ಬಿಜೆಪಿ: ನುಡಿದಂತೆ ನಡೆಯಿರಿ…
ಕಾಂಗ್ರೆಸ್: ಆಪರೇಷನ್ ಕಮಲವೆಂಬ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನಿಮ್ಮ ಕುತಂತ್ರ ಬಯಲಾಗುತ್ತಿದೆ.. ಸ್ವಲ್ಪ ತಡೆಯಿರಿ
ಬಿಜೆಪಿ: ಟ್ವೀಟ್ ಮಾಡುವ ಬದಲು ನಿಮ್ಮ ಮುಖ್ಯಮಂತ್ರಿಗಳಿಗೆ ಹಾಗೂ ನಿಮ್ಮ ಶಾಸಕಾಂಗ ಪಕ್ಷದ ನಾಯಕರಿಗೆ ವಿಶ್ವಾಸ ಮತ ಯಾಚಿಸಲು ಹೇಳಿ, ವಚನಭ್ರಷ್ಟರಾಗದಿರಿ.
ಬಿಜೆಪಿ: ಒಂದು ವರ್ಷದಿಂದ ನಿಮ್ಮ ದುರಾಡಳಿತವನ್ನು ತಡೆದುಕೊಂಡು ಸಾಕಾಗಿದೆ ಈಗ ನಿಮ್ಮ ಡ್ರಾಮಾ ಸಾಕು ನಡಿಯಿರಿ.
ಇದಿಷ್ಟು ಸನದದಲ್ಲಿ ನಡೆದಿದ್ದು ಅಲ್ಲ. ಬದಲಿಗೆ ಟ್ಚಟ್ಟರ್ ನಲ್ಲಿ ನಡೆದಿದ್ದು. ಇಂದು ಸದನದಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದ್ದರೆ ಸ್ಪೀಕರ್ ರವರು ಸದನಾದ ಕಲಾಪವನ್ನು ಮುಂದೂಡಿದ ಸಂದರ್ಭದಲ್ಲಿ ಸದನದ ಹೊರಗೆ ಟ್ವಿಟ್ಟರ್ ನಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ತೀವ್ರ ಜಟಾಪಟಿ ನಡೆದಿದೆ.
ಆಪರೇಷನ್ ಕಮಲವೆಂಬ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನಿಮ್ಮ ಕುತಂತ್ರ ಬಯಲಾಗುತ್ತಿದೆ..
ಸ್ವಲ್ಪ ತಡೆಯಿರಿ..! https://t.co/hbbsx0E5Ql
— Karnataka Congress (@INCKarnataka) July 22, 2019
ಸದನದಲ್ಲಿ ಬಿಜೆಪಿಗರಿಗೆ ಮಾತಾಡಲು ಬಾಯಿಯೇ ಬರುತ್ತಿಲ್ಲ. ಕಾಂಗ್ರೆಸ್- ಜೆಡಿಎಸ್ ನವರು ಎಷ್ಟೇ ಟೀಕೆ ಮಾಡಿದರೂ, ಚೇಡಿಸಿದರೂ ಬಿಜೆಪಿ ಪ್ರತ್ಯುತ್ತರ ಕೊಡುವಂತಿಲ್ಲ. ಕಳೆದ ಮೂರು ದಿನಗಳಿಂದ ಬಿಜೆಪಿ ಬಾಯಿ ಬಿಟ್ಟರೆ ತಮಗೆ ಕೆಟ್ಟದ್ದು ಅಂತ ಕುಳಿತಿದ್ದಾರೆ. ಇದರಿಂದ ತಮ್ಮ ಆಕ್ರೋಶ ವ್ಯಕ್ತಪಡಿಸಲು ಉಪಾಯ ಕಂಡುಕೊಂಡಿದ್ದಾರೆ. ಅದೇ ಟ್ವಿಟ್ಟರ್.
ಹೌದು ಟ್ವಿಟ್ಟರ್ ನಲ್ಲಿ ಮೊದಲು ಬಿಜೆಪಿಯೇ ಕಾಂಗ್ರೆಸ್ ಜೆಡಿಎಸ್ ಗೆ ಕೆಣಕಿತು. ನುಡಿದಂತೆ ನಡೆಯಿರಿ.. ಎಂದಷ್ಟೇ ಟ್ವೀಟ್ ಮಾಡಿತು. ಇದಕ್ಕೆ ಮೂರೇ ನಿಮಿಷದಲ್ಲಿ ಕಾಂಗ್ರೆಸ್ ವತಿಯಿಂದ ಆಪರೇಷನ್ ಕಮಲವೆಂಬ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನಿಮ್ಮ ಕುತಂತ್ರ ಬಯಲಾಗುತ್ತಿದೆ.. ಸ್ವಲ್ಪ ತಡೆಯಿರಿ ಎಂಬ ಪ್ರತಿಕ್ರಿಯೆ ಬಂತು.
ಒಟ್ಟಿನಲ್ಲಿ ಈ ಪಕ್ಷಗಳ ನಡುವಿನ ವೈಮನಸ್ಸು ಎಲ್ಲಾ ಕಡೆ ಪ್ರತಿಬಿಂಬಿಸುತ್ತಿವೆ.


