ್ಞೆಯಡಿ ಹಿಂದೂ ಮಹಿಳೆಯನ್ನು ಇಸ್ಲಾಂಗೆ ಪರಿವರ್ತಿಸಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ಮುಸ್ಲಿಂ ವ್ಯಕ್ತಿಯನ್ನು ಬಂಧಿಸಿದ್ದಾರೆ.
“ಲವ್ ಜಿಹಾದ್” ಅನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿ ಜಾರಿಗೊಳಿಸಲಾಗಿದ್ದ ಹೊಸ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಇದು ಮೊದಲನೆ ಪ್ರಕರಣವಾಗಿದೆ.
“ಮತಾಂತರಗೊಳ್ಳಲು ಒತ್ತಡ ಹೇರಿದ ಆರೋಪ ಹಿನ್ನಲೆ ಒವೈಸ್ ಅಹ್ಮದ್ ಎಂಬ ವ್ಯಕ್ತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ” ಎಂದು ಬರೇಲಿ ಜಿಲ್ಲಾ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ದೃಢಪಡಿಸಿದ್ದಾರೆ.
#bareillypoliceinnews #UPPInNews
➡️ धर्म परिवर्तन का दबाव बनाने का आरोपी उवैस गिरफ्तार, जेल भेजा।
➡️ अवैध खनन के ट्रैक्टर ट्राली किये सीज।
➡️ दुष्कर्म का आरोपित गिरफ्तार, जेल भेजा।
➡️ हेलमेट, सीट बेल्ट के साथ मास्क भी पहनिए जनाब। @Uppolice
#UPPolice pic.twitter.com/pc9HrXqbHX— Bareilly Police (@bareillypolice) December 3, 2020
ಇದನ್ನೂ ಓದಿ: ಲವ್ ಜಿಹಾದ್‌ಗೆ ಕೌಂಟರ್: ಅಂತರ್‌ಧರ್ಮೀಯ ವಿವಾಹಿತರಿಗೆ ಪ್ರೋತ್ಸಾಹ ಧನ ಘೋಷಿಸಿದ ಉತ್ತರಾಖಂಡ್!
21 ವರ್ಷದ ಮುಸ್ಲಿಂ ಯುವಕ ನನ್ನ ಮಗಳನ್ನು ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾರೆ ಎಂದು ಶರೀಫ್‌ನಗರ ಗ್ರಾಮದ ಟೀಕಾರಾಮ್ ಎಂಬುವವರು ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಒವೈಸ್ ಅಹ್ಮದ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಿಐಜಿ ರಾಜೇಶ್ ಕುಮಾರ್ ಪಾಂಡೆ ಗುರುವಾರ ತಿಳಿಸಿದ್ದಾರೆ.
’ಬಂಧಿತ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನನಗೆ ಹಿಂದೂ ಮಹಿಳೆಯೊಂದಿಗೆ ಯಾವುದೇ ಸಂಬಂಧವಿಲ್ಲ, ಆಕೆ ಒಂದು ವರ್ಷದ ಹಿಂದೆಯೇ ಮದುವೆಯಾಗಿದ್ದಾರೆ. ನಾನು ನಿರಪರಾಧಿ” ಎಂದು ಆರೋಪಿ ತಿಳಿಸಿದ್ದಾರೆ ಎಂದು ದಿ ಪ್ರಿಂಟ್ ಉಲ್ಲೇಖಿಸಿದೆ.
ಬಂಧಿತ ವ್ಯಕ್ತಿ ಮತ್ತು ತನ್ನ ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದಾಗಿನಿಂದ ಪರಿಚಿತರು. ಆಕೆಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದರು ಎಂದು ಯುವತಿಯ ತಂದೆ ಆರೋಪಿಸಿದ್ದಾರೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇಬ್ಬರೂ ಓಡಿಹೋಗಿ ಮದುವೆಯಾಗಲು ಯೋಚಿಸಿದ್ದರು. ಆದರೆ, ಸಾಧ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.