Homeಅಂಕಣಗಳುದೊರೆಸ್ವಾಮಿ ಸನ್ಹೇಕ್ಕೋಗಿ ಕ್ಷಮೆ ಕೇಳಲೆ - ಯತ್ನಾಳ್‌ ಜೊತೆ ಯಾಹೂ ಮಾತುಕತೆ

ದೊರೆಸ್ವಾಮಿ ಸನ್ಹೇಕ್ಕೋಗಿ ಕ್ಷಮೆ ಕೇಳಲೆ – ಯತ್ನಾಳ್‌ ಜೊತೆ ಯಾಹೂ ಮಾತುಕತೆ

- Advertisement -
- Advertisement -

ಸ್ವಾತಂತ್ರ್ಯ ಹೋರಾಟದ ಸಂಕೇತದಂತಿರುವ ದೊರೆಸ್ವಾಮಿಯವರ ಬಗ್ಗೆ ಅತ್ಯಂತ ಪ್ರೀತ್ಯಾಧರಗಳಿಂದ ಮಾತನಾಡಿರುವ ಬಿಜಾಪುರದ ಬಸನಗೌಡ ಪಾಟೀಲ ಯತ್ನಾಳ್ ಎಂಬ ಧೀಮಂತ ನಾಯಕನನ್ನು ಮಾತನಾಡಿಸಿ, ದೊರೆಸ್ವಾಮಿಯವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕು ಅನ್ನಿಸಿತಲ್ಲಾ. ಆ ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: “ನಮಸ್ತೇ ಸದಾವತ್ಸಲೇ ಮಾತೃಭೂಮಿ….” “ಹಲೋ ಯಾರ್ರಿ”
“ನಾನಲೆ ಎಫ್.ಜೆ.ತಳವಾರ.”
“ಯಾರಂತ ಗೊತ್ತಾಗಲಿಲ್ರಿ.”
“ನಿಮ ತಂದಿ ಗೆಳಯ ಕಣೋ, ಯತ್ನಾಳ.”
“ಏನಾಗಬೇಕಿತ್ರಿ.”
“ಏನಿಲ್ಲಪ. ನಿನಕಡಿಂದ ನನಗ ಆಗಬೇಕಾದ್ದೇನಿಲ್ಲ. ನಿನ್ನ ಆರೋಗ್ಯ ಹೆಂಗದಾ.”
“ಯದುಕ್ರಿ ಹಾಂಗ ಕೇಳಕತ್ತಿರಿ.”
“ಯದಕಪ್ಪ ಅಂದ್ರಾ, ಇಲ್ಲಿ ದರವೊಬ್ಬರೂ ನಿನ್ನ ತೆಲಿ ಶುದ್ದಿಲ್ಲಂತ ಮಾತಾಡಕತ್ಯಾರ. ಅದಕ ನನಿಗ ಗಾಬರಿಯಾತು. ಆರಡಿ ಎತ್ತರಕ ವೀರಸಿಂಧೂರ ಲಕ್ಷ್ಮಣನಂಗಿದ್ದ. ಮುಂಜಾಲೆದ್ದು ಮೂರು ಎಮ್ಮಿ ಹಾಲಿಂಡತಿದ್ದ ನನ್ನ ಗೆಳೆಯನ ಮಗ ಇವುಗೇನಾತಪ ಅಂತ ಗಾಬರಾತಲೇ ಮಗನ.”
“ಯಾರೊ ಸುಳ್ಳು ಹೇಳ್ಯಾರ್ರಿ, ನನ್ನ ತಲಿಗೇನಾಗಿಲ್ಲ.”
“ಅಂದ್ರ ಮಿದುಳಿಗೇನೋ ಆಗೇತಿ ಅದಕ 23 ಕೇಸು ತೆಲಿ ಮೇಲದಾವು.”
“ಇಲ್ರಿ ಅವು ಸುಳ್ಳು ಕೇಸು. ಪ್ರಕೃತಿ ನೆಟ್ಟಗೈತಿ. ಅರಾಮದಿನಿ.”
“ಇರವಲ್ಯಾಕ, ಆದ್ರ ಸ್ವಾತಂತ್ರ ಹೋರಾಟಗಾರ ಶತಾಯುಷಿ ದೊರೆಸ್ವಾಮಿಗಳನ್ನ ಯದುಕ್ಕಲೆ ಬೈಯಕತ್ತಿಯಂತೆ.”
“ಬೋದಿಲ್ರೀ. ಅವ ಡೋಂಗಿ ಸ್ವಾತಂತ್ರ ಹೋರಾಟಗಾರ ಅಂದೀನಿ ಅಷ್ಟ.”
“ಮಗ ಸತ್ತಲೆ ನೀನು. ದೊರೆಸ್ವಾಮಿ ಅಂದ್ರೇನು. ನೀ ಅಂದ್ರೇನು. ಅವರ ಚಪ್ಪಲಿ ಬಿಡೋ ಜಾಗದಾಗ ನಿಂದ್ರಕ್ಕೆ ಲಾಯಕ್ಕಿಲ್ಲದ ಮನುಶ್ಯದಿ ನೀನು. ಯದುಕಲೆ ಅಂಗಂದಿ.”
“ಆತ ಕಾಂಗ್ರೆಸ್ಸಿನ ಪರ ಮಾತಾಡತಾರ.”
“ಸಿದ್ದರಾಮಯ್ಯನ ಸರಕಾರಿದ್ದಾಗ ಅವರ ಸರಕಾರನೂ ಟೀಕಿ ಮಾಡಿದರಲ್ಲಾ. ಆಗ ನಿನ್ನ ಕಿವಿಗೇನು ಗೂಟಬಡಿಕೊಂಡಿದ್ದೇನು.”
“ಆ ಟೀಕಿನೂ ಡೋಂಗಿರಿ. ಅವುರು ಕಾಂಗ್ರೆಸಿಗರ ಪರ”
“ಅವರ ಪರ ಅಲ್ಲಲೇ, ಯಾರು ಜನಕ್ಕೆ ಒಳ್ಳೇದು ಮಾಡ್ತರೋ ಅವುರ ಪರ ಇರತರ. ತಲಿಕೆಟ್ಟ ಹಲಕಟ್ಟವುರ ಪರ ಇರೂದಿಲ್ಲವುರು ತಿಳಿತಿಲ್ಲಾ.”
“ಅವುರು ಪಾಕೀಸ್ತಾನದ ಪರ ಅವುರ.”
“ಪಾಕಿಸ್ತಾನದ ಪರ ಯದಕ್ಕಿರತರಲೇ. ನೀವು ಏನದೀರಲ್ಲಾ, ಅಂದ್ರ ಬಿಜೆಪಿಗಳು ನಿಮಗಿರುವಷ್ಟು ಪಾಕಿಸ್ತಾನದ ಪ್ರೀತಿ ನಮ ದೇಶದಾಗ ಯಾರಿಗೂ ಇಲ್ಲ ನೋಡು. ಅಲ್ಲಲೆ ದಿನ ಬೆಳಗಾತು ಅಂದ್ರ ಪಾಕಿಸ್ತಾನ ಪಾಕಿಸ್ತಾನ ಅನ್ನಕತ್ತೀರಲ್ಲಾ, ಆ ದೇಶ ಕಂಡ್ರ ಅದೇನು ಪ್ರೀತಿಲೆ ನಿಮಗೆ.”
“ಪ್ರೀತಿಯಲ್ಲ ದ್ವೇಷ.”
“ದ್ವೇಷ ಅಲ್ಲಲೆ ಪ್ರೀತಿ. ನಿಮ್ಮ ಪ್ರಧಾನಿ ಏನದಾನಲ್ಲ ಮೋದಿ, ಆತ ಚೊಣಬಿ ಹೊಕ್ಕಂಗ ದೌಡು ಪಾಕಿಸ್ತಾನಕ್ಕೋಗಿ ಲಗೂನು ಬಂದನಲ್ಲ ಯದಕ್ಕೋಗಿದ್ದಾ. ದ್ವೇಷ ಇದ್ರೋತಿದ್ನೇನವ. ಪಾಪ ಆ ದೇಶದ ಪ್ರಧಾನಿ ಮಗಳ ಲಗ್ನಕ್ಕೋಗಿ ಬಿರಿಯಾನಿ ತಿಂದ. ಇನ್ನ ಮುಂದೆ ಹಿಂಗೇ ಇರೂನು ಅಂತೇಳಿ ಬಂದ. ಅದಕ್ಕೂ ಮೊದ್ಲು ವಾಜಪೇಯಿ, ನಿಮ್ಮ ವಿಜಯ ಸಂಕೇಶ್ವರನಂಗೆ ಬಸ್ ಓಡಿಸಿದ್ದ. ಈ ಕಡಿ ಬಸ್ ಹೋತು, ಆಕಂಡಿದ ಪಾಕಿಸ್ತಾನದ ಸೈನಿಕರು ಒಳಬಂದ್ರು. ಐದು ನೂರು ಮಂದಿ ನಮ್ಮ ಸೈನಿಕರು ತೀರಿಕೊಂಡ್ರು. ಮಕ್ಕಳಾ, ವಿಜಯೋತ್ಸವ ಮಾಡ್ತೀರಿ, ಇತಿಹಾಸಗೊತ್ತೇನಲೆ ನಿನಗ.”
“ಗೊತ್ತೈತಿ.”
“ಗೊತ್ತಿದ್ರ ದೊರೆಸ್ವಾಮಿ ಹೋರಾಟವ ಡೋಂಗಿ ಅಂತಿರಲಿಲ್ಲ ನೀನು. ಕ್ವಿಟ್ ಇಂಡಿಯಾ ಚಳುವಳೀಲಿ ನೀ ಹುಟ್ಟಿದ್ದೇನಲೇ? ಆಗಲೇ ದೊರೆಸ್ವಾಮಿ ಜೈಲಿಗೋಗಿದ್ರು.”
“ಆ ಚಳುವಳಿ ಇಲ್ದಿದ್ರೆ ಅವುರು ಜೈಲಿಗೋತಿರಲಿಲ್ಲ.”
“ತೆಲಿಯಾಗೇನು ಮೆದುಳೈತೋ ಎಮ್ಮಿ ಸಗಣಿ ಐತೋ ನಿನಗ. ಅಲ್ಲಪ್ಪ ಜೈಲಿಗೋಗದಿದ್ರೆ ಚಳುವಳಿ ಮಾಡತಿದ್ರು ಗೊತ್ತೇನು.”
“ಅವರ ಚಳುವಳಿನೆ ಡೋಂಗಿ.”
“ಇನ್ಯಾರದು ಖರೆ ಐತಿ ಹೇಳು ನೋಡೊನು.”
“ವೀರ ಸಾವರ್ಕರ ಚಳುವಳಿ.”
“ಲೇ ಮಂಗ್ಯನ ಮಗನ. ಆ ಸಾವರಕರ ಯಾರು ಗೊತ್ತೇನಲೆ. ಅಂಡಮಾನ್ ಜೈಲಾಗೆ ಇರಕ್ಕಾಗುದಿಲ್ಲಂತ ಹೇಳಿ ಬ್ರಿಟಿಷರಿಗೆ ಮೂರು ಬಾರಿ ಕ್ಷಮಾಪಣೆ ಪತ್ರ ಬರದು, ಬಿಡುಗಡೆಯಾಗಿ ನಾಗಪುರಕ್ಕೆ ಬಂದು ಖೋಲಿ ಹಿಡುದು ಕುಂತವ. ಹಿಂದೂಮಹಾಸಭಾ, ವಿಶ್ವಹಿಂದೂ ಪರಿಷತ್ ಮಾಡಿ ಇವತ್ತು ನಿನ್ನಂತವರ ತೆಲಿಕೆಟ್ಟು ಮಸರಗಡಿಗಿಯಾಗಂಗೆ ಮಾಡಿ ಹೋದವ. ನೀ ಮದುಲು ಹಿಂಗರಲಿಲ್ಲ, ಭಾಳ ಸಂಭಾವಿತಿದ್ದಿ. ಯಾವಾಗ ನಾಗಪುರಕ್ಕೆ ಕೇಳಂಗೆ ಮಾತಾಡಕತ್ತಿದ್ಯೋ ಆಗ ಹಿಂಗಾದಿ. ಒಂದು ತಿಳಕೊ ಮಗನ.”
“ಏನೇಳ್ರಿ.”
“ನೀ ಏಟೇ ವದರಿದ್ರು ಮಂತ್ರಿಯಾಗೂದಿಲ್ಲಲೆ.”
“ಯದಕ್ರಿ.”
“ದೊರೆಸ್ವಾಮಿ ಶಾಪ ಕಣಲೆ. ಅದಕ್ಕೂ ಮೊದ್ಲು ಶೋಭಾ ಕರಂದ್ಲಾಜೆ ಶಾಪ ಕೊಟ್ಟಿದ್ಲು.”
“ಹೌದೇನ್ರೀ.”
“ಹೌದಲೇ, ನೀ ಎಡೂರಪ್ಪ ಶೋಭಾ ಕರಂದ್ಲಾಜೆ ತೆಕ್ಕಿಬಡಕೊಂಡಿದ್ರು ನಾನೇ ನೋಡಿದೆ ಅಂತ ಚಿಕ್ಕಮಗಳೂರಾಗ ಹೇಳಿ ಹೋದಿ. ಅದು, ಶೋಬನ ಕಿವಿತಲುಪ್ತು, ಅದು ಎಡೂರಪ್ಪನ ಕಿವಿ ಕೂಡ ಆಗಿತ್ತು.”
“ಯಾರೊ ಚಾಡಿ ಹೇಳ್ಯಾರ್ರಿ.”
“ಇಲ್ಲಿ ಕೇಳಿಸಿಕೊಂಡಿದ್ದ ಅಲ್ಲೇಳಿದ್ರ ಚಾಡಿ ಯಂಗಲೆ ಆತದೆ. ಸುಳ್ಳು ಹೇಳಿದ್ರೆ ಅದು ಚಾಡಿಯಾಕ್ಯತಿ- ತಿಳಿತೇನಲೇ. ಅಂತೂ ನೀ ಎಡೂರಪ್ಪನ ಸಂಪುಟ ಸೇರೋದು ಸುಳ್ಳಾತು.”
“ಮಂತ್ರಿನೆ ಆಗಬೇಕು ಅನ್ನದೇನೂ.”
“ಅಲ್ಲಲೆ ಖಬರಗೇಡಿ ಕೇಂದ್ರದಾಗ ಮಂತ್ರಿಯಾಗಿದ್ದವ ರಾಜ್ಯದಾಗೂ ಮಂತ್ರಿಯಾಗಬೇಕಲ್ಲೇನು.”
“ಹೌದ್ರಿ.”
“ಮತ್ತ ಆಗಿಲ್ಲಂದ್ರ ನೀ ಆಯೋಗ್ಯದಿ, ನಾಲಾಯ್ಕದಿ, ಒಟ್ಟ ಶಾಸಕ ಆಗಕ್ಕೂ ಯೋಗ್ಯಲ್ಲ ನೀನು ಅಂದಂಗಾತು.”
“ನನ್ನ ಯೋಗ್ಯತೆ ಬಗ್ಗೆ ಮಾತಾಡಬೇಡಿ.”
“ಇಲ್ಲಪ ನಿನ್ನ ಯೋಗ್ಯತೆ ಬಾಳ ಬೇಷೈತಿ, ಅಲ್ಲಲೆ ಮನ್ನಿ ಇಡೀ ಕರನಾಟಕನೆ ನಿನ್ನ ವಿರುದ್ಧ ಪ್ರತಿಭಟನೆ ಮಾಡ್ತು. ವಿಜಾಪುರದ ಗೌರವನೆ ಹೋತಲ್ಲಲೇ. ಅದಕೂ ಮೊದ್ಲು ಬಿಜಾಪುರಂದ್ರ ಮಂದಿ ಎಷ್ಟು ಬೆಲಿ ಕೊಡತಿದ್ರ ಗೊತ್ತೇನು.”
“ಈಗ ಇನ್ನ ಕೊಡ್ತಾರ. ನಾ ಎಂಪಿಯಾಗಿ, ಮಂತ್ರಿಯಾಗಿ, ಎಮ್ಮೆಲ್ಲೆಯಾಗಿ ಬಿಜಾಪುರಕ್ಕ ಹೆಸರು ತಂದೀನಿ.”
“ತಂದಿ ಬುಡು ಮಗನ. ಅಲ್ಲಲೆ, ಒಮ್ಮೆ ಅಂತಾ ಸಿರಿಗೆರೆ ಶಿವಾಚಾರ್ಯ ಸ್ವಾಮಿ ಬಂದಿದ್ರು. ಅವರ ಕಾರ್ಯಕ್ರಮದ ಮೆರವಣಿಗಿ ಏನಿತ್ತಲ್ಲ ಅದಕ ಮುಸ್ಲಿಂ ಮಹಿಳೆಯರು ಎಷ್ಟು ಮಂದಿ ಬಂದಿದ್ರು ಗುರುತೇನ, ಮೂರು ಸಾವುರ ಮಂದಿ ಬಂದಿದ್ರು. ಆಗ ಗುರುಗಳು ನಮ್ಮ ಬಿಜಾಪುರದ ಧರ್ಮ ಸಾಮರಸ್ಯ ಕೊಂಡಾಡಿ ಹೋದ್ರು. ಇಂಥಾ ಊರಿಗೆ ನೀ ಎಲ್ಲಿಂದ ಬಂದೇ ಹನುಮಂತ. ಮೊದಲು ದಕ್ಷಿಣ ಕನ್ನಡಕ್ಕೋಗು, ಅಲ್ಲಿ ನಿನ್ನಂಥವರು ಭಾಳಮಂದಿ ಅದಾರ.”
“ವಿಜಾಪುರ ಅನಾಥಮಾಡಿ ನಾ ಎಲ್ಯೂ ಹೋಗುದಿಲ್ಲ.”
“ಅನಾಥಲ್ಲಲೇ, ನೀ ಇದ್ರಾ ಮಶಾಣಾಕ್ಯತಿ, ಈಗಾಗಲೇ ನಿಮ್ಮ ಬ್ರದರ್ಸ್ ದೆಹಲಿನ ಮಶಾಣ ಮಾಡಕತ್ಯಾರ, ಅದಿರ್ಲಿ ಮೊದಲು ನಮ್ಮ ದೊರೆಸ್ವಾಮಿ ಸನೇಕ್ಕೋಗಿ ಕ್ಷಮಿಸಿರಿಯಪ್ಪಾ ಅನ್ನು.”
“ನಾ ಅನ್ನುದಿಲ್ರಿ.”
“ಹಾಳಾಗಿ ಹೋಗು.”
“ಅಂಗೇ ಮಾಡ್ತೇನ್ರೀ…”

ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...