ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಾಳಗಂ (ಎಐಎಡಿಎಂಕೆ) ಒಳಗಿನ ಒಳ ಜಗಳದ ನಡುವೆ, ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.
ಆಯ್ಕೆ ಘೋಷಣೆಯಾದ ಕೂಡಲೇ ಕಾರ್ಯಕಾರಿ ಮಂಡಳಿ ಸದಸ್ಯರು ನಿರ್ಣಯವನ್ನು ಅಂಗೀಕರಿಸಿ ಓ ಪನ್ನರ್‌ಸೆಲ್ವಂ (ಒಪಿಎಸ್) ಮತ್ತು ಅವರ ಬೆಂಬಲಿಗರನ್ನು ಪಕ್ಷದಿಂದ ಉಚ್ಚಾಟಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಎಐಎಡಿಎಂಕೆಯ ಟ್ವಿಟ್ಟರ್ ಪ್ರೊಫೈಲ್ ಚಿತ್ರವಾಗಿ ಪಳನಿಸ್ವಾಮಿ ಫೋಟೋವನ್ನು ಹಾಕಿಕೊಳ್ಳಲಾಯಿತು. ಇದಕ್ಕೂ ಮುನ್ನ ಬೆಳಿಗ್ಗೆ ಎಐಎಡಿಎಂಕೆ ಪಕ್ಷದ ಸಾಮಾನ್ಯ ಸಭೆಯನ್ನು ಬೆಳಗ್ಗೆ 9 ಗಂಟೆಗೆ ನಡೆಸಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿತ್ತು. ಓ ಪನ್ನೀರ ಸೆಲ್ವಂ ಮನವಿಯನ್ನು ಕೋರ್ಟ್ ತಿರಸ್ಕರಿಸಿತು. ಬಹುಮತದವರ ಇಚ್ಛೆ ಮೇಲುಗೈ ಸಾಧಿಸಬೇಕು. ಹೀಗಾಗಿ ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ನಾಯಕತ್ವ ತಿಕ್ಕಾಟದಿಂದಾಗಿ ಎಐಎಡಿಎಂಕೆಯ ಎರಡು ಬಣಗಳ ನಡುವಿನ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಪಕ್ಷದ ಪ್ರಧಾನ ಕಚೇರಿಯ ಹೊರಗೆ ಅಹಿತಕರ ಘಟನೆಗಳು ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
OPS supporters broke open the locked door of headquarters building, making way for the entry of their leader, who for now has given a skip for the general council meeting and has chosen to be at the party headquarters. #OPanneerselvam #AIADMK #AIADMK #aiadmkgeneralbodymeeting pic.twitter.com/g3xbMmRRvg
— DT Next (@dt_next) July 11, 2022
ಮಾಜಿ ಸಂಯೋಜಕ ಓ ಪನ್ನೀರಸೆಲ್ವಂ ಬೆಂಬಲಿಗರೊಂದಿಗೆ ಪಕ್ಷದ ಕಚೇರಿಗೆ ಆಗಮಿಸಿದ್ದರು. ಜನರಲ್ ಕೌನ್ಸಿಲ್ ಸಭೆ ನಡೆಯಲಿರುವ ನಗರದ ಮದುವೆ ಮಂಟಪಕ್ಕೆ ಇಪಿಎಸ್ ಅವರು ತೆರಳುತ್ತಿದ್ದರು.
Supporters of OPS and EPS clash at #AIADMK headquarters.
📽️: R. Ragu pic.twitter.com/yYnFZGQtzS— The Hindu – Chennai (@THChennai) July 11, 2022
ಇಬ್ಬರು ನಾಯಕರ ಬೆಂಬಲಿಗರೆಂದು ಶಂಕಿಸಲಾದ ಮತ್ತು ಎಐಎಡಿಎಂಕೆ ಧ್ವಜಗಳನ್ನು ಹೊತ್ತ ಎರಡು ಗುಂಪುಗಳು ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದವು. ಕೆಲವು ವ್ಯಕ್ತಿಗಳು ಪರಸ್ಪರ ಕಲ್ಲು ತೂರಾಟ ನಡೆಸುತ್ತಿರುವುದನ್ನು, ಹತ್ತಿರದಲ್ಲಿ ನಿಲ್ಲಿಸಿದ ಕೆಲವು ವಾಹನಗಳು ಹಾನಿಗೊಳಿಸಿರುವುದನ್ನು ಸೆರೆಯಾದ ದೃಶ್ಯಗಳಲ್ಲಿ ಕಾಣಬಹುದಾಗಿದೆ. ಕೆಲವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಇದೇ ವೇಳೆ ಕೆಲವರು ಪಕ್ಷದ ಕಚೇರಿಯ ಬಾಗಿಲು ಮುರಿದು ಬಲವಂತವಾಗಿ ಒಳಗೆ ನುಗ್ಗಿದ್ದು ಕಂಡುಬಂದಿದೆ. ಪಕ್ಷದ ಕಚೇರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಘರ್ಷಣೆಯ ಕುರಿತು ಮಾತನಾಡಿದ ಪಳನಿಸ್ವಾಮಿ, “ಸಮಾಜ ವಿರೋಧಿಗಳು ಪಕ್ಷದ ಮುಖ್ಯ ಕಚೇರಿಗೆ ಪ್ರವೇಶಿಸಬಹುದು ಎಂದು ನಮ್ಮ ಪಕ್ಷದ ಕಾರ್ಯಕರ್ತರು ರಾಯಪೆಟ್ಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ರಕ್ಷಣೆ ನೀಡುವಂತೆ ಕೋರಿದ್ದರು. ನಮ್ಮ ಮಾಹಿತಿ ನಿಜವೆಂದು ಸಾಬೀತಾಗಿದೆ” ಎಂದಿದ್ದಾರೆ.
ಪಕ್ಷದ ಕೇಂದ್ರ ಕಚೇರಿಗೆ ಸೂಕ್ತ ಭದ್ರತೆ ಒದಗಿಸಲು ರಾಯಪೆಟ್ಟಾ ಪೊಲೀಸರು ಮತ್ತು ಆಯುಕ್ತರ ಕಚೇರಿ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪುಷ್ಪ ನಮನ
ಎಐಎಡಿಎಂಕೆ ನಾಯಕ ಮತ್ತು ಮಾಜಿ ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಎಂಜಿಆರ್ ಹಾಗೂ ಜಯಲಲಿತಾ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
‘ವೈಯಕ್ತಿಕ ಹಿತಾಸಕ್ತಿಯಿಂದ ಜನರಲ್ ಕೌನ್ಸಿಲ್ ಸಭೆ ನಡೆಸಲಾಗಿದೆ’: ವಿಕೆ ಶಶಿಕಲಾ
‘ವೈಯಕ್ತಿಕ ಹಿತಾಸಕ್ತಿಗಾಗಿ ಸೋಮವಾರದ ಸಾಮಾನ್ಯ ಸಭೆ ನಡೆಸಲಾಗಿದೆ’ ಎಂದು ಹೇಳಿದ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿಕೆ ಶಶಿಕಲಾ, ‘ಹೈಕೋರ್ಟ್‌ನಲ್ಲಿ ನಾನು ಹೂಡಿರುವ ಪ್ರಕರಣ ಬಾಕಿ ಇರುವಾಗ ಇಂತಹ ಕಾರ್ಯಕ್ರಮಗಳನ್ನು ನಡೆಸಬಾರದು. ಇಂದು ನಡೆದ ಸಾಮಾನ್ಯ ಮಂಡಳಿ ಸಭೆ ಖಂಡಿತವಾಗಿಯೂ ಅಸಿಂಧು” ಎಂದಿದ್ದಾರೆ.
“ತಮಿಳುನಾಡಿನ ಮಾಜಿ ಸಿಎಂ ಎಂಜಿಆರ್ ಅವರು ಡಿಎಂಕೆಯಲ್ಲಿನ ತಪ್ಪುಗಳನ್ನು ಖಂಡಿಸಿ ಪ್ರತ್ಯೇಕ ಪಕ್ಷವನ್ನು ಪ್ರಾರಂಭಿಸಿದರು. ಅವರು ಪ್ರಾರಂಭಿಸಿದ ಪಕ್ಷದಲ್ಲಿ ಯಾರಿಗೂ ಈ ಪರಿಸ್ಥಿತಿ ಬರಬಾರದು. ಪ್ರಧಾನ ಕಾರ್ಯದರ್ಶಿಯನ್ನು ತಳಮಟ್ಟದ ಕಾರ್ಯಕರ್ತರಿಂದ ಆಯ್ಕೆ ಮಾಡಬೇಕಾದ ವ್ಯವಸ್ಥೆಯನ್ನು ಎಂಜಿಆರ್ ಸೃಷ್ಟಿಸಿದ್ದರು” ಎಂದು ತಿಳಿಸಿದ್ದಾರೆ.


