ಶುಕ್ರವಾರ ರೈತರಿಂದ ಸುತ್ತುವರೆಯಲ್ಪಟ್ಟ ಬಿಜೆಪಿ ನಾಯಕ ಮನೀಶ್ ಗ್ರೋವರ್ ಅವರನ್ನು ಇನ್ನೂ ವಿರೋಧಿಸುವವರ ಕಣ್ಣುಗಳನ್ನು ಕಿತ್ತು, ಕೈಗಳನ್ನು ಕತ್ತರಿಸಲಾಗುವುದು ಎಂದು ಹರಿಯಾಣ ಬಿಜೆಪಿ ಸಂಸದ ಅರವಿಂದ್ ಶರ್ಮಾ ಶನಿವಾರ ರೈತರಿಗೆ ಬೆದರಿಕೆ ಹಾಕಿದ್ದಾರೆ.
ಅರವಿಂದ್ ಶರ್ಮಾ ಇದನ್ನು ಸಾರ್ವಜನಿಕವಾಗಿಯೆ ಹೇಳಿದ್ದು, ಅವರ ಭಯಾನಕ ಹೇಳಿಕೆಗೆ ಪ್ರೇಕ್ಷಕರು ಹರ್ಷೋದ್ಗಾರ ಮಾಡಿ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ವಿರುದ್ದವು ಆಕ್ರೋಶ ವ್ಯಕ್ತಪಡಿಸಿದ ಅರವಿಂದ್, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕಾಗಿ ಇನ್ನೂ 25 ವರ್ಷಗಳ ಕಾಲ ಅಲೆದಾಡಬೇಕು ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ನಾಯಕರಿಗೆ ರೈತರಿಂದ ಘೇರಾವ್; ಕೈಮುಗಿದು ಕ್ಷಮೆಯಾಚಿಸಿದ ಮಾಜಿ ಸಚಿವ
ಅರವಿಂದ್ ಶರ್ಮಾ ಕಾಂಗ್ರೆಸ್‌ನ ಮಾಜಿ ನಾಯಕನಾಗಿದ್ದು 2019 ರಲ್ಲಿ ಬಿಜೆಪಿ ಸೇರಿದ್ದರು. ಅವರು ಇದೀಗ ರೋಹ್ಟಕ್‌ನ ಬಿಜೆಪಿ ಸಂಸದರಾಗಿದ್ದಾರೆ.
‘‘ರೈತರ ಆಂದೋಲನದ ನೆಪದಲ್ಲಿ ನಿರುದ್ಯೋಗಿ ಮದ್ಯವ್ಯಸನಿಗಳು ಒಕ್ಕೂಟ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ’’ ಎಂದು ಬಿಜೆಪಿ ನಾಯಕ ಮನೀಶ್ ಗ್ರೋವರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದನ್ನು ವಿರೋಧಿಸಿ ರಾಜ್ಯದ ರೋಹ್ಟಕ್ ಜಿಲ್ಲೆಯ ಕಿಲೋಯ್ ಗ್ರಾಮದ ದೇವಸ್ಥಾನದೊಳಗೆ ಮನೀಶ್ ಗ್ರೋವರ್ ಅವರನ್ನು ರೈತರು ಘೇರಾವ್ ಮಾಡಿದ್ದರು.
ಶುಕ್ರವಾರ ರೈತರಿಂದ ಸುತ್ತುವರೆಯಲ್ಪಟ್ಟ ಬಿಜೆಪಿ ನಾಯಕ ಮನೀಶ್ ಗ್ರೋವರ್ ಅವರನ್ನು ಇನ್ನೂ ವಿರೋಧಿಸುವವರ ಕಣ್ಣುಗಳನ್ನು ಕಿತ್ತು ಹಾಕಲಾಗುವುದು ಮತ್ತು ಕೈಗಳನ್ನು ಕತ್ತರಿಸಲಾಗುವುದು ಎಂದು ಹರಿಯಾಣ ಬಿಜೆಪಿ ಸಂಸದ ಅರವಿಂದ್ ಶರ್ಮಾ ಶನಿವಾರ ರೈತರಿಗೆ ಬೆದರಿಕೆ ಹಾಕಿದ್ದಾರೆ.#NaanuGauri #BJP #FarmersProtest #Haryana pic.twitter.com/hlfNge5dBa
— Naanu Gauri (@naanugauri) November 6, 2021
ರೈತರ ಘೆರಾವ್‌ನಿಂದಾಗಿ ಮನೀಶ್ ಗ್ರೋವರ್ ಮತ್ತು ಬಿಜೆಪಿಯ ಇತರ ನಾಯಕರು ಸುಮಾರು ಎಂಟು ಗಂಟೆಗಳ ಕಾಲ ದೇವಾಲಯದೊಳಗೆ ಸಿಲುಕಿಕೊಂಡಿದ್ದರು. ನಂತರ ಮನೀಶ್ ಗ್ರೋವರ್ ಕೈ ಮುಗಿದು ಕ್ಷಮೆ ಕೇಳಿದ ನಂತರ ಅವರನ್ನು ಹೊರ ಹೋಗಲು ಅವಕಾಶ ನೀಡಲಾಯಿತು.
ಇದನ್ನೂ ಓದಿ: 2ಜಿ ಸ್ಪೆಕ್ಟ್ರಂ ಪ್ರಕರಣದ ಆರೋಪ: ಸಂಜಯ್ ನಿರುಪಮ್ ಕ್ಷಮೆಯಾಚಿಸಿದ ಮಾಜಿ CAG ವಿನೋದ್ ರಾಯ್
ಆದರೆ ಅಲ್ಲಿಂದ ಹೊರ ಬಂದ ನಂತರ ತಾನು ಕ್ಷಮೆ ಯಾಚನೆ ಮಾಡಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. “ನನ್ನೊಂದಿಗೆ ಎಲ್ಲರತ್ತ ಕೈ ಬೀಸುವಂತೆ ಕೇಳಲಾಗಿದೆ. ನಾವು ಕ್ಷಮೆ ಕೇಳಿಲ್ಲ… ಈ ದೇವಸ್ಥಾನಕ್ಕೆ ಯಾವಾಗ ಬೇಕಾದರೂ ಬರುತ್ತೇನೆ’’ ಎಂದು ಹೇಳಿದ್ದಾರೆ.
ರೈತರು ದೇವಸ್ಧಾನದ ಎಲ್ಲಾ ಕಡೆಯಿಂದ ಸುತ್ತುವರಿಯುವಂತೆ ಜನರನ್ನು ಕೇಳಿಕೊಂಡಿಂದ್ದರು.
ಗುರಗಾಂವ್‌ನಿಂದ 78 ಕಿಮೀ ದೂರದಲ್ಲಿರುವ ರೋಹ್ಟಕ್ ಜಿಲ್ಲೆಯ ಕಿಲೋಯ್ ಗ್ರಾಮದ ದೇವಸ್ಥಾನದಲ್ಲಿ ನಡೆದ ಘಟನೆಯನ್ನು ನಿಯಂತ್ರಿಸಲು ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿದ್ದರು. ಇಬ್ಬರು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಘಟನೆಯ ಹಿನ್ನಲೆಯಲ್ಲಿ ದೆಹಲಿ-ಹಿಸಾರ್ ರಾಷ್ಟ್ರೀಯ ಹೆದ್ದಾರಿಯನ್ನು ಸ್ವಲ್ಪ ಹೊತ್ತು ಬಂದ್ ಮಾಡಲಾಗಿತ್ತು.
ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ದ ಅವಹೇಳನಕಾರಿ ಪದ ಬಳಕೆ: ಆಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ ‘ಟೈಮ್ಸ್ ನೌ’ ಪತ್ರಕರ್ತೆ


