Homeಕರ್ನಾಟಕಬಿಜೆಪಿಯವರು ಟಿಪ್ಪುವನ್ನು ದ್ವೇಷಿಸಿದಷ್ಟೂ, ಜನ ಟಿಪ್ಪುವನ್ನು ಪ್ರೀತಿಸಲಾರಂಭಿಸುತ್ತಾರೆ..

ಬಿಜೆಪಿಯವರು ಟಿಪ್ಪುವನ್ನು ದ್ವೇಷಿಸಿದಷ್ಟೂ, ಜನ ಟಿಪ್ಪುವನ್ನು ಪ್ರೀತಿಸಲಾರಂಭಿಸುತ್ತಾರೆ..

ಪಠ್ಯದಿಂದ ಟಿಪ್ಪು ತೆಗೆಯಲು ಹೊರಟ ಬಿಜೆಪಿಗೆ ಇತಿಹಾಸದ ಪಾಠ ಮಾಡಿದ ನೆಟ್ಟಿಗರು...

- Advertisement -
- Advertisement -

“ಟಿಪ್ಪು ಕುರಿತ ಇತಿಹಾಸವನ್ನು ಪಠ್ಯಪುಸ್ತಕದಿಂದ ತೆಗೆಯುತ್ತೇವೆ. ಅಂತಹ ಯಾವುದೇ ವಿಚಾರ ಪಠ್ಯಪುಸ್ತಕದಲ್ಲಿ ಇರಕೂಡದು” ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರ ಹೇಳಿಕೆ ರಾಜ್ಯದೆಲ್ಲಡೆ ಭಾರೀ ವಿರೋಧ ವ್ಯಕ್ತವಾಗಿದೆ.

“ಅದು ಸರಿ ಯಡಿಯೂರಪ್ಪನೋರೇ. ನೀವು ಪಠ್ಯಪುಸ್ತಕದಿಂದ ಟಿಪ್ಪುವನ್ನು ತೆಗೆಯಬಹುದು ( ಪಠ್ಯಪುಸ್ತಕದಲ್ಲಿ ಸೇರಿಸಿ ಎಂದು ಆತ ನಿಮ್ಮಲ್ಲಿ ವಿನಂತಿ ಮಾಡಿಲ್ಲ). ಆದರೆ ಇತಿಹಾಸದಿಂದ ಟಿಪ್ಪುವನ್ನು ತೆಗೆಯಲು ಸಾಧ್ಯವೇ? ಜನಮಾನಸದಿಂದ ತೆಗೆಯಲು ಸಾಧ್ಯವೇ?

ಇತಿಹಾಸ ಅಂದರೆ ಏನು ಅಂತ ನಿಮಗೆ ಗೊತ್ತಾ? ಜಗತ್ತೇ ದ್ವೇಷಿಸುವ ಹಿಟ್ಲರ್ ಕೂಡಾ ಇತಿಹಾಸದ ಭಾಗ ಗೊತ್ತಾ? ಅಂಥದ್ದರಲ್ಲಿ 200 ವರ್ಷ ದೇಶವನ್ನು ಲೂಟಿ ಮಾಡಿದ ಬ್ರಿಟಿಷರನ್ನು ದಿಟ್ಟವಾಗಿ ಎದುರಿಸಿ, ಬೇರೆ ಅರಸರಿಗೆ ಭಿನ್ನವಾಗಿ ಯುದ್ಧ ಭೂಮಿಯಲ್ಲೇ ಮಡಿದ ಕನ್ನಡನಾಡಿನ ಹೆಮ್ಮೆಯ ಟಿಪ್ಪೂವಿಗೆ ಅದರಲ್ಲಿ ಜಾಗ ಇಲ್ಲ ಅಂತೀರಾ?

ನೀವು ಟಿಪ್ಪುವನ್ನು ದ್ವೇಷಿಸಿದಷ್ಟೂ ಜನ ಟಿಪ್ಪುವನ್ನು ಪ್ರೀತಿಸಲಾರಂಭಿಸುತ್ತಾರೆ. ನೀವು ಆತನ ಇತಿಹಾಸ ಅಡಗಿಸಿಟ್ಟಷ್ಟೂ ಜನ ಅದನ್ನು ಹೊರತೆಗೆದು ಕುತೂಹಲದಿಂದ ಓದಲಾರಂಭಿಸುತ್ತಾರೆ.

ಹೋಗಲಿಬಿಡಿ, ಗೋಡ್ಸೆ ಈ ದೇಶದ ರಾಷ್ಟ್ರಪಿತ, ಗಾಂಧಿ ದೇಶದ್ರೋಹಿ ಎಂಬ ಇತಿಹಾಸ ಮರುಬರೆಯಲು ಸಿದ್ಧರಾಗಿರುವವರಿಗೆ ಇದನ್ನೆಲ್ಲ ಹೇಳಿ ಏನು ಪ್ರಯೋಜನ? ಅದೇನೋ ಗಾದೆಯಿದೆಯಲ್ಲ.. ಕೋಣನ ಮುಂದೆ..” ಎಂದು ಶ್ರೀನಿವಾಸ ಕಾರ್ಕಳರವರು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಟಿಪ್ಪು ಸುಲ್ತಾನನ್ನು ಶಾಲಾ ಪಠ್ಯದಿಂದ ಕೈ ಬಿಡುವುದು ಅತ್ಯಂತ ಹೀನ ರಾಜಕಾರಣ. ಇತಿಹಾಸ ಶಿಕ್ಷಣದಿಂದ ವಿದ್ಯಾರ್ಥಿಗಳನ್ನು ವಂಚಿಸುವುದು ಕ್ಷಮಿಸಲಾಗದ ನಡೆ. ಯಡಿಯೂರಪ್ಪ ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಖಳನಾಯಕರಾಗಿ ದಾಖಲಾಗುತ್ತಾರೆ ಎಂದು ಅಬ್ದುಲ್ ಮುನೀರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಸಲಿ ಟಿಪ್ಪುನೇನೋ ರಬ್ಬರಿನಿಂದ ಉಜ್ಜಿಯೋ, ಪೇಜು ಹರಿದೋ ಪಠ್ಯ ಪುಸ್ತಕದಿಂದ ತೆಗೆಯಬಹುದು… ಆದರೆ, ಗೂಗಲ್ ಪಠ್ಯದಿಂದ ಈ ನಕಲಿ ಟಿಪ್ಪುಗಳನ್ನು ತೆಗೆಯುವುದು ಹ್ಯಾಂಗೆ ಮಾರ್ರೆ?! ಎಂದು ಬಿಜೆಪಿಗರು ಟಿಪ್ಪು ಸುಲ್ತಾನ್‌ ದಿನಾಚರಣೆ ಆಚರಿಸಿದ ಫೋಟೊ ಹಾಕಿ ಖ್ಯಾತ ವ್ಯಂಗ್ಯಚಿತ್ರಕಾರರಾದ ಪಂಜು ಗಂಗೊಳ್ಳಿಯವರು ವ್ಯಂಗ್ಯವಾಡಿದ್ದಾರೆ.

ನೆರೆ ಸಮಸ್ಯೆಯನ್ನು ಟಿಪ್ಪು ಸುಲ್ತಾನ್ ಪಠ್ಯ ನುಂಗಿತ್ತಾ… ಬೋಲೋ ಭಾರತ್ ಮಾತಾಕೀ… ಎಂದು ಪತ್ರಕರ್ತರಾದ ಪ್ರದೀಪ್‌ ಮಾಲ್ಗುಡಿಯವರು ನಿಜ ಸಮಸ್ಯೆ ಬಿಟ್ಟು ಬಿಜೆಪಿ ಟಿಪ್ಪು ಕಡೆ ನೋಡುತ್ತಿದೆ ಎಂದು ಟೀಕಿಸಿದ್ದಾರೆ.

“ಇತಿಹಾಸವನ್ನು ಅರಿಯುವುದು ಎಂದರೆ, ಅದು ಹೀಗಿತ್ತು ಎಂದು ಅರ್ಥ ಮಾಡಿಕೊಳ್ಳುವುದು,ಅದನ್ನು ವರ್ತಮಾನಕ್ಕೆ ತಂದು ಚಟ್ನಿ ಅರೆಯುವುದಲ್ಲ” ಎಂದು ಪ್ರಸಾದ್‌ ರಕ್ಷಿದಿಯವರು ಬಿಜೆಪಿ ಸರ್ಕಾರಕ್ಕೆ ಪರೋಕ್ಷವಾಗಿ ತಿವಿದಿದ್ದಾರೆ.

“ಟಿಪ್ಪು ಸಮಕಾಲೀನರು ಬೇರೆ ಯಾರೂ ಬ್ರಿಟಿಷರಿಗೆ ಪ್ರತಿರೋಧ ತೋರಲಿಲ್ಲ. ಅದನ್ನು ನೆನಪಿಸಿಕೊಳ್ಳಲು ಬಯಸದವರು ಚರಿತ್ರೆಯಲ್ಲಿ ಟಿಪ್ಪು ಮರೆಯಾಗಲು ಬಯಸುವುದು ಸಹಜ” ಎಂದು ಪಂಡಿತಾರಾದ್ಯರವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...