Homeಮುಖಪುಟಸಂಕಷ್ಟದಲ್ಲಿ ಯೆಸ್ ಬ್ಯಾಂಕ್ : ಆತಂಕದಲ್ಲಿ ಗ್ರಾಹಕರು

ಸಂಕಷ್ಟದಲ್ಲಿ ಯೆಸ್ ಬ್ಯಾಂಕ್ : ಆತಂಕದಲ್ಲಿ ಗ್ರಾಹಕರು

- Advertisement -
- Advertisement -

ಖಾಸಗಿ ವಯಲದ ದೊಡ್ಡ ಬ್ಯಾಂಕುಗಳಲ್ಲೊಂದಾದ ಯೆಸ್ ಬ್ಯಾಂಕಿನ ಷೇರುಗಳು 27.65 ರೂ.ಗೆ ತಲುಪಿದ್ದು, ಇದು 24.97% ರಷ್ಟು ಕುಸಿತ ಕಂಡಿದೆ. ತೀವ್ರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಯೆಸ್ ಬ್ಯಾಂಕನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 30 ದಿನಗಳವರೆಗೆ ಅಮಾನತುಗೊಳಿಸಿದೆ.

ವಸೂಲಿಯಾಗದ ಸಾಲಗಳು (ಎನ್‌ಪಿಎ) ಅಧಿಕವಾದ ಹಿನ್ನೆಲೆಯಲ್ಲಿ ಯೆಸ್‌ ಬ್ಯಾಂಕ್‌ ತೀವ್ರ ಆರ್ಥಿಕ ಕುಸಿತಕ್ಕೆ ಒಳಗಾಗಿದೆ. ರಿಸರ್ವ್ ಬ್ಯಾಂಕ್ ಯೆಸ್ ಬ್ಯಾಂಕ್ 30 ದಿನಗಳಿಗೆ ಅಮಾನತು ವಿಧಿಸಿದ ನಂತರ, ಮುಂಬೈ ಖಾಸಗಿ ಸಾಲಗಾರರ ಷೇರುಗಳ ಬೆಲೆ ಶೇ 85 ರಷ್ಟು ಕುಸಿದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ 5.65 ರೂ.ಗೆ ತಲುಪಿದೆ.

ಗಂಭೀರ ಕುಸಿತದ ಪರಿಣಾಮ ಏಪ್ರಿಲ್ 3 ರವರೆಗೆ ತನ್ನ ಖಾತೆದಾರರಿಗೆ ಗರಿಷ್ಠ 50,000 ರೂ ಹಣ ಪಡೆಯುವ ಮಿತಿಯನ್ನು ಯೆಸ್‌ ಬ್ಯಾಂಕ್‌ ವಿಧಿಸಿದೆ. ಇದರಿಂದ ಆತಂಕಗೊಂಡ ಗ್ರಾಹಕರು ಎಟಿಎಂ ಮುಂದೆ ಕ್ಯೂ ನಿಂತಿದ್ದಾರೆ.

ಇನ್ನು ಯೆಸ್‌ ಬ್ಯಾಂಕ್‌ ಉಳಿಸಲು ಅದರ ಷೇರುಗಳನ್ನು ಸರ್ಕಾರಿ ಸಂಸ್ಥೆಗಳು ಕೊಳ್ಳುವಂತೆ ಆರ್‌ಬಿಐ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ ಕೊಳ್ಳಲು ಮುಂದಾಗುತ್ತಿದೆ ಎಂಬ ಸುದ್ದಿ ತಿಳಿದ ಕೂಡಲೇ ಅದರ ಷೇರುಗಳು ಸಹ ದಾಖಲೆಯ ಮಟ್ಟದಲ್ಲಿ ಶೇ.6 ರಷ್ಟು ಕುಸಿತ ಕಂಡಿವೆ. ಆ ನಂತರ ಎಸ್‌ಬಿಐ ಆ ರೀತಿಯ ಮಾತುಕತೆ ನಡೆದಿಲ್ಲ, ಷೇರು ಕೊಳ್ಳುತ್ತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, “RBI ತೊಂದರೆಗೀಡಾದ ಸಾಲಗಾರನನ್ನು ಪುನರುಜ್ಜೀವನಗೊಳಿಸುವ ಯೋಜನೆಯನ್ನು ಹೊಂದಿದೆ ಎಂದು ಹೇಳಿದ್ದಾರೆ. “ನಾವು ಶೀಘ್ರ ಕ್ರಮ ಕೈಗೊಳ್ಳುತ್ತೇವೆ … ಬ್ಯಾಂಕನ್ನು ಪುನರುಜ್ಜೀವನಗೊಳಿಸುತ್ತೇವೆ ಎಂದು ಹೇಳಿದ್ದಾರೆ.

ಯೆಸ್‌ಬ್ಯಾಂಕ್‌ನ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ “ಎಲ್ಲಾ ಠೇವಣಿದಾರರ ಹಣವು ಸುರಕ್ಷಿತವಾಗಿರುತ್ತದೆ ಎಂದು ನಾನು ಭರವಸೆ ನೀಡುತ್ತೇನೆ ಮತ್ತು ಭಯಪಡುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ “ನೋ ಯೆಸ್‌ ಬ್ಯಾಂಕ್. ಮೋದಿ ಮತ್ತು ಅವರ ಆಲೋಚನೆಗಳು ಭಾರತದ ಆರ್ಥಿಕತೆಯನ್ನು ನಾಶಪಡಿಸಿವೆ” ಎಂದು ಟ್ವೀಟ್‌ ಮಾಡಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...