Homeಮುಖಪುಟವಿಂಟರ್ ಒಲಿಂಪಿಕ್ಸ್-2022 | ತ್ರಿವರ್ಣ ಧ್ವಜವನ್ನು ಹೊತ್ತು ನಡೆದ ಭಾರತದ ಏಕೈಕ ಅಥ್ಲೀಟ್‌ ಆರಿಫ್‌ ಖಾನ್

ವಿಂಟರ್ ಒಲಿಂಪಿಕ್ಸ್-2022 | ತ್ರಿವರ್ಣ ಧ್ವಜವನ್ನು ಹೊತ್ತು ನಡೆದ ಭಾರತದ ಏಕೈಕ ಅಥ್ಲೀಟ್‌ ಆರಿಫ್‌ ಖಾನ್

- Advertisement -
- Advertisement -

ಫೆಬ್ರವರಿ 4ರ ಶುಕ್ರವಾರದಂದು ಬೀಜಿಂಗ್ ವಿಂಟರ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಪರೇಡ್ ಆಫ್ ನೇಷನ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಏಕೈಕ ಭಾರತೀಯ ಅಥ್ಲೀಟ್ ಆರಿಫ್ ಖಾನ್ ಅವರು ರಾಷ್ಟ್ರಧ್ವಜವನ್ನು ಹೊತ್ತು ಮುನ್ನಡೆದರು. ಆಕರ್ಷಕ ಉದ್ಘಾಟನಾ ಸಮಾರಂಭವು ಐಕಾನಿಕ್ ಬರ್ಡ್ಸ್ ನೆಸ್ಟ್ ಸ್ಟೇಡಿಯಂನಲ್ಲಿ ನಡೆಯಿತು.

ಆರಿಫ್ ಖಾನ್, ಕೆಂಪು ಜಾಕೆಟ್ ಧರಿಸಿ, ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜವನ್ನು ಹೊತ್ತಿದ್ದರು. ಅವರು ಜೊತೆಗೆ ಒಂದೆರಡು ಸಹಾಯಕ ಸಿಬ್ಬಂದಿ ಇದ್ದರು.

ಇದನ್ನೂ ಓದಿ: ಕಾಶ್ಮೀರಿ ಪತ್ರಕರ್ತ ಫಹಾದ್ ಶಾ ಬಿಡುಗಡೆಗೆ ಪತ್ರಿಕಾ ಸಂಸ್ಥೆಗಳ ಒತ್ತಾಯ

ಬೀಜಿಂಗ್ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರು ಚಳಿಗಾಲದ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಕ್ಕಾಗಿ ಆರಿಫ್ ಖಾನ್ ಅವರನ್ನು ಟ್ವಿಟರ್‌‌ನಲ್ಲಿ ಶ್ಲಾಘಿಸಿದ್ದಾರೆ.

“ಕಾಶ್ಮೀರದಿಂದ ಒಲಿಂಪಿಕ್ಸ್‌ವರೆಗೆ! #Beijing2022ರಲ್ಲಿ ಭಾರತವನ್ನು ಪ್ರತಿನಿಧಿಸುವ ಏಕೈಕ ಕ್ರೀಡಾಪಟು #ArifKhan ತ್ರಿವರ್ಣ ಧ್ವಜವನ್ನು ಹೊತ್ತಿರುವುದನ್ನು ನೋಡಲು ನಿಜವಾಗಿಯೂ ಹೆಮ್ಮೆಪಡುತ್ತೇನೆ!” ಎಂದು ಅವರು ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ದೇಶಗಳ ನಡುವೆ ನಡೆದ ಗಡಿ ಸಂಘರ್ಷದಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದ ಚೀನಾ ಸೈನಿಕ ಒಲಿಂಪಿಕ್ ಜ್ಯೋತಿಯನ್ನು ಹೊತ್ತೊಯ್ದಿದ್ದನು. ಇದನ್ನು ವಿರೋಧಿಸಿರುವ ಭಾರತವು ಬೀಜಿಂಗ್‌ನಲ್ಲಿರುವ ತನ್ನ ಉನ್ನತ ರಾಜತಾಂತ್ರಿಕರನ್ನು ಚಳಿಗಾಲದ ಒಲಿಂಪಿಕ್ಸ್‌ಗೆ ಕಳುಹಿಸುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಯುದ್ಧಾಪರಾಧ ಆರೋಪ: ಅಮಿತ್ ಶಾ, ಸೇನಾ ಮುಖ್ಯಸ್ಥರ ಬಂಧನಕ್ಕೆ ಯುಕೆ ಮೂಲದ ಸಂಸ್ಥೆ ದೂರು

ಕಾಶ್ಮೀರದ ‘ಆಲ್ಪೈನ್ ಸ್ಕೀಯರ್’ ಪಟು ಆರಿಫ್ ಖಾನ್ ಅವರು ಫೆಬ್ರವರಿ 13 ಮತ್ತು 16 ರಂದು ಬೀಜಿಂಗ್‌ನಲ್ಲಿ ನಡೆಯಲಿರುವ ‘ಸ್ಲಾಲೋಮ್’ ಮತ್ತು ‘ಜೈಂಟ್ ಸ್ಲಾಲೋಮ್’ ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ.

31 ವರ್ಷದ ಆರಿಫ್ ಖಾನ್, ತನ್ನ ತಂದೆಯಿಂದ 4 ನೇ ವಯಸ್ಸಿನಲ್ಲಿ ಸ್ಕೀಯಿಂಗ್‌ಗೆ ಪಾದಾರ್ಪಣೆ ಮಾಡಿದ್ದರು. ಅವರು ತನ್ನ 18ನೇ ವಯಸ್ಸಿನಲ್ಲಿ ವೃತ್ತಿಪರ ಸ್ಕೀಯಿಂಗ್‌ ಪ್ರಾರಂಭಿಸಿದರು. ಈವರೆಗೆ 127 ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಆರಿಫ್‌ ಖಾನ್ ಅವರನ್ನು JSW ಗ್ರೂಪ್‌ನ ಕ್ರೀಡಾ ವಿಭಾಗವಾದ JSW ಸ್ಪೋರ್ಟ್ಸ್ ಬೆಂಬಲಿಸುತ್ತಿದ್ದು, ಇದು ಅವರ ವೆಚ್ಚದ 40% ಅನ್ನು ಭರಿಸುತ್ತಿದೆ. ಜಮ್ಮು ಕಾಶ್ಮೀರ ಸರ್ಕಾರವು 10% ಅನ್ನು ಭರಿಸುತ್ತದೆ ಮತ್ತು ಉಳಿದ ಹಣವನ್ನು ಅವರೇ ಭರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ 370 ನೇ ವಿಧಿ ರದ್ದುಪಡಿಸಿರುವುದರಿಂದ ಪರಿಸ್ಥಿತಿಯು ಮತ್ತಷ್ಟು ಉಲ್ಬಣಗೊಂಡಿದೆ: ಸಿಪಿಐ(ಎಂ) ನಾಯಕ ಯೂಸುಫ್ ತರಿಗಾಮಿ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...