HomeUncategorizedದೇಶದ ಆರ್ಥಿಕತೆಯ ‘ಅಚ್ಚೇ ದಿನ್’ ಅಳಿವಿನಂಚಿನಲ್ಲಿದೆ: ಪ್ರಧಾನಿಗೆ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಪತ್ರ

ದೇಶದ ಆರ್ಥಿಕತೆಯ ‘ಅಚ್ಚೇ ದಿನ್’ ಅಳಿವಿನಂಚಿನಲ್ಲಿದೆ: ಪ್ರಧಾನಿಗೆ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಪತ್ರ

ಕಾಶ್ಮೀರ, ವಿಧಿ 35 ಎ ರದ್ದು, ಮಂದಿರ ಮಸೀದಿ ವಿವಾದವನ್ನು ಮತ್ತೆ ಶುರುಮಾಡುವುದರಿಂದ ಮಾಧ್ಯಮಗಳ ಮುಖ್ಯ ಶೀರ್ಷೀಕೆಯಲ್ಲಿ ಇರುವುದು ಸಾಧ್ಯವಾಗಬಹುದು. ಆದರೆ ಆರ್ಥಿಕ ಬಿಕ್ಕಟ್ಟಿನ ಪರಿಹಾರಕ್ಕೆ ಯಾವುದೇ ಸಹಕಾರವಾಗುವುದಿಲ್ಲ.

- Advertisement -
- Advertisement -

ಪ್ರಿಯ ಪ್ರಧಾನ ಮಂತ್ರಿಗಳೆ,

ಇದು, ಬಹಿರಂಗ ಪತ್ರಗಳಿಗೆ ಯುಕ್ತವಾದ ಸಮಯವೂ, ಸಂದರ್ಭವೂ ಆಗಿರುವುದರಿಂದ ನಾನು ಸಹ ಒಂದು ಪತ್ರ ಬರೆಯಬೇಕು ಎಂದುಕೊಂಡೆ. ಮೊದಲಿಗೆ ನಿಮಗೆ ನನ್ನ ಅಭಿನಂದನೆಗಳು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅಸಾಧಾರಣ ಗೆಲುವು ಸಾಧಿಸಿದ್ದಕ್ಕಾಗಿ ನಿಮ್ಮನ್ನು ಪ್ರಶಂಸಿಸುತ್ತಿದ್ದೇನೆ. ನಿಮ್ಮ ಗೆಲುವು ನಿಜವಾಗಿಯೂ ಒಂದು ಮಹಾ ವಿಜಯ. ನಿಮ್ಮ ವಿಲಕ್ಷಣ ವ್ಯಕ್ತಿತ್ವ, ಚಾಲಕಶಕ್ತಿಯ ರಾಜಕಾರಣದ ಶಕ್ತಿಯುತವಾದ ಪ್ರಭಾವ, ಗೆಲುವೇ ಗುರಿಯಾಗಿ ಭಾರತೀಯ ಜನತಾ ಪಕ್ಷವನ್ನು ಮುನ್ನಡೆಸುವುದರಲ್ಲಿ ಅಮಿತ್ ಷಾ ಅವರ ಅನನ್ಯವಾದ ದೀಕ್ಷಾ, ದಕ್ಷತೆ ಈ ಮಹಾ ವಿಜಯಕ್ಕೆ ವಿಶೇಷವಾಗಿ ಒಳ್ಳೆಯದು ಮಾಡಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಹಾಗಾಗಿಯೇ, ಕಳವಳಗೊಂಡ ವಿರೋಧ ಪಕ್ಷಗಳ ಮೇಲೆ ನಿಮ್ಮ ಜೈತ್ರಯಾತ್ರೆ ಎಂತಹ ಪ್ರಭಾವ ಬೀರುತ್ತಿದೇಯೋ ಈಗಾಗಲೇ ನೋಡಿದ್ದೇವೆ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಯಾವುದೋ ಒಂದು ಭಾಗದಲ್ಲಿ ವಿರೋಧ ಪಕ್ಷದ ನಾಯಕರು ಪ್ರತಿದಿನ ಬಿಜೆಪಿಗೆ ಬಂದು ಸೇರುತ್ತಿರುವುದೇ ಈ ಪ್ರಭಾವಕ್ಕೆ ನಿದರ್ಶನ. ವಿರೋಧ ಪಕ್ಷಗಳು ಆರೋಪಿಸಿದ ಹಾಗೆ ತನಿಖಾ ಸಂಸ್ಥೆಗಳ ದುರುಪಯೋಗ ಪಡಿಸಿಕೊಂಡಿರುವುದರಿಂದಲೇ ಇದೆಲ್ಲ ನಡೆಯುತ್ತಿದೆ ಎಂದು ನಾನು ಭಾವಿಸುತ್ತಿಲ್ಲ. ನಾವು ‘ಉಗ್ತಾ ಸೂರಜ್’ (ಉದಯಿಸುತ್ತಿರುವ ಸೂರ್ಯ)ನನ್ನು ಆರಾಧಿಸುವ ಲಕ್ಷಣ ಹೆಚ್ಚಿರುವ ಪ್ರಜೆಗಳು ತಾನೆ. ಮತ್ತು ಅವಕಾಶವಾದದ ರಾಜಕಾರಣಿಗಳು ಸದಾ ಅಧಿಕಾರ ವಿಜೇತರ ಅನುಗ್ರಹಕ್ಕಾಗಿ ಕಾತರಿಸುವದರಲ್ಲಿ ಆಶ್ಚರ್ಯವೇನಿದೆ?

ಇದಕ್ಕೂ ಹಿಂದೆ, ಇಂದಿರಾಗಾಂಧಿ ನಾಯಕತ್ವದಲ್ಲಿ ಕಾಂಗ್ರೇಸ್ ಪಕ್ಷ ದೇಶ ರಾಜಕಾರಣದಲ್ಲಿ ಎದುರಾಳಿಗಳಿಲ್ಲದ ಅಧಿಕಾರ ಚಲಾಯಿಸುವ ಸಮಯದಲ್ಲಿ ಹಾಗೆ ಜರುಗಿತ್ತು. ಹೊಸ ರಾಜಕೀಯ ಹಿಡಿತ ಹೊಂದಿರುವ ಶಕ್ತಿಯಾಗಿ ಬಿಜೆಪಿ ಹೊರಹೊಮ್ಮಿದ ಪ್ರಸ್ತುತ ಸಂಧರ್ಭದಲ್ಲೂ ಅದು ಸಂಭವಿಸುತ್ತಿದೆ. ಈ ಆಧಿಪತ್ಯ ರಾಜಕೀಯ ಸಂಸತ್ತನ್ನು ಯಾವ ರೀತಿ ಬಲಹೀನಪಡಿಸುತ್ತಿದೆಯೋ ಈಗಾಗಲೇ ನೋಡಿದ್ದೇವೆ. ಲೋಕಸಭೆಯಲ್ಲಿ ಅತ್ಯಧಿಕ ಬಹುಮತ, ರಾಜ್ಯಸಭೆಯಲ್ಲಿ ಉತ್ಪತ್ತಿಯಾದ ಸಂಖ್ಯಾಬಲದಿಂದ ಈಗ ಪ್ರತಿ ವಿವಾದಸ್ಪದ ಮಸೂದೆಯನ್ನು ಯಾವುದೇ ಸಂಸದೀಯ ಪರೀಶಿಲನೆ ಇಲ್ಲದೆ ಅನುಮೋದನೆಗೊಳ್ಳುತ್ತದೆ ತಾನೇ!

ಆದರೆ ನಾನು ಈ ರಾಜಕೀಯ ಅನೈತಿಕತೆಯ ವ್ಯವಹಾರಗಳ ಆಳಕ್ಕೆ ಹೋಗಬೇಕೆಂದುಕೊಂಡಿಲ್ಲ. ಹಾಗೆಯೇ ಪಕ್ಷ ವ್ಯವಸ್ಥೆಯನ್ನು ಮುರಿದ ‘ಆಯಾರಾಮ್ ಗಯಾರಾಮ್’ ಸಂಸ್ಕೃತಿ ಬಗ್ಗೆ ಉಲ್ಲೇಖಿಸುತ್ತಿಲ್ಲ. ನಮ್ಮ ಸಾರ್ವಜನಿಕ ಜೀವನದಲ್ಲಿ ಅಧಿಕ ಸಂಖ್ಯೆಯಲ್ಲಿ ಜಾತಿವಾದ ಹೆಚ್ಚು ಹೆಚ್ಚು ವ್ಯಾಪಕವಾಗುತ್ತಿರುವ ಪ್ರವೃತ್ತಿಗಳ ಬಗ್ಗೆ ಹೇಳಲು ಈ ಬಹಿರಂಗ ಪತ್ರ ಉದ್ದೇಶಿಸುತ್ತಿಲ್ಲ. ಗುಂಪುದಾಳಿಗಳು, ಗುಂಪು ಹಿಂಸಾಕಾಂಡ ಸಂಕುಚಿತ ಮತೋನ್ಮಾಧದ ಜೊತೆ ಸಂಬಂಧಪಟ್ಟ ಹಲವು ಸಂಘಟನೆಗಳ ಬಗ್ಗೆ ನಿಮಗೆ ಚೆನ್ನಾಗಿ ತಿಳಿದೆ ಇರುತ್ತದೆ.

ಜಾರ್ಖಂಡ್‍ನಲ್ಲಿ ಬಿಜೆಪಿ ಮಂತ್ರಿಯೊಬ್ಬರು ಸ್ಥಳಿಯ ಕಾಂಗ್ರೆಸ್ ಶಾಸಕರೊಬ್ಬರನ್ನ ಜೈಶ್ರೀರಾಮ್ ಎಂದು ಘೋಷಣೆ ಕೂಗಬೇಕೆಂದು ಹೆದರಿಸುತ್ತಿರುವ ರೀತಿಯ ವಿಡಿಯೋ ಆಗಿ ಪ್ರಪಂಚವನ್ನ ದಿಗ್ಭ್ರಾಂತಿಗೊಳಿಸಿತು. ಇದರಿಂದ ನೀವು ಒಂದು ಧಾರ್ಮಿಕ ಅಲ್ಪಸಂಖ್ಯಾತರನ್ನು ಭಯಭೀತಗೊಳಿಸುವ ಯುಧ್ಧ ಘೋಷಣೆಯಾಗಿ ಪರಿಣಮಿಸಿರುವುದನ್ನು ಅರ್ಥ ಮಾಡಿಕೊಳ್ಳಬಹುದು. ಧಾರ್ಮಿಕ ಘರ್ಷಣೆಗಳನ್ನು ಪ್ರೇರೇಪಿಸುವ ಇಂತಹ ವಿವೇಕ ರಹಿತ ಸಂಘಟನೆಗಳಿಗೂ ಸಹ ನಾನು ಪ್ರಾಧಾನ್ಯತೆ ನೀಡುತ್ತಿಲ್ಲ. ಯಾಕೆಂದರೆ ನನ್ನ ಆರೋಪಕ್ಕೆ ಪ್ರತಿಸ್ಪಂದನೆಯಾಗಿ ಶಾಂತಿ ಭದ್ರತೆಗಳ ರಕ್ಷಣೆ ರಾಜ್ಯಗಳ ಜವಾಬ್ದಾರಿ ಎಂದು, ಈ ವಿಷಯದಲ್ಲಿ ಆಗಾಗ್ಗೆ ಎಚ್ಚರಿಸುವುದು, ಏನು ಮಾಡಬೇಕೋ ಸಲಹೆಗಳನ್ನು ನೀಡುವುದೇ ಹೊರತು ಕೇಂದ್ರ ಸರ್ಕಾರ ಮಾಡಲು ಏನು ಇಲ್ಲ ಎಂಬುವ ಉತ್ತರ ಬರುತ್ತದೆಂಬ ವಿಷಯ ನನಗೆ ಚನ್ನಾಗಿ ತಿಳಿದಿದೆ.

ಮತ್ತಷ್ಟು ಮುಖ್ಯವಾದ ವಿಷಯವೇನಂದರೆ ‘ಅರ್ಬನ್ ನಕ್ಸಲ್’, ‘ಖಾನ್ ಮಾರ್ಕೆಟ್, ತುಕ್ಡೆ ತುಕ್ಡೆ ಗ್ಯಾಂಗ್ ಸ್ಟರ್’, ‘ದೇಶವಿರೋಧಿ’ ಎನ್ನುವ ಮುದ್ರೆ ಹಾಕಿಸಿಕೊಳ್ಳಬೇಕು ಎಂದು ನಾನು ಆಶಿಸುತ್ತಿಲ್ಲ. ಅಸಂಖ್ಯಾತ ಸಹಚರ ಭಾರತೀಯ ನಾಗರೀಕರ ಪರವಾಗಿ ಮಾತನಾಡುವುದೇ ಅಪರಾಧವಾಗುತ್ತಿರುವ ದಿನಗಳಿವು. ಆದರೆ ನಾನು ಏನಾದರೂ ಮಾತನಾಡಿದರೆ ದೇಶ ವೀಭಜನೆಯ ಕಾಲದಲ್ಲಿ ಏನು ನಡೆಯಿತು? 1984ರಲ್ಲಿ ಏನು ನಡೆಯಿತು? ಕಾಶ್ಮೀರಿ ಪಂಡಿತರನ್ನು ಅವರವರ ಸ್ವಂತಸ್ಥಳಗಳಿಂದ ಹೊರದಬ್ಬಿದ್ದು ಯಾರು ಯಾರು ಅನ್ನುವ ಅಂಶಗಳ ಬಗ್ಗೆ ಆರೋಪಭರಿತವಾಗಿ ಕಥನಗಳನ್ನು ಕೇಳಿಸುತ್ತಾರೆಂಬ ವಿಷಯ ನನಗೆ ಚೆನ್ನಾಗಿ ತಿಳಿದಿದೆ. ಅಂತಹ ಕಥನಗಳನ್ನು ಕೇಳಿ ಕೇಳಿ ನಾನು ಮಾನಸಿಕವಾಗಿ ಬಹಳ ಆಯಾಸಗೊಂಡಿರುವೆ.

ರಾಜಕಾರಣ ಒಂದೆ ಪಕ್ಷ, ಒಬ್ಬನೇ ನಾಯಕನ ವ್ಯವಹಾರವಾಗಿ ಬದಲಾಗಿಹೋಗಿದ್ದರ ಬಗ್ಗೆ ನಾನು ವಿಷಾದ ಪಡುತ್ತಿಲ್ಲ. ಧಾರ್ಮಿಕ ಸಾಮರಸ್ಯ, ಸಾಮಾಜಿಕ ಸಾಮಾರಸ್ಯ ಮುರಿದುಬಿದ್ದಿರುವುದರ ಬಗ್ಗೆ ನನ್ನ ಕಳವಳ ವ್ಯಕ್ತಪಡಿಸುತ್ತಿಲ್ಲ. ಈಗ ಪ್ರತಿ ಭಾರತೀಯ ನಾಗರೀಕನ, ಮುಖ್ಯವಾಗಿ ಸರಾಸರಿ ಮನುಷ್ಯನ ಹೆಚ್ಚು ಚಿಂತೆಗೀಡುಮಾಡುತ್ತಿರುವ ‘ಅಸಲಿ’ ಸಮಸ್ಯೆಯನ್ನು ನಿಮ್ಮ ದೃಷ್ಟಿಗೆ ತೆಗೆದುಕೊಂಡುಬರಲಿದ್ದೇನೆ.

ನಮ್ಮ ಆರ್ಥಿಕತೆಯ ಆರೋಗ್ಯ ವಿಷಮಿಸುತ್ತಿದೆ. 2019-20 ಆರ್ಥಿಕ ವರ್ಷದ ಪೂರ್ಣ ಸ್ಥಾಯಿಯ ಬಡ್ಜೆಟ್ ಮಂಡಿಸಿ ಅಂದಾಜು ಒಂದು ತಿಂಗಳಾಗುತ್ತಿದ್ದರು ಸಹ ವ್ಯಾಪಾರ, ಕೈಗಾರಿಕಾ ವಲಯಗಳಲ್ಲಿ ಉತ್ಸಾಹ ಕಾಣಿಸುತ್ತಿಲ್ಲ. ಸರ್ಕಾರಕ್ಕೆ ನಿಷ್ಠೂರವಾಗುವ ವೈಖರಿ ಅವರಲ್ಲಿ ಚೆನ್ನಾಗಿ ವ್ಯಕ್ತವಾಗುತ್ತಿದೆ. ಆದರೂ ಸಹ ಇಂತಹ ವಿಷಯದ ಮೇಲೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿಲ್ಲವೆಂದರೆ ಅದು ಮಾಧ್ಯಮ, ಮುಖ್ಯವಾಗಿ ಎಲೆಕ್ಟ್ರಾನಿಕ್ ಮಾಧ್ಯಮದ ನೈತಿಕ, ಭೌದ್ಧಿಕ ದಿವಾಳಿಕೋರತನವನ್ನು ಪ್ರತಿಬಿಂಬಿಸುತ್ತದೆಂದು ಹೇಳದೆ ಇರಲಾಗುವುದಿಲ್ಲ.

ನಾನೇನು ಆರ್ಥಿಕ ನಿಪುಣನಲ್ಲ. ಆದರೆ ಆರ್ಥಿಕ ವ್ಯವಸ್ಥೆಯ ವ್ಯವಹಾರಗಳ ಬಗ್ಗೆ ಸಮರ್ಥವಾಗಿ ವ್ಯಾಖ್ಯಾನಿಸಬಲ್ಲಂತಹ ಬುದ್ದಿವಂತರು ಹೇಳುವುದನ್ನು ಶ್ರಧ್ಧೆಯಿಂದ ಕೇಳಿಸಿಕೊಳ್ಳುತ್ತಿದ್ದೇನೆ. ವಿತ್ತಿಯ ಬಿಕ್ಕಟ್ಟು ವಿಷಮಿಸುತ್ತಿದೆ. ಅದರ ಪ್ರಭಾವ ಸರ್ಕಾರದ ವೆಚ್ಚಗಳ ಮೇಲೆ ತೀವ್ರವಾಗಿ ಇರುತ್ತದೆಂದು ಅವರು ಸ್ಪಷ್ಟವಾಗಿ ಎಚ್ಚರಿಸುತ್ತಿದ್ದಾರೆ. ಬ್ಯಾಂಕಿಂಗ್ ವಲಯ ಬಹಳ ಕಾಲದಿಂದ ಬಿಕ್ಕಟಿನಲ್ಲಿಯೇ ಇದೆ. ಆ ಬಿಕ್ಕಟ್ಟು ಮತ್ತಷ್ಟು ಆರ್ಥಿಕ ಸಂಸ್ಥೆಗಳನ್ನು ಮುಖ್ಯವಾಗಿ ಎನ್.ಬಿ.ಎಫ್.ಸಿಗಳನ್ನು ಪ್ರಕ್ಷುಬ್ದಗೊಳಿಸುತ್ತಿದೆ. ಖಾಸಗಿ ಹೂಡಿಕೆಗಳನ್ನು ಮತ್ತಷ್ಟು ಪ್ರೋತ್ಸಾಹಿಸುವುದರಲ್ಲಿಯೂ, ಗ್ರಾಹಕರ ಬೇಡಿಕೆಯನ್ನು ಬೆಳೆಸುವುದರಲ್ಲಿ ನಾವು ವಿಫಲವಾದೆವು. ವಿದೇಶಿ ಹೂಡಿಕೆಗಳು ಹೇಗೆ ಹೊರಟುಹೋಗುತ್ತಿವೆ ಎಂಬುವುದು ಸುದ್ದಿಯಾಗದ ದಿನವೇ ಇಲ್ಲ ತಾನೆ?

ಅಪಾಯಕಾರಿಯಾದ ಈ ಅಂಶಗಳನ್ನು ಬಜೆಟ್ ಪೂರ್ವದಲ್ಲಿ ವೈಯಕ್ತಿಕ ಮಟ್ಟದಲ್ಲಿ ಗುಸುಗುಸು ಎನ್ನುತ್ತಿದ್ದುದು ಸಹ ಈಗ ಬಹಿರಂಗ ಚರ್ಚಾತ್ಮಕ ಅಂಶಗಳಾಗಿವೆ. ಕೈಗಾರಿಕೋದ್ಯಮಗಳಲ್ಲಿ ಕೆಲವು ಮಂದಿ ಈಗ ಮಾತ್ರವೇ ಈ ವಿಷಯಗಳ ಮೇಲೆ ತಮ್ಮ ದನಿಯೆತ್ತುತ್ತಿದ್ದಾರೆ. ಸ್ಟಾಕ್ ಮಾರ್ಕೆಟ್ ಬಿದ್ದು ಹೋಗುತ್ತಿವೆ. ಅಪಾರ ಕುಭೇರರಾದ ಐದು ಸಾವಿರ ಜನಕ್ಕೂ ಹೆಚ್ಚಿನ ಶ್ರೀಮಂತರ ಮೇಲೆ ಅತ್ಯಧಿಕ ಸ್ಥಾಯಿಯಲ್ಲಿ ತೆರಿಗೆ ವಿಧಿಸುವುದು ಜರುಗಿತು. ಮತ್ತೆ ಅದೇನು ಸಾಮಾನ್ಯ ವಿಷಯವೇನು ಅಲ್ಲವೆಂದು ಆ ಸಿರಿವಂತರು ಭಾವಿಸುತ್ತಿದ್ದಾರೆ. ಅವರ ಸಾರ್ವಭೌಮತೆಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಕೊಡುತ್ತಿದ್ದಾರೆ. ಆ ಕುಭೇರರು ಅವರ ಸ್ವಪ್ರಯೋಜನಕ್ಕಾಗಿಯೇ ಹಾಗೆ ವ್ಯವಹರಿಸುತ್ತಿರಬಹುದು. ಆದರೆ ಅಂತರಾಷ್ಟ್ರೀಯ ಮಾರುಕಟ್ಟೆ ಎಸೆಯುತ್ತಿರುವ ಕಠೋರ ಸವಾಲುಗಳು, ದೇಶೀಯ ಅಭಿವೃಧ್ದಿ ಸೂಚ್ಯಂಕದ ಏರಿಳಿತದ ವಿಷಯದಲ್ಲಿ ನಾರ್ತ್ ಬ್ಲಾಕ್ ( ಹಣಕಾಸು ಸಚಿವಾಲಯ ಸ್ಥಳ) ದಲ್ಲಿನ ಅಧಿಕಾರಿಗಳು, ನೀತಿ ನಿರೂಪಕರ ನಿರ್ಲಕ್ಷ್ಯ ವೈಖರಿಯ ಬಗ್ಗೆ ವ್ಯಾಪಾರ ವಲಯದಲ್ಲಿ ಬೆಳೆಯುತ್ತಿರುವ ವ್ಯಾಕುಲತೆ ಕುಬೇರ ಶ್ರೀಮಂತರು ವ್ಯಕ್ತಪಡಿಸುತ್ತಿರುವ ಕಳವಳಗಳು ಪೂರ್ಣವಾಗಿ ಪ್ರತಿಫಲಿಸುತ್ತಿವೆ.

ಪ್ರಧಾನಮಂತ್ರಿಗಳೇ, ನಿಮ್ಮ ಸರ್ಕಾರ ಆರ್ಥಿಕತೆಯನ್ನು ರಾಜಕೀಯದಿಂದ ಪ್ರತ್ಯೇಕಿಸುವುದರಲ್ಲಿ ಅಸಾಧಾರಣವಾಗಿ ಸಫಲವಾಗಿದೆ ಎನ್ನುವ ಮಾತು ನಿಜ. ಚುನಾವಣೆಯಲ್ಲಿ ಗೆಲುವು ಸಾಧಿಸಿದರ ಮೇಲೆ ಆರ್ಥಿಕತೆಯ ಆರೋಗ್ಯ ಎನ್ನುವುದು ಸ್ವಲ್ಪ ಪ್ರಭಾವವನ್ನೇ ಕಂಡರೂ ಸಹ ಅಸಲು ಯಾವುದೇ ಪ್ರಭಾವವನ್ನು ಕಾಣದ ಪರಿಸ್ಥತಿ ಇದು. ಆರ್ಥಿಕ ಅಂಕಿ ಅಂಶಗಳನ್ನು ಹಿಮ್ಮುಖಗೊಳಿಸುವುದು, ಪ್ರಮುಖ ಅಂಕಿ ಅಂಶಗಳನ್ನು ಮರೆಮಾಚುವುದರಿಂದಲೇ ಹೀಗೆ ಜರುಗಿದೆ ಎಂದು ಸರ್ಕಾರದ ವಿಮರ್ಶಕರು ವಾದಿಸುತ್ತಿದ್ದಾರೆ.

ಸರಿ, ಲೋಪ ಭೂಯಿಷ್ಟರಾದ ನೆಹರು ಆರ್ಥಿಕ ನೀತಿಗಳ ಪರಿಣಾಮಾದ ಫಲಿತವಾಗಿ ನಾವು ಆರ್ಥಿಕವಾಗಿ ಹಿಂದುಳಿದು ಬಿಟ್ಟಿದ್ದೇವೆ ಎಂದು ಸರ್ಕಾರ ತಪ್ಪದೇ ವಾದಿಸುತ್ತದೆ. ನನ್ನ ಅಭಿಪ್ರಾಯವೇನೆಂದರೆ ನೀವು ನಿರಂತರವಾಗಿ ಅನುಸರಿಸಿದ ಬಡವರ ಅನೂಕೂಲ ‘ಕಲ್ಯಾಣವಾದ’ ಸರ್ಕಾರದ ಯೋಜನೆಗಳು ಫಲಾನುಭವಿಗಳೊಂದಿಗೆ ಕೂಡಿದ ಒಂದು ದೊಡ್ಡ ರಾಜಕೀಯ ಕ್ಷೇತ್ರವನ್ನು ಸೃಷ್ಟಿಸಿದೆ. ಸರ್ಕಾರದಿಂದ ಗೃಹ ಬಳಕೆಯ ಎಲ್.ಪಿ.ಜಿ ಸಿಲೆಂಡರ್ ಮೊದಲಾದವುಗಳನ್ನು ಸ್ವೀಕರಿಸುವಂತಹ ಪ್ರಯೋಜನ ಹೊಂದಿದವರು ಹಾಗೆ ಲಾಭ ಪಡೆಯುತ್ತಿರುವವರೆಗೂ ಒಟ್ಟು ದೇಶೀಯ ಉತ್ಪನ್ನ 6%ರಷ್ಟು ಇಲ್ಲದೇ 8%ರಷ್ಟು ಎನ್ನುವ ವಿಷಯವನ್ನು ಪರಿಗಣಿಸುವುದಿಲ್ಲ. ಆದರೆ ಓಟು ಬ್ಯಾಂಕ್ ಕಲ್ಯಾಣವಾದಕ್ಕೆ ಶೀಘ್ರವಾಗಿ ಅಲ್ಲದೇ ಇದ್ದರೂ ಸಹ ಹತ್ತಿರದ ಭವಿಷ್ಯತ್ತಿನಲ್ಲಿ ಯಾರೋ ಒಬ್ಬರು ತಪ್ಪದೇ ಭಾರಿ ಮೊತ್ತವನ್ನು ಸಲ್ಲಿಸಬೇಕಿರುತ್ತದೆ. ವಿವಿಧ ವಲಯಗಳಲ್ಲಿ ಅಂತರ ಬೆಳೆಯುತ್ತಿದೆ. ಆ ವ್ಯತ್ಯಾಸಗಳು ಈಗಾಗಲೇ ಬಡ್ಜೆಟ್ ಅಂಕಿಗಳಲ್ಲಿ ಪ್ರತಿಬಿಂಬಿಸಿವೆ. ಕಳೆದ ಆರ್ಥಿಕ ವರ್ಷದಲ್ಲಿ ತೆರಿಗೆ ವಸೂಲಿ ಸರ್ಕಾರ ಅಂದಾಜಿಸಿದಷ್ಟು ಇಲ್ಲವೆಂದು ಸ್ಪಷ್ಟ. ಯಾಕಾಗಿ? ಆರ್ಥಿಕ ವ್ಯವಸ್ಥೆಯ ಪ್ರಗತಿ ನಿರುತ್ಸಾಹವಾಗುತ್ತಿರುವುದೇ ಇದಕ್ಕೆ ಕಾರಣವಲ್ಲವೇ? ಈ ಪರಿಸ್ಥಿತಿ ಮತ್ತಷ್ಟು ಭೀಕರಗೊಳ್ಳಲಿದೆ.

ಈ ವಿಷಮ ಪರಿಸ್ಥಿಗಳ ದೃಷ್ಟಿಯಿಂದ ವಿತ್ತಿಯ ಬಿಕ್ಕಟ್ಟಿನ ಮೇಲೆ ಸರ್ಕಾರ ವಾಸ್ತವಗಳನ್ನು ಬಹಿರಂಗಪಡಿಸುವ ಅವಶ್ಯಕತೆಯಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಿಧಿ ಸಂಗ್ರಹಣೆಯ ವಿಷಯದಲ್ಲಿ ರಾಜಕೀಯವಾಗಿ ವಿವಾದಸ್ಪದ ನಿರ್ಣಯಕ್ಕಾಗಿ ಹಣಕಾಸು ಸಚಿವಾಲಯದ ಕಾರ್ಯದರ್ಶಿಯನ್ನು ಬಲಿಪಶು ಮಾಡುವುದು ಪರಸ್ಥಿತಿಯನ್ನು ಸುಧಾರಿಸುವುದಿಲ್ಲ. ರಿಸರ್ವ್ ಬ್ಯಾಂಕ್ ನಿಧಿಗಳನ್ನು ಬಲವಂತವಾಗಿ ತೆಗೆದುಕೊಳ್ಳುವುದರ (‘ದರೋಡೆ ಮಾಡುವುದು’ ಎಂದು ಯಾಕೆ ಕರೆಯಬಾರದು) ಮೂಲಕ ಬಿಕ್ಕಟ್ಟನ್ನು ಪರಿಷ್ಕರಿಸುವುದು ಸಾಧ್ಯವಿಲ್ಲ (ರಿಸರ್ವ್ ಬ್ಯಾಂಕ್ ಅನಂತರ ಜೀವ ವಿಮಾ ಸಂಸ್ಥೆ ನಿಧಿಗಳನ್ನು ತೆಗೆದುಕೊಂಡಿದ್ದಾರಾ?).

ಸರ್ಕಾರಿ ವಲಯದ ಸಂಸ್ಥೆಗಳಲ್ಲಿನ ಸರ್ಕಾರಿ ಪಾಲುಗಳನ್ನು ಮಾರಾಟವೂ ಸಹ ಪರಿಹಾರ ಅಲ್ಲವೇ ಅಲ್ಲ. ವಾಸ್ತವದಲ್ಲಿ ಹೂಡಿಕೆಗಳ ಹಿಂತೆಗೆದುಕೊಳ್ಳುವಿಕೆಗಳ ಹೆಸರಿನಲ್ಲಿ ಒಂದು ಸಾರ್ವಜನಿಕ ವಲಯದ ಸಂಸ್ಥೆಯಿಂದ ಮತ್ತೊಂದು ಸರ್ಕಾರಿ ವಲಯದ ಸಂಸ್ಥೆಯನ್ನು ಕೊಂಡುಕೊಳ್ಳುವುದೇ ಅಲ್ಲವೇ ಮಾಡುತ್ತದೆ? ಇದು ಸರಿಯಾದ ಪದ್ದತಿಯಲ್ಲ. ಇಂಧನ ಬೆಲೆಗಳನ್ನು ಏರಿಸುವುದರಿಂದ ಸಹ ಸಮಸ್ಯೆ ಬಗೆಹರಿಯಲ್ಲ. ಈಗಾಗಲೇ ಏರಿಸಿದ ಬೆಲೆಗಳಿಂದ ಸಾಮಾನ್ಯ ಪ್ರಜೆಗಳು ಎಷ್ಟು ಕಷ್ಟಗಳು ಪಡುತ್ತಿದ್ದಾರೋ ಗಮನಿಸಿದ್ದೀರ? ಹಲವು ಪ್ರತ್ಯಕ್ಷ, ಪರೋಕ್ಷ ತೆರಿಗೆ ವಿಧಿಸುವುದರಿಂಲೂ ಸಹ ಈ ಸಮಸ್ಯೆ ಬಗೆಹರಿಯದು. ಹಾಗೆ ಮಾಡುವುದು ಹೂಡಿಕೆಗಳ ಮೇಲಿನ ಆದಾಯ, ಆರ್ಥಿಕತೆಯ ಪ್ರಗತಿಯನ್ನು ತಪ್ಪದೇ ತಡೆಯುತ್ತದೆ.

ಕಾಶ್ಮೀರ, ವಿಧಿ 35 ಎ ರದ್ದು, ಮಂದಿರ ಮಸೀದಿ ವಿವಾದವನ್ನು ಮತ್ತೆ ಶುರುಮಾಡುವುದರಿಂದ ಮಾಧ್ಯಮಗಳ ಮುಖ್ಯ ಶೀರ್ಷೀಕೆಯಲ್ಲಿ ಇರುವುದು ಸಾಧ್ಯವಾಗಬಹುದು. ಆದರೆ ಆರ್ಥಿಕ ಬಿಕ್ಕಟ್ಟಿನ ಪರಿಹಾರಕ್ಕೆ ಯಾವುದೇ ಸಹಕಾರವಾಗುವುದಿಲ್ಲ. ದೇಶದ ಪ್ರಜೆಗಳನ್ನು ಕಳವಳಗೊಳಿಸುತ್ತಿರುವ ಬಿಕ್ಕಟ್ಟನ್ನು ನಿವಾರಿಸಬೇಕಾದರೆ ಮೊದಲು ನೀವು ಮಾಡಬೇಕಾದದ್ದು ಅಸಲು ಆರ್ಥಿಕ ವ್ಯವಸ್ಥೆಯಲ್ಲಿ ಯಾವುದೇ ಬಿಕ್ಕಟ್ಟು ಇಲ್ಲವೆಂಬ ನಿರಾಕರಣ ವೈಖರಿಗೆ ಕೊನೆ ಹೇಳುವುದು. ದೇಶದ ಆರ್ಥಿಕತೆಯ ‘ಅಚ್ಚೇ ದಿನ್’ ಅಳಿವಿನಂಚಿನಲ್ಲಿದೆ ಎಂದು ಅಂಗಿಕರಿಸಲೇಬೇಕು. ಚಿತ್ತಶುದ್ದಿಯಿಂದ ಅಂಗೀಕರಿಸಿ, ದಾರಿ ತಪ್ಪಿದ ಆರ್ಥಿಕ ವ್ಯವಸ್ಥೆಯನ್ನು ಮತ್ತೆ ಸರಿಯಾದ ಮಾರ್ಗದಲ್ಲಿ ತೆಗೆದುಕೊಂಡು ಬರುವ ಪ್ರಾಯೋಗಿಕ ಪ್ರಯತ್ನಕ್ಕೆ ಮುಂದಾಗಬೇಕು. ಇದು ಸರ್ಕಾರದ ವಿದ್ಯುಕ್ತ ಧರ್ಮ.

ರಾಜ್‍ದೀಪ್ ಸರ್ದೇಸಾಯಿ, ಹಿರಿಯ ಪತ್ರಕರ್ತರು

ಅನುವಾದ: ಅನಿಲ್ ಕುಮಾರ್ ಚಿಕ್ಕದಾಳವಟ್ಟ

ಕೃಪೆ- ಆಂಧ್ರಜ್ಯೋತಿ ದಿನ ಪತ್ರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...