Homeಮುಖಪುಟತ್ರಿಪುರಾ: ಮಾಜಿ ಸಚಿವ ಸೇರಿದಂತೆ ಇಬ್ಬರು BJP ಶಾಸಕರು ರಾಜೀನಾಮೆ

ತ್ರಿಪುರಾ: ಮಾಜಿ ಸಚಿವ ಸೇರಿದಂತೆ ಇಬ್ಬರು BJP ಶಾಸಕರು ರಾಜೀನಾಮೆ

- Advertisement -
- Advertisement -

ಬಿಜೆಪಿಯ ಬಂಡಾಯ ಶಾಸಕ, ತ್ರಿಪುರಾ ಮಾಜಿ ಆರೋಗ್ಯ ಸಚಿವ ಸುದೀಪ್ ರಾಯ್ ಬರ್ಮನ್ ಮತ್ತು ಪಕ್ಷದ ಮತ್ತೊಬ್ಬ ಶಾಸಕ ಆಶಿಶ್‌ ಸಹಾ ಅವರು ತಮ್ಮ ವಿಧಾನಸಭೆಯ ಶಾಸಕ ಸ್ಥಾನಗಳಿಗೆ ಸೋಮವಾರ ರಾಜೀನಾಮೆ ನೀಡಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಇಬ್ಬರು ನಾಯಕರು ರಾಜ್ಯದ ಸ್ಪೀಕರ್ ರತನ್ ಚಕ್ರವರ್ತಿ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ಇಬ್ಬರೂ ಮಂಗಳವಾರದಂದು ಕಾಂಗ್ರೆಸ್‌ಗೆ ಸೇರುವ ಸಾಧ್ಯತೆಯಿದೆ ಎಂಬ ಊಹಾಪೋಹಗಳಿವೆ. ಈ ಮಧ್ಯೆ ಇಬ್ಬರೂ ದೆಹಲಿಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದು ಬಂದಿದೆ.

“ನಾವು ಫೆಬ್ರವರಿ 12 ರಂದು ತ್ರಿಪುರಾಕ್ಕೆ ಹಿಂತಿರುಗುತ್ತೇವೆ. ಈಗಾಗಲೆ ಬಿಜೆಪಿ ರಾಜ್ಯಾಧ್ಯಕ್ಷ ಮಾಣಿಕ್ ಸಹಾ ಅವರಿಗೆ ಪತ್ರವನ್ನು ಕಳುಹಿಸಿದ್ದೇವೆ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇವೆ” ಎಂದು ಆಶಿಶ್‌ ಸಹಾ ಹೇಳಿದ್ದಾರೆ.

ಇದನ್ನೂ ಓದಿ: ಕಾಶ್ಮೀರಿ ಪತ್ರಕರ್ತ ಫಹಾದ್ ಶಾ ಬಿಡುಗಡೆಗೆ ಪತ್ರಿಕಾ ಸಂಸ್ಥೆಗಳ ಒತ್ತಾಯ

ಈ ಇಬ್ಬರು ಶಾಸಕರ ರಾಜೀನಾಮೆಯಿಂದ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯೆ 33ಕ್ಕೆ ಕುಸಿದಿದೆ.

ಕಳೆದ ವಾರವಷ್ಟೇ ಸುದೀಪ್ ರಾಯ್ ಬರ್ಮನ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು, ರಾಜ್ಯದಲ್ಲಿ ಪ್ರಜಾಪ್ರಭುತ್ವ ಇಲ್ಲ ಮತ್ತು ಜನರು ಉಸಿರುಗಟ್ಟಿಸುತ್ತಿದ್ದಾರೆ ಎಂದು ಅವರು ಹೇಳಿದ್ದರು. “ರಾಜ್ಯದಲ್ಲಿ ಪ್ರಜಾಪ್ರಭುತ್ವದ ಚೂರು ಇಲ್ಲ. ಪ್ರಜಾಸತ್ತಾತ್ಮಕ ಆಮ್ಲಜನಕ ಖಾಲಿಯಾದ ಕಾರಣ ಜನರು ಉಸಿರುಗಟ್ಟಿಸುತ್ತಿದ್ದಾರೆ” ಎಂದು ಬರ್ಮನ್ ಹೇಳಿದ್ದರು.

ಅವರ ಈ ಹೇಳಿಕೆಯ ಸಮಯದಲ್ಲಿ ಪ್ರತಿಕ್ರಿಯಿಸಿದ್ದ ಬಿಜೆಪಿ, ಬರ್ಮನ್ ಅವರ ಚಲನವಲನವನ್ನು ಪಕ್ಷವು ಸೂಕ್ಷ್ಮವಾಗಿ ಗಮನಿಸುತ್ತಿದೆ, ಸಮಯ ಬಂದಾಗ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿತ್ತು. ಬರ್ಮನ್ ಅವರು 2017ರಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ್ದರು.

ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರು “ಬಿಜೆಪಿಯಲ್ಲಿನ ಶತ್ರುಗಳ” ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿ, ಜೂನ್ 2019 ರಲ್ಲಿ ಅವರನ್ನು ಆರೋಗ್ಯ ಸಚಿವ ಸ್ಥಾನದಿಂದ ತೆಗೆದುಹಾಕಲಾಯಿತು.

ಇದನ್ನೂ ಓದಿ:ಹಿಜಾಬ್‌ ಬೆಂಬಲಿಸಿ ‘ನೀಲಿ ಶಾಲು’ ಧರಿಸಿದ ವಿದ್ಯಾರ್ಥಿಗಳು; ಮೊಳಗಿದ ‘ಜೈ ಭೀಮ್‌’ ಘೋಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...