Homeಮುಖಪುಟಸ್ಮಾರ್ಟ್ ಸಿಟಿ ಗುತ್ತಿಗೆದಾರರಿಗೆ ದಂಡ : ಪ್ರಾಮಾಣಿಕ ಆಯುಕ್ತ ಬೂಬಾಲನ್ ಎತ್ತಂಗಡಿಗೆ ಬಸವಜ್ಯೋತಿ ತೀವ್ರ ಯತ್ನ

ಸ್ಮಾರ್ಟ್ ಸಿಟಿ ಗುತ್ತಿಗೆದಾರರಿಗೆ ದಂಡ : ಪ್ರಾಮಾಣಿಕ ಆಯುಕ್ತ ಬೂಬಾಲನ್ ಎತ್ತಂಗಡಿಗೆ ಬಸವಜ್ಯೋತಿ ತೀವ್ರ ಯತ್ನ

- Advertisement -
- Advertisement -

ತುಮಕೂರು ಮಹಾನಗರ ಪಾಲಿಕೆಯ ಆಯುಕ್ತ ಭೂಬಾಲನ್ ಅವರಿಗೆ ಗುತ್ತಿಗೆದಾರರ ಕಿರುಕುಳ ಹೆಚ್ಚಾಗಿದೆ. ತಮಗೆ ದಂಡ ಹಾಕಿದರೆಂಬ ಕಾರಣಕ್ಕೆ ಭೂಬಾಲನ್ ಅವರನ್ನು ತುಮಕೂರಿನಿಂದ ಎತ್ತಂಗಡಿ ಮಾಡಿಸಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಗುತ್ತಿಗೆದಾರರು ‘ಬಸವಜ್ಯೋತಿ’ ಮೇಲೆ ಒತ್ತಡ ತಂದು ಭೂಬಾಲನ್ ವರ್ಗಾವಣೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅದರ ಭಾಗವಾಗಿಯೇ ಅವರನ್ನು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ಹುದ್ದೆಯಿಂದ ಬಿಡುಗಡೆಗೊಳಿಸಿ, ಆ ಜಾಗಕ್ಕೆ ಲಿಂಗಾಯತ ಸಮುದಾಯದ ನಾಗರಾಜ್ ಅವರನ್ನು ತರುವುದು ಖಚಿತವಾಗಿದೆ.

ಭೂಬಾಲನ್ ದಲಿತ ಸಮುದಾಯಕ್ಕೆ ಸೇರಿದ ಅಧಿಕಾರಿ. ಜೊತೆಗೆ ದಕ್ಷ, ಪ್ರಾಮಾಣಿಕ ಎಂಬ ಹೆಸರು ಗಳಿಸಿದ್ದಾರೆ. ಅದನ್ನು ಕಾರ್ಯತಃ ಮಾಡಿಯೂ ತೋರಿಸಿದ್ದಾರೆ. ಕಾಮಗಾರಿಗಳಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಬಂದಿದ್ದಾರೆ. ಸ್ಮಾಟ್ ಸಿಟಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ದಂಡ ವಿಧಿಸುವಂತಹ ಸಾಹಸಕ್ಕೆ ಕೈಹಾಕಿದವರು ಭೂಬಾಲನ್.

ತುಮಕೂರು ನಗರದ ಒಳರಸ್ತೆಗಳ ಅಭಿವೃದ್ದಿ ಕಾಮಗಾರಿ ಗುತ್ತಿಗೆ ತೆಗೆದುಕೊಂಡಿದ್ದ ಮೆ/ಆರ್.ಎಂ.ಎನ್ ಇನ್ ಫ್ರಾಸ್ಟ್ರಕ್ಚರ್ಸ್ ಗೆ 50,4,630 ರೂಪಾಯಿ, ಅಶೋಕ ರಸ್ತೆ ಅಭಿವೃದ್ಧಿ ಗುತ್ತಿಗೆ ಹಿಡಿದಿದ್ದ ಸಿದ್ದಾರ್ಥ ಸಿವಿಲ್ ವರ್ಕ್ಸ್ ಪ್ರೈ., ಲಿಮಿಟೆಡ್ ಗೆ 26,97,720 ರೂ, ಅಮಾನಿಕೆರೆ ಏರಿ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿ ಗುತ್ತಿಗೆ ಪಡೆದಿದ್ದ ಮೆ/ಆರ್.ಎಂ.ಎನ್. ಇನ್ ಫ್ರಾಸ್ಟ್ರಕ್ಚರ್ಸ್ ಗೆ 23,42,295 ರೂಪಾಯಿ, ಡಾ.ರಾಧಕೃಷ್ಣ ರಸ್ತೆ ಅಭಿವೃದ್ಧಿ ಗುತ್ತಿಗೆ ಪಡೆದಿದ್ದ ಶ್ರೀ ಶ್ರೀನಿವಾಸ ಕನ್ ಸ್ಟ್ರಕ್ಷನ್ಸ್ ಪ್ರೈ.ಲಿ.ಗೆ 16,42,295 ರೂ. ಭಗವಾನ್ ಮಹಾವೀರ್ ರಸ್ತೆ ಅಭಿವೃದ್ಧಿ ಗುತ್ತಿಗೆ ಪಡೆದ ಶ್ರೀ ಸುಧಾಕರ ಪೆರಿಟಾಲ ಕಂಪನಿಗೆ 10,3,460 ರೂ. ಮಹಿಳಾ ಥೀಮ್ ಪಾರ್ಕ್ ಗುತ್ತಿಗೆ ತೆಗೆದುಕೊಂಡಿದ್ದ ಮೆ/ರಾಜೇಗೌಡ ಅಂಡ್ ಕೋ ಗೆ 6,77, 377 ರೂ. ಟ್ರಾಮಾ ಸೆಂಟರ್ ಅಭಿವೃದ್ಧಿಪಡಿಸುವ ಗುತ್ತಿಗೆ ಪಡೆದಿರುವ ಕೆ.ಬಿ.ಆರ್. ಇನ್ ಫ್ರಾಟಿಕ್ ಲಿ ಕಂಪನಿಗೆ 5,28,000 ರೂ ದಂಡ ವಿಧಿಸಿದ್ದರು.

ಹಾಗೆಯೇ ಫೀಲ್ಡ್ ಮಾರ್ಷಲ್ ಕರಿಯಪ್ಪ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಗುತ್ತಿಗೆ ಪಡೆದಿದ್ದ ಶ್ರೀನಿವಾಸ ಕನ್ ಸ್ಟ್ರಕ್ಷನ್ಸ್ ಪ್ರೈ., ಲಿ ಕಂಪನಿಗೆ 5,65,119 ರೂ. ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾಲು ಆಲದ ಮರಗಳ ವಿಶಾಲ ರಾಜಮಾರ್ಗದ ನಿರ್ಮಾಣ ಮತ್ತು ಅಭಿವೃದ್ಧಿಯ ಗುತ್ತಿಗೆ ಪಡೆದಿದ್ದ ಮೆ/ಎ1 ಕನ್ ಸ್ಟ್ರಕ್ಷನ್ 4,19, 625 ರೂ. ಮೂರು ಪಾರ್ಕ್ ಗಳ ಅಭಿವೃದ್ಧಿ ಗುತ್ತಿಗೆದಾರ ಮೆ/ಸಾಯಿತ್ರಿಷ ಇನ್ ಫ್ರಾ ಇಂಜಿನಿಯರ್ಸ್ 1,26,200 ರೂ, ಮಹಾತ್ಮ ಗಾಂಧಿ ಕ್ರೀಡಾಂಗಣದ ಅಭಿವೃದ್ಧಿ (ಪಿಎಂಸಿ ವತಿಯಿಂದ ನಕ್ಷೆಗಳ ವಿಳಂಬಕ್ಕಾಗಿ) ಕ್ಯಾಡ್ ಫೋರಂ ಬೆಂಗಳೂರು ಗುತ್ತಿಗೆದಾರ ಕಂಪನಿಗೆ 3,08,060 ರೂ ದಂಡ ವಿಧಿಸಿ ಕೂಡಲೇ ಎಲ್ಲಾ ಗುತ್ತಿಗೆದಾರ ಕಂಪನಿಗಳು ದಂಡ ಪಾವತಿಸಬೇಕು ಎಂದು ಕಟ್ಟುನಿಟ್ಟಾಗಿ ಆದೇಶಿಸಿದ್ದರು..

ಅದೇ ಕಾರಣಕ್ಕೆ ಮೊದಲ ಬಾರಿಗೆ ಬಸವಜ್ಯೋತಿ ಗುತ್ತಿಗೆದಾರರ ಲಾಬಿಗೆ ಮಣಿದು ವರ್ಗಾವಣೆ ಮಾಡಿಸಿದ್ದರು. ಆಗ ವರ್ಗಾವಣೆ ವಿರೋಧಿಸಿ ತುಮಕೂರು ನಗರದ ನಾಗರಿಕರು ಪ್ರತಿಭಟನೆ ನಡೆಸಿದ್ದರು. ವರ್ಗಾವಣೆ ರದ್ದು ಗೊಳಿಸಬೇಕು ಎಂದು ಪಟ್ಟುಹಿಡಿದಿದ್ದರು.. ಜನರ ಒತ್ತಾಯಕ್ಕೆ ‘ಬಸವಜ್ಯೋತಿ’ ಮಣಿಯಲೇ ಬೇಕಾಯಿತು ಹಾಗಾಗಿ ಭೂಬಾಲನ್ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಳ್ಳಬೇಕಾಯಿತು.

ಇದೀಗ ಮತ್ತೆ ಭೂಬಾಲನ್ ಅವರಿಗೆ ಕಿರುಕುಳ ಮುಂದುವರಿದಿದೆ. ಭೂಬಾಲನ್ ಇದ್ದರೆ ನಮ್ಮ ಕೆಲಸ ನಡೆಯುವುದಿಲ್ಲವೆಂಬುದು ಅರಿತಿರುವ ಗುತ್ತಿಗೆದಾರರು ಬಸವಜ್ಯೋತಿ ಮೇಲೆ ಒತ್ತಡ ತಂದು ಆಯುಕ್ತರನ್ನು ವರ್ಗಾವಣೆ ಮಾಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ.

ಈಗಾಗಲೇ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ಹುದ್ದೆಯಿಂದ ಭೂಬಾಲನ್ ಅವರನ್ನು ಹೊರಗೆ ಕಳಿಸಲಾಗಿದೆ. ಅಲ್ಲಿ ಅವರಿದ್ದರೆ ನಮ್ಮ ‘ವ್ಯವಹಾರ’ ಸುಸೂತ್ರವಾಗಿ ನಡೆಯುವುದಿಲ್ಲವೆಂಬ ಸತ್ಯ ಭ್ರಷ್ಟ ರಾಜಕಾರಣಿಗಳು ಮತ್ತು ಗುತ್ತಿಗೆದಾರರಿಗೆ ತಿಳಿದುಹೋಗಿರುವುದರಿಂದ ದಕ್ಷ ಅಧಿಕಾರಿ ಎತ್ತಂಗಡಿಗೆ ಇನ್ನಿಲ್ಲದ ಕಸರತ್ತು ತೀವ್ರಗೊಂಡಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಭೂಬಾಲನ್ ಜಾಗಕ್ಕೆ ‘ಜಾತಿಬಂಧವ’ ರನ್ನೇ ಕರೆತಂದು ಕೂರಿಸಿದರೆ ಹುಲ್ಲುಗಾವಲಿನಲ್ಲಿ ಮೇಯ್ದು ದುಂಡಗಾಗಲು ಈ ಪಟಲಾಂ ತುದಿಮೇಲೆ ನಿಂತಿದ್ದಾರೆ. ಇಂತಹ ಪ್ರಾಮಾಣಿಕ ಅಧಿಕಾರಿಯನ್ನು ಎತ್ತಂಗಡಿ ಮಾಡಿಸುವಲ್ಲಿ ‘ಅಮ’ ಪಾತ್ರ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ದಕ್ಷ ಅಧಿಕಾರಿಗಳನ್ನು ಕಂಡರೆ ಆಗದವರ ಪಟ್ಟಿ ದೊಡ್ಡದಾಗಿದೆ. ಮಣಿವಣ್ಣನ್ ತುಮಕೂರು ನಗರಸಭೆಯ ಆಯುಕ್ತರಾಗಿ ಕೆಲಸ ಮಾಡಿದಾಗಲೂ ಇದೇ ಬಸವಜ್ಯೋತಿ ಅವರನ್ನು ವರ್ಗಾವಣೆ ಮಾಡಿಸಿದ್ದರು ಎಂಬ ಮಾತುಗಳು ಗುಟ್ಟಾಗಿ ಉಳಿದಿಲ್ಲ. ಅಭಿವೃದ್ಧಿಯ ‘ಹರಿಕಾರ’ನೆಂಬ ಬಿರುದು ಪಡೆದಿರುವ ವ್ಯಕ್ತಿಯೂ ಕೂಡ ಭೂಬಾಲನ್ ವರ್ಗಾವಣೆಗೆ ತಂತ್ರ ಹೆಣೆಯುತ್ತಲೇ ಇದ್ದಾರೆ. ಆ ಮೂವರು ಸೇರಿ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮತ್ರಿಯ ಮೇಲೆ ಭೂಬಾಲನ್ ವರ್ಗಾವಣೆಗೆ ಒತ್ತಡ ಹೇರಿದ್ದಾರೆ. ಇದು ವರ್ಕೌಟ್ ಆದರೆ ಇನ್ನು ಕೆಲವೇ ದಿನಗಳಲ್ಲಿ ಭೂಬಾಲನ್ ತುಮಕೂರಿನಿಂದ ಬೇರೆಡೆ ವರ್ಗಾವಣೆಯಾಗುವುದು ಖಚಿತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...