ಇರಾಕ್‌ನ ಮಾರುಕಟ್ಟೆಯೊಂದರಲ್ಲಿ ಇಂದು (ಜನವರಿ 21) ನಡೆದ ಅವಳಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 28 ಮಂದಿ ಸಾವನ್ನಪ್ಪಿದ್ದು, 73 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆ ಇರಾಕ್ ರಾಜಧಾನಿ ಬಾಗ್ದಾದ್‌ನ ಕೇಂದ್ರ ವಲಯದ ಬಾಬ್ ಅಲ್ ಶಾರ್ಕಿಯಲ್ಲಿ ನಡೆದಿದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕೇಂದ್ರ ಬಾಗ್ದಾದ್‌ನ ವಾಣಿಜ್ಯ ಕೇಂದ್ರದ ಬಳಿ ಎರಡು ಕಡೆ ಸ್ಫೋಟಗಳು ಸಂಭವಿಸಿವೆ. ಇದು ಆತ್ಮಾಹುತಿ ದಳದವರು ಮಾಡಿರುವ ಸ್ಫೋಟ ಎಂದು ಇರಾಕ್ ಸೇನೆ ತಿಳಿಸಿದ್ದು, ಇದುವರೆಗೂ ಯಾವ ಉಗ್ರ ಸಂಘಟನೆಯೂ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ಹೇಳಿದೆ.
ಚುನಾವಣೆ ಮತ್ತು ರಾಜಕೀಯ ಬಿಕ್ಕಟ್ಟು ಹಾಗೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಇರಾಕ್ ಈಗ ಆತ್ಮಾಹುತಿ ಬಾಂಬ್ ದಾಳಿಯನ್ನೂ ಎದುರುಗೊಂಡಿದೆ ಎಂದು ಹೇಳಲಾಗುತ್ತಿದೆ.
ಗಾಯಾಳುಗಳಿಗೆ ಚಿಕಿತ್ಸೆ ನೀಡಲು ರಾಜಧಾನಿಯಲ್ಲಿನ ತನ್ನ ಎಲ್ಲಾ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಇರಾಕ್ ಆರೋಗ್ಯ ಸಚಿವಾಲಯ ಘೋಷಿಸಿದೆ.
ಇದನ್ನೂ ಓದಿ: ಎಲ್ಲೆಲ್ಲಿ ಸಾಧ್ಯವೋ ಅಲ್ಲೇ ಪ್ರತಿಭಟಿಸಿ, ರೈತ ಚಳುವಳಿ ವಿಕೇಂದ್ರೀಕರಣಗೊಳ್ಳಲಿ- ಹರಿಪ್ರಸಾದ್ ಕೆ.ಆರ್


