Homeಮುಖಪುಟಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಫಾತಿಮಾ ಶೇಖ್ ಜನ್ಮದಿನ: ಗೂಗಲ್ ಡೂಡಲ್ ಗೌರವ

ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಫಾತಿಮಾ ಶೇಖ್ ಜನ್ಮದಿನ: ಗೂಗಲ್ ಡೂಡಲ್ ಗೌರವ

- Advertisement -
- Advertisement -

ಇಂದು ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ, ಶಿಕ್ಷಣ ತಜ್ಞೆ ಫಾತಿಮಾ ಶೇಖ್ ಅವರ ಜನ್ಮದಿನ. ಸ್ತ್ರೀವಾದಿ ನಾಯಕಿ ಶೇಖ್ ಅವರ ನೆನಪಿನಲ್ಲಿ ಗೂಗಲ್ ಡೂಡಲ್ ರಚಿಸುವ ಮೂಲಕ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಗೌರವಿಸಲಾಗಿದೆ.

ಫಾತಿಮಾ ಶೇಖ್ ಅವರು ಸಮಾಜ ಸುಧಾರಕರಾಗಿದ್ದ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿ ಬಾ ಫುಲೆಯೊಂದಿಗೆ ಸೇರಿ 1848ರಲ್ಲಿ ಸ್ಥಳೀಯ ಗ್ರಂಥಾಲಯವನ್ನು ಸ್ಥಾಪಿಸಿದ್ದರು. ಇದು ಭಾರತದಲ್ಲಿ ಬಾಲಕಿಯರಿಗಾಗಿ ಆರಂಭವಾದ ಮೊದಲ ಶಾಲೆಗಳಲ್ಲಿ ಒಂದಾಗಿದೆ.

ಫಾತಿಮಾ ಶೇಖ್‌ ಅವರು 1831 ಜನವರಿ 9ರಂದು ಪುಣೆಯಲ್ಲಿ ಜನಿಸಿದರು. ತನ್ನ ಸಹೋದರ ಉಸ್ಮಾನ್‌ನೊಂದಿಗೆ ವಾಸಿಸುತ್ತಿದ್ದರು. ದಲಿತರಿಗೆ ಶಿಕ್ಷಣ ನೀಡಲು ಪ್ರಯತ್ನಿಸಿದ್ದಕ್ಕಾಗಿ ಫುಲೆ ದಂಪತಿಗಳನ್ನು ಮನೆಯಿಂದ ಹೊರಹಾಕಿದಾಗ ಅವರಿಗೆ ಫಾತಿಮಾ ಶೇಖ್‌ ತಮ್ಮ ಮನೆಯಲ್ಲಿ ಇರಲು ಅನುವು ಮಾಡಿಕೊಟ್ಟಿದ್ದರು. ಶೇಖ್‌ ಅವರ ಮನೆಯಲ್ಲಿಯೇ ಸ್ಥಳೀಯ ಗ್ರಂಥಾಲಯವನ್ನು ತೆರೆಯಲಾಯಿತು. ಅಲ್ಲಿ ಸಾವಿತ್ರಿ ಬಾಯಿ ಫುಲೆ ಮತ್ತು ಫಾತಿಮಾ ಶೇಖ್‌ ದಲಿತ ಮತ್ತು ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸಿದರು.

ತನ್ನ ಸಮುದಾಯದವರಿಗೆ ದೀನದಲಿತರಿಗೆ ಸ್ಥಳೀಯ ಗ್ರಂಥಾಲಯದಲ್ಲಿ ಕಲಿಯಲು ಮನೆ ಮನೆಗೆ ಹೋಗಿ ಜನರನ್ನು ಕರೆತಂದರು. ಸತ್ಯಶೋಧಕ್ ಆಂದೋಲನದಲ್ಲಿ ತೊಡಗಿಸಿಕೊಂಡವರನ್ನು ಅವಮಾನಿಸಲು ಪ್ರಯತ್ನಿಸಿದ ಪ್ರಬಲ ವರ್ಗಗಳಿಂದ ದೊಡ್ಡ ಪ್ರತಿರೋಧವನ್ನು ಎದುರಿಸಿದರು. ಎಷ್ಟೆ ಅಡ್ಡಿ ಆತಂಕಗಳು ಎದುರಾದರೂ ಶೇಖ್ ಮತ್ತು ಅವರ ಸ್ನೇಹಿತರು ಸಮಾನತೆಗಾಗಿ ಹೋರಾಡುವ ಕೆಲಸದಲ್ಲಿ ಕಾರ್ಯಪ್ರವೃತ್ತರಾಗಿದ್ದರು.

ಭಾರತ ಸರ್ಕಾರವು 2014 ರಲ್ಲಿ ಫಾತಿಮಾ ಶೇಖ್ ಅವರ ಸಾಧನೆಗಳನ್ನು ಗುರುತಿಸಿ ಉರ್ದು ಪಠ್ಯಪುಸ್ತಕಗಳಲ್ಲಿ ಇವರ ಕುರಿತು ವಿಶೇಷ ಪರಿಚಯ ನೀಡುವ ಮೂಲಕ ಇವರ ಸಾಧನೆಗಳ ಮೇಲೆ ಬೆಳಕು ಚೆಲ್ಲಿದೆ.


ಇದನ್ನೂ ಓದಿ; ನೊಂದವರ ಘನತೆಗೆ ಮಾರ್ಗ ತೋರಿದ ಸಾವಿತ್ರಿಬಾಯಿ ಫುಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...