Homeಮುಖಪುಟಕನ್ನಡ ಸತಿಗೆ, ಮರಾಠಾ ಪತಿ! - ಡಿ.ಎಸ್ ಚೌಗಲೆ

ಕನ್ನಡ ಸತಿಗೆ, ಮರಾಠಾ ಪತಿ! – ಡಿ.ಎಸ್ ಚೌಗಲೆ

ಕನ್ನಡ ಮತ್ತು ಮರಾಠಿಯ ಸಂಬಂಧಕ್ಕೆ ಶತಮಾನಗಳ ಇತಿಹಾಸವಿದೆ. ಕಲೆ, ಸಂಗೀತ, ವಿಚಾರಗಳನ್ನು ಹಂಚಿಕೊಂಡ ಎರಡು ಭಾಷಿಕ ಸಮುದಾಯಗಳು ಬಹುಕಾಲದವರೆಗೆ ಪರಸ್ಪರ ಪ್ರಭಾವಕ್ಕೆ ಒಳಗಾಗಿ ಬೆಳೆದಿರುವ ಬಗೆಯ ಒಂದು ಝಲಕ್‍ಅನ್ನು ಈ ಲೇಖನ ನೀಡುತ್ತದೆ

- Advertisement -
- Advertisement -

ಸುಮಾರು ಹನ್ನೊಂದು ಹನ್ನೆರಡನೆಯ ಶತಮಾನದಿಂದಲೇ ಕನ್ನಡ ಮತ್ತು ಮರಾಠಿ, ಅಷ್ಟೇ ಏಕೆ ಆಂಧ್ರದ ಜನರ ಸಮಾಜ, ಸಂಸ್ಕೃತಿಯೊಂದಿಗೆ ಕೊಡುಕೊಳ್ಳುವಿಕೆ ಇದೆ. ಭಾಷಾವಾರು ಪ್ರಾಂತ್ಯಗಳು ರಚನೆಯಾಗಿ 50 ವರ್ಷಗಳಾಗಿರಬಹುದು. ಆದರೆ ಈ ಸಂಬಂಧಗಳು- ಮಾನವೀಯವಾದ ಸಂಬಂಧಗಳು ಏನಿವೆ-ಕನ್ನಡಿಗರ ನಡುವೆ, ಮರಾಠಿಗರ ನಡುವೆ, ತೆಲುಗಿನವರ ನಡುವೆ- ಇವುಗಳಿಗೆ ಒಂದು ಏಳೆಂಟು ನೂರು ವರ್ಷಗಳ ಇತಿಹಾಸವಿದೆ. ಇದನ್ನು ಅಷ್ಟು ಸುಲಭವಾಗಿ ಒಡೆದುಹಾಕಲು ಆಗುವುದಿಲ್ಲ. ಯಾವುದೇ ರಾಜಕೀಯ ಶಕ್ತಿಗೂ ಇದು ಸಾಧ್ಯವಿಲ್ಲ.

ತುಕಾರಾಮ, ಮಹಾರಾಷ್ಟ್ರದ ಮರಾಠಿ ಜನರ ಮನೆಮಾತಾಗಿರುವ ಒಬ್ಬ ಬಂಡಾಯ ಕವಿ. ತುಕಾರಾಮನನ್ನು ವೈದಿಕರು ತಮ್ಮವನನ್ನಾಗಿ ಮಾಡಿಕೊಳ್ಳುವ ಹುನ್ನಾರ ಮಾಡುತ್ತಲೇ ಬಂದಿದ್ದಾರೆ. ಇಂಥ ಪ್ರಯತ್ನಗಳು ಎಲ್ಲ ಕಾಲಕ್ಕೂ ನಡೆದಿರುವಂತಹವೆ. ತುಕಾರಾಮ ಮೂಲತಃ ಜನಸಮುದಾಯವನ್ನು ಜಾಗರ ಮಾಡುವ ಕವಿ. ಅಭಂಗಕಾರ. ನಮಗೆ ಬಸವಣ್ಣ ಹೇಗೊ ಹಾಗೇಯೇ ಮರಾಠಿಗರ ತುಕಾರಾಮ, ಒಬ್ಬ ಸುಧಾರಕನಾಗಿ ಕೆಲಸ ಮಾಡಿದ್ದಾನೆ.

‘ಕನ್ನಡ ಸತಿಗೆ, ಮರಾಠಾ ಪತಿ’ (ಮರಾಠಾ ಎಂದರೆ ಮರಾಠಿ ಮಾತನಾಡುವ ಮರಾಠಾ ಸಮುದಾಯ), ಅವರಿಬ್ಬರ ಸಂಸಾರ ಹೇಗಿರುತ್ತದೆ ಎಂಬುದನ್ನು ಹೀಗೆ ಹೇಳುತ್ತಾನೆ;

ನೀಡೆನಗೆ ಸಜ್ಜನರ ಸಹವಾಸವನು
ಅವಳು ಕರೆದಳು `ಬಾ ಇಲ್ಲಿ’ ಎಂದು
ಅವನು ನೀಡಿದನು ಸವಟು ತಂದು
ತುಕಾರಾಮನೆಂಬ ಪರಸ್ಪರ ಭೇದವಿದ್ದಲ್ಲಿ
ಸುಖದ ಬದಲಿಗೆ ದುಃಖವೇ ಬೆಳೆಯುವುದಲ್ಲಿ.

ಗೋದಾವರಿ ನದಿ ತಟದವರೆಗಿತ್ತು ಕರುನಾಡು ವಿಸ್ತರಿಸಿಕೊಂಡಿತ್ತು. ಸಹಜವಾಗಿಯೇ ತುಕಾರಾಮ ಅವರಿಗೆ ಕನ್ನಡವೂ ಗೊತ್ತಿರಬಹುದು ಎಂಬುದಕ್ಕೆ ಇದೊಂದು ಉದಾಹರಣೆ.

ಬಸವಣ್ಣನ ಕಾರ್ಯಕ್ಷೇತ್ರ ಸಹ ಮಂಗಳವೇಢೆ ತನಕ ಇತ್ತು. ಅವರ ವಚನಗಳಲ್ಲಿ `ಬತ್ತೀಸರಾಗ’ ಮತ್ತು ವಿಶೇಷ
ರೂಪದಲ್ಲಿ `ಛಪ್ಪನ್ನಐವತ್ತಾರು’ ದ್ವಿರುಕ್ತಿಯ ಮರಾಠಿ ಸಂಖ್ಯಾವಾಚಿ ಪದಗಳು ಬಳಕೆಯಾಗಿವೆ. ಅವು ಭಾಷೆಯ ಭ್ರಾತೃತ್ವವನ್ನೇ ಸಾರುತ್ತವೆ. ಛಪ್ಪನ್ ಅಂದರೇನೆ ಐವತ್ತಾರು!

ಮರಾಠಿ ಜನರ ಸಾಕ್ಷಿ ಪ್ರಜ್ಞೆಯಾಗಿದ್ದ ಜ್ಞಾನೇಶ್ವರನಿಗೆ ಕನ್ನಡ ಗೊತ್ತಿತ್ತು. ಜ್ಞಾನೇಶ್ವರಿಯ ಕನ್ನಡ ಅನುವಾದಗಳು ಬಂದವು. ಅವು ಮತ್ತು ಪಂಢರಾಪುರದ ವಿಠಲನ ವಾರಕರಿ ಸಂಪ್ರದಾಯವು ಭಾಷಿಕ ಬಂಧುತ್ವದ ಬಹುದೊಡ್ಡ ಕೊಂಡಿ ಆಗಿವೆ.

ಉತ್ತರ ಕರ್ನಾಟಕದ ಬಹುತೇಕ ಬ್ರಾಹ್ಮಣರು ಕನ್ನಡ ಮಾತಾಡಿದರೂ ಅವರೊಳಗೆ ಪುಣೆಯ ಪೇಶ್ವಾಯಿ ಪ್ರಭಾವದಿಂದ ಮರಾಠಿ ಪ್ರೀತಿ ಒಳಗೊಳಗೆ ಇದೆ. ರೊಟ್ಟಿಗೆ ಅವರು ಭಕ್ರಿ ಅನ್ನುವುದು. ಮರಾಠಿಯ ಭಾಕರಿ ಪದದ ಅಪಭ್ರಂಶ ರೂಪ. ಚಿತ್ಪಾವನ ಬ್ರಾಹ್ಮಣರು ಮರಾಠಿ ಮಾತಾಡುವರು. ಕೊಂಕಣಿ, ಸಾರಸ್ವತ ಬ್ರಾಹ್ಮಣರಲ್ಲಿ ಹಲವರು ಮರಾಠಿ ಭಾಷಿಕರಾಗಿದ್ದಾರೆ.

ಉತ್ತರ ಕರ್ನಾಟಕದ ಜಿಲ್ಲೆಗಳು ಕರ್ನಾಟಕ ಏಕೀಕರಣಕ್ಕಿಂತ ಮುಂಚೆ ಮುಂಬಯಿ ಪ್ರಾಂತ್ಯದಲ್ಲಿ ಇದ್ದವು ಹೀಗಾಗಿ ಸಹಜವಾಗಿ ಮರಾಠಿ ಪ್ರಭಾವವಿದೆ. ಅದೇ ರೀತಿ ಕಲಬುರಗಿ, ರಾಯಚೂರುಗಳಲ್ಲಿ ಉರ್ದು ಹಿಂದಿ ಪ್ರಭಾವ ಇದೆ. ಹಳೆಯ ಮೈಸೂರು ಭಾಗದವರು ಮೈಸೂರು ರಾಜರ ಆಡಳಿತಕ್ಕೊಳಪಟ್ಟಿದ್ದರೂ ಅಲ್ಲೂ ಬೆಂಗಳೂರಿನಂಥ ನಗರಗಳಲ್ಲಿ ತಮಿಳು ಪ್ರಭಾವವಿದೆಯಲ್ಲ, ಹಾಗೆ.

ಕುರ್ತಕೋಟಿ ಅವರ ಲೇಖನವೊಂದರ ಪ್ರಕಾರ, ಅಚ್ಚಕನ್ನಡ ನೆಲವಾದ ಧಾರವಾಡದಲ್ಲಿ 19ನೆಯ ಶತಮಾನದ ಮಧ್ಯಭಾಗದಲ್ಲಿ ಕನ್ನಡ ಶಾಲೆಗಳಿರಲಿಲ್ಲ. ಮರಾಠಿ ಶಾಲೆಗಳೇ ಇದ್ದವು ಎಂಬ ಉಲ್ಲೇಖವಿದೆ. ಕಾಲಾಂತರದಲ್ಲಿ ಡೆಪ್ಯುಟಿ ಚನ್ನಬಸಪ್ಪರವರು ಕನ್ನಡ ಶಾಲೆ ತೆರೆದರು ಎಂಬ ಮಾಹಿತಿ ಇದೆ. ಇಂದಿಗೂ ಉತ್ತರ ಕರ್ನಾಟಕದ ಗಡಿ ಭಾಗದ ಮಹಿಳೆಯರ ಉಡುಗೆತೊಡುಗೆಯಲ್ಲಿ ಪೇಶ್ವೆಗಳ ಜೀವನಶೈಲಿಯ ಪ್ರಭಾವ ಕಾಣಿಸುತ್ತದೆ.

ಮರಾಠಿಯೊಂದಿಗೆ ಬಾಂಧವ್ಯ ರಂಗಭೂಮಿ ಮತ್ತು ಸಂಗೀತದಲ್ಲಿ ಢಾಳಾಗಿ ಕಾಣಿಸುತ್ತದೆ. ಇವುಗಳ ನಡುವೆ ಒಂದು ಅನೂಹ್ಯ, ಅನನ್ಯವಾದ ಬೆಸುಗೆ ಇದೆ. ಅಷ್ಟೇ ಯಾಕೆ, ಕಲೆಗಳ ಪಟ್ಟುಗಳ ಕೊಡುಕೊಳುವಿಕೆಯೂ ಮಹತ್ವದ್ದು. 1843ರ ನವೆಂಬರ್ 5ರಂದು ಮರಾಠಿಯ ಮೊದಲ ನಾಟಕವು ಪ್ರಯೋಗ ಕಂಡಿತು. ಸಾಂಗಲಿಯ ಸಾಮಂತರಸ ಪಟವರ್ಧನರ ಪ್ರೋತ್ಸಾಹದಿಂದ ವಿಷ್ಣುದಾಸ ಭಾವೆ ಅವರು `ಸೀತಾ ಸ್ವಯಂವರ’ ರಚಿಸಿ ಪ್ರಯೋಗಿಸಿದರು. ಈ ನಾಟಕಕ್ಕೆ ಪ್ರೇರಣೆಯು ಉತ್ತರ ಕನ್ನಡ ಜಿಲ್ಲೆಯ ಕರ್ಕಿ ಮೇಳದ ಯಕ್ಷಗಾನ. 1880ರ ಆಸುಪಾಸಿನಲ್ಲಿ `ಸಂಗೀತ ಸೌಭದ್ರ’, `ಸಂಗೀತ ಶಾಕುಂತಲ’ ನಾಟಕಗಳಿಗೆ ಬೆಳಗಾವಿ ಜಿಲ್ಲೆಯ `ಶ್ರೀಕೃಷ್ಣ ಪಾರಿಜಾತ’ದ ಸಂಗೀತದ ಅಳವಡಿಕೆಯಾಗಿತ್ತು. ಅದರ ಕರ್ತೃ ಅಣ್ಣಾಸಾಹೇಬ ಕಿರ್ಲೋಸ್ಕರರು. ಇವರು ಮರಾಠಿ ಸಂಗೀತ ನಾಟಕದ ಪಿತಾಮಹ. ಅವರು ಹುಟ್ಟಿದ್ದು ಕರ್ನಾಟಕದ ಗುರ್ಲಹೊಸೂರಲ್ಲಿ. ಹಿಂದೂಸ್ತಾನಿ ಸಂಗೀತದ ಮೇರು ಗಾಯಕರಾದ ಕುಮಾರ ಗಂಧರ್ವ, ಮಲ್ಲಿಕಾರ್ಜುನ ಮನ್ಸೂರ, ಭೀಮಸೇನ ಜೋಶಿ ಅವರನ್ನು ಮರಾಠಿ ಜನ ತಲೆ ಮೇಲೆ ಹೊತ್ತು ಮೆರೆಸಿದವರು. ಇಂಥ ಮಧುರ ಬಾಂಧವ್ಯ ನಮ್ಮಲ್ಲಿ ಹಾಸುಹೊಕ್ಕಾಗಿರುವಾಗ ಯಾವ ರಾಜಕೀಯ ಹುನ್ನಾರಗಳೂ ಕಳ್ಳುಬಳ್ಳಿಯ ಸಂಬಂಧವನ್ನು ಕೆಡಿಸಲಾರವು. ಈ ಚಿಂತನೆಯನ್ನು ಜನಮಾನಸದಲ್ಲಿ ಹೆಚ್ಚಾಗಿ ಬಿತ್ತಬೇಕಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಕಿಡಿ, ಬೆಳಕು ನೀಡಬೇಕೇ ಹೊರತು ಬೆಂಕಿಯನ್ನಲ್ಲ. ಈ ನೆಲದ ಮೂಲವಾದ ಬಹುತ್ವವು ಬದುಕಿದರೆ ಮಾತ್ರ ಸಕಲರಿಗೂ ಲೇಸುಂಟು ಎಂಬುದನ್ನು ಭಾಷಾ ರಾಜಕಾರಣ ಮಾಡುವವರು ಅರಿಯಬೇಕು.

ಡಿ ಎಸ್ ಚೌಗಲೆ

ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು.


ಇದನ್ನೂ ಓದಿ: ಯುದ್ಧವಿರೋಧಿ ಜನ ಪ್ರತಿರೋಧವನ್ನು ಸಂವೇದನೆಯಿಂದ ಅವಲೋಕಿಸುವ ಚಿತ್ರ – ‘ದ ಟ್ರಯಲ್ ಆಫ್ ದ ಶಿಕಾಗೊ 7’
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...