ಒಂದು ಕಡೆ ಇಬ್ಬರು ಕಾಂಗ್ರೆಸ್ ಶಾಸಕರ ರಾಜಿನಾಮೆ ಹಿನ್ನೆಲೆಯಲ್ಲಿ ಮತ್ತೆ ಆಪರೇಷನ್ ಕಮಲ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರ ನಡುವೆ ಟ್ವೀಟ್ ಸಮರ ಕೂಡ ನಡೆಯುತ್ತಿದೆ.
ಮೊದಲಿಗೆ ಇಬ್ಬರು ಶಾಸಕರು ರಾಜಿನಾಮೆ ಪ್ರಹಸನ ಶುರುವಾದಗ ಸಿದ್ದರಾಮಯ್ಯನವರು “ ಇತ್ತೀಚಿನ ರಾಜಕೀಯ ನಾಟಕಗಳು ಬಿಜೆಪಿಯವರ ಕೊಳಕು ರಾಜಕೀಯವನ್ನು ತೋರಿಸುತ್ತದೆ. ಅಸೆಂಬ್ಲಿಯಲ್ಲಿ ಬಿಜೆಪಿಗೆ ಜನತೆ ಬಹುಮತ ನೀಡದಿದ್ದರೂ ಸಹ ಅವರು ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಹವಣಿಸುತ್ತಿದ್ದಾರೆ. ನರೇಂದ್ರ ಮೋದಿಯವರಿಗೆ ಸ್ವಲ್ಪವಾದರೂ ಆತ್ಮಗೌರವವಿದ್ದಲ್ಲಿ ಅವರ ಪಕ್ಷದವರು ನಡೆಸುತ್ತಿರುವ ಅಸಾಂವಿಧಾನಿಕ ಕೃತ್ಯವನ್ನು ತಡೆಯಬೇಕು” ಎಂದು ಖಾರವಾಗಿ ಟ್ವೀಟ್ ಮಾಡಿದ್ದರು.
My understanding is 113 > 105 & 113 is the required number for anyone to form the government in a fully elected Karnataka assembly.
Take 'Eki Minute' out of your petty politics & learn 'Mathematics of Democracy'. https://t.co/E2phoGBvcV
— Siddaramaiah (@siddaramaiah) July 2, 2019
ಇದಕ್ಕೆ ಬಿಜೆಪಿಯ ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಚೆಯವರು ಮರು ಉತ್ತರ ನೀಡಿದ್ದರು. ಅವರು “ಪ್ರೀತಿಯ ಸಿದ್ದರಾಮಯ್ಯನವರೆ, 105>78- (ಬಿಜೆಪಿಯ 105ಕ್ಕಿಂತ ಕಾಂಗ್ರೆಸ್‍ನ 78 ಕಡಿಮೆ). ಆದರೂ ಕಾಂಗ್ರೆಸ್ ಜೆಡಿಎಸ್ ಸೇರಿ ಜನಾಭಿಪ್ರಾಯವನ್ನು ಕಡೆಗಣಿಸಿ ಅನೈತಿಕ ಸರ್ಕಾರ ರಚಿಸಿದ್ದೀರಿ. ಜನ ಬಿಜೆಪಿಗೆ ಬಹುಮತ ಕೊಟ್ಟಿದ್ದಾರೆ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿನ ಸೋಲಿನಿಂದ ನಿಮ್ಮ ಕಾಮನ್ ಸೆನ್ಸ್ ಅನ್ನು ಕಳೆದುಕೊಂಡಿದ್ದೀರಾ” ಎಂದು ಖಾರವಾಗಿ ಟ್ವೀಟ್ ಮಾಡಿದ್ದರು.
ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯನವರು “ನನ್ನ ತಿಳುವಳಿಕೆ 113>105 (ಬಹುಮತಕ್ಕಿಂತ ಬಿಜೆಪಿ ಕಡಿಮೆ ಇದೆ) ಮತ್ತು 113 ಅನ್ನುವುದು ಕರ್ನಾಟಕ ವಿಧಾನಸಭೆಯಲ್ಲಿ ಯಾರಾದರೂ ಸರ್ಕಾರ ರಚಿಸಲು ಬೇಕಿರುವ ಅತ್ಯಮೂಲ್ಯ ಬಹುಮತವಾಗಿದೆ.
ಹಾಗಾಗಿ “ಏಕೀ ಮಿನಿಟ್” ತೆಗೆದುಕೊಂಡು ರಾಜಕೀಯದ ನಿಮ್ಮ ಸಣ್ಣತನವನ್ನು ಬಿಟ್ಟು ಪ್ರಜಾಪ್ರಭುತ್ವದ ಗಣಿತ ಶಾಸ್ತ್ರವನ್ನು ಕಲಿಯಿರಿ ಎಂದು ಹೇಳಿದ್ದಾರೆ. ಅವರ ಟ್ವೀಟ್‍ನಲ್ಲಿ ಇತ್ತೀಚೆಗೆ ಐಎಂಎ ಹಗರಣ ಕುರಿತು ಸಂಸತ್ತಿನಲ್ಲಿ ಹಿಂದಿಯಲ್ಲಿ ಭಾಷಣ ಮಾಡಲು ಹೋಗಿ ಮುಜುಗರಕ್ಕೊಳಗಾಗಿದ್ದ ಶೋಭಾ ಕರಂದ್ಲಾಚೆಯವರ ಏಕೀ ಮಿನಿಟ್ ಉಲ್ಲೇಖಿಸಿ ವ್ಯಂಗ್ಯವಾಡಿದ್ದಾರೆ.
ಇದಕ್ಕೆ ಕೋಪಗೊಂಡ ಶೋಭಾ ಕರಂದ್ಲಾಚೆಯವರು ಬಿಜೆಪಿಯ ವಿರುದ್ಧದ ನಿಮ್ಮ ನೀಚ ರಾಜಕಾರನವನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದರು.
ಮುಂದುವರಿದು ನಿಮ್ಮ 105 ಸಂಖ್ಯೆಯೊಂದಿಗೆ ಸರ್ಕಾರ ರಚಿಸಬಹುದೆಂಬ ವಿಶ್ವಾಸ ನಿಮಗಿದ್ದರೆ ರಾಜ್ಯಪಾಲರಿಗೆ ನಿಮ್ಮ ಬಹುಮತವನ್ನು ಸಾಬೀತು ಪಡಿಸಿ ಸರ್ಕಾರ ರಚಿಸಲು ಹಕ್ಕು ಮಂಡಿಸಿ. ಒಂದು ವೇಳೆ ರಾಜ್ಯಪಾಲರು ನಿಮ್ಮ ಹಕ್ಕನ್ನು ಒಪ್ಪಿಕೊಂಡಲ್ಲಿ ನಾವು ಸಂತೋಷದಿಂದ ಸರ್ಕಾರದಿಂದ ನಿರ್ಗಮಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.


