Homeಚಳವಳಿಟ್ರಾಕ್ಟರ್‌ ರ್‍ಯಾಲಿ: ರೈತರು ತಮಗೆ ತಾವೇ ಅಳವಡಿಸಿಕೊಂಡ ಮಾರ್ಗಸೂಚಿಗಳು ಇಲ್ಲಿವೆ!

ಟ್ರಾಕ್ಟರ್‌ ರ್‍ಯಾಲಿ: ರೈತರು ತಮಗೆ ತಾವೇ ಅಳವಡಿಸಿಕೊಂಡ ಮಾರ್ಗಸೂಚಿಗಳು ಇಲ್ಲಿವೆ!

ನೆನಪಿಡಿ, ನಮ್ಮ ಗುರಿ ದೆಹಲಿಯನ್ನು ವಶಪಡಿಸಿಕೊಳ್ಳುವುದಲ್ಲ, ಈ ದೇಶದ ಜನರ ಹೃದಯವನ್ನು ಗೆಲ್ಲುವುದು.

- Advertisement -
- Advertisement -

ಮೂರು ಕರಾಳ ಕೃಷಿ ಕಾನೂನಿನ ವಿರುದ್ದ ಪ್ರತಿಭಟಿಸುತ್ತಿರುವ ರೈತರು ಜನವರಿ 26 ರ ಗಣರಾಜ್ಯೋತ್ಸವದಂದು ಟ್ರಾಕ್ಟರ್ ರ್‍ಯಾಲಿ ನಡೆಸಲಿದ್ದಾರೆ. ಈ ಐತಿಹಾಸಿಕ ರೈತರ ಗಣರಾಜ್ಯೋತ್ಸವಕ್ಕೆ ರೈತರು ತಮಗೆ ತಾವೇ ಮಾರ್ಗಸೂಚಿಗಳನ್ನು ಅಳವಡಿಕೊಂಡಿದ್ದಾರೆ. ಅವು ಹೀಗಿದೆ… 

ಸ್ನೇಹಿತರೇ, ನಾವು ಇತಿಹಾಸವನ್ನು ನಿರ್ಮಿಸಲಿದ್ದೇವೆ. ಇತಿಹಾಸದಲ್ಲಿ ಹಿಂದೆಂದೂ ಈ ಗಣರಾಜ್ಯದ ಜನರು ಗಣರಾಜ್ಯೋತ್ಸವದಂದು ಈ ರೀತಿಯ ಮೆರವಣಿಗೆಯ ಭಾಗವಾಗಿಲ್ಲ. ಈ ಮೆರವಣಿಗೆಯ ಮೂಲಕ ನಾವು ದೇಶ ಮತ್ತು ಜಗತ್ತಿಗೆ ನಮ್ಮ ಬಗ್ಗೆ ಹೇಳಬೇಕಾಗಿದೆ.

ನಾವು ಮೂರು ರೈತ ವಿರೋಧಿ ಕಾನೂನುಗಳ ಬಗ್ಗೆ ಸತ್ಯವನ್ನು ತಿಳಿಸಬೇಕಾಗಿದೆ. ಈ ಐತಿಹಾಸಿಕ ಮೆರವಣಿಗೆ ಯಾವುದೇ ಕಿರಿಕಿರಿಗೆ ಕಾರಣವಾಗದಂತೆ ನಾವು ಕಾಳಜಿ ವಹಿಸಬೇಕು. ಮೆರವಣಿಗೆಯನ್ನು ಅತ್ಯಂತ ಶಾಂತಿಯುತವಾಗಿ ಕರೆದೊಯ್ಯುವಲ್ಲಿ ನಮ್ಮ ಗೆಲುವು ಇರುತ್ತದೆ; ಯಾವುದೇ ಅನಗತ್ಯ ಘಟನೆಗಳು ನಡೆಯಕೂಡದು. ನೆನಪಿಡಿ, ನಮ್ಮ ಗುರಿ ದೆಹಲಿಯನ್ನು ವಶಪಡಿಸಿಕೊಳ್ಳುವುದಲ್ಲ, ಈ ದೇಶದ ಜನರ ಹೃದಯವನ್ನು ಗೆಲ್ಲುವುದು.

ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿ ಜ. 26ರಂದು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್‌ ಪರೇಡ್‌; ರಾಜಧಾನಿಯತ್ತ 5000 ವಾಹನಗಳು!

ಇದನ್ನು ಗಮನದಲ್ಲಿಟ್ಟುಕೊಂಡು, ’ಸಂಯುಕ್ತ್ ಕಿಸಾನ್ ಮೋರ್ಚ’ ಮೆರವಣಿಗೆಗೆ ಸರ್ವಾನುಮತದಿಂದ ಒಪ್ಪಿದ ಕೆಲವು ಸೂಚನೆಗಳನ್ನು ಪ್ರಸ್ತುತಪಡಿಸುತ್ತಿದೆ. ದಯವಿಟ್ಟು ಅದನ್ನು ಸಾಧ್ಯವಾದಷ್ಟು ಜನರೊಂದಿಗೆ ಹಂಚಿಕೊಳ್ಳಿ ಮತ್ತು ಯಾವುದೇ ಗೊಂದಲಗಳಿದ್ದಲ್ಲಿ, ನಿಮ್ಮ ಆಯಾ ಸಂಸ್ಥೆಗಳ ಮುಖಂಡರನ್ನು ಸಂಪರ್ಕಿಸಿ ಅಥವಾ ಸಹಾಯವಾಣಿ ಸಂಖ್ಯೆ 7428384230 ಗೆ ಕರೆ ಮಾಡಿ.

ಮೆರವಣಿಗೆಗೆ ಮುಂಚಿತವಾಗಿ ಸಿದ್ಧತೆಗಳು

  • ಮೆರವಣಿಗೆಯಲ್ಲಿ ಟ್ರಾಲಿಗಳನ್ನು ಅನುಮತಿಸಲಾಗುವುದಿಲ್ಲ. ಟ್ರ್ಯಾಕ್ಟರ್‌ಗಳು ಮತ್ತು ಇತರ ವಾಹನಗಳನ್ನು ಮಾತ್ರ ಅನುಮತಿಸಲಾಗುವುದು. ವಿಶೇಷ ಟ್ಯಾಬ್ಲೋ ಹೊಂದಿರುವ ಟ್ರಾಲಿಗಳಿಗೆ ವಿನಾಯಿತಿ ನೀಡಬಹುದು. ದಯವಿಟ್ಟು ಟ್ರಾಲಿಯ ಸುರಕ್ಷತೆಗಾಗಿ ವ್ಯವಸ್ಥೆ ಮಾಡಿ.
  • ನಿಮ್ಮೊಂದಿಗೆ 24 ಗಂಟೆಗಳಿಗೆ ಬೇಕಾಗುವಷ್ಟು ಪಡಿತರ ಮತ್ತು ನೀರನ್ನು ಪ್ಯಾಕ್ ಮಾಡಿ. ಚಳಿಯಿಂದ ರಕ್ಷಣೆ ಹೊಂದಲು ನೀವು ಸರಿಯಾದ ವ್ಯವಸ್ಥೆಗಳನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ನೀವು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದರೆ ಅದು ಅಗತ್ಯವಾಗಬಹುದು.
  • ಪ್ರತಿ ಟ್ರ್ಯಾಕ್ಟರ್ ಅಥವಾ ಚಕ್ಕಡಿಯನ್ನು ರೈತರ ಸಂಘಟನೆಗಳ ಧ್ವಜ ಮತ್ತು ರಾಷ್ಟ್ರೀಯ ಧ್ವಜದೊಂದಿಗೆ ಅಳವಡಿಸಬೇಕೆಂದು ಸಂಯುಕ್ತ್ ಕಿಸಾನ್ ಮೋರ್ಚಾ ಮನವಿ ಮಾಡುತ್ತದೆ ಯಾವುದೇ ರಾಜಕೀಯ ಪಕ್ಷದ ಧ್ವಜ ಹಾಕಕೂಡದು.
  • ಯಾವುದೇ ಶಸ್ತ್ರಾಸ್ತ್ರವನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಡಿ, ಕೋಲುಗಳನ್ನು ಸಹ ತರಬೇಡಿ. ಯಾವುದೇ ಪ್ರಚೋದನಕಾರಿ ಅಥವಾ ನಕಾರಾತ್ಮಕ ಘೋಷಣೆಗಳಿರುವ ಬ್ಯಾನರ್‌ಗಳನ್ನು ಬಳಸಬೇಡಿ.
  • ಮೆರವಣಿಗೆಯಲ್ಲಿ ನೀವು ಭಾಗವಹಿಸುವುದರ ಬಗ್ಗೆ ತಿಳಿಸಲು ನೀವು ಬಯಸಿದರೆ, 8448385556 ಗೆ ಮಿಸ್ಡ್ ಕಾಲ್ ನೀಡಿ.

ಇದನ್ನೂ ಓದಿ: ರ್‍ಯಾಲಿಗೆ ಟ್ರಾಕ್ಟರ್‌ ತರಬೇಡಿ ಎಂದ ಬೆಂಗಳೂರು ಪೊಲೀಸರು: ತಂದೇ ತರುತ್ತೇವೆ ಎಂದ ರೈತರು!

ಪೆರೇಡ್ ಸಮಯದಲ್ಲಿ ಅನುಸರಿಸಬೇಕಾದ ಸೂಚನೆಗಳು

  • ಮೆರವಣಿಗೆಯನ್ನು ರೈತ ಮುಖಂಡರೊಂದಿಗೆ ಕಾರುಗಳ ಮೂಂಚೂಣಿಯಲ್ಲಿ ನಡೆಸಲಾಗುತ್ತದೆ. ಯಾವುದೇ ಕಾರು / ಟ್ರಾಕ್ಟರ್ ಆ ಕಾರನ್ನು ಹಿಂದಿಕ್ಕಬಾರದು. ಹಸಿರು ಜಾಕೆಟ್ ಧರಿಸಿದ ನಮ್ಮ ಸ್ವಯಂಸೇವಕರ ನಿರ್ದೇಶನಗಳನ್ನು ದಯವಿಟ್ಟು ಅನುಸರಿಸಿ.
  • ಮೆರವಣಿಗೆಗಾಗಿ ಮಾರ್ಗವನ್ನು ಮೊದಲೇ ನಿರ್ಧರಿಸಲಾಗಿದೆ ಮತ್ತು ಗುರುತಿಸಲಾಗಿದೆ. ಪೊಲೀಸ್ ಮತ್ತು ಸಂಚಾರ ಸ್ವಯಂಸೇವಕರು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಮಾರ್ಗದಿಂದ ವಿಚಲನಗೊಂಡ ಯಾವುದೇ ಕಾರು / ಟ್ರಾಕ್ಟರ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
  • ಯಾವುದೇ ಕಾರು / ಟ್ರಾಕ್ಟರ್ ಅನ್ನು ಯಾವುದೇ ಕಾರಣವಿಲ್ಲದೆ ಒಂದು ಜಾಗದಲ್ಲಿ ನಿಲ್ಲಿಸಿದರೆ ಆಕ್ರಮಿಸಿಕೊಂಡರೆ, ಆ ಕಾರು / ಟ್ರಾಕ್ಟರ್ ಅನ್ನು ಸ್ವಯಂಸೇವಕರು ತೆಗೆದುಹಾಕುತ್ತಾರೆ ಎಂದು ಎಸ್‌ಕೆಎಂ ನಿರ್ಧರಿಸಿದೆ. ಪೆರೇಡ್‌ನಲ್ಲಿರುವ ಎಲ್ಲಾ ಕಾರು/ಟ್ರಾಕ್ಟರ್‌ಗಳು ಮೆರವಣಿಗೆಯನ್ನು ಪೂರ್ಣಗೊಳಿಸಿದ ನಂತರ ಆರಂಭಿಕ ಹಂತಕ್ಕೆ ಮರಳಬೇಕು.
  • ಚಾಲಕ ಸೇರಿದಂತೆ ಗರಿಷ್ಠ 5 ಜನರು ಒಂದು ಟ್ರ್ಯಾಕ್ಟರ್‌ನಲ್ಲಿ ಸವಾರಿ ಮಾಡಬಹುದು. ಟ್ರಾಕ್ಟರುಗಳ ಬಾನೆಟ್, ಬಂಪರ್ ಅಥವಾ ಟ್ರ್ಯಾಕ್ಟರ್ ಮೇಲ್ಭಾಗದಲ್ಲಿ ಕೂಳಿತುಕೊಳ್ಳಬಾರದು.
  • ಎಲ್ಲಾ ಟ್ರಾಕ್ಟರುಗಳು ಒಂದು ಸಾಲಿನಲ್ಲಿ ಮುಂದುವರಿಯಬೇಕು ಮತ್ತು ಪೆರೇಡ್‌ನಾದ್ಯಂತ ಯಾವುದೇ ಇತರ ವಾಹನವನ್ನು ಹಿಂದಿಕ್ಕುವಂತಿಲ್ಲ. ಮೆರವಣಿಗೆಯನ್ನು ಮುನ್ನಡೆಸುವ ರೈತ ಮುಖಂಡರ ವಾಹನಗಳನ್ನು ದಯವಿಟ್ಟು ಹಿಂದಿಕ್ಕಬೇಡಿ.
  • ದಯವಿಟ್ಟು ಟ್ರ್ಯಾಕ್ಟರ್‌ನಲ್ಲಿ ಸಂಗೀತ ನುಡಿಸಬೇಡಿ. ಮೆರವಣಿಗೆಯಲ್ಲಿರುವ ಎಲ್ಲ ಪ್ರಕಟಣೆಗಳು ಯಾವುದೇ ಅಡೆತಡೆಯಿಲ್ಲದೆ ಕೇಳಿಸಿಕೊಳ್ಳುವುದನ್ನು ಇದು ಖಚಿತಪಡಿಸುತ್ತದೆ.
  • ಮೆರವಣಿಗೆಗೆ ಮೊದಲು ಅಥವಾ ಮೆರವಣಿಗೆ ಸಮಯದಲ್ಲಿ ಯಾವುದೇ ಮಾದಕವಸ್ತು ಬಳಸುವುದನ್ನು ನಿಷೇಧಿಸಲಾಗಿದೆ. ಅಂತಹ ಪ್ರಕರಣಗಳನ್ನು ಸಂಚಾರ ಸ್ವಯಂಸೇವಕರಿಗೆ ವರದಿ ಮಾಡಲಾಗುತ್ತದೆ.
  • ಮೆರವಣಿಗೆಯನ್ನು ಮನೋಹರವಾಗಿ ನಡೆಸುವುದು ಮತ್ತು ನಮ್ಮ ಸಹವರ್ತಿ ನಾಗರಿಕರ ಹೃದಯಗಳನ್ನು ಗೆಲ್ಲುವುದು ನಮ್ಮ ಉದ್ದೇಶ ಎಂಬುದನ್ನು ದಯವಿಟ್ಟು ನೆನಪಿಡಿ. ಪೊಲೀಸರು ಕೂಡ ನಮ್ಮ ಭಾಗವಾಗಿದ್ದಾರೆ, ನಾವು ಯಾವುದೇ ಜಗಳಗಳಲ್ಲಿ ತೊಡಗಬಾರದು. ಎಲ್ಲಾ ಸುದ್ದಿ ಚಾನೆಲ್‌ಗಳ ಪ್ರತಿನಿಧಿಗಳನ್ನು ಗೌರವಿಸಬೇಕು.
  • ದಯವಿಟ್ಟು ಕಸವನ್ನು ರಸ್ತೆಗಳಲ್ಲಿ ಎಸೆಯುವ ಮೂಲಕ ಸುತ್ತಮುತ್ತಲಿನ ಪ್ರದೇಶಗಳನ್ನು ಕಲುಷಿತಗೊಳಿಸಬೇಡಿ. ತ್ಯಾಜ್ಯವನ್ನು ವಿಲೇವಾರಿ ಮಾಡಲು ಚೀಲವನ್ನು ಕೊಂಡೊಯ್ಯಬೇಕು ಎಂದು ನಮ್ರವಾಗಿ ಸೂಚಿಸುತ್ತೇವೆ.

ಇದನ್ನೂ ಓದಿ: ಬಲವಂತವಾಗಿ ರೈತ ಜಾಥಾ ತಡೆದ ಪೊಲೀಸರು: ರೈತ ಮುಖಂಡರ ಆಕ್ಷೇಪ

ತುರ್ತು ಪರಿಸ್ಥಿತಿಗಾಗಿ ಮಾರ್ಗಸೂಚಿಗಳು

ಕಿಸಾನ್ ಏಕ್ತಾ ಮೋರ್ಚಾ ಪ್ರತಿಯೊಂದು ರೀತಿಯ ತುರ್ತು ಪರಿಸ್ಥಿತಿಗಾಗಿ ನಿಬಂಧನೆಗಳನ್ನು ರೂಪಿಸಿದೆ. ಆದ್ದರಿಂದ ಯಾವುದೇ ಸಮಸ್ಯೆ ಇದ್ದರೆ ಭಯಪಡಬೇಡಿ, ಈ ಸೂಚನೆಗಳನ್ನು ಅನುಸರಿಸಿ:

  • ಯಾವುದೇ ವದಂತಿಗಳನ್ನು ನಿರ್ಲಕ್ಷಿಸಿ. ನೀವು ಏನನ್ನಾದರೂ ಸ್ಪಷ್ಟಪಡಿಸಲು ಬಯಸಿದರೆ, ಸತ್ಯವನ್ನು ಪರಿಶೀಲಿಸಲು ಕಿಸಾನ್ ಏಕ್ತಾ ಮೋರ್ಚಾದ ಫೇಸ್‌ಬುಕ್ ಪುಟವನ್ನು ನೋಡಿ.
  • ಮೆರವಣಿಗೆಯಲ್ಲಿ ಆಂಬ್ಯುಲೆನ್ಸ್‌ಗಳು ಸುತ್ತಮುತ್ತಲ ಪ್ರದೇಶಗಳಲ್ಲಿರುತ್ತವೆ. ಆಸ್ಪತ್ರೆಗಳ ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ತುರ್ತುಸ್ಥಿತಿ ಇದ್ದರೆ, ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ ಹತ್ತಿರದ ಸ್ವಯಂಸೇವಕರಿಗೆ ತಿಳಿಸಿ.
  • ಟ್ರಾಕ್ಟರ್ ಅಥವಾ ಕಾರಿನೊಂದಿಗೆ ಯಾವುದೇ ಸಮಸ್ಯೆ ಇದ್ದಲ್ಲಿ, ಅದನ್ನು ಬದಿಯಲ್ಲಿ ಇರಿಸಿ ಮತ್ತು ಸ್ವಯಂಸೇವಕರನ್ನು ಸಂಪರ್ಕಿಸಿ ಅಥವಾ ಸಹಾಯವಾಣಿಗೆ ಕರೆ ಮಾಡಿ.
  • ಈ ಮೆರವಣಿಗೆಗಾಗಿ ಸಂಯುಕ್ತ್ ಕಿಸಾನ್ ಮೋರ್ಚಾದ ಸಹಾಯವಾಣಿ ಸಂಖ್ಯೆ 24 ಗಂಟೆಗಳ ಕಾಲ ತೆರೆದಿರುತ್ತದೆ. ನೀವು ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ ಅಥವಾ ಏನನ್ನಾದರೂ ತಿಳಿಸಲು ಬಯಸಿದರೆ, ದಯವಿಟ್ಟು ತಕ್ಷಣ ಕರೆ ಮಾಡಿ.
  • ಯಾವುದೇ ದುರದೃಷ್ಟಕರ ಘಟನೆ ನಡೆದರೆ, ನೀವು ಅದನ್ನು 112 ನೇ ಸಂಖ್ಯೆಯಲ್ಲಿರುವ ಪೊಲೀಸ್ ನಿಯಂತ್ರಣ ಕೊಠಡಿಗೆ ವರದಿ ಮಾಡಬಹುದು.

ಸಹಾಯವಾಣಿ ಸಂಖ್ಯೆ 7428384230

ಇದನ್ನೂ ಓದಿ: ಗಣರಾಜ್ಯೋತ್ಸವದ ಟ್ರ್ಯಾಕ್ಟರ್‌ ಪರೇ‌ಡ್‌ನಲ್ಲಿ ನಾಲ್ವರು ರೈತ ಮುಖಂಡರನ್ನು ಕೊಲ್ಲಲು ಸಂಚು ಆರೋಪ: ಸಿಕ್ಕಿಬಿದ್ದ ಯುವಕ
ಟ್ರಾಕ್ಟರ್‌ ರ್‍ಯಾಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...