ಬೆಂಗಳೂರಿನ ಸಿ.ವಿ ರಾಮನ್‌ನಗರ ವಿಧಾನಸಭಾದ ಕ್ಷೇತ್ರದ ನ್ಯೂ ತಿಪ್ಪಸಂದ್ರ ವಾರ್ಡ್‌ನ ಕೃಷ್ಣಪ್ಪ ಗಾರ್ಡನ್‌ನ ಸ್ಲಂನಲ್ಲಿರುವ 86 ಕುಟುಂಬಗಳಿಗೆ ಯಾವುದೇ ಪರ್ಯಾಯ ಪುನರ್ವಸತಿ ವ್ಯವಸ್ಥೇ ಮಾಡದೆ ಏಕಾಏಕಿ ಒಕ್ಕಲೆಬ್ಬಿಸಿದ್ದನ್ನು ಖಂಡಿಸಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸ್ಲಂ ಬೋರ್ಡ್‌ಗೆ ಮುತ್ತಿಗೆ ಹಾಕಲು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನಿರ್ಧರಿಸಿದೆ.

ಹಲವಾರು ವರ್ಷಗಳಿಂದ ಕೃಷ್ಣಪ್ಪ ಗಾರ್ಡನ್‌ನಲ್ಲಿ ವಾಸವಿದ್ದ 86 ಕುಟುಂಬಗಳ 300 ಕ್ಕೂ ಹೆಚ್ಚು ಜನರನ್ನು ಒಕ್ಕಲೆಬ್ಬಿಸಲಾಗಿದೆ. ತಮ್ಮ ಮನೆಗಳನ್ನು ಉಳಿಸಿಕೊಳ್ಳಲು ಮುಂದಾದ ಬಡಜನರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ, ಕಾಲಿನಿಂದ ಒದ್ದು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಜನರಿಗಾಗಿಯೇ ಮಾರತ್ತಹಳ್ಳಿಯಲ್ಲಿ 313 ಮನೆಗಳನ್ನು ಸ್ಲಂ ಬೋರ್ಡ್ ನಿರ್ಮಿಸಿದೆ. ಅವುಗಳನ್ನು 303 ಮನಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಆದರೆ ಅಧಿಕಾರಿಗಳು ಲಂಚ ಕೊಟ್ಟವರಿಗೆ, ಹಣ ಕೊಟ್ಟವರಿಗೆ ಎರೆಡೆರಡು ಮನೆ ನೀಡಿದ್ದಾರೆ. ಈ 86 ಕುಟುಂಬಗಳ ಬಡಜನರನ್ನು ನಿರ್ಲಕ್ಷಿಸಲಾಗಿದೆ. ಅವರಿಗೆ ಪುನರ್ವಸತಿ ಕಲ್ಪಿಸದೇ ಇಂದು ಏಕಾಏಕಿ ಬೀದಿಪಾಲು ಮಾಡಿರುವುದನ್ನು ಖಂಡಿಸಿ ಹೋರಾಟ ನಡೆಸುತ್ತೇವೆ ಎಂದು ಕರ್ನಾಟಕ ಜನಾಂದೋಲನ ಸಂಘಟನೆಯ ಅಧ್ಯಕ್ಷರಾದ ಕೆ.ಮರಿಯಪ್ಪನವರು ತಿಳಿಸಿದ್ದಾರೆ.

ನಾನುಗೌರಿ.ಕಾಂ ನೊಂದಿಗೆ ಮಾತನಾಡಿದ ಅವರು, “ನಾವು ಹಲವು ವರ್ಷಗಳಿಂದ ಈ ಜನರಿಗೆ ಮನೆ ನೀಡಬೇಕೆಂದು ಹೋರಾಟ ನಡೆಸುತ್ತಿದ್ದೇವೆ. ಕನಿಷ್ಠ ತಾತ್ಕಾಲಿಕವಾಗಿ 2 ಎಕರೆ ಜಮೀನು ಕೊಟ್ಟರೆ ಹೇಗೆ ಗುಡಿಸಲು ಹಾಕಿಕೊಂಡು ಜೀವನ ಮಾಡುತ್ತಾರೆ ಎಂದು ಒತ್ತಾಯಿಸಿದ್ದೇವೆ. ಈ ಜನರು ಇದೇ ಸ್ಥಳದ ವಿಳಾಸ ನೀಡಿ ಮತದಾರರು ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ರೇ‍ಷನ್ ಕಾರ್ಡ್ ಪಡೆದಿದ್ದಾರೆ. ಈಗ ಅವರನ್ನು ಒಕ್ಕಲೆಬ್ಬಿಸಿರುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಕ್ಕಲೆಬ್ಬಿಸಿದ್ದನ್ನು ವಿರೋಧಿಸಿ ಸಂತ್ರಸ್ತರು ಕೆ.ಆರ್ ಪುರಂ ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ತಹಶೀಲ್ದಾರ್ ಅಜಿತ್ ರಾಯ್ ಮಾತನಾಡಿ “ಇದು ಸ್ಲಂ ಬೋರ್ಡ್ ಕಡೆಯಿಂದ ನಡೆದಿರುವ ಕೃತ್ಯ. ನಾನು ಇದಕ್ಕೆ ಹೊಣೆಯಲ್ಲ. ಇವತ್ತು ಈ ಜನರಿಗೆ ಉಳಿಯಲು ಮತ್ತು ಊಟದ ವ್ಯವಸ್ಥೆ ಮಾಡುತ್ತೇನೆ” ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ. ಬಡಜನರು ನಾಳೆ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಸಲು ನಿರ್ಧರಿಸಿದ್ದಾರೆ.


ಇದನ್ನೂ ಓದಿ: ಬೀದಿಗೆ ಬಿದ್ದ ಬಡವರ ಬದುಕು: ಪುನರ್ವಸತಿಯಿಲ್ಲದೆ 86 ಕುಟುಂಬಗಳ ಒಕ್ಕಲೆಬ್ಬಿಸಿದ ಅಧಿಕಾರಿಗಳು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here