ರಾಜ್ಯದಲ್ಲಿ ಮುಂಬರುವ 10 ಮತ್ತು 12 ನೇ ತರಗತಿಯ ರಾಜ್ಯ ಮಂಡಳಿ ಪರೀಕ್ಷೆಗಳಲ್ಲಿ ಬುರ್ಖಾ ನಿಷೇಧಿಸುವಂತೆ ಮಹಾರಾಷ್ಟ್ರದ ಬಿಜೆಪಿ ನಾಯಕ, ಸಚಿವ ನಿತೇಶ್ ರಾಣೆ ಬುಧವಾರ ಶಿಕ್ಷಣ ಸಚಿವ ದಾದಾ ಭೂಸೆ ಅವರನ್ನು ಒತ್ತಾಯಿಸಿ ಪತ್ರೆ ಬರೆದಿದ್ದು, ಭದ್ರತಾ ಕಳವಳ ಮತ್ತು ಪರೀಕ್ಷೆಯಲ್ಲಿ ನಡೆಸುವ ದುಷ್ಕೃತ್ಯಗಳ ಸಾಧ್ಯತೆಯನ್ನು ಉಲ್ಲೇಖಿಸಿ ಈ ಒತ್ತಾಯ ಮಾಡಿದ್ದಾರೆ. ಇದು ಹಿಂದುತ್ವದ ಸರ್ಕಾರ
ರಾಣೆ ಅವರು ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಬುರ್ಖಾ ನಿಷೇಧಿಸುವಂತೆ ಕೋರಿದ್ದು, ಧಾರ್ಮಿಕ ಉಡುಪುಗಳನ್ನು ಮನೆಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಸೀಮಿತಗೊಳಿಸಬೇಕು ಎಂದು ಹೇಳಿದ್ದಾರೆ. ಇದು ಹಿಂದುತ್ವದ ಸರ್ಕಾರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“10 ಮತ್ತು 12 ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಬುರ್ಖಾ ಧರಿಸಲು ಅವಕಾಶ ನೀಡಬಾರದು. ಅಗತ್ಯವಿದ್ದರೆ, ತಪಾಸಣೆ ನಡೆಸಲು ಮಹಿಳಾ ಪೊಲೀಸ್ ಅಧಿಕಾರಿಗಳು ಅಥವಾ ಮಹಿಳಾ ಸಿಬ್ಬಂದಿಯನ್ನು ನೇಮಿಸಬೇಕು. ಈ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ನಿರ್ಣಾಯಕವಾಗಿವೆ ಮತ್ತು ಅವುಗಳನ್ನು ಪಾರದರ್ಶಕವಾಗಿ, ವಂಚನೆಯಂತಹ ಯಾವುದೇ ದುಷ್ಕೃತ್ಯಗಳಿಂದ ಮುಕ್ತವಾಗಿ ನಡೆಸಬೇಕು” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪರೀಕ್ಷಾರ್ಥಿಗಳು ಬುರ್ಖಾ ಧರಿಸಲು ಅವಕಾಶ ನೀಡಿದರೆ, ವಂಚನೆಗೆ ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಇತರ ವಿಧಾನಗಳನ್ನು ಬಳಸಲಾಗುತ್ತಿದೆಯೇ ಎಂದು ನಿರ್ಧರಿಸುವುದು ಕಷ್ಟಕರವಾಗಿರುತ್ತದೆ. ಯಾವುದೇ ಅಹಿತಕರ ಘಟನೆಯ ಸಂದರ್ಭದಲ್ಲಿ, ಅದು ಸಾಮಾಜಿಕ ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗಬಹುದು, ಇದು ಅನೇಕ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಬುರ್ಖಾ ನಿಷೇಧಕ್ಕೆ ಕರೆ ನೀಡಿರುವ ಅವರು, ಯಾವುದೇ ಧರ್ಮಕ್ಕೆ ವಿಶೇಷ ಗೌರವ ನೀಡಬಾರದು ಎಂದು ಅವರು ಹೇಳಿದ್ದಾರೆ. “ಧಾರ್ಮಿಕ ಉಡುಪನ್ನು ಮನೆ ಮತ್ತು ಪೂಜಾ ಸ್ಥಳಗಳಿಗೆ ಸೀಮಿತಗೊಳಿಸಬೇಕು. ಇತರ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಉಡುಪನ್ನು ಶಾಲಾ-ಕಾಲೇಜುಗಳಿಗೆ ತರುವುದಿಲ್ಲ, ಆದರೆ ಮುಸ್ಲಿಮರಿಗೆ ಮಾತ್ರ ಯಾಕೆ ಅವಕಾಶ ನೀಡಬೇಕು” ಎಂದು ಕೇಳಿದ್ದಾರೆ.
ನಿಮ್ಮ ಧರ್ಮವನ್ನು ನಿಮ್ಮ ಮನೆಯಲ್ಲಿ ಮತ್ತು ನಿಮ್ಮ ಧಾರ್ಮಿಕ ಸ್ಥಳಗಳಲ್ಲಿ ಇರಿಸಿ. ಇದು ಹಿಂದುತ್ವ ಸರ್ಕಾರ ಮತ್ತು ಯಾರನ್ನೂ ಸಮಾಧಾನಪಡಿಸುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ. ಪರೀಕ್ಷೆಗಳಲ್ಲಿ ನಕಲು ಮಾಡಲು ಅನುಕೂಲವಾಗುವಂತೆ ಹಿಂದೆ ಬುರ್ಖಾಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
“ಪೇಪರ್ ಚಿಟ್‌ಗಳನ್ನು ಸಾಗಿಸಲು ಬುರ್ಖಾಗಳನ್ನು ಬಳಸಿದ ಘಟನೆಗಳು ನಡೆದಿವೆ. ಇದು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನವಲ್ಲ” ಎಂದು ಅವರು ಹೇಳಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಬುರ್ಖಾ ಧರಿಸಲು ಅನುಮತಿಸುವ ಯಾವುದೇ ಹಿಂದಿನ ಅಧಿಸೂಚನೆಗಳನ್ನು ಹಿಂಪಡೆಯುವಂತೆ ಅವರು ಸರ್ಕಾರಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಅದಾಗ್ಯೂ, ಶಾಲಾ ಶಿಕ್ಷಣ ಸಚಿವಾಲಯವು ಅವರ ಬೇಡಿಕೆಗೆ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ವರದಿಯಾಗಿದೆ.


