ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣದ ವಿಚಾರಣೆ ನಡೆಸಲು ಕೇಂದ್ರ ಗೃಹ ಸಚಿವಾಲಯ ಗುರುವಾರ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ಅನುಮತಿ ನೀಡಿದೆ ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಸಂಘಟಿತ ಕಳ್ಳಸಾಗಣೆ ಕಾರ್ಯಾಚರಣೆಯು ರಾಷ್ಟ್ರೀಯ ಭದ್ರತೆಗೆ ಗಂಭೀರ ಪರಿಣಾಮಗಳನ್ನು ಬೀರಬಹುದು ಎಂದಿರುವ ಸಚಿವಾಲಯವು, ಅದಕ್ಕಾಗಿ ಪ್ರಕರಣದ ತನಿಖೆ ನಡೆಸಲು ಅವಕಾಶ ಎನ್‌ಐಎಗೆ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದೆ.
MHA permits National Investigation Agency (@NIA_India ) to investigate the Thiruvananthapuram Airport Gold smuggling case, as the organised smuggling operation may have serious implications for national security.@HMOIndia @PIB_India @airnewsalerts @DDNewslive
— Spokesperson, Ministry of Home Affairs (@PIBHomeAffairs) July 9, 2020
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿಗೆ ಬುಧವಾರ ಪತ್ರ ಬರೆದು ಈ ಪ್ರಕರಣದ ಬಗ್ಗೆ ಕೇಂದ್ರ ಸಂಸ್ಥೆಗಳು ತನಿಖೆ ನಡೆಸುವಂತೆ ಕೋರಿದ್ದಾರೆ. ಅಲ್ಲದೆ ಕೇರಳದ ಕಾಂಗ್ರೆಸ್ ಘಟಕ ಕೂಡಾ ಬುಧವಾದ ಪತ್ರ ಬರೆದಿದ್ದು ಕೇಂದ್ರ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುವಂತೆ ಕೋರಿತ್ತು.
ಜುಲೈ 5 ರಂದು ತಿರುವನಂತನಪುರಂ ವಿಮಾನ ನಿಲ್ಧಾಣದ ಕಸ್ಟಮ್ ಅಧಿಕಾರಿಗಳು 30 ಕೆಜಿ ಬಂಗಾರವನ್ನು ಯುಎಇ ರಾಜತಾಂತ್ರಿಕ ಬ್ಯಾಗ್‌ನಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದರು.
ಈ ಕಳ್ಳ ಸಾಗಾಣಿಕೆಯಲ್ಲಿ ರಾಯಭಾರಿ ಕಚೇರಿಯ ಮಾಜಿ ಉದ್ಯೋಗಿಗಳಾದ ಸ್ವಪ್ನಾ ಸುರೇಶ್ ಹಾಗೂ ಸರಿತ್ ನಾಯರ್ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಇಬ್ಬರೂ ಆರು ತಿಂಗಳ ಹಿಂದಿನವರೆಗೂ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡಿದ್ದರು ಎನ್ನಲಾಗಿದೆ.
ಅಧಿಕಾರಿಗಳು ಚಿನ್ನದ ಮೌಲ್ಯವನ್ನು 15 ಕೋಟಿ ಎಂದು ಹೇಳಿದ್ದಾರೆ. ಸರಿತ್ ನಾಯರ್ ಕಸ್ಟಮ್ಸ್ ವಿಭಾಗದ ವಶದಲ್ಲಿದ್ದರೆ, ಸ್ವಪ್ನಾ ಸುರೇಶ್ ಪರಾರಿಯಾಗಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರು ಸ್ವಪ್ನಾ ಸುರೇಶ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆಂದು ಆರೋಪಗಳೆದ್ದಾಗ, ಕೇರಳ ಸರ್ಕಾರ ಶಿವಶಂಕರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ.
“ಈ ಪ್ರಕರಣವನ್ನಿಟ್ಟುಕೊಂಡು ರಾಜ್ಯದ ಕಮ್ಯೂನಿಸ್ಟ್ ಸರ್ಕಾರವನ್ನು ಗುರಿಯಾಗಿಸುತ್ತಿದ್ದಾರೆ, ಆದರೆ ನಮಗೆ ಮರೆಮಾಡಲು ಏನೂ ಇಲ್ಲ. ಯಾವುದೇ ತನಿಖೆಗೆ ರಾಜ್ಯ ಸಿದ್ಧ ಎಂದು ಮುಖ್ಯಮಂತ್ರಿ ಪ್ರಧಾನಿಗೆ ಪತ್ರ ಕಳುಹಿಸಿದ್ದರು. ಆದರೆ ತನಿಖೆಯನ್ನು ವಿಳಂಬ ಮಾಡಿ ಸರ್ಕಾರವನ್ನು ಮುಜುಗರಕ್ಕೀಡಾಗುವ ಹಾಗೆ ಮಾಡುತ್ತಿದ್ದಾರೆ ಎಂದು ಅನುಮಾನ ಬರುತ್ತಿದೆ” ಎಂದು ಎಡ ಪ್ರಜಾಸತ್ತಾತ್ಮಕ ಒಕ್ಕೂಟದ ಕನ್ವೀನರ್ ವಿ.ಎಸ್.ವಿಜಯರಾಘವನ್ ಅಭಿಪ್ರಾಯಪಟ್ಟಿದ್ದಾರೆ.
ಓದಿ: ಕೇರಳದಲ್ಲಿ ಮತ್ತೆ ಎಡರಂಗ: ಸಿಎಂ ಪಿಣರಾಯಿ ಪರ ಒಲವು ಎಂದ ಏಷ್ಯಾನೆಟ್ ಸಮೀಕ್ಷೆ


