Homeಮುಖಪುಟ21 ದಿನದ ಲಾಕ್‌ಡೌನ್‌ ಜನ ಹೀಗೆಂದರೆ, ಸತತ 6 ತಿಂಗಳ ಕಾಶ್ಮೀರಿಗಳ ಕಥೆ ಏನಾಗಿರಬೇಡ?

21 ದಿನದ ಲಾಕ್‌ಡೌನ್‌ ಜನ ಹೀಗೆಂದರೆ, ಸತತ 6 ತಿಂಗಳ ಕಾಶ್ಮೀರಿಗಳ ಕಥೆ ಏನಾಗಿರಬೇಡ?

“ಲಾಕ್‌ಡೌನ್‌ ” ಭಾಗಶಃ ಈ ಪದವನ್ನು ಈ ಹಿಂದೆ ಭಾರತೀಯರು ಎಂದಿಗೂ ಕೇಳಿರಲಿಕ್ಕಿಲ್ಲವೇನೋ? ಆದರೆ ಕಳೆದ 10 ದಿನಗಳಿಂದ ಈ ಪದವನ್ನು ಕೇಳುವುದಿರಲಿ, ಲಾಕ್‌ಡೌನ್‌ ನೀಡುತ್ತಿರುವ ಎಫೆಕ್ಟ್‌ಗೆ ಅಕ್ಷರಶಃ ನಲುಗಿ ಹೋಗಿದ್ದಾರೆ. ನಿನ್ನೆ ಮೊನ್ನೆವರೆಗೆ ಆಫೀಸು, ಕೆಲಸ, ಮೋಜು ಮಸ್ತಿ ಎಂದು ಕೈಲಿ ಬೈಕ್-ಕಾರು ಹಿಡಿದು ಜಾಲಿ ರೌಂಡ್ ಹೊಡೆಯುತ್ತಿದ್ದವರು ಇಂದು ಮೈ ಮುದುಡಿ ಮನೆಯಲ್ಲೇ ಕೂರುವಂತಾಗಿದೆ.

- Advertisement -
- Advertisement -

ಮನೆಯಲ್ಲಿ ಇದ್ದು ಬೇಸರವಾಗಿ ರೌಂಡ್ ಹೊಡೆಯಲು ಹೊರ ಬಂದವರಿಗೆ ಪೊಲೀಸರು ಬೀಸುತ್ತಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 176. ಆದರೆ ಕಳೆದ 10 ದಿನದ ಅವಧಿಯಲ್ಲಿ ಪೊಲೀಸರ ಲಾಠಿ ರುಚಿ ಕಂಡವರ ಸಂಖ್ಯೆ 5600 ನ್ನೂ ಮೀರುತ್ತಿದೆ. ಅಲ್ಲದೆ ಸಿಎಂ ಸ್ವಕ್ಷೇತ್ರ ಶೀಕಾರಿಪುರದಲ್ಲಿ ಪೊಲೀಸರ ಏಟು ತಾಳಲಾರದೆ ಸುರೇಶ್ ನಾಯ್ಕ ಎಂಬ ಓರ್ವ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

130 ಕೋಟಿ ಜನ ಸಂಖ್ಯೆ ಹೊಂದಿರುವ ಭಾರತದಂತಹ ದೇಶದಲ್ಲಿ ದಿಢೀರನೆ ಲಾಕ್ಡೌನ್ ಘೋಷಣೆ ಮಾಡಿದರೆ ಜನ ಹೇಗೆ ನಲುಗಬಹುದು ಎಂಬುದು ಭಾರತೀಯರಿಗೆ ಈಗ  ಅರ್ಥವಾಗಿರಬೇಕು. ಆದರೆ ಕಳೆದ 70 ವರ್ಷಗಳಲ್ಲಿ ಕಾಶ್ಮೀರದಲ್ಲಿ ಎಷ್ಟು ಬಾರಿ ಲಾಕ್‌ಡೌನ್‌ ಮಾಡಲಾಗಿದೆ. ಕಳೆದ ವರ್ಷ ಕಲಂ 370 ರದ್ದು ಪಡಿಸುವ ಸಂದರ್ಭದಲ್ಲಿ ಕಣಿವೆ ರಾಜ್ಯವನ್ನು ಸತತ 6 ತಿಂಗಳ ಕಾಲ ಲಾಕ್‌ಡೌನ್‌ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಅಲ್ಲಿನ ಜನ ಹೇಗೆ ಕಷ್ಟಪಟ್ಟಿರಬೇಕು? ಜನ ಜೀವನ ಎಷ್ಟರ ಮಟ್ಟಿಗೆ ನಲುಗಿರಬೇಕು? ಆ 6 ತಿಂಗಳ ಅವಧಿಯಲ್ಲಿ ಅಲ್ಲಿನ ವ್ಯಾಪಾರ ವಹಿವಾಟು ಎಷ್ಟು ನಷ್ಟ ಅನುಭವಿಸಿರಬೇಕು? ಇದ್ಯಾವುದರ ಬಗ್ಗೆಯಾದರೂ ನಮಗೆ ಮಾಹಿತಿ ಇದೆಯಾ? ಈ ಕುರಿತು ಯೋಚಿಸುವ ಗೋಜಿಗೂ ನಾವು ಹೋಗಿರಲಿಕ್ಕಿಲ್ಲವೇನೋ? ಆದರೆ ಈಗ ಆ ಸಂದರ್ಭ ಎದುರಾಗಿದೆ. ಕಾಶ್ಮೀರದ ಆ 180 ದಿನದ ಲಾಕ್‌ಡೌನ್‌ ಎಂಬ ಕಪ್ಪು ದಿನದ ಕತೆಗಳನ್ನು ಹಾಗೂ ಅಲ್ಲಿನ ಬದುಕನ್ನು ಯೋಚಿಸಬೇಕಿದೆ.

6 ತಿಂಗಳು ಮನೆಯಲ್ಲೇ ಬಂದಿ

ಕೊರೋನಾ ಕಾರಣಕ್ಕೆ ಭಾರತದಲ್ಲಿ 21 ದಿನಗಳ ಲಾಕ್‌ಡೌನ್‌ ಘೋಷಿಸಲಾಗಿದೆ. ಈ 21 ದಿನಗಳ ಕಾಲ ನಾವು ಮನೆಯಲ್ಲಿ ಕೂರುವುದೇ ನಮಗೆ ಕಷ್ಟವಾಗಿದೆ. ಆದರೆ, ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನೀಡುತ್ತಿದ್ದ ವಿಶೇಷ ಸ್ಥಾನಮಾನ ಕಲಂ 370ನ್ನು ರದ್ದುಗೊಳಿಸಿದ ನಂತರ ಕಳೆದ ಆಗಸ್ಟ್ 05ರ ನಂತರ 6 ತಿಂಗಳು ಕಣಿವೆ ರಾಜ್ಯದ ಜನ ಮನೆಯಲ್ಲೇ ಕಳೆಯಬೇಕಾದ ಪರಿಸ್ಥಿತಿ ಎದುರಾಯಿತು.

ಅಗತ್ಯ ವಸ್ತುಗಳ ಖರೀದಿ ಹೊರತಾಗಿ ಬೇರೆ ಯಾವುದೇ ವಿಚಾರಕ್ಕೆ ಅವರು ಮನೆಯಿಂದ ಹೊರ ಬರುವಂತಿರಲಿಲ್ಲ. ರಾಜ್ಯದಲ್ಲಾದರೂ ಲಾಕ್‌ಡೌನ್‌ ಪಾಲನೆಗೆ ಪೊಲೀಸರನ್ನು ನೇಮಕ ಮಾಡಲಾಗಿದೆ. ಆದರೆ, ಕಾಶ್ಮೀರದಲ್ಲಿ ಮಿಲಿಟರಿಯನ್ನೇ ನೇಮಕ ಮಾಡಲಾಗಿತ್ತು ಎಂದರೆ ಮನೆಯಿಂದ ಹೊರ ಬಂದವರಿಗೆ ಶಿಕ್ಷೆ ಹೇಗಿರುತ್ತಿತ್ತು ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಿಲ್ಲ.

ಕಣಿವೆ ರೈತರ ಗೋಳು ಕೇಳುವರ್ಯಾರು?

ದೇಶದಲ್ಲಿ ಯಾವುದೇ ಮೂಲೆಯಲ್ಲಿ ಓರ್ವ ರೈತ ಸಾಲದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೆ ಅದು ರಾಷ್ಟ್ರೀಯ ಸುದ್ದಿ. ಇನ್ನು ರಾಜ್ಯದಲ್ಲಿ ಓರ್ವ ರೈತ ಸತ್ತರೆ ಆಡಳಿತ ಪಕ್ಷದ ಕಾಲೆಳೆಯಲು ಟೀಕಿಸಲು ವಿರೋಧ ಪಕ್ಷಕ್ಕೆ ಸಿಕ್ಕ ದೊಡ್ಡ ಆಯುಧ. ಇನ್ನು ಮಾಧ್ಯಮಗಳಿಗೆ ಅದು ಹಾಟ್ ಬ್ರೇಕಿಂಗ್ ನ್ಯೂಸ್.

ಆದರೆ, ಕಾಶ್ಮೀರದಲ್ಲಿ ರೈತರು ಇಲ್ಲವೇ? ಅವರಿಗೆ ಸಾಲ ಇಲ್ಲವೇ? ಅಲ್ಲಿನ ರೈತರೂ ಮನುಷ್ಯರಲ್ಲವೇ? ಕಾಶ್ಮೀರದಲ್ಲಿ ಸಾಲದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗುವ ರೈತರ ಕುರಿತು ನಾವು ಮರುಗುವುದು ಬೇಡ, ಎಂದಾದರೂ ಈ ಕುರಿತು ಕನಿಷ್ಟ ಯೋಚನೆ ಮಾಡಿದ್ದೇವೆಯೇ ಎಂದು ನಮ್ಮ ಆತ್ಮಸಾಕ್ಷಿಯನ್ನು ನಾವು ಪ್ರಶ್ನೆ ಮಾಡಿಕೊಂಡರೆ ಉತ್ತರ ದಕ್ಕುತ್ತದೆ.

ಅಸಲಿಗೆ ಕಾಶ್ಮೀರದ ಪ್ರಮುಖ ಬೆಳೆ ಸೇಬು ಮತ್ತು ಕೇಸರಿ. ಭಾರತಕ್ಕೆ ಶೇ.90 ರಷ್ಟು ಸೇಬಿನ ಹಣ್ಣು ಕಣಿವೆ ರಾಜ್ಯ ಕಾಶ್ಮೀರದಿಂದಲೇ ಲಭ್ಯವಾಗುತ್ತದೆ. ಇನ್ನು ಶೇ.100 ರಷ್ಟು ಕೇಸರಿ ಇಲ್ಲಿಂದಲೇ ಪೂರೈಕೆಯಾಗುತ್ತಿದೆ. ಕಾಶ್ಮೀರದ ಕೇಸರಿಗೆ ವಿಶ್ವದಾದ್ಯಂತ ಡಿಮ್ಯಾಂಡ್ ಇದೆ. ವಿಶ್ವದ ಕೇಸರಿ ಉತ್ಪಾದನೆಯಲ್ಲಿ ಕಾಶ್ಮೀರದ ಪಾಲು ಶೇ.07 ರಷ್ಟು. ಕಾಶ್ಮೀರದ ಸೇಬು ಸಹ ಸಾಕಷ್ಟು ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತಾಗುತ್ತದೆ.

2019ರಲ್ಲಿ ಕೇಸರಿ ಮತ್ತು ಸೇಬಿನ ಬೆಳೆ ಕಾಶ್ಮೀರಿ ರೈತರಿಗೆ ಉತ್ತಮವಾಗಿಯೇ ಕೈಸೇರಿತ್ತು. ಆದರೆ ಈ ಬೆಳೆ ಮಾರುಕಟ್ಟೆಗೆ ಸೇರುವ ಹೊತ್ತಿಗೆ ಲಾಕ್‌ಡೌನ್‌ ಘೋಷಿಸಿಯಾಗಿತ್ತು. ಪರಿಣಾಮ ಕಾಶ್ಮೀರ ಸೇಬು ಉದ್ಯಮ ಆಗಸ್ಟ್‌ನಿಂದ ಅಕ್ಟೋಬರ್ ವರೆಗಿನ ಕೇವಲ ಎರಡು ತಿಂಗಳಿನಲ್ಲಿ ಅನುಭವಿಸಿದ ನಷ್ಟ ಬರೋಬ್ಬರಿ 12,000 ಕೋಟಿ ಎನ್ನುತ್ತಿವೆ ಆರ್ಥಿಕ ವಿಶ್ಲೇಷಣೆಗಳು.

ಅಕ್ಟೋಬರ್ ನಂತರ ಕೇಂದ್ರ ಸರ್ಕಾರವೇ ನೇರ ಸೇಬು ಕೊಳ್ಳಲು ಮುಂದಾದರೂ ಅಷ್ಟರೊಳಗಾಗಲೇ ಶೇ. 60ಕ್ಕೂ ಹೆಚ್ಚು ಸೇಬು ಕೊಳೆತು ಅನುಪಯುಕ್ತವಾಗಿ ಹೋಗಿತ್ತು. ಆಕ್ಟೋಬರ್ ನಂತರವೂ ಅಲ್ಲಿನ ರೈತನ ಪರಿಸ್ಥಿತಿ ಸುಧಾರಿಸಿರಲಿಲ್ಲ.

ಇನ್ನೂ ಕುರಿ ಸಾಕಾಣಕೆ ಮತ್ತು ಉತ್ಕೃಷ್ಟ ಉಣ್ಣೆ ತಯಾರಿಕೆ ಇಲ್ಲಿನ ಉಪ ಕಸುಬು. ವರ್ಷಕ್ಕೆ ಸಾವಿರಾರು ಕೋಟಿ ಹಣ ಸಂಚಯಿಸುವ ಮತ್ತೊಂದು ದೊಡ್ಡ ಉದ್ಯಮವೇ ಸರಿ. ಆದರೆ, ಸತತ 6 ತಿಂಗಳ ಲಾಕ್‌ಡೌನ್‌ ಇಲ್ಲಿನ ಉಣ್ಣೆ ಉದ್ಯಮವನ್ನೂ ಇನ್ನಿಲ್ಲದಂತೆ ಕಾಡಿತ್ತು, ಅತ್ತ ಪ್ರಮುಖ ಉದ್ಯಮವಾದ ಸೇಬು ಕೇಸರಿಯೂ ಕೈಕೊಟ್ಟಿತ್ತು, ಇತ್ತ ಉಪ ಕಸುಬು ಇಲ್ಲದೆ ಇಲ್ಲಿನ ರೈತ ಸಂಕಷ್ಟಕ್ಕೆ ಒಳಗಾದದ್ದು ಹೊರ ಜಗತ್ತಿಗೆ ತಿಳಿಯಲೇ ಇಲ್ಲ.

ಪ್ರವಾಸೋದ್ಯಮವೂ ಮಕಾಡೆ ಮಲಗಿತ್ತು

ಪ್ರವಾಸೋದ್ಯಮ ಕಣಿವೆ ರಾಜ್ಯದ ಪ್ರಮುಖ ಉದ್ಯಮಗಳಲ್ಲೊಂದು. ಇಲ್ಲಿನ ಜನ ಅತಿಹೆಚ್ಚು ಅವಲಂಬಿತವಾಗಿರುವುದು ಪ್ರವಾಸೋದ್ಯಮವನ್ನೆ. ಪ್ರವಾಸೋದ್ಯಮ ಈ ಭಾಗದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆಮ್ಲ ಜನಕ ಎಂದರೂ ತಪ್ಪಾಗಲಾರದು. ಪ್ರವಾಸೋದ್ಯಮವನ್ನೇ ನಂಬಿ ಇಲ್ಲಿ ಸಾವಿರಾರು ಕುಟುಂಬಗಳು ಬದುಕುತ್ತಿವೆ.

ಆದರೆ, ದಿಢೀರನೆ ಬಂದೆರಗಿದ ಲಾಕ್ಡೌನ್ ಈ ಭಾಗದಲ್ಲಿ ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿದ್ದವರ ಬದುಕನ್ನೇ ಕಸಿದಿತ್ತು. ಭಾರತದಲ್ಲೇ ಅತಿಹೆಚ್ಚು ನಿರುದ್ಯೋಗಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕಾಶ್ಮೀರವೂ ಒಂದು. ನಿರುದ್ಯೋಗದ ಜೊತೆಗೆ ಲಾಕ್‌ಡೌನ್‌‌ನಿಂದ ಪ್ರವಾಸೋದ್ಯಮವನ್ನೇ ನಂಬಿ ಬದುಕಿದ್ದವರ ಬದುಕು ಬೀದಿಗೆ ಬಂದದ್ದು ಈ ಕಾಲಾವಧಿಯಲ್ಲಿ, ಅಲ್ಲಿನ ಬಡತನ ರೇಖೆಗಿಂತ ಕೆಳಗಿದ್ದ ಶೇ.21.63 ರಷ್ಟು ಜನ ಅನುಭವಿಸಿದ ಕಷ್ಟವನ್ನು ಯಾವ ಅಂತಾರಾಷ್ಟ್ರೀಯ ಮಾಧ್ಯಮಗಳೂ ಸೆರೆ ಹಿಡಿಯಲೇ ಇಲ್ಲ.

ಲಾಕ್‌ಡೌನ್‌ ನೆಪದಲ್ಲಿ ಇಂಟರ್ನೆಟ್ ತಡೆ

ಭಾರತದಲ್ಲಿ ಇದೀಗ 21 ದಿನಗಳ ಲಾಕ್‌ಡೌನ್‌ ಘೋಷಿಸಲಾಗಿದೆ. ಲಾಕ್‌ಡೌನ್‌ ನಡುವೆಯೂ ಎಲ್ಲಾ ಜನರಿಗೆ 4ಜಿ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಜನ ಮನೆಯಲ್ಲೇ ಇದ್ದೂ ವಿಶ್ವದ ಆಗುಹೋಗುಗಳನ್ನು ತಿಳಿದುಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಆದರೆ ಲಾಕ್‌ಡೌನ್‌ ಸಮಯದಲ್ಲಿ ಕಾಶ್ಮೀರದಲ್ಲಿ ಇಂಟರ್ನೆಟ್ ಮತ್ತು ಟೆಲಿಫೋನ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿತ್ತು. ಪರಿಣಾಮ ಕಣಿವೆ ರಾಜ್ಯ 50 ವರ್ಷಗಳಷ್ಟು ಹಿಂದುಳಿಯುವಂತಾಗಿತ್ತು.

ಶಾಲಾ ಕಾಲೇಜುಗಳನ್ನು ಸತತ 6 ತಿಂಗಳು ಬಂದ್ ಮಾಡಲಾಗಿತ್ತು. ಮಕ್ಕಳಿಗೆ ಶಿಕ್ಷಣವೂ ದೂರ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಲಾಕ್ಡೌನ್ ತೆರವಾದ ನಂತರವೂ ಕಾಶ್ಮೀರಕ್ಕೆ ಸಮರ್ಪಕ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲಾಗಿರಲಿಲ್ಲ. ಪರಿಣಾಮ ಅಲ್ಲಿನ ಶಾಲಾ ಬಾಲಕನೊಬ್ಬ ದಯವಿಟ್ಟು ಇಂಟರ್ನೆಟ್ ಕೊಡಿ ಇಲ್ಲಿ ಶಾಲೆಯೂ ಇಲ್ಲ ಇಂಟರ್ನೆಟ್ ಸಹ ಇಲ್ಲದೆ ನಾವು ಏನನ್ನೂ ಕಲಿಯಲಾಗುತ್ತಿಲ್ಲ. ದಶಕಗಳಷ್ಟು ಹಿಂದುಳಿದಂತೆ ಭಾಸವಾಗುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದನ್ನು ಭಾಗಶಃ ಯಾರೂ ಮರೆತಿರಲು ಸಾಧ್ಯವಿಲ್ಲ.

ಕಳೆದ 70 ವರ್ಷಗಳ ಅವಧಿಯಲ್ಲಿ ಎರಡು ರಾಷ್ಟ್ರಗಳ ರಾಜಕೀಯ ಲಾಭಕ್ಕೆ ಇಲ್ಲಿನ ಜನ ಬಲಿಯಾಗಿದ್ದಾರೆ, ಇಲ್ಲಿನ ಜನರ ಬದುಕು ಹರಿದು ಮೂರಾಬಟ್ಟೆಯಾಗಿದೆ ಎಂಬುದೂ ಎಷ್ಟು ಸತ್ಯವೋ, ಅಲ್ಲಿನ ಜನರ ಬದುಕಿನ ಕುರಿತು ದೇಶದ ಯಾವ ಭಾಗದ ಜನರಿಗೂ ಅಷ್ಟಾಗಿ ಆಸಕ್ತಿ ಇಲ್ಲ ಎಂಬುದು ಅದಕ್ಕಿಂತ ದೊಡ್ಡ ಸತ್ಯ.

ಭಾರತದ 21 ದಿನಗಳ ಲಾಕ್‌ಡೌನ್‌ ನೆಪದಲ್ಲಿ ಈಗಲೂ ನಾವು ಕಾಶ್ಮೀರದ ವ್ಯಥೆಯನ್ನು, ಕಪ್ಪು ಇತಿಹಾಸವನ್ನು, ಇಲ್ಲಿನ ಜನರ ಬದುಕಿನೊಳಗೆ ನುಸುಳಿ ಬದುಕನ್ನೇ ಹರಿದು ಹಾಕಿದ ಸ್ವಾರ್ಥ ರಾಜಕಾರಣದ ಕುರಿತು ಅವಲೋಕಿಸದಿದ್ದರೆ ಇನ್ಯಾವಾಗ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಶ್ಟೊ ಇಶ್ಟೋ ಪ್ಯಾಕೇಜ್ ಕರೋನಾ ಪ್ಯಾಕೇಜ್ ಸಾರಲಾಗಿದೆ.
    ಅಲ್ಲಿ!

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...