Homeಅಂಕಣಗಳುಥೂತ್ತೇರಿ | ಯಾಹೂಮಂಡ್ಯದ ಸ್ವಾಭಿಮಾನ ಅಂದ್ರೆ ಏನನ್ನಕಂಡಿದ್ದಿರಿ ಸಾ! - ಥೂತ್ತೇರಿ.

ಮಂಡ್ಯದ ಸ್ವಾಭಿಮಾನ ಅಂದ್ರೆ ಏನನ್ನಕಂಡಿದ್ದಿರಿ ಸಾ! – ಥೂತ್ತೇರಿ.

- Advertisement -
- Advertisement -

ಕುರುಕ್ಷೇತ್ರದ ವಿವರವನ್ನು ದೃತರಾಷ್ಟ್ರ ಸಂಜಯನಿಂದ ತಿಳಿದುಕೊಳ್ಳುತ್ತಿದ್ದಂತೆ, ನಾವು ಕೂಡ ಯಾಕೆ ಮಂಡ್ಯ ಜಿಲ್ಲೆಯ ವಾಟಿಸ್ಸೆ ಮಾತನಾಡಿಸಿ, ಅಖಾಡದ ವಿವರ ಪಡೆಯಬಾರದು ಎನ್ನಿಸಿದ ಕೂಡಲೇ, ಖುಷಿಯಾಯ್ತು. ವಾಟಿಸ್ಸೆಗೆ ಪೋನ್ ಮಾಡಲಾಗಿ ರಿಂಗಾಯ್ತು ರಿಂಗ್ ಟೋನ್….. ಹಾ ಯಣ್ಣೆ ನಿಮ್ದು ಊಟ ನಮ್ದು…..

‘ಹಲೋ ಯಾರು ಮಾತಾಡಿ ಪ್ಲೀಸ್’

“ವಾಟಿಸ್ಸೆ, ನಾನು ಯಾಹೂ”

“ಓಹೊಹೊ ಗುಡ್ಡಾಪ್ಟರ್‍ನೂನ್ ಸರ್”

“ಎಲ್ಲಿದ್ದೀ”

“ನಮ್ಮ ಕ್ಷೇತ್ರದಲ್ಲಿದ್ದೀನಿ ಸಾ”

“ಯಾಗಿದೆ ವಾತಾವರಣ”

“ತುಂಬ ಹೀಟಾಗಿದೆ ಸಾರ್, ಅದರಲ್ಲೂ ಕುಮಾರಣ್ಣನ ಇಂಜನ್ನು ತುಂಬಾ ಬಾಯ್ಲಾಗಿ ಹ್ವೊಗೆ ಬತ್ತಾ ಅದೆ”

“ಜೊತೆಲಿ ರಾಧಿಕಾ ಇದ್ರೆ ಕೂಲಾಗಿರತಿದ್ರಲ್ಲವಾ”

“ಅಂಗೇಳಕ್ಕೆ ಬರದಿಲ್ಲ ಸಾರ್. ಆಗ್ಲೆ ಇಂಜನ್ನ ಯರಡು ಸತಿ ಹೊರಾಯಲ್ಲಾಗಿರದ್ರಿಂದ, ಅವರ ಬಾಳಿಕೆ ಕಡಿಮೆ ಅಂತ ಅವರಪ್ಪ ದ್ಯಾವೇಗೌಡ ಹೇಳವ್ರೆ”

“ಅದ್ಕೆ ನಿಖಿಲ್ ನಿಲ್ಸಿದ್ದರಂತೆ”

“ಅವ್ಯಲ್ಲ ಸುಳ್ಳು ಸಾರ್, ದ್ಯಾವೇಗೌಡ್ರು ಸುಳ್ಳು ಹೇಳಿ ಹೇಳಿ ಅದ್ನೆ ನಿಜ ಅನ್ನಕಂಡು ಬುಡ್ತರೆ. ಅವುರಿಗೆ ಸುಳ್ಳಿಗೂ ಸತ್ಯಕ್ಕೂ ವ್ಯತ್ಯಾಸನೆ ಹೊಂಟ್ಯೋಗ್ಯದೆ”

“ಅಂಗಂತಿಯಾ”

“ಸಾರ್, ನಾನು ಯಾವ ಕಾಲದಿಂದ ದ್ಯಾವೇಗೌಡ್ರ ನೋಡಿದ್ದಿನಿ ಅವುರ ಭಾಷಣ ಕೇಳಿದ್ದೀನಿ. ಯಲ್ಲಾ ರಿಕಾಲ್ಡ್ ನನ್ನತ್ರ ಅವೆ ಸರ್”

“ಚುನಾವಣೆ ಬಗ್ಗೆ ಏನೇಳ್ತೀರಿ, ಸುಮಲತ ಗೆಲ್ತರ?”

“ಅವುರು ಗೆದ್ದಾಯ್ತು ಸಾರ್, ಇನ್ನೇನಿದ್ರು ಲೀಡ್ ಲೆಕ್ಕ ಹಾಕಬೇಕು”

“ಅದ್ಯಂಗೇಳ್ತಿ”

“ವೆರಿ ಸಿಂಪಲ್ಲು ಸಾರ್, ಈ ಕುಮಾರಸ್ವಾಮಿ ದ್ಯಾವೇಗೌಡ್ರು ಯಾವತ್ತು ನಿಖಿಲನ್ನು ತಂದು ಮಂಡ್ಯಕ್ಕೆ ನಿಲ್ಲಿಸಿದ್ರೊ ಅವತ್ತೇ ಸೋತ. ಯಾಕಂದ್ರೆ ಮಂಡ್ಯದಲ್ಲಿ ಗಂಡುಸ್ರಿಲವೆ ಅಂತ ಜನ ತಿರಿಗಿಬಿದ್ರು. ಆಗ ಗಂಡಸರ ಮಾನ ಉಳಸಕ್ಕೆ ಸುಮಲತ ನಿಂತ್ರು. ನಿಜಕ್ಕೂ ಮಂಡ್ಯದ ಮರಿಯಾದಿ ಉಳಿಸಿದ ಗೌಡ್ತಿ ಸಾರವುಳು”

“ಕಾಂಗ್ರೆಸ್ಸಿನೋರು  ಯಂಗವರೆ”?

“ಅವುರದ್ರಲ್ಯ ಅಂಡರ್ ಗ್ರೌಂಡ್ ವರ್ಕ್ ಸಾ”

“ಯಾಕೆ”

“ಯಾಕೆ ಅಂದ್ರೆ, ನಮ್ಮ ಜಿಲ್ಲೆಲಿ ಕಾಂಗ್ರೆಸ್ ಜೆಡಿಎಸ್ ಅಂದ್ರೆ ಮ್ಯಾಗಲ ಕೇರಿ ಕ್ಯಾಳಗಲ ಕೇರಿ ನಾಯಿಗಳಿದ್ದಂಗೆ. ಯಾವಾಗ್ಲೂ ಕಡದಾಡ್ತವೆ. ಯಲಕ್ಷನ್ ಬಂದಾಗ ಯಾರಿಗಾರ ಓಟಾಕಿ ಒಂದಾಗಿರಿನ ಅನ್ನದ ಇವತ್ತಿಗೂ ತಿಳಿಕಂಡಿಲ್ಲ. ಈಗೆ ಕುಮಾರಸ್ವಾಮಿ ಮಗನಿಗಾಗಿ ಒಂದಾದಾರೆ?

“ಅಂಗಾದ್ರೆ ಮೈತ್ರಿ ಧರ್ಮದ ಕತೆ ಏನೂ.”

“ಅದ ಮುರುದಾಕಿರೋನೆ ಕುಮಾರಸ್ವಾಮಿ.”

“ಅದ್ಯಂಗೇ.”

“ಯಂಗೇ ಅಂದ್ರೆ ಕೆಲವು ಕಾಂಗ್ರೆಸ್ಸಿಗರು ನನಿಗೆ ಬೇಕಿಲ್ಲ ಅಂತನೆ. ಅಂದ್ರೆ ಮೈತ್ರಿ ಧರ್ಮ ಮುರದೋರ್ಯಾರು ಹೇಳಿಸಾ.”

“ಕುಮಾರಣ್ಣಂದೆ ತಪ್ಪು  ಅಂತಿರಾ.”

“ಒಂದಲ್ಲಾ ಸಾ. ತಪ್ಪು ದಿನಾ ಮಾಡ್ತನೇ ಹೋಯ್ತಾ ಅವುನೆ.”

“ಒಂದ್ಯರಡೇಳು ನೋಡಣ.”

“ನಿಖಿಲ್ ಎಲ್ಲಿದ್ದಿಯಪ್ಪಾ ಅಂದಿದ್ದು ಮೊದಲ್ನೆ ತಪ್ಪು, ಅವತ್ತಿಂದ ಮಗನ್ನ ಮಂಡ್ಯದಲ್ಲಿ ನಾಟಿಹಾಕಿ ಬ್ಯಳಸಕ್ಕೆ ಮಾಡಿದ ಕ್ಯಲಸಗಳ್ಯಲ್ಲ. ಪ್ರಾಮಾಣಿಕವಾದವಲ್ಲ ಅಂತ, ಜನಕ್ಕೆ ಈಗ ಗೊತ್ತಾಯ್ತಾ ಅದೆ ಸಾ. ಇನ್ನ ಆ ದರ್ಶನನ್ನ ಯಾಕೆ ಬೈಬೇಕು ಸಾ. ಇವುನ ಮಗನೂ ಹೀರೋ ಅಲ್ಲವೆ.”

“ಮಗನ್ನ ಗೆಲ್ಲಸಬೇಕಲವೆ.”

“ಗೆಲ್ಲಿಸಬೇಕು ಅಂತ ಅನ್ನೋ ಮಾತುಗಳೇ, ಅವುನ್ನ ಸೋಲುಸ್ತಾ ಅವೆ ಸಾ. ನಾನಂತು ಹುಟ್ಟಿದ್ ತಾವಿಂದ ಮಂಡ್ಯ ಜಿಲ್ಲೆ ಹಿಂಗೆ ಎದ್ದು ನಿಂತಿದ್ದ ನೋಡ್ನಿಲ್ಲ ಸಾ.”

“ಬರಿ ಅಂಬಿ ಅಭಿಮಾನಿಗಳಬ್ಬರವಂತೆ.”

“ಅವುರಬ್ಬರ ಸರಿ, ಸುಮ್ಮನಿರೋರ ಅಬ್ಬರ ಕೇಳಿಸಿಗಂಡಿದ್ದೀರಾ. ಅದು ಸಾಧಾರಣವಾದದ್ದಲ್ಲ ಸಾರ್. ಇಂದ್ರಾಗಾಂಧಿ, ರಾಜೀವ್‍ಗಾಂಧಿ ಜ್ವತೆಲಿದ್ದಿನಿ ಅಂತ ಮಂಡ್ಯನೆ ಮರತಿದ್ದ ಯಸ್ಸೆಂ ಕೃಷ್ಣನ್ನ ಶಂಕರೇಗೌಡ್ರೆದ್ರಿಗೆ ತಗದು ಯಸ್ತರಲ್ಲ ಅಂಥದೊಂದು ಅಬ್ಬರ ವಳಗೇ ಗುರುಗುಡತಾ ಅದೆ.”

“ಅಮರಾವತಿ ಚಂದ್ರಶೇಖರ ಸುಮಲತಾರಿಗೆ ಕೈಕೊಟ್ಟನಂತೆ.”

“ವ್ಯವಾರಸ್ತರಂಗೇ ಅಲವ ಸಾ, ಅಂಬಿ ಇರಗಂಟ ಅವುನ್ನ ತಂಬಿ ಅನ್ನಕಂಡು ಬದುಕಿದ, ಅವುನ ಮಂತ್ರಿಗಿರಿಗೂ ಕ್ಯಟ್ಟ ಹೆಸರು ತಂದ, ಈಗಂಬಿ ಇಲ್ಲ, ಅದ್ಕೆ ಕುಮಾರಣ್ಣ ನತÀ್ರಕ್ಕೋಗಿ ಕುಯ್ಯಿಗುಡ್ತಾ ಅವುನೆ. ಈ ಶತಮಾನದ ದ್ರೋಹ ಅಂದ್ರೆ ಅವiರಾವತಿ ಚಂದ್ರಶೇಖರ ಅಂಬರೀಶ್ಗೆ ಕೈ ಕೊಟ್ಟಿದ್ದು, ಯಸ್ಸೆಂ ಕೃಷ್ಣ ಕಾಂಗ್ರೆಸ್‍ಗೆ ಕೈಕೊಟ್ಟಿದ್ದು ಸಾ.”

“ಕೃಷ್ಣ ಕಾಂಗ್ರೆಸ್ ಬುಡಕ್ಕೆ ಸರಿಯಾದ ಕಾರಣ ಕೊಟ್ಟವುರೆ.”

“ಏನಾರ ಕೊಡ್ಳಿ, ಇವತ್ತು ಅವುನ ತಲೆಮ್ಯಾಲೆ ಹಾಕ್ಯಂಡವುನಲ್ಲ ವಿಗ್ಗುಮ ಅವು ಕಾಂಗ್ರೆಸ್ಸಿಂದು ಸಾ. ಅವುನ ಮನೆ ಮಠ ಆಸ್ತಿ ಪಾಸ್ತಿ ಬಟ್ಟಿ ಬರಿ ಯಲ್ಲಾ ಕಾಂಗ್ರೆಸ್ಸಿಂದು, ಸಾಯಕಡೆ ಸತಿ ಅದೂ ಬಿಜೆಪಿ ಗೋದ ನೋಡಿ ಅದ್ಕೆ ಅವುನ ದ್ರೋಹ ಈ ಶತಮಾನದ ದ್ರೋಹ ಸಾ.”

“ಅವುರೊಬ್ಬರೆ ಏನೋಗಿಲ್ಲ, ಅಂಥಾ ಡಿ.ಬಿ.ಚಂದ್ರೇಗೌಡ ಹೋದ, ಶ್ರೀಕಂಠಯ್ಯ ಹೋದ ಗೊತ್ತಾ.”

“ಅವುರು ದ್ಯಾವೇಗೌಡನ ರಾಜಕಾರಣದಿಂದ ಬೇಸತ್ತು ಹೋದ್ರು ಸಾ. ಇವುಂದೇಳಿ ಕಾಂಗ್ರೆಸ್ಸು ಇವುನ್ನ ಪ್ರಧಾನಿ ಮಾಡಲಿಲ್ಲ ಅಷ್ಟೇ. ಇನ್ಯಲ್ಲ ಸ್ಥಾನಕೊಟ್ಟಿತ್ತು ಅಲ್ವೆ, ಹೋಗ್ಲಿ ಬುಡಿ ಸತ್ತೋರ ಬಗ್ಗೆ ಯಾಕೆ ಮಾತಾಡದು.”

“ವಾಟಿಸ್ಸೆ ನೀನು ಕಾಂಗ್ರೆಸ್ಸಾ.”

“ಇಲ್ಲ ಸಾರ್, ಈಗ ಇಂಡಿಪೆಂಡೆಂಟು.”

“ಹ್ಯಂಗೆ ನ್ಯಡಿದದೆ ಪ್ರಚಾರ.”

“ನೋಡಿ, ಇವತ್ತು ಕುಮಾರಸ್ವಾಮಿ ಊರಿಗ್ಯಲ್ಲ ಬಸ್ಸು ಕಳಿಸಿ ಜನ ತಂದು ಮಂಡ್ಯದಲ್ಲಿ ಸುರಕಂಡು ಸುಮಲತನಿಗಿಂತ ನಾವು ಸ್ಟ್ರಾಂಗು ಅಂತ ತೋರ್ಯವುನೇ. ತಲಿಗೆ ಐದು ನೂರ್‍ವರ್ಗೂ ಬಟವಾಡೆ ಆಗಿದೆ. ಯಲಕ್ಷನ್ ಟೀಮಿಗೆ ಓಟಿಗಿಷ್ಟು ಅಂತ ತೀರ್ಮಾನ ಮಾಡಿ ಕೋಡ್ತಾರಂತೆ, ಯಾಕಂದ್ರೆ ಮುಖ್ಯಮಂತ್ರಿ ಮಗ ಸೋಲಬಾರದಂತೆ. ಅವುರಿಗೆ ಕಾರ್ಯಕರ್ತರವುರೆ ಎಂಟು ಜನ ಯಮ್ಮೆಲ್ಲೆ ಪೈಕಿ ಮೂರು ಜನ ಮಂತ್ರಿಗಳವುರೆ, ಆದ್ರಿಂದ ಬಟಾವಾಡೆಗೆ ಯಾವ ತ್ವಂದ್ರೆನು ಇಲ್ಲ.”

“ಜನ ದುಡ್ಡೀಸಗಳಕ್ಕೆ ತಯಾರಾಗಿದಾರ.”

“ಮತ್ತೆ ಯಾರಪ್ಪನ ಮನೆ ದುಡ್ಡು ಸಾರ್, ಮಂಡ್ಯದ ಮಣ್ಣಿನ ಮಕ್ಕಳ ದುಡ್ಡು ಬುಡಕ್ಕಾಯ್ತದಾ.”

“ನೀವು.”

“ನಾನು ಈಸಗಂಡು ಓಟು ಮಾತ್ರ ಸುಮಲತಾರಿಗಾಕ್ತಿನಿ.”

“ಥೂತ್ತೇರಿ.”

–    ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...