Homeಮುಖಪುಟರಾಷ್ಟ್ರೀಯ ಶಿಕ್ಷಣ ನೀತಿ ಸರಿಯಿಲ್ಲ: ಚಿತ್ರನಟ ಸೂರ್ಯನ ಹೇಳಿಕೆ ಬೆಂಬಲಿಸಿದ ರಜಿನಿಕಾಂತ್, ಕಮಲ್ ಹಾಸನ್..

ರಾಷ್ಟ್ರೀಯ ಶಿಕ್ಷಣ ನೀತಿ ಸರಿಯಿಲ್ಲ: ಚಿತ್ರನಟ ಸೂರ್ಯನ ಹೇಳಿಕೆ ಬೆಂಬಲಿಸಿದ ರಜಿನಿಕಾಂತ್, ಕಮಲ್ ಹಾಸನ್..

- Advertisement -
- Advertisement -

ಮಕ್ಕಳ್ ನೀದಿ ಮಯ್ಯುಂ (ಎಂಎನ್‌ಎಂ) ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ನಂತರ, ಸೂಪರ್ ಸ್ಟಾರ್ ನಟ ಮತ್ತು ರಾಜಕಾರಣಿ ರಜನಿಕಾಂತ್ ಅವರು, ರಾಷ್ಟ್ರೀಯ ಶಿಕ್ಷಣ ನೀತಿ 2019 ರ ಕರಡು ವಿರುದ್ಧದ ನಿಲುವು ತಾಳಿದ್ದ ತಮಿಳು ಚಿತ್ರ ತಾರೆ ಸೂರ್ಯ ಶಿವಕುಮಾರ್ ಅವರನ್ನು ಶ್ಲಾಘಿಸಿದ್ದಾರೆ.

ಕಳೆದ ವಾರ, ಸೂರ್ಯ ಸ್ಥಾಪಿಸಿದ ಅಗರಂ ಫೌಂಡೇಶನ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಜಿನಿಕಾಂತ್ “ಪ್ರವೇಶ ಪರೀಕ್ಷೆಗಳಿಗೆ ಸಂಬಂಧಿಸಿದಂತೆ, ಶಿಕ್ಷಣದ ಗುಣಮಟ್ಟ, 10 ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಅಂಗನವಾಡಿ ಶಾಲೆಗಳನ್ನು ಮುಚ್ಚುವುದು ಮತ್ತು ಮೂರು ಭಾಷಾ ನೀತಿ ಸೇರಿದಂತೆ ಹಲವು ಅಂಶಗಳಲ್ಲಿ ಈ ಶಿಕ್ಷಣ ನೀತಿಯ ದೋಷಗಳನ್ನು ಅವರು ಎತ್ತಿ ತೋರಿಸಿದ್ದಾರೆ. ಸರ್ಕಾರವು ಪ್ರಕಟಿಸಿರುವ ಇತ್ತೀಚಿನ ಕರಡು ನೀತಿ ಕುರಿತು ಚರ್ಚಿಸಲು, ಅದರ ಸರಿ ತಪ್ಪುಗಳನ್ನು ಗುರುತಿಸಲು  ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಮುಂದೆ ಬರಬೇಕೆಂದು ರಜಿನಿಕಾಂತ್ ಒತ್ತಾಯಿಸಿದ್ದಾರೆ. ಅವರ ಭಾಷಣವನ್ನು ಹಲವು ರಾಜಕಾರಣಿಗಳು ಬೆಂಬಲಿಸಿದರೆ ಮತ್ತೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ.

‘ರಜಿನಿ ಹೇಳಿದ್ದರೆ ಮೋದಿ ಕೇಳುತ್ತಿದ್ದರು’

ಮತ್ತು ಈಗ ರಜನಿಕಾಂತ್ ಅವರನ್ನೂ ತೆಗೆದುಕೊಂಡಿದ್ದಾರೆ. ಆಡಿಯೋ ಲಾಂಚ್‌ನಲ್ಲಿ ಅವರು, “ಸೂರ್ಯನ ಮತ್ತೊಂದು ಮುಖವು ಕೆಲವು ದಿನಗಳ ಹಿಂದೆ ಬಹಿರಂಗವಾಯಿತು. ಶಿಕ್ಷಣದ ಕುರಿತು ಅವರು ನೀಡಿದ ಭಾಷಣ ಮತ್ತು ಅವರು ಕೇಳಿದ ಪ್ರಶ್ನೆಗಳು, ಅವುಗಳಲ್ಲಿ ಹಲವಾರು ಸಂಗತಿಗಳನ್ನು ನಾನು ಒಪ್ಪುತ್ತೇನೆ. ಇದು ಒಂದು ದೊಡ್ಡ ಚರ್ಚೆಯಾಗಿ ಮಾರ್ಪಟ್ಟಿತು ಮತ್ತು ಜಾಗೃತಿ ಮೂಡಿಸಿತು. ಸೂರ್ಯ ಸುಮ್ಮನೆ ಹೇಳಿಕೆ ನೀಡಿಲ್ಲ. ಅವರು ತಮ್ಮ ಅಗರಂ ಫೌಂಡೇಶನ್‌ಗೆ ಸಂಬಂಧಿಸಿದ ವಿದ್ಯಾರ್ಥಿಗಳ ತೊಂದರೆಗಳ ಬಗ್ಗೆ ಮಾತನಾಡಿದ ಅವರು ಅದನ್ನು ತಮ್ಮ ಕಣ್ಣಾರೆ ನೋಡಿದ್ದಾರೆ. ಇದೇ ಮಾತನ್ನು ರಜಿನಿ ಹೇಳಿದ್ದರೆ ಇಷ್ಟೊತ್ತಿಗೆ ಮೋದಿಗೆ ತಲುಪುತ್ತಿತ್ತು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅದು ಈಗಾಗಲೇ ಮೋದಿ ತಲುಪಿಯಾಗಿದೆ ಎಂದು ರಜಿನಿಕಾಂತ್ ಹೇಳಿದ್ದಾರೆ.

ಅದೇ ಸಂದರ್ಭದಲ್ಲಿ ಅವರು, ಮೊದಲು ತಮ್ಮ ಚಿತ್ರಗಳತ್ತ ಗಮನ ಹರಿಸಬೇಕಾಗಿ ಸೂರ್ಯನಿಗೆ ಸೂಕ್ಷ್ಮ ಎಚ್ಚರಿಕೆ ಸಹ ನೀಡಿದ್ದಾರೆ.

“ಮಕ್ಕಳಿಗೆ ಸಾಕಷ್ಟು ಮಹತ್ವಾಕಾಂಕ್ಷೆಗಳು ಇರುತ್ತವೆ ಆದರೆ ಪೋಷಕರು ನೀವು ಮೊದಲು ನಿಮ್ಮ ಪದವಿಯನ್ನು ಮುಗಿಸಬೇಕು ಎಂದು ಹೇಳುತ್ತಾರೆ. ಅದೇ ರೀತಿ ಸೂರ್ಯ ಚಿತ್ರರಂಗದಲ್ಲಿ ಪದವಿ ಮುಗಿಸಬೇಕು, ಅವನು ಸಾಕಷ್ಟು ಚಲನಚಿತ್ರಗಳಲ್ಲಿ ನಟಿಸಬೇಕು ಮತ್ತು ಹಲವಾರು ಹಿಟ್‌ಗಳನ್ನು ನೀಡಬೇಕು. ಅವನಿಗೆ ಇನ್ನೂ ವಯಸ್ಸು ಇದೆ ಮತ್ತು ಅವರು ಉತ್ತಮ ಆರೋಗ್ಯದಿಂದ ದೀರ್ಘಕಾಲ ಬದುಕಬೇಕು. ಚಲನಚಿತ್ರ ಅಭಿಮಾನಿಗಳಿಗೆ ಮಾತ್ರವಲ್ಲ, ಜನರಿಗೆ ಸಹ ನಿಮ್ಮ ಕೊಡುಗೆ ಬೇಕು “ಎಂದು ಅವರು 43 ವರ್ಷದ ನಟ ಸೂರ್ಯನಿಗೆ ತಿಳಿಸಿದರು.

ಸೂರ್ಯ ಅವರ ಅಭಿಪ್ರಾಯಗಳನ್ನು ಬೆಂಬಲಿಸಿ ಮತ್ತು ಶಿಕ್ಷಣ ನೀತಿ ಕುರಿತು ನಿಮ್ಮ ಅಭಿಪ್ರಾಯ ದಾಖಲಿಸಿ ಎಂದು ಟ್ವಿಟ್ಟರ್ ನಲ್ಲಿ ಕಮಲ್ ಹಾಸನ್ ಕರೆ ನೀಡಿದ್ದರು. ತದನಂತರ ರಜಿನಿಕಾಂತ್ ರವರಿಂದ ಈ ಪ್ರತಿಕ್ರಿಯೆ ಬಂದಿರುವುದು ಕುತೂಹಲಕಾರಿಯಾಗಿದೆ.

“ಸೂರ್ಯ ಎತ್ತುವ ಅನೇಕ ಅಂಶಗಳನ್ನು ನಾನು ಒಪ್ಪುತ್ತೇನೆ ಮತ್ತು ಅವರಿಗೆ ನನ್ನ ಬೆಂಬಲವಿದೆ. ರಾಜ್ಯದ ಕುರಿತು ಕೇಂದ್ರದ ನಿರಂಕುಶಾಧಿಕಾರಿ ಧೋರಣೆಯನ್ನು ನಾನು ಖಂಡಿಸುತ್ತೇನೆ. ಶಿಕ್ಷಣದ ಬಗ್ಗೆ ಮಾತನಾಡಲು ಸೂರ್ಯ ಅವರಿಗೆ ಎಲ್ಲ ಹಕ್ಕಿದೆ, ಏಕೆಂದರೆ ಬಡವರ ಪರವಾಗಿ ಅವರ ಮತ್ತು ಅವರ ಕುಟುಂಬವು ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದೆ”ಎಂದು ಕಮಲ್ ಹಾಸನ್ ಹೇಳಿದ್ದರು.

ಸೂರ್ಯರವರು ಹೇಳಿದ್ದೇನು?

ಕಳೆದ ಹತ್ತು ವರ್ಷಗಳಿಂದ ಅಗರಂ ಸಂಸ್ಥೆ ನಡೆಸುತ್ತಿರುವ ಸೂರ್ಯರವರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನಾಧರಿಸಿದ ತಮ್ಮ ಭಾಷಣದಲ್ಲಿ  ಸರ್ಕಾರಿ ಶಾಲೆಗಳಲ್ಲಿ ಸುಮಾರು 30% ವಿದ್ಯಾರ್ಥಿಗಳು ಶಿಕ್ಷಕರಿಲ್ಲದೆ ಅಧ್ಯಯನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರಿಗೆ “ನೀಟ್ ಬರೆಯಿರಿ ಎಂದು ಹೇಗೆ ಕೇಳುತ್ತೀರಿ?” ಎಂದಿದ್ದಾರೆ. ನೀಟ್ ರಾಜ್ಯದಲ್ಲಿ ಸಾಮಾಜಿಕ ಅಸಮತೋಲನವನ್ನು ಉಂಟುಮಾಡಿದೆ ಎಂದ ಸೂರ್ಯ, ಈ ಪ್ರವೃತ್ತಿಯು ಶಾಲೆಗಳನ್ನು “ಕೋಚಿಂಗ್ ಸೆಂಟರ್” ಗಳನ್ನಾಗಿ ಮಾಡಲು ಕಾರಣವಾಗುತ್ತದೆ ಎಂದು ಒತ್ತಿ ಹೇಳಿದರು. “ಯಾವುದೇ ಬೋಧನೆ ಇರುವುದಿಲ್ಲ ಆದರೆ ತರಬೇತಿ ಮಾತ್ರ ಆಗಿದೆ. ಈಗ ದೇಶದ ಕೋಚಿಂಗ್ ಕೇಂದ್ರಗಳು ವಾರ್ಷಿಕವಾಗಿ 5000 ಕೋಟಿ ರೂಪಾಯಿಗಳನ್ನು ಗಳಿಸುತ್ತವೆ, ”ಎಂದು ಅವರು ಹೇಳಿದರು.

1:10 ಕ್ಕಿಂತ ಕಡಿಮೆ ಶಿಕ್ಷಕರ ವಿದ್ಯಾರ್ಥಿ ಅನುಪಾತ ಹೊಂದಿರುವ ಅಂಗನವಾಡಿ ಶಾಲೆಗಳನ್ನು ಮುಚ್ಚಲಾಗುವುದು ಎಂದು ಕಸ್ತೂರಿ ರಂಗನ್ ಸಮಿತಿ ಕರಡಿನಲ್ಲಿ ಸೂಚಿಸಿದೆ ಎಂದು ಅವರು ಆರೋಪಿಸಿದ್ದಾರೆ. ಇದರಿಂದ ದೂರದ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ಏನು ಮಾಡುವುದು? ಬುಡಕಟ್ಟು ವಿದ್ಯಾರ್ಥಿಗಳು ಎಲ್ಲಿಗೆ ಹೋಗುತ್ತಾರೆ? ಅವರ ಪ್ರಾಥಮಿಕ ಶಿಕ್ಷಣಕ್ಕೆ ಏನಾಗುತ್ತದೆ? ಭಾರತದ ಆತ್ಮವು ಅದರ ಹಳ್ಳಿಗಳಲ್ಲಿದೆ ಎಂದು ಅವರು ಹೇಳುತ್ತಾರೆ. ಆದರೆ ನಾವು ದೇಶಾದ್ಯಂತ 60% ವಿದ್ಯಾರ್ಥಿಗಳು ಕಲಿಯುತ್ತಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಂತರ ಅವರು ತ್ರಿ ಭಾಷಾ ನೀತಿಯನ್ನು ಟೀಕಿಸಿದ ಅವರು ಈ ಹಿಂದಿ ಹೇರಿಕೆಯಿಂದ “ವಿದ್ಯಾರ್ಥಿಗಳು ಶಾಲೆಗಳಿಗೆ ಹೇಗೆ ಹೋಗುತ್ತಾರೆ? ಮೊದಲ ತಲೆಮಾರಿನ ವಿದ್ಯಾರ್ಥಿಗಳಿಗೆ ಏನಾಗಬಹುದು? ಒಂದು ಭಾಷೆಯನ್ನು ಅವರ ಮೇಲೆ ಹೇರಿದರೆ ಅವರು ಅದನ್ನು ಹೇಗೆ ನಿಭಾಯಿಸುತ್ತಾರೆ? ನಾವೆಲ್ಲರೂ ಅದರ ಬಗ್ಗೆ ಸುಮ್ಮನಿದ್ದರೆ, ಅದು ಮುಂದೆ ಖಂಡಿತವಾಗಿಯೂ ನಮ್ಮ ಮೇಲೆ ಹೇರುತ್ತದೆ.” ಎಂದಿದ್ದಾರೆ.

ಕೃಪೆ: ದಿ ನ್ಯೂಸ್ ಮಿನಿಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...