ಜೈ ಶ್ರೀರಾಮ್

ನೇತಾಜಿ ವಾರ್ಷಿಕೋತ್ಸವದಂದು ನಡೆದ ಕೇಂದ್ರದ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾತನಾಡುವ ಮೊದಲು ಕೇಳಿ ಬಂದ ಜೈ ಶ್ರೀರಾಮ್ ಘೋಷಣೆಗಳಿಗೆ ವೇದಿಕೆಯಲ್ಲೇ ಪ್ರತಿಭಟಿಸಿರುವ ಘಟನೆ ಶನಿವಾರ ನಡೆದಿದೆ. ಕೇಂದ್ರ ಸರ್ಕಾರ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕೂಡ ಭಾಗಿಯಾಗಿದ್ದರು.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ತೃಣಮೂಲ ಸಂಸದೆ ಮೆಹುವಾ ಮೊಯಿತ್ರಾ, “ಕೇಂದ್ರ ಸರ್ಕಾರವು ಬಹು-ನಂಬಿಕೆಯ ಪ್ರಜಾಪ್ರಭುತ್ವದ ಎಲ್ಲಾ ಪಾವಿತ್ರ್ಯವನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ. ಅಧಿಕೃತ ಕಾರ್ಯಕ್ರಮವೊಂದರಲ್ಲಿ ಜಾತ್ಯತೀತ ಪ್ರಜಾಪ್ರಭುತ್ವದ ಈ ನೆಲದಲ್ಲಿ ಧರ್ಮದ ಪಠಣಗಳನ್ನು ಚೀರುವುದು ಅಕ್ಷಮ್ಯ. ಬಿಜೆಪಿಯ ಅಶಿಕ್ಷಿತ/ಹುಂಬ ಜನರು ಮಾತ್ರ ಈ ರೀತಿಯ ಅಸಂಬದ್ಧತೆಯನ್ನು ಪ್ರದರ್ಶಿಸಬಲ್ಲರು’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸೇನಾ ರಹಸ್ಯ ಬಹಿರಂಗ: ಅರ್ನಾಬ್‌ನನ್ನು ಮತ್ತೆ ಅರೆಸ್ಟ್ ಮಾಡುತ್ತಾ ಮಹಾಸರ್ಕಾರ?

ಈ ಕುರಿತು ಟ್ವೀಟ್ ಕೂಡ ಮಾಡಿರುವ ಸಂಸದೆ ಮೆಹುವಾ, “ಧರ್ಮವು ಸರ್ಕಾರಕ್ಕೆ ಸಮನಾಗಿರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಅಥವಾ ಭಾರತವು ನಾಶವಾಗುತ್ತಿರುವ ಈ ದೊಡ್ಡ ವಿನಾಶವಾದಿ ಕೆಲಸ ನಿಲ್ಲಬೇಕು” ಎಂದು ಜನರನ್ನು ಒತ್ತಾಯಿಸಿದ್ದಾರೆ.

ಹಿಂದೂಗಳು ಇತರ ಧರ್ಮಗಳಿಗೆ ಅಸಹಿಷ್ಣುತೆ ತೋರುವುದನ್ನು ತನ್ನ ತಂದೆ ಒಪ್ಪುತ್ತಿರಲಿಲ್ಲ ಎಂದು ನೇತಾಜಿ ಮಗಳು ಅನಿತಾ ಬೋಸ್ ಹೇಳಿದ್ದಾರೆ ಎಂದು ಮೆಹುವಾ ಹೇಳಿದ್ದಾರೆ. ತಮ್ಮ ಟ್ವೀಟ್‌ನ ಕೊನೆಯಲ್ಲಿ ಅವರು, ಜೈ ಶ್ರೀ ಸಂವಿಧಾನ್ ಎಂಬ ಮಹತ್ವದ ಘೋಷಣೆ ಹಾಕಿದ್ದಾರೆ.

ಮತ್ತೊಬ್ಬ ಟಿಎಂಸಿ ಸಂಸದ ಡೆರೆಕ್ ಒಬ್ರಿಯೆನ್, ಆ ಸಭೆಯಲ್ಲಿ ಮಮತಾ ಬ್ಯಾನರ್ಜಿಯವರ ಭಾಷಣಕ್ಕೆ ಅಡೆತಡೆ ಮಾಡಿದ್ದನ್ನು ಖಂಡಿಸಿದ್ದಾರೆ, ಅನಾಗರಿಕರಿಗೆ ಘನತೆಯನ್ನು ಕಲಿಸಲಾಗುವುದಿಲ್ಲ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಕೃಷಿಕಾಯ್ದೆ: ಮೋದಿ ನಿಲುವಿಗೆ ವಿರೋಧ, ಬಿಜೆಪಿ ತೊರೆದು ಅಕಾಲಿದಳ ಸೇರುತ್ತಿರುವ ನಾಯಕರು!

ಮಮತಾ ಅವರ ಕ್ರಮವು ತನ್ನ ಹತಾಶೆಯನ್ನು ತೋರಿಸಿದೆ ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯ ವರ್ಗಿಯಾ ಹೇಳಿದ್ದಾರೆ. “ಜೈ ಶ್ರೀ ರಾಮ್ ಜಪಿಸುವುದರಲ್ಲಿ ಏನು ಸಮಸ್ಯೆ ಇದೆ ಮತ್ತು ಮಮತಾ ಅದರ ಬಗ್ಗೆ ಏಕೆ ಸಿಟ್ಟಾಗುತ್ತಾರೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದ್ದೇನೆ. ಮಮತಾ ಅವರು ಎದ್ದುನಿಂತಾಗ ಅವರ ಗೌರವಾರ್ಥವಾಗಿ ಘೋಷಣೆ ಕೂಗಲಾಗಿದೆ ಎಂದು ನಾನು ಭಾವಿಸುತ್ತೇನೆ. ಘೋಷಣೆಯಿಂದಾಗಿ ವೇದಿಕೆಯಿಂದ ಹೊರನಡೆಯುವುದು ಹತಾಶೆಯನ್ನು ಸೂಚಿಸುತ್ತದೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಈ ವರ್ಷದ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಉದ್ವೇಗ ಹೆಚ್ಚುತ್ತಿದೆ. ಉನ್ನತ ನಾಯಕರು, ಮಂತ್ರಿಗಳು ತೃಣಮೂಲ ಪಕ್ಷವನ್ನು ತೊರೆದಿದ್ದು, ಪಕ್ಷದೊಳಗಿನ ಬಿರುಕುಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಿವೆ. ಈ ಪಕ್ಷಾಂತರ ಬಿಜೆಪಿಯಲ್ಲೂ ಸಮಸ್ಯೆಯನ್ನು ತಂದಿದೆ.

ನೇತಾಜಿ ಜನ್ಮದಿನಾಚರಣೆಯು ಬಿಜೆಪಿ ಮತ್ತು ತೃಣಮೂಲ ನಡುವೆ ಘರ್ಷಣೆಯ ಹಂತ ತಲುಪಿದೆ. ಈ ಪರಿಸ್ಥಿತಿಯನ್ನು ಗಮನಿಸಿದರೆ, ಪ್ರಧಾನಿ ಮೋದಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ಈ ಕಾರ್ಯಕ್ರಮದಲ್ಲಿ ಜಂಟಿಯಾಗಿ ಕಾಣಿಸಿಕೊಂಡಿರುವುದು ಆಶ್ಚರ್ಯಕರವಾಗಿತ್ತು! ಆದರೆ ಮಮತಾ ಅವರು ತಮಗೆ ಅವಮಾನಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಭಾಷಣ ಮಾಡಲು ನಿರಾಕರಿಸಿ ವೇದಿಕೆಯಿಂದ ಹೊರನಡೆದಿದ್ದರು.

ಇದನ್ನೂ ಓದಿ: ರ್‍ಯಾಲಿಗೆ ಟ್ರಾಕ್ಟರ್‌ ತರಬೇಡಿ ಎಂದ ಬೆಂಗಳೂರು ಪೊಲೀಸರು: ತಂದೇ ತರುತ್ತೇವೆ ಎಂದ ರೈತರು!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here