Homeಮುಖಪುಟವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ 10 ನಗರಗಳು | ಸಂಕ್ಷಿಪ್ತ ವಿವರ

ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ 10 ನಗರಗಳು | ಸಂಕ್ಷಿಪ್ತ ವಿವರ

- Advertisement -
- Advertisement -

ಪ್ರಸ್ತುತ ವಿಶ್ವದಲ್ಲಿ 796 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯಿದೆ. ಪ್ರಪಂಚದಲ್ಲಿ ಅತೀಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಚೀನಾವಾಗಿದ್ದು, ಎರಡನೇ ಸ್ಥಾನ ನಮ್ಮ ಭಾರತ ಪಡೆದುಕೊಂಡಿದೆ. ಪ್ರಸ್ತುತ ಭಾರತದ ಜನಸಂಖ್ಯೆ 138 ಕೋಟಿಯಾಗಿದ್ದು, ಚೀನಾದ ಜನಸಂಖ್ಯೆ 144 ಕೋಟಿ. ಇತ್ತೀಚೆಗಿನ ವರದಿಗಳ ಪ್ರಕಾರ ಭಾರತವು ಚೀನಾವನ್ನು ಹಿಂದಿಕ್ಕಿ ಸಧ್ಯದಲ್ಲೆ ಒಂದನೇ ಸ್ಥಾನಕ್ಕೆ ಏರಲಿದೆ.

ಜನಸಂಖ್ಯೆಯು ಅಭಿವೃದ್ಧಿಗೆ ಮಾರಕ ಎಂದು ಹೇಳುವ ಹಾಗೆಯೆ, ಜನಸಂಖ್ಯೆಯು ಒಂದು ಸಂಪನ್ಮೂಲವಾಗಿದ್ದು ಅದು ಅಭಿವೃದ್ಧಿಗೆ ಪೂರಕ ಎಂದೂ ಹೇಳುವವರಿದ್ದಾರೆ. ಮಾರಕ ಎನ್ನುವವರು ಹತ್ತಾರು ಕಾರಣಗಳು ಕೊಟ್ಟರೆ, ಪೂರಕ ಎನ್ನುವವರು ಕೂಡಾ ಅವುಗಳಿಗೆ ಬೇಕಾದ ಸಮರ್ಥನೆಗಳನ್ನೂ ಕೊಡುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನಗರಗಳು ಬೆಳೆದಂತೆ ಅಲ್ಲಿಗೆ ವಿವಿಧ ಕಾರಣಕ್ಕಾಗಿ ಜನರು ಬಂದು ಸೇರುತ್ತಲೆ ಇರುತ್ತಾರೆ. ಹೀಗಾಗಿ ನಗರಗಳು ಬೆಳೆಯುತ್ತಾ, ಅಲ್ಲಿನ ಜನಸಂಖ್ಯೆಗಳೂ ಬೆಳೆಯುತ್ತಲೆ ಹೋಗುತ್ತದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು ಯಾವುವು? ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಅಗ್ರ ಹತ್ತು ನಗರಗಳ ಪಟ್ಟಿ ಇಲ್ಲಿದೆ.

  1. ಟೋಕಿಯೊ: ಈ ನಗರವು ಜಪಾನ್ ದೇಶದ ರಾಜಧಾನಿಯಾಗಿದ್ದು, ಇಲ್ಲಿನ ಜನಸಂಖ್ಯೆ 3.74 ಕೋಟಿ. ಇದು ಒಟ್ಟು ದೇಶಿಯ ಉತ್ಪನ್ನದ ಮೂಲಕ ವಿಶ್ವದ ಅತಿದೊಡ್ಡ ನಗರ ಆರ್ಥೀಕತೆಯಾಗಿದೆ. ಅಲ್ಲದೆ ಈ ನಗರವೂ ಜಪಾನ್‌ನ ವ್ಯಾಪಾರ ಮತ್ತು ಹಣಕಾಸಿನ ಪ್ರಮುಖ ಕೇಂದ್ರವಾಗಿದೆ. 2022ರಲ್ಲಿ ನ್ಯೂಯಾರ್ಕ್, ಲಂಡನ್ , ಶಾಂಘೈ ನಂತರ ಜಾಗತಿಕ ಹಣಕಾಸು ಕೇಂದ್ರಗಳ ಸೂಚ್ಯಂಕದಲ್ಲಿ ಟೋಕಿಯೊ 4ನೇ ಸ್ಥಾನ ಪಡೆದಿದೆ. ವಿಶ್ವದ ಅತೀ ಎತ್ತರದ ಟವರ್‌‌ ಟೋಕಿಯೋ ಸ್ಕೈಟ್ರೀ ಇದೇ ನಗರದಲ್ಲಿದೆ.

    Tokyo
    ಟೊಕಿಯೊ | Tokyo
  2. ದೆಹಲಿ: ಭಾರತದ ರಾಜಧಾನಿಯಾಗಿರುವ ಈ ನಗರವು ಗಂಗಾನದಿಯ ಉಪನದಿ ಯಮುನ ನದಿಯ ದಡದಲ್ಲಿದೆ. ದೆಹಲಿಯ ಜನಸಂಖ್ಯೆ 2.93 ಕೋಟಿಯಾಗಿದೆ. ದೆಹಲಿಯೂ ಐತಿಹಾಸಿಕ ಪ್ರದೇಶ ಕೂಡಾ ಹೌದು. ಇಲ್ಲಿ ಹಲವಾರು ಚಾರಿತ್ರಿಕ ಮಹತ್ವದ ಸ್ಥಳಗಳೂ ಇವೆ. ಭಾರತದ ಸುಪ್ರೀಂಕೋರ್ಟ್, ಸಂಸತ್ ಭವನ ಸೇರಿದಂತೆ ಸರ್ಕಾರದ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗಗಳ ತವರು ಇದು. ವಾಯು ಮಾಲಿನ್ಯ ಸಮಸ್ಯೆಯೂ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

    ದೆಹಲಿ | Delhi
    ದೆಹಲಿ | Delhi
  3. ಶಾಂಘೈ: ಇದು ಚೀನಾದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಪ್ರದೇಶವಾಗಿದ್ದು, ಇಲ್ಲಿನ ಜನಸಂಖ್ಯೆ 2.63 ಕೋಟಿ. ಇದು ಪೂರ್ವ ಏಷ್ಯಾದ ದೇಶಗಳಲ್ಲಿ ರಾಜಧಾನಿಗಿಂತ ಹೆಚ್ಚಿನ GDP ಹೊಂದಿರುವ ಏಕೈಕ ನಗರವಾಗಿದೆ. ಈ ನಗರವೂ ವಿಶ್ವದ 3 ನೇ ಅತ್ಯಂತ ಸ್ಪರ್ಧಾತ್ಮಕ ಮತ್ತು ಅತಿದೊಡ್ಡ ಹಣಕಾಸು ಕೇಂದ್ರವಾಗಿದ್ದು, ವಿಶ್ವದ ಅತಿದೊಡ್ಡ ಮೆಟ್ರೋ ನೆಟ್‌ವರ್ಕ್ ಅನ್ನು ಹೊಂದಿದೆ.

    ಶಾಂಘೈ | Shanghai
    ಶಾಂಘೈ | Shanghai
  4. ಸಾವೊ ಪಾಲೊ: ಇದು ಬ್ರೆಜಿಲ್‌‌ ದೇಶದ ನಗರವಾಗಿದ್ದು, ಲ್ಯಾಟಿನ್ ಅಮೇರಿಕಾ ಮತ್ತು ದಕ್ಷಿಣ ಗೋಳಾರ್ಧದ ಅತಿ ದೊಡ್ಡ ಆರ್ಥಿಕತೆಯ ನಗರವಾಗಿದೆ. ಇಲ್ಲಿನ ಜನಸಂಖ್ಯೆ 2.18 ಕೋಟಿ. ಜೊತೆಗೆ ಸಾವೊ ಪಾಲೊ ಸ್ಟಾಕ್‌ ಎಕ್ಸ್‌ಚೇಂಜ್‌ನ ನೆಲೆಯಾಗಿದೆ. ಈ ನಗರವು ವಿಶ್ವದ 23ನೇ ಅತಿ ಹೆಚ್ಚು GDPಯನ್ನು ಹೊಂದಿದೆ. ಈ ಮಹಾನಗರವು ಬ್ರೆಜಿಲ್‌ನ ಹಲವಾರು ಎತ್ತರದ ಗಗನಚುಂಬಿ ಕಟ್ಟಡಗಳಿಗೆ ನೆಲೆಯಾಗಿದೆ. ಇಲ್ಲಿ ಸ್ಮಾರಕಗಳು, ಉದ್ಯಾನವನಗಳು ಮತ್ತು ವಸ್ತುಸಂಗ್ರಹಾಲಯಗಳು ಇವೆ.

    ಸಾವೊ ಪಾಲೊ । Sao Paulo
  5. ಮೆಕ್ಸಿಕೊ ಸಿಟಿ: ಈ ನಗರವು ನಾಗರಿಕತೆಯ ತೊಟ್ಟಿಲಾದ ‘ಯುನೈಟೆಡ್ ಮೆಕ್ಸಿಕನ್ ಸ್ಟೇಟ್ಸ್(ಮೆಕ್ಸಿಕೊ)’ ದೇಶದ ರಾಜಧಾನಿಯಾಗಿದೆ. ಉತ್ತರ ಅಮೆರಿಕಾ ಖಂಡದ ದಕ್ಷಿಣ ಭಾಗದಲ್ಲಿರುವ ಈ ನಗರ 2.16 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಅತ್ಯಂತ ಎತ್ತರದಲ್ಲಿ ಇರುವ ರಾಜಧಾನಿಗಳಲ್ಲಿ ಇದೂ ಒಂದಾಗಿದೆ. ಚಾರಿತ್ರಿಕ ನಗರವಾಗಿರುವ ಮೆಕ್ಸಿಕೊ ಸಿಟಿಯಲ್ಲಿ 13 ನೇ ಶತಮಾನದ ಅಜ್ಟೆಕ್ ದೇವಾಲಯ, ಸ್ಪ್ಯಾನಿಷ್ ವಿಜಯಶಾಲಿಗಳ ಐತಿಹಾಸಿಕ ಭಿತ್ತಿಚಿತ್ರಗಳನ್ನು ಹೊಂದಿರುವ ‘ಪ್ಯಾಲಾಸಿಯೊ ನ್ಯಾಶನಲ್‌’ ಇಲ್ಲಿದೆ.

    ಮೆಕ್ಸಿಕೊ ಸಿಟಿ । Mexico City
    ಮೆಕ್ಸಿಕೊ ಸಿಟಿ । Mexico City
  6. ಕೈರೋ: ಐತಿಹಾಸಿಕ ನಗರ ಕೈರೋ ಈಜಿಪ್ಟ್‌ನ ರಾಜಧಾನಿಯಾಗಿದ್ದು, ಇಲ್ಲಿನ ಜನಸಂಖ್ಯೆ2.04 ಕೋಟಿ. ಅಲ್ಲದೆ ಅರಬ್ ಜಗತ್ತಿನ ಅತಿದೊಡ್ಡ ನಗರವಾಗಿದೆ. ಜಗತ್ತಿನ ಅತ್ಯಂತ ಪ್ರಾಚೀನಾ ನಾಗರೀಕತೆಯ ತೊಟ್ಟಿಲಾಗಿರುವ ಈಜಿಫ್ಟ್‌‌ನ ಕೈರೋ ಹಲವು ಐತಿಹಾಸಿಕ ಮತ್ತು ಚಾರಿತ್ರಿಕೆ ಸ್ಥಳಗಳನ್ನು ಹೊಂದಿದೆ. ನಗರವೂ ವಿಶ್ವದ ಅತ್ಯಂತ ಉದ್ದವಾದ ನೈಲ್ ನದಿಯ ದಡದಲ್ಲಿದೆ. ನಗರವೂ ಪ್ರಾಚೀನ ಕಾಲದಿಂದಲೂ ರಾಜಕೀಯ ಮತ್ತು ಸಾಂಸ್ಕೃತಿಕ ಜೀವನದ ಕೇಂದ್ರವಾಗಿದೆ. ಅತ್ಯಂತ ಸುಂದರವಾದ ಇಸ್ಲಾಮಿಕ್ ವಾಸ್ತುಶಿಲ್ಪ ಹೊಂದಿರುವ ಕೈರೋವನ್ನು ‘ಸಾವಿರ ಮಿನಾರ್‌ಗಳ ನಗರ’ ಎಂದೂ ಕರೆಯಲಾಗುತ್ತದೆ. ಹಾಗೆಯೆ ವಿಶ್ವದ ಎರಡನೇ ಅತ್ಯಂತ ಹಳೆಯ ಉನ್ನತ ಶಿಕ್ಷಣ ಸಂಸ್ಥೆ ಅಲ್-ಅಜರ್ ವಿಶ್ವವಿದ್ಯಾಲಯವನ್ನು ಹೊಂದಿದೆ.

    ಕೈರೋ । Cairo
  7. ಢಾಕಾ: ಬಾಂಗ್ಲಾದೇಶದ ರಾಜಧಾನಿಯಾಗಿರುವ ಈ ನಗರವು, ಐತಿಹಾಸಿಕವಾಗಿ ಮೊಘಲ್ ಸಾಮ್ರಾಜ್ಯದ ಪ್ರಾಂತೀಯ ರಾಜಧಾನಿಯಾಗಿತ್ತು. ವೇಗವಾಗಿ ಬೆಳೆಯುತ್ತಿರುವ ಆಧುನಿಕ ಮಹಾನಗರಗಳಲ್ಲಿ ಒಂದಾಗಿರುವ ಇಲ್ಲಿನ ಜನಸಂಖ್ಯೆ ಜನಸಂಖ್ಯೆ 2.02 ಕೋಟಿ. ಈ ನಗರವು ವಾಣಿಜ್ಯ ಕೇಂದ್ರವಾಗಿ 17 ನೇ ಶತಮಾನದಿಂದಲೆ ಪ್ರಸಿದ್ದಿಯಾಗಿದೆ. ಇದನ್ನು 1962 ರಲ್ಲಿ ಪಾಕಿಸ್ತಾನದ ಶಾಸಕಾಂಗ ರಾಜಧಾನಿ ಎಂದು ಘೋಷಿಸಲಾಯಿತು. 1971 ರ ವಿಮೋಚನಾ ಯುದ್ಧದ ನಂತರ ಇದು ಸ್ವತಂತ್ರ ಬಾಂಗ್ಲಾದೇಶದ ರಾಜಧಾನಿಯಾಯಿತು.

    ಢಾಕಾ । Dhaka
    ಢಾಕಾ । Dhaka
  8. ಮುಂಬೈ: ಈ ನಗರ ಭಾರತದ ಆರ್ಥಿಕ, ವಾಣಿಜ್ಯ ಮತ್ತು ಮನರಂಜನಾ ರಾಜಧಾನಿಯಾಗಿದೆ. ಇಲ್ಲಿನ ಜನಸಂಖ್ಯೆ 2.01 ಕೋಟಿ. ದೇಶದ ಪ್ರಮುಖ ಸಿನಿಮಾ ರಂಗವಾದ ಬಾಲಿವುಡ್‌ ಇಲ್ಲೆ ಇದೆ. ಹಿಂದೆ ಈ ನಗರವನ್ನು ‘ಬಾಂಬೆ’ ಎಂದು ಕರೆಯಲಾಗುತ್ತಿತ್ತು. ಜಾಗತಿಕ ಹಣಕಾಸು ಹರಿವಿನ ದೃಷ್ಟಿಯಿಂದ ಇದು ವಿಶ್ವದ ಹತ್ತು ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿದೆ. ಮುಂಬೈ ಮೂರು UNESCO ವಿಶ್ವ ಪರಂಪರೆಯ ತಾಣಗಳಿಗೆ ನೆಲೆಯಾಗಿದೆ.

    ಮುಂಬೈ । Mumbai
    ಮುಂಬೈ । Mumbai
  9. ಬೀಜಿಂಗ್: ಈ ನಗರವು ಚೀನಾ ದೇಶದ ರಾಜಧಾನಿಯಾಗಿದ್ದು, ಇಲ್ಲಿನ ಜನಸಂಖ್ಯೆ 2 ಕೋಟಿ. ಜಾಗತಿಕ ನಗರವಾಗಿರುವ ಬೀಜಿಂಗ್‌ ಸಂಸ್ಕೃತಿ, ರಾಜತಾಂತ್ರಿಕತೆ, ರಾಜಕೀಯ, ಹಣಕಾಸು, ವ್ಯಾಪಾರ ಮತ್ತು ಅರ್ಥಶಾಸ್ತ್ರ, ಶಿಕ್ಷಣ, ಸಂಶೋಧನೆ, ಭಾಷೆ, ಪ್ರವಾಸೋದ್ಯಮ, ಮಾಧ್ಯಮ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸಾರಿಗೆಗಾಗಿ ವಿಶ್ವದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಬೀಜಿಂಗ್‌ ನಗರವೂ ಶಾಂಘೈ ನಂತರ ಚೀನಾದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಇರುವ ಪ್ರದೇಶವಾಗಿದೆ. ಚೀನಾದ ಹೆಚ್ಚಿನ ಸರ್ಕಾರಿ ಸ್ವಾಮ್ಯದ ಕಂಪನಿಗಳ ಪ್ರಧಾನ ಕಛೇರಿಗಳು ಇಲ್ಲಿಯೆ ಇದೆ.

    ಬೀಜಿಂಗ್ । Beijing
    ಬೀಜಿಂಗ್ । Beijing
  10. ಒಸಾಕಾ: ಜಪಾನಿನ ಹೊನ್ಶು ದ್ವೀಪದಲ್ಲಿರುವ ‘ಒಸಾಕಾ’ ನಗರವು ದೇಶ ಅತ್ಯಂತ ದೊಡ್ಡ ಬಂದರು ನಗರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಇಲ್ಲಿನ ಜನಸಂಖ್ಯೆ 1.92 ಕೋಟಿ. ನಗರವೂ ಆಧುನಿಕ ವಾಸ್ತುಶಿಲ್ಪ ಹೊಂದಿದ್ದು, ರಾತ್ರಿಯಲ್ಲೂ ಎಚ್ಚರವಾಗಿರುವ ನಗರವಾಗಿದೆ. ಅಲ್ಲದೆ ನಗರವೂ ಬೀದಿಬದಿ ಆಹಾರಕ್ಕಾಗಿ ಹೆಸರುವಾಸಿಯಾಗಿದೆ. ಶೀಂಟೊ ಧರ್ಮದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿರುವ ‘ಸುಮಿಯೋಶಿ-ತೈಶಾ’ ಈ ನಗರದಲ್ಲಿ ಇದೆ.

    ಒಸಾಕಾ । Osaka
    ಒಸಾಕಾ । Osaka
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...