Homeಮುಖಪುಟಈ ಬಾರಿಯ ರಾಜ್ಯಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಾಳೆ ಮತ್ತು ನಾಳಿದ್ದು ಮಂಡ್ಯದಲ್ಲಿ..

ಈ ಬಾರಿಯ ರಾಜ್ಯಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಾಳೆ ಮತ್ತು ನಾಳಿದ್ದು ಮಂಡ್ಯದಲ್ಲಿ..

ಮಹಿಳೆಯರು ಕೂಡ ನಮ್ಮಂತೆಯೇ ಎಲ್ಲಾ ಹಕ್ಕುಗಳನ್ನು ಹೊಂದಿರುವ ಸಮಾನ ಜೀವಿಗಳು ಎಂದು ಸಮಾಜ ನೋಡುವಂತೆ ಮಾಡುವ ಈ ಅರಿವಿನ ಪಯಣಕ್ಕೆ ನೀವೂ ಜೊತೆಗೂಡಿ.

- Advertisement -
- Advertisement -

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ನೇತೃತ್ವದಲ್ಲಿ ರಾಜ್ಯದ ಹಲವಾರು ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಪ್ರತಿ ವರ್ಷ ನಡೆಯುವ ರಾಜ್ಯಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಈ ಬಾರಿ ಮಂಡ್ಯದಲ್ಲಿ ನಾಳೆ ಮತ್ತು ನಾಳಿದ್ದು (ಮಾರ್ಚ್‌ 07 & 08) ನಡೆಯಲಿದೆ.

2013ರಲ್ಲಿ ಉಡುಪಿಯಿಂದ ಆರಂಭವಾದ ಎಲ್ಲಾ ಸಂಘಟನೆಗಳು ಕೂಡಿ ಆಚರಿಸುವ ಈ ಪ್ರಕ್ರಿಯೆ ಪ್ರತಿ ವರ್ಷಕ್ಕೂ ವಿಭಿನ್ನವಾಗಿ ನಡೆದುಕೊಂಡು ಬರುತ್ತಿದೆ. 2014ರಲ್ಲಿ ಮೈಸೂರು, 2015ರಲ್ಲಿ ಬೆಂಗಳೂರು, 2016ರಲ್ಲಿ ವಿಜಯಪುರ, 2017ರಲ್ಲಿ ಕೊಪ್ಪಳ, 2018ರಲ್ಲಿ ಶಿವಮೊಗ್ಗ ಮತ್ತು 2019ರಲ್ಲಿ ಧಾರವಾಡದಲ್ಲಿ ಯಶಸ್ವಿಯಾಗಿ ಮಹಿಳಾ ದಿನ ನಡೆದಿದೆ.

ಕೊಪ್ಪಳದಲ್ಲಿ 2017ರಲ್ಲಿ ನಡೆದ ಮಹಿಳಾ ದಿನಾಚರಣೆ

ಉಡುಪಿಯ ಕಾರ್ಯಕ್ರಮಕ್ಕೆ 2013ರಲ್ಲಿ ದಿಟ್ಟ ಹೋರಾಟಗಾರ್ತಿ ಭಂವ್ರಿದೇವಿ ಚಾಲನೆ ನೀಡಿದ್ದರು. ಮಣಿಪುರದ ಹೋರಾಟಗಾರ್ತಿಯರು, ಕವಿತಾ ಕೃಷ್ಣನ್‌ ಸೇರಿದಂತೆ ಹಲವು ಚಿಂತಕರು, ಹೋರಾಟಗಾರ್ತಿಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಹಿಳಾ ದಿನದ ಮಹತ್ವವನ್ನು ಹೆಚ್ಚಿಸಿದ್ದರು. ಈ ಬಾರಿ ಮಂಡ್ಯದ ಕಾರ್ಯಕ್ರಮಕ್ಕೆ ದೆಹಲಿ ಸಾಮಾಜಿಕ ಹೋರಾಟಗಾರ್ತಿ ಮತ್ತು ಚಿಂತಕಿ ಶಬ್ನಂ ಹಶ್ಮಿ ಮತ್ತು ಹೈದರಾಬಾದ್‌ನ ಸ್ತ್ರೀವಾದಿ ಚಿಂತಕಿ ವೋಲ್ಗಾರವರು ಭಾಗವಹಿಸಲಿದ್ದಾರೆ.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ರೂಪುಗೊಳ್ಳುವ ಮೊದಲು ಎಲ್ಲಾ ಸಂಘಟನೆಗಳು ತಮ್ಮ ತಮ್ಮ ಸಂಘಟನೆಗಳ ವ್ಯಾಪ್ತಿಯಲ್ಲಿ ಮಾತ್ರ ಮಹಿಳಾ ದಿನಾಚರಣೆ ಆಚರಿಸುತ್ತಿದ್ದರು. ಆದರೆ ಈಗ ಅವರೆಲ್ಲರೂ ಒಟ್ಟಾಗಿ ಭಾಗವಹಿಸುವುದಲ್ಲದೇ ಅವರ ಸಂಘಟನೆಗಳ ವ್ಯಾಪ್ತಿಯಲ್ಲಿಯೂ ಸಹ ಆಚರಿಸುತ್ತಿದ್ದಾರೆ. ಎಲ್ಲರನ್ನು ಒಂದು ವೇದಿಕೆಗೆ ತಂದ ಶ್ರೇಯ ಈ ವೇದಿಕೆಗೆ ಸಲ್ಲುತ್ತದೆ.

ಪ್ರತಿ ವರ್ಷವೂ ಎರಡು ದಿನ ಕಾರ್ಯಕ್ರಮ ನಡೆಯುತ್ತಿದೆ. ಅದಕ್ಕು ಮೊದಲೇ ಆರು ತಿಂಗಳಿನಿಂದ ಕಾರ್ಯಕ್ರಮದ ತಯಾರಿ ನಡೆದಿರುತ್ತದೆ. ಯಾವ ಊರಿನಲ್ಲಿ ಕಾರ್ಯಕ್ರಮ ನಡೆಯುತ್ತದೆಯೇ ಅಲ್ಲಿಯ ಸಂಘಟನೆಗಳೊಂದಿಗೆ ಸಭೆ, ಆ ಊರಿನ ಮಹಿಳಾ ಸಮಸ್ಯೆಯ ಕುರಿತು ಚರ್ಚೆ, ಕಾರ್ಯಗಾರ, ಪ್ರಚಾರಾಂದೋಲನಗಳು ನಡೆಯುತ್ತವೆ. ಸಾಮಾನ್ಯವಾಗಿ ಕಾರ್ಯಕ್ರಮದ ಮೊದಲ ದಿನ ಮಹಿಳಾ ಸಮಸ್ಯೆಗಳ ಪ್ರಚಲಿತ ವಿಚಾರದ ಕುರಿತು ವಿಚಾರ ಸಂಕಿರಣ ಮತ್ತು ಕಪ್ಪುಡುಗೆಯಲ್ಲಿ ಮಹಿಳೆಯರು ಮೌನ ಪ್ರತಿಭಟನೆ ನಡೆಯುತ್ತದೆ. ಎರಡನೆಯ ದಿನ ಮೆರವಣಿಗೆ ಮತ್ತು ಬಹಿರಂಗ ಸಮಾವೇಶ ಜರುಗುತ್ತದೆ.

ಪ್ರಚಾರಾಂದೋಲನ

ಸಮತೆಯೆಡೆಗೆ ನಮ್ಮ ನಡಿಗೆ, ನನ್ನ ಮತ ನನ್ನ ಆಯ್ಕೆ, ಇರಲಿ ಹೆಣ್ಣೋಟಕ್ಕೆ ಹೆಗ್ಗಳಿಕೆ ಎಂಬ ವಿಷಯದ ಸುತ್ತಾ ಧಾರವಾಡದ ಮಹಿಳಾ ದಿನ ನಡೆದರೆ, ಕೊಪ್ಪಳದಲ್ಲಿ ಸಮತೆಯೆಡೆಗೆ ನಮ್ಮ ನಡಿಗೆ, ನಮ್ಮ ಮಗಳು ಜಗದ ಬೆಳಕು, ನಮ್ಮ ದೇಹ ನಮ್ಮ ಹಕ್ಕು ಎಂಬ ವಿಷಯದ ಸುತ್ತಾ ಕೇಂದ್ರೀಕರಿಸಿತ್ತು. ಈ ಬಾರಿಯ ಮಂಡ್ಯದ ಮಹಿಳಾ ದಿನಾಚರಣೆಯಲ್ಲಿ ಗಟ್ಟಿ ದನಿ, ದಿಟ್ಟ ನಡೆ, ಘನತೆವೆತ್ತ ಬದುಕು ವಿಷಯದ ಕುರಿತು ನಡೆಯುತ್ತಿದೆ.

ಪ್ರತಿ ವರ್ಷವೂ ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ, ಮುಟ್ಟು, ಮಹಿಳಾ ಮೀಸಲಾತಿ, ಇತ್ಯಾದಿ ವಿಚಾರಗಳ ಕುರಿತು ಚಿಕ್ಕ ಪುಸ್ತಿಕೆಗಳನ್ನು ಮುದ್ರಿಸಿ ಜನರಿಗೆ ತಲುಪಿಸುವ ಕಾರ್ಯ ಸದ್ದಿಲ್ಲದೇ ನಡೆಯುತ್ತಿದೆ. ಬೀದಿನಾಟಕಗಳು, ಹಾಡುಗಳ ಮೂಲಕ ಜಾಗೃತಿ ಮೂಡಿಸುತ್ತಾ ಕೇವಲ ಎರಡು ದಿನ ಮಹಿಳಾ ದಿನಚರಣೆ ಮಾಡದೇ ಇದನ್ನೊಂದು ನಿರಂತರ ತಿಳಿವಿನ ಪ್ರಕ್ರಿಯೆಯಾಗಿ ವೇದಿಕೆ ಕೆಲಸ ಮಾಡುತ್ತಿದೆ.

ದುಡಿಯುವ ಮಹಿಳೆಯರ ದಿನ ಎಂದೇ ಖ್ಯಾತಿಯಾದ ಅಂತರಾಷ್ಟ್ರೀಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ನಡೆಸುತ್ತಾ, ಜಾಗೃತಿ ಮೂಡಿಸುತ್ತಾ ವೇದಿಕೆ ಆಚರಿಸುತ್ತಿದೆ. ಸಾವಿರಾರು ಜನ ಪಾಲ್ಗೊಂಡು ಅರಿವಿನ ಪಯಣದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಈ ಬಾರಿಯ ಮಾರ್ಚ್‌ 07ರ ಶನಿವಾರ ಮಂಡ್ಯದ ಅಂಬೇಡ್ಕರ್‌ ಭವನದಲ್ಲಿ “ಮಹಿಳಾ ಬದುಕು ಪಲ್ಲಟಗಳು” ವಿಷಯದ ಕುರಿತು ವಿಚಾರ ಸಂಕಿರಣ ನಡೆಯುತ್ತಿದೆ. ಮಾರ್ಚ್‌ 08ರ ಭಾನುವಾರ ನಗರದ ವಿಶ್ವೇಶ್ವರಯ್ಯ ಪ್ರತಿಮೆಯ ಬಳಿಯಿಂದ ಮೆರವಣಿಗೆ ಆರಂಭವಾಗಲಿದ್ದು, ರೈಲ್ವೇ ನಿಲ್ದಾಣದ ಬಳಿಯ ಸಿಲ್ವರ್‌ ಜ್ಯುಬಿಲಿ ಪಾರ್ಕ್‌‌ನಲ್ಲಿ ಬಹಿರಂಗ ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆಹ್ವಾನ ಪತ್ರಿಕೆ ಕೆಳಗಿವೆ ಓದಿ.

ಎಲ್ಲರೂ ತಪ್ಪದೇ ಬಂದು ಭಾಗವಹಿಸಿ… ನಿಮ್ಮ ಆಗಮನದ ನಿರೀಕ್ಷೆಯಲ್ಲಿದ್ದೇವೆ#international_women's_day#march_7_8_Mandya#ಅಂತಾರಾಷ್ಟ್ರೀಯ_ಮಹಿಳಾ_ದಿನಾಚರಣೆ

Posted by Karnataka Rajya Mahila Dourjanya virodhi Okkuta on Saturday, February 29, 2020

ಮಹಿಳೆಯರು ಕೂಡ ನಮ್ಮಂತೆಯೇ ಎಲ್ಲಾ ಹಕ್ಕುಗಳನ್ನು ಹೊಂದಿರುವ ಸಮಾನ ಜೀವಿಗಳು ಎಂದು ಸಮಾಜ ನೋಡುವಂತೆ ಮಾಡುವ ಈ ಅರಿವಿನ ಪಯಣಕ್ಕೆ ನೀವೂ ಜೊತೆಗೂಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...