ಮಿಥ್ಯ: ‘ಈ ಜೀವಿಯ ಹೆಸರು ‘ಬಿಜ್ಜು’. ಇದು ಬಿಲಗಳಲ್ಲಿ ವಾಸಿಸುತ್ತೆ, ಮೃತ ಮನಷ್ಯರಂತೆ ಅರಚುತ್ತದೆ, ನರಳುತ್ತದೆ. ಕುರುಡ ನಂಬಿಕೆಯ ಕಾರಣದಿಂದ ಜನರು ಮೃತ ವ್ಯಕ್ತಿ ಚೀರುತ್ತಿದ್ದಾನೆ ಎಂದು ಭ್ರಮಿಸುತ್ತಾರೆ. ಆದರೆ ಬಿಲಗಳಿಂದ ಈ ಜೀವಿ ಇಂತಹ ಧ್ವನಿ ಹೊರಡಿಸುತ್ತೆ… ಬಿಲ, ಗುಂಡಿಗಳಲ್ಲಿ ವಾಸಿಸುವ ಇದು ಮನಷ್ಯನ ಮೃತ ದೇಹ ತಿಂದು ಬದುಕುತ್ತದೆ… ಇಲ್ಲಿರುವ ವಿಡಿಯೋ ನೋಡಿ…’
यह है बिज्जू नाम का जीव अधिकांश कब्रिस्तान में पाया जाता है और इसकी आवाज ऐसी लगती है जैसे कोई मुर्दा चिल्ला रहा हो इस अंधविश्वास के कारण अधिकांश लोग यह समझते हैं कि दफनाया गया मुर्दा चिल्ला रहा है यह उम्र भर उस कब्र में रहकर उस मुर्दे का मांस खाता है और अपनीआवाज चिलाने वाली निकालता है सुन लीजिए
Posted by OneWorld on Sunday, June 30, 2019
ಇದು ಸೋಷಿಯಲ್ ಮೀಡಿಯಾದಲ್ಲಿ ಓಡುತ್ತಿರುವ ವಿಡಿಯೊ ಒಂದಕ್ಕೆ ಹಾಕಿರುವ ಒಕ್ಕಣೆ. ಹಿಂದೆಯೂ ಇದೇ ವಿಡಿಯೋ ಪ್ರಸಾರವಾಗಿತ್ತು. ಆಗ ಅರೇಬಿಯನ್ ಪೆನಿನ್ಸುಲಾಗಳಲ್ಲಿ ಕಾಣುವ ಒಂದು ವಿಧದ ಆಮೆ ಎಂದು ಹೇಳಲಾಗಿತ್ತು.
ಸತ್ಯ: ವಿಡಿಯೋದಲ್ಲಿರುವುದು ಒಂದು ವಿಧದ ಆಮೆ… Alligator snapping turtle. ಉತ್ತರ ಅಮೆರಿಕಾದಲ್ಲಿ ಕಾಣಸಿಗುವ ಇದು ಜಗತ್ತಿನಲ್ಲಿ ಅತಿ ದೊಡ್ಡದಾದ ಆಮೆಯ ಪ್ರಭೇದವಾಗಿದ್ದು, 220 ಪೌಂಡ್‍ಗಳಷ್ಟು ತೂಕ ಹೊಂದಿರುತ್ತದೆ. ಜೀವಿತಾವಧಿ: 50ರಿಂದ 100 ವರ್ಷ. ಉಭಯಚರ ಆಗಿರುವ ಇದು ಭೂಮಿ ಮತ್ತು ನೀರಿನಲ್ಲಿ ಜೀವಿಸುತ್ತದೆ.

ಆದರೆ ಈ ಆಮೆ ಮನುಷ್ಯರಂತೇನೂ ಅರಚುವುದಿಲ್ಲ, ನರಳುವುದಿಲ್ಲ. ಇಲ್ಲಿರುವ ವಿಡಿಯೋ ಟಿಕ್ ಟಾಕ್ ಆ್ಯಪ್ ಬಳಸಿ ಸೃಷ್ಟಿಸಿದ್ದು ಅಷ್ಟೇ. ಇಲ್ಲಿ ಆಮೆ ಅರಚುವುದು ರೋಚಕ ಅನಿಸುವ ಕಾರಣದಿಂದ ಈ ವಿಡಿಯೋ ತುಂಬ ಶೇರ್ ಆಗುತ್ತಿದೆ ಅಷ್ಟೇ. ಇಂಥದ್ದೇ ಇನ್ನೊಂದು ವಿಡಿಯೋದಲ್ಲಿ ಈ ಆಮೆ ಮತ್ತು ಸಾಮಾನ್ಯ ಆಮೆ ಎರಡೂ ಮನುಷ್ಯರಂತೆ ಕಿರುಚುವ ಧ್ವನಿ ಸೇರಿಸಿ ಎಡಿಟ್ ಮಾಡಲಾಗಿದೆ.
ಒಟ್ಟಿನಲ್ಲಿ, ಯಾವ ಜೀವಿಯೂ ಮನುಷ್ಯನಂತೆ ಅರಚಲಾರದು, ಕಿರುಚಲಾರದು, ನರಳಲಾರದು….
(ಆಧಾರ: ಅಲ್ಟ್ ನ್ಯೂಸ್)


