Homeಅಂತರಾಷ್ಟ್ರೀಯಉಕ್ರೇನಿನ ಜನತೆ ಭ್ರಷ್ಟ ರಾಜಕಾರಣಿಗಳನ್ನು ಕಸದ ಬುಟ್ಟಿಗೆ ಎಸೆದಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ

ಉಕ್ರೇನಿನ ಜನತೆ ಭ್ರಷ್ಟ ರಾಜಕಾರಣಿಗಳನ್ನು ಕಸದ ಬುಟ್ಟಿಗೆ ಎಸೆದಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ

- Advertisement -
- Advertisement -

2014ರಲ್ಲಿ ಉಕ್ರೇನ್ ನಲ್ಲಿ ಅಲ್ಲಿನ ಜನತೆ ತಮ್ಮನ್ನು ಆಳುವ ರಾಜಕಾರಣಿಗಳ ವಿರುದ್ಧ ಸಿಟ್ಟಿಗೆದ್ದಿದ್ದರು. ಅತಿಯಾದ ಭ್ರಷ್ಟಾಚಾರ ಅದಕ್ಕೆ ಕಾರಣವಾಗಿತ್ತು. ಹಾಗಾಗಿ ಪಾರ್ಲಿಮೆಂಟ್ ಸುತ್ತಾ ಜಮಾಯಿಸುತ್ತಿದ್ದ ಜನರು ಭ್ರಷ್ಟ ರಾಜಕಾರಣಿಗಳು ಕಂಡ ಕೂಡಲೇ ಎಲ್ಲರೂ ಅವರನ್ನು ಬಲವಂತವಾಗಿ ಹೊತ್ತುಕೊಂಡು ಹೋಗಿ ಕಸದ ಬುಟ್ಟಿಗೆ ಎಸೆದುಬಿಡುತ್ತಿದ್ದರು.

“Trash bucket challenge” ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಕರೆ ನೀಡಿದ್ದ ಪ್ರತಿಭಟನಾಕಾರರು ಹೀಗೆ ಹತ್ತಾರು ರಾಜಕಾರಣಿಗಳನ್ನು ಕಸದ ಬುಟ್ಟಿಗೆ ಎಸೆದು ಅದನ್ನು ವಿಡಿಯೋ ಮಾಡಿ ಹರಿಯಬಿಟ್ಟಿದ್ದಾರೆ. ವಿಡಿಯೋ ನೋಡಿ

ಈ ರೀತಿ ಮಾಡುವುದು ಕಾನೂನಿನ ದೃಷ್ಟಿಯಲ್ಲಿ ತಪ್ಪಿದ್ದರೂ ಪ್ರತಿಭಟನಾಕಾರರಿಗೆ ಇದು ತಪ್ಪೆನಿಸಿರಲಿಲ್ಲ. ಈಗಲೂ ಭಾರತದಲ್ಲಿಯೂ ಭ್ರಷ್ಟ ರಾಜಕಾರಣಿಗಳ ಸಂಖ್ಯೆ ದಿನೇ ದಿನೇ ಏರುತ್ತಿದೆ. ರಾಜಕಾರಣಿಗಲು ತಾವು ನೇರವಾಗಿ ಭ್ರಷ್ಟಾಚಾರ ಮಾಡದಿದ್ದರೂ ತಮಗೆ ಬೇಕಾದ ಸ್ನೇಹಿತರಿಗೆ, ಉದ್ಯಮಪತಿಗಳಿಗೆ ಕಾನೂನು ಮೀರಿ ಕಳ್ಳಮಾರ್ಗದಿಂದ ಅನುಕೂಲ ಮಾಡಿಕೊಡುವ ಮೂಲಕ ಜನರ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಕುದುರೆ ವ್ಯಾಪಾರಕ್ಕೆ ಶಾಸಕರು ಹಾಡು ಹಗಲೇ ಸಿದ್ದರಾಗಿದ್ದಾರೆ.

ಈ ಭ್ರಷ್ಟಾಚಾರವನ್ನು ನಿಯಂತ್ರಿಸಲು ಉಕ್ರೇನಿನ ಜನತೆ ನಡೆಸಿದ ಭ್ರಷ್ಟ ರಾಜಕಾರಣಿಗಳನ್ನು ಕಸದ ಬುಟ್ಟಿಗೆ ಎಸೆವ ಕೆಲಸ ಭಾರತ, ಕರ್ನಾಟಕದಲ್ಲಿಯೂ ಆರಂಭವಾಗಬೇಕೆನಿಸುತ್ತಿದೆ. ಆಗಲಾದರೂ ಈ ಭ್ರಷ್ಟ ರಾಜಕಾರಣಿಗಳು ಬುದ್ದಿ ಕಲಿಯುತ್ತಾರ??

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...