Homeಕರ್ನಾಟಕ1785ರಿಂದ 1798ರ ಅವಧಿಯ ಟಿಪ್ಪುವಿನ ಕನಸುಗಳು

1785ರಿಂದ 1798ರ ಅವಧಿಯ ಟಿಪ್ಪುವಿನ ಕನಸುಗಳು

- Advertisement -
- Advertisement -

ಕನಸು 1

ಮರಾಠ ಸೇನೆಯ ಮೂವರು ಅಧಿಕಾರಿಗಳು

ಚಂದ್ರಮಾನದ ಪ್ರಕಾರ ಮೊದಲ ’ಅಹ್ಮದಿ’ ತಿಂಗಳ ಗುರುವಾರ ರಾತ್ರಿ. ಹಿಜರಿಯ 1200 ದಾಲ್ವ್ ವರ್ಷದ ಆರಂಭದಲ್ಲಿ, ರಾತ್ರಿಯ ಮೂರು ಭಾಗ ಹಾಗೂ ಐದು ಪ್ರಹರಗಳು ಕಳೆದಿದ್ದವು. ಶಮ್ಸಾಬಾದ್‌ನಲ್ಲಿ ಇದ್ದಾಗ ನಾನು ಈ ಕನಸ ಕಂಡೆನು.

ಮರಾಠ ಸೈನ್ಯವು ಬಂದಂತೆ ನಾನು ಏಕಾಂಗಿಯಾಗಿ ಮುನ್ನುಗ್ಗಿ ಅದರ ಸೇನಾಧಿಪತಿಗಳ ಬಳಿ ಒಬ್ಬೊಬ್ಬರಾಗಿ ಹೋರಾಡುವ ಸವಾಲು ಹಾಕಿದಂತೆ ಕಾಣಿಸಿತು. ಆ ಸೈನ್ಯದ ಮುಸ್ಲಿಮ್ ಸೇನಾಧಿಕಾರಿ ನನ್ನನ್ನು ಎದುರಿಸಿ ನಿಂತ. ಸಮರಾಂಗಣದಲ್ಲಿ ಎರಡೂ ಸೈನ್ಯಗಳು ಮುಖಾಮುಖಿಯಾಗಿ ಕದನ ನಡೆಸುತ್ತಿರುವಾಗ ನನ್ನ ಖಡ್ಗದ ಒಂದೇ ಏಟಿಗೆ ಆ ಮುಸ್ಲಿಮ್ ಸೇನಾಧಿಪತಿಯನ್ನು ಕೊಂದೆನು. ಅದಾದ ನಂತರ ಸೈನ್ಯದ ನಾಯಕನಾಗಿದ್ದ ಯುವಕ ಅಲ್ಲಿಂದ ಕಾಲ್ಕಿತ್ತು ಓಡಿದ. ನಾನು ಅವನ ಬೆನ್ನಟ್ಟಿದೆ. ಮತ್ತು ಮುಖಾಮುಖಿಯಾಗಿ ಒಂದೇ ಹೊಡೆತಕ್ಕೆ ಅವನನ್ನು ಮುಗಿಸಿದೆ. ಅದೇ ರೀತಿಯಾಗಿ ಮೂರನೇ ಮುಖ್ಯ ಸೇನಾಧಿಪತಿಯನ್ನು ಕೊಂದುಹಾಕಿದೆ. ಮೂವರು ಸೇನಾಧಿಕಾರಿಗಳನ್ನೂ ತಲಾ ಒಂದೊಂದು ಏಟಿಗೆ ಮುಗಿಸಿ ಮರಳಿದೆ. ನನ್ನ ಸೈನ್ಯ ವಿಜಯಶಾಲಿಯಾಗಿ ಸಂಭ್ರಮದಲ್ಲಿತ್ತು.

ಆಗ ಕನಸಿನಲ್ಲಿ ನನ್ನ ಸೈನ್ಯದ ಎಲ್ಲ ಅಧಿಕಾರಿಗಳು ಹಾಗೂ ಹೈದರ್ ಸಾಹಿಬ್ ಅವರು ಮನೆಯಲ್ಲಿ ಊಟ ಮಾಡುತ್ತಿರುವಂತೆ ಕಂಡೆನು. ತುಂಬಾ ದಣಿದಿದ್ದ ನಾನು ಕುಡಿಯುವುದಕ್ಕಾಗಿ ನೀರು ಕೇಳಿದೆ. ಅಲ್ಲಿದ್ದವರು ನನಗೆ ಶುಭಾಶಯ ಕೋರಿದರು ಹಾಗೂ ಊಟ ಮಾಡಿದ ನಂತರ ನೀರು ಕುಡಿಯುವಂತೆ ಮನವಿ ಮಾಡಿದರು. ಈ ಮಧ್ಯೆ ದುರ್ಬಲನಾದ ಬಿಳಿಗಡ್ಡದ ಮುದುಕನೊಬ್ಬ ನನ್ನ ಮುಂದೆ ಕಾಣಿಸಿಕೊಂಡ. ಅವನ ಕೈಯಲ್ಲಿ ಕೆನೆ ಹಾಗೂ ಸಿಹಿಯಾದ ತಿಂಡಿಗಳಿದ್ದವು. ಅವನ್ನು ತೆಗೆದುಕೊಳ್ಳುವಂತೆ ಕೇಳಿದ. ಆ ಸಿಹಿ ತಿಂಡಿಗಳನ್ನು ಅವನಿಂದ ಪಡೆದು ತಿಂದ ನಂತರ ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ. “ಇಷ್ಟೊಂದು ಸ್ವಾದಿಷ್ಟ ಹಾಗೂ ರುಚಿಯಾದ ಆಹಾರ ಹಿಂದೆಂದೂ ತಿಂದಿರಲಿಲ್ಲ. ಅವು ಅತ್ಯಂತ ರುಚಿಕರವಾಗಿದ್ದವು.” ಸ್ನಾನ ಮಾಡಿ ಶುದ್ಧಿಯಾದ ನಂತರ ನನ್ನ ಅಧಿಕಾರಿಗಳ ಬಳಿ ವಿಚಾರಿಸಿದೆ. ಅವರು ಕಾಫಿರರ ಸೈನ್ಯವನ್ನು ನಾಶ ಮಾಡಿದ ಬಗ್ಗೆ; ಹೈದರಿ ಸೈನ್ಯದ ಅಧಿಕಾರಿಗಳು ಇಲ್ಲ ಎಂದು ಉತ್ತರಿಸಿದರು. ಮತ್ತು ಈ ವಿಷಯದಲ್ಲಿ ಅಂತಹ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಹಾಗೂ ಅವರು ಸೂಕ್ತ ಆದೇಶಕ್ಕಾಗಿ ಕಾಯುತ್ತಿದ್ದುದಾಗಿ ತಿಳಿಸಿದರು.

ಈ ಮಧ್ಯೆ ಅವರು, ಕಾಫಿರರ /ಸತ್ಯನಿಷೇಧಿಗಳ/ ನಂಬಿಕೆ ಇಲ್ಲದವರ ಸೈನ್ಯದ ಬಳಿ ನೆಲೆನಿಂತ ಹಳ್ಳಿಯಲ್ಲಿ ಕೊಳ್ಳೆಹೊಡೆದ ವಸ್ತುಗಳಿದ್ದವು ಎಂದು ಹೇಳಿದರು. ನಾನು ನನ್ನ ಸೈನ್ಯವನ್ನು ಸಿದ್ಧಗೊಳಿಸಿ, ಆ ಸೈನ್ಯ ಇರುವಲ್ಲಿಗೆ ಹೊರಟೆ. ಸಹಾಯಕರ ನೆರವಿನಿಂದ ಸೊಂಟಕ್ಕೆ ಕಟ್ಟಿದ ಒರೆಯಿಂದ ನನ್ನ ಖಡ್ಗ ಹೊರ ತೆಗೆದೆ. ಸೈಯದ್ ಜುನೈದ್, ಸೈಯದ್ ಗಫಾರ್ ಮತ್ತು ಇತರ ಅಧಿಕಾರಿಗಳಿಗೆ ಯುದ್ಧಕ್ಕೆ ಸಿದ್ಧರಾಗುವಂತೆ ಹೇಳಿದೆ. ಈ ಕನಸಿನಲ್ಲಿ ಕಂಡದ್ದು ಇಷ್ಟೇ.

***

ಕನಸು 21

ನಿಜಾಮ್‌ನ ಪ್ರತಿನಿಧಿ

ರಾಸಿಕ್ ವರ್ಷದ ರಬ್ಬಾನಿ ತಿಂಗಳಿನ 25ನೇ ದಿನ. ಮುಹಮ್ಮದರು ಜನಿಸಿದ ದಿನದಿಂದ ಆರಂಭಿಸಿದ 1222ನೇ ವರ್ಷಕ್ಕೆ ಸಮನಾಗುತ್ತದೆ. ದಿನದ ನಾಲ್ಕು ಗಂಟೆಗಳು ಉಳಿದಿದ್ದವು. ಆಗ ಈ ಕನಸ ಕಂಡೆ. ನಿಜಾಮ್ ಅಲಿಖಾನ್ ಅವರ ದಿವಾನ್ ಬರುವುದ ಕಂಡೆ. ಕಾಣಿಸುತ್ತಿದ್ದಂತೆಯೇ ಅವನಿಗೆ ಹಲ್ಲು ಇಲ್ಲದೇ ಇರುವುದು ಹಾಗೆಯೇ ತಲೆಗೂದಲಿಗೆ ಬಣ್ಣ ಹಚ್ಚಿಕೊಂಡಿರುವುದನ್ನು ಗಮನಿಸಿದೆ. ಅವನು ನನ್ನಿಂದ ಸಹಾಯ ಯಾಚಿಸಿದ. ದೇವರ ಸೇವಕನು ಅವನಿಗೆ ಹೇಳಿದ, “ಆಗಲಿ, ನೀನು ನೆಮ್ಮದಿಯಿಂದಿರು, ನನ್ನ ಸಲಹೆಗಾರರ ಜೊತೆ ಮಾತನಾಡುವೆ, ಅದಾದ ನಂತರ ನಿನಗೆ ಉತ್ತರ ನೀಡುವೆ.” ಈ ರೀತಿಯಲ್ಲಿ ಮಾತನಾಡಿದ ನಂತರ ಅವನನ್ನು ಕೋಟೆಯಿಂದ ಹೊರಗೆ ಕಳುಹಿಸಿದೆ. ಇಂತಹ ವ್ಯಕ್ತಿಗಳ ಜೊತೆಗೆ ಸಾಂತ್ವನ ಹೇಳುವ ರೀತಿಯಲ್ಲಿಯೇ ಮಾತನಾಡಬೇಕು ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ. ಹೀಗೆ ಸಹಾಯ ಕೇಳಿದವರಲ್ಲಿ ಪೂನಾದವರು ಮೊದಲಿಗರು. ಮತ್ತು ಈಗ ಇವರು ಸಹಾಯ ಕೇಳಲು ಬಂದಿದ್ದಾರೆ. ಆದರೆ, ಅವರ ಮಾತುಗಳನ್ನ ನಂಬುವ ಹಾಗಿಲ್ಲ. ಈ ಹಂತದಲ್ಲಿ ಎಚ್ಚರಾಗಿ ಎದ್ದು ಕುಳಿತೆ.

***

ಕನಸು 22

ಅಸಾಧಾರಣ ಮೂರ್ತಿಗಳು, ಪ್ರತಿಮೆ, ಶಿಲ್ಪ

ಹಿರಾಸತ್ ವರ್ಷದ ಝಕಾರಿ ತಿಂಗಳಿನ 8ನೇ ದಿನ, ಮಂಗಳವಾರ ರಾತ್ರಿ, ಮರುದಿನ ಬುಧವಾರ ಇತ್ತು. ಅದು ಮುಹಮ್ಮದ್ ಜನಿಸಿದ ದಿನದಿಂದ ಆರಂಭಿಸಿ 1224ನೇ ವರ್ಷದ ಜಮಾದಿ-ಉಲ್ ಥಾನಿಯ 7ನೇ ದಿನಕ್ಕೆ ಸಮನಾಗುತ್ತದೆ. ಬೆಳಗಿನ ಜಾವ ಈ ಕನಸು ಕಂಡೆ. ಅಲ್ಲೊಂದು ಬೃಹತ್ ದೇವಾಲಯ ಕಾಣಿಸಿತು. ಅದರ ಹಿಂಭಾಗ ಸ್ವಲ್ಪ ಮಟ್ಟಿಗೆ ಧಕ್ಕೆಗೆ ಒಳಗಾಗಿತ್ತು. ಅದರಲ್ಲಿ ಹಲವು ದೊಡ್ಡಗಾತ್ರದ ಪ್ರತಿಮೆಗಳಿದ್ದವು. ನಾನು ಹಲವು ಜನರೊಡನೆ ಸೇರಿ ದೇವಾಲಯದೊಳಕ್ಕೆ ಹೋದೆ. ಪ್ರತಿಮೆಗಳು ಮನುಷ್ಯರ ಹಾಗೆ ನೋಡುತ್ತಿರುವ ಹಾಗೆ ಅವುಗಳ ಕಣ್ಣುಗಳು ಅಲುಗಾಡುತ್ತಿರುವುದನ್ನು ಗಮನಿಸಿದೆವು. ಪ್ರತಿಮೆಗಳ ಕಣ್ಣುಗಳು ಜೀವಂತ ಇರುವವರಂತೆ ಅಲುಗಾಡುವುದ ನೋಡಿದೆ, ಅದೇಕೆ ಹಾಗಿರಬಹುದು ಎಂದು ಅಚ್ಚರಿಯಾಯಿತು. ಆಗ ನಾನು ಅವುಗಳ ಸಮೀಪ ಹೋದೆ. ಕೊನೆಯ ಸಾಲಿನಲ್ಲಿ ಎರಡು ಸ್ತ್ರೀಪ್ರತಿಮೆಗಳಿದ್ದವು. ಆ ಎರಡರ ಪೈಕಿ ಒಂದು ಪ್ರತಿಮೆಯ ಸೀರೆ ಉಟ್ಟ ಕಾಲುಗಳು ಕಾಣಿಸಿದವು. ಅದರಿಂದ ಇಬ್ಬರು ಮಹಿಳೆಯರು ಉಳಿದೆಲ್ಲ ಪ್ರತಿಮೆಗಳು ಪುರುಷರು ಮತ್ತು ಇತರ ವಸ್ತುಗಳು ಎಂದು ಗೊತ್ತಾಯಿತು. ಅವಳು ಹೇಳಿದಳು, ತಾವು ದೀರ್ಘಕಾಲದಿಂದ ದೇವರ ಹತ್ತಿರ ಪ್ರಾರ್ಥಿಸುತ್ತಿದ್ದೇವೆ ಮತ್ತು ಪ್ರತಿಯೊಬ್ಬರೂ ನಮ್ಮನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ. ನಾನು ಅವಳಿಗೆ ಹೇಳಿದೆ “ಒಳ್ಳೆಯದಾಯಿತು. ನಿಮ್ಮಷ್ಟಕ್ಕೆ ನೀವು ದೇವರ ಸ್ಮರಣೆಯನ್ನು ಮುಂದುವರಿಸಿರಿ”. ಹಾಗೆ ಹೇಳಿದ ಮೇಲೆ ಕಟ್ಟಡದ ಶಿಥಿಲಗೊಂಡ ಭಾಗವನ್ನು ದುರಸ್ತಿ ಮಾಡುವಂತೆ ಆದೇಶಿಸಿದೆ. ಈ ಮಧ್ಯೆ ನನಗೆ ಎಚ್ಚರವಾಯಿತು.

(1785ರಿಂದ 1798ರ ಅವಧಿಯಲ್ಲಿ ಟಿಪ್ಪು ಸುಲ್ತಾನ ದಾಖಲಿಸಿದ 37 ಕನಸುಗಳನ್ನು ಇಂಗ್ಲಿಷ್‌ನಲ್ಲಿ ’ದ ಬುಕ್ ಆಫ್ ಡ್ರೀಮ್ಸ್’ ಎಂದು ಪ್ರಕಟಿಸಲಾಗಿದೆ. ಬ್ರಿಟಿಷರು, ನಿಜಾಮ, ಮರಾಠರನ್ನು ಯುದ್ಧದಲ್ಲಿ ಸೋಲಿಸುವ ಬಗ್ಗೆ ಹಾಗೂ ಇನ್ನೂ ಹಲವು ವಿಷಯಗಳ ಬಗ್ಗೆ ಟಿಪ್ಪುವಿನ ಸುಪ್ತಮನಸ್ಸಿನ ದಾಖಲೆಗಳಿವು. ಈ ಕನಸುಗಳನ್ನು ಕನ್ನಡಕ್ಕೆ ದೇವು ಪತ್ತಾರ ದೀರ್ಘ ಪ್ರಸ್ತಾವನೆಯೊಂದಿಗೆ ಅನುವಾದಿಸಿದ್ದಾರೆ. ಗೌರಿ ಮೀಡಿಯಾ ಟ್ರಸ್ಟ್ ಇದನ್ನು ಡಿಸೆಂಬರ್ ತಿಂಗಳಿನಲ್ಲಿ ಪ್ರಕಟಿಸಲಿದೆ.)

ದೇವು ಪತ್ತಾರ

(ಕನ್ನಡಕ್ಕೆ): ದೇವು ಪತ್ತಾರ
ಹಿರಿಯ ಪತ್ರಕರ್ತರು. ಕ್ಯಾಮರಾ ಇಂಜಿನಿಯರ್ ಗುಲಾಂ ಮುಂತಕಾ, ಮಹಾದೇವ ಬಾಬಾ ಮೆಡೋಸ್ ಟೇಲರ್(ಸಂಪಾದಿತ), ಈಗ ಹೀಗಿರುವ ಲೋಕದಲ್ಲಿ (ವ್ಯಕ್ತಿಚಿತ್ರ), ಬಹಮನಿ ಸಾಮ್ರಾಜ್ಯ ಅವರ ಪ್ರಕಟಿತ ಕೃತಿಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...