Homeಅಂತರಾಷ್ಟ್ರೀಯ‘ಬಾಹ್ಯಾಕಾಶಕ್ಕೆ ಪ್ರವಾಸ ಹೊರಡುವ ಸಮಯ!’- ಇತಿಹಾಸ ನಿರ್ಮಿಸಲಿರುವ ‘ವರ್ಜಿನ್‌ ಗ್ಯಾಲಾಕ್ಟಿಕ್‌’

‘ಬಾಹ್ಯಾಕಾಶಕ್ಕೆ ಪ್ರವಾಸ ಹೊರಡುವ ಸಮಯ!’- ಇತಿಹಾಸ ನಿರ್ಮಿಸಲಿರುವ ‘ವರ್ಜಿನ್‌ ಗ್ಯಾಲಾಕ್ಟಿಕ್‌’

ತಂಡದಲ್ಲಿ ಭಾರತೀಯ ಮೂಲದ ಸಿರಿಶಾ ಬಾಂಡ್ಲಾ ಕೂಡಾ ಇರಲಿದ್ದಾರೆ.

- Advertisement -
- Advertisement -

ಬ್ರಿಟಿಷ್ ಕೋಟ್ಯಾಧಿಪತಿ ರಿಚರ್ಡ್ ಬ್ರಾನ್ಸನ್ ಅವರ ‘ವರ್ಜಿನ್‌ ಗ್ಯಾಲಾಕ್ಟಿಕ್‌’ ನ ಮೊದಲ ಬಾಹ್ಯಾಕಾಶ ತಂಡ ನಭಕ್ಕೆ ಹಾರಲು ತಯಾರಾಗಿದೆ. ಈ ಹಿಂದೆ ನಿಗದಿ ಪಡಿಸಿದಂತೆ ಭಾನುವಾರ ಭಾರತೀಯ ಕಾಲಮಾನ ಸಂಜೆ 6:30 ಕ್ಕೆ ಹೊರಡಬೇಕಿತ್ತಾದರೂ ಹವಾಮಾನ ವೈಪರೀತ್ಯದಿಂದಾಗಿ ರಾತ್ರಿ 8 ಗಂಟೆಗೆ ಹೊರಡಲಿದೆ. ವಿಶೇಷವೇನೆಂದರೆ ಈ ಪ್ರಯಾಣದ ತಂಡದಲ್ಲಿ ಭಾರತೀಯ ಮೂಲದ ಸಿರಿಶಾ ಬಾಂಡ್ಲಾ ಕೂಡಾ ಇದ್ದಾರೆ.

ಬಾಹ್ಯಾಕಾಶಕ್ಕೆ ಹೊರಟಿರುವ ‘ವರ್ಜಿನ್‌ ಗ್ಯಾಲಾಕ್ಟಿಕ್‌’ ಸಂಸ್ಥೆಯ ಆರು ಉದ್ಯೋಗಿಗಳಲ್ಲಿ ಒಬ್ಬರಾದ 71 ವರ್ಷದ ಬ್ರಾನ್ಸನ್, ಭವಿಷ್ಯದಲ್ಲಿ ‘ಬಾಹ್ಯಾಕಾಶ ಪ್ರವಾಸೋದ್ಯಮ’ದ ಹೊಸ ಪ್ರಯೋಗದ ಪೂರ್ವಭಾವಿಯಾಗಿ ಪ್ರಸ್ತುತ ಹಾರಾಟವನ್ನು ನಡೆಸುತ್ತಿದ್ದಾರೆ. ಅವರು ಸ್ಥಾಪಿಸಿದ ಕಂಪನಿಯು ಮುಂದಿನ ವರ್ಷದಿಂದ ತನ್ನ ಪ್ರವಾಸೋದ್ಯಮದ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಮುಂದಾಗಿದೆ.

ಇದನ್ನೂ ಓದಿ: ಮಂಗಳ ಗ್ರಹಕ್ಕೆ ಇಳಿದ ಬಾಹ್ಯಾಕಾಶ ನೌಕೆಯ ಮೈನವಿರೇಳಿಸುವ ವಿಡಿಯೋ ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶದ ಪ್ರವಾಸವು ದುಬಾರಿಯಾಗಿದ್ದರೂ, ಈಗಾಗಲೆ ನೂರಾರು ಶ್ರೀಮಂತ ಜನರು ಬ್ರಾನ್ಸನ್‌ ಅವರ ಸಂಸ್ಥೆಯಲ್ಲಿ ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಆದರೆ ಪ್ರತಿ ಟಿಕೆಟ್‌ಗೆ 2.5 ಲಕ್ಷ ಡಾಲರ್‌ ವ್ಯಯಿಸಬೇಕಾಗುತ್ತದೆ. 2030 ರ ಹೊತ್ತಿಗೆ ಬಾಹ್ಯಾಕಾಶ ಪ್ರವಾಸೋದ್ಯಮದ ಮಾರುಕಟ್ಟೆ ವಾರ್ಷಿಕವಾಗಿ 300 ಕೋಟಿ ಡಾಲರ್‌ಗೆ ಬೆಳೆಯುತ್ತದೆ ಎಂದು ಸ್ವಿಸ್‌ ಬ್ಯಾಂಕ್‌ ಅಂದಾಜಿಸಿದೆ.

‘ವರ್ಜಿನ್‌ ಗ್ಯಾಲಾಕ್ಟಿಕ್‌’ ನ ರಾಕೆಟ್‌ ಒಂದು 2014 ರಲ್ಲಿ ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯ ಮೇಲೆ ಪರೀಕ್ಷಾ ಹಾರಾಟದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿತ್ತು. ಅದರಲ್ಲಿ ಒಬ್ಬ ಪೈಲಟ್ ಸಾವನ್ನಪ್ಪಿದ್ದು, ಇನ್ನೊಬ್ಬನಿಗೆ ಗಂಭೀರವಾಗಿ ಗಾಯವಾಗಿತ್ತು.

ಪ್ರಸ್ತುತ ಪ್ರಯಾಣದಲ್ಲಿ ಆಂಧ್ರಪ್ರದೇಶದ ಗುಂಟೂರು ಮೂಲದ 34 ವರ್ಷದ ಸಿರಿಶಾ ಬಾಂಡ್ಲಾ ಕೂಡಾ ತಂಡದಲ್ಲಿದ್ದಾರೆ. ಸಿರಿಶಾ ಅವರು ಏರೋನಾಟಿಕಲ್ ಎಂಜಿನಿಯರ್ ಆಗಿದ್ದು, ಬಾಹ್ಯಾಕಾಶಕ್ಕೆ ತೆರಳುತ್ತಿರುವ ಭಾರತೀಯ ಮೂಲದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಬೆಳ್ಳಿಚುಕ್ಕಿ: ಸೌರ ಮಂಡಲದಲ್ಲಿ ಅತ್ಯಂತ ವೇಗವಾಗಿ ಸೂರ್ಯನ ಸುತ್ತ ಸುತ್ತವ ಗ್ರಹ!

ಈ ಹಿಂದೆ ಭಾರತೀಯ ಮೂಲದ ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್‌‌ ಬಾಹ್ಯಾಕಾಶಕ್ಕೆ ಹಾರಿದ್ದರು. ಪ್ರಸ್ತುತ ಬಾಹ್ಯಾಕಾಶ ಪ್ರಯಾಣದಲ್ಲಿ ಸಿರಿಶಾ ಗಗನಯಾತ್ರಿ ಸಂಖ್ಯೆ 004 ಆಗಲಿದ್ದಾರೆ.

ಸಿರಿಶಾ ಅವರು ಜನವರಿ 2021 ರಲ್ಲಿ ವರ್ಜಿನ್‌ ಗ್ಯಾಲಾಕ್ಟಿಕ್‌ ಸರ್ಕಾರಿ ವ್ಯವಹಾರ ಮತ್ತು ಸಂಶೋಧನಾ ಕಾರ್ಯಾಚರಣೆಗಳ ಉಪಾಧ್ಯಕ್ಷರಾಗಿ ತಮ್ಮ ಕೆಲಸವನ್ನು ಪ್ರಾರಂಭಿಸಿದ್ದರು.

ಪ್ರಸ್ತುತ ಬಾಹ್ಯಾಕಾಶ ಪ್ರಯಾಣಲ್ಲಿ, ಸಂಸ್ಥೆಯ ಸಂಸ್ಥಾಪಕ ಸರ್ ರಿಚರ್ಡ್ ಬ್ರಾನ್ಸನ್ ಜೊತೆಗೆ ಇತರ ಐದು ಜನರು ಇರಲಿದ್ದಾರೆ. ಬೆತ್ ಮೋಸೆಸ್, ಕಾಲಿನ್ ಬೆನೆಟ್, ಸಿರಿಶಾ ಬಾಂಡ್ಲಾ, ಸಿಜೆ ಸ್ಟರ್ಕೊ ಮತ್ತು ಕೆಲ್ಲಿ ಲ್ಯಾಟಿಮರ್ ಇರಲಿದ್ದಾರೆ.

ಭಾನುವಾರ ಹೊರಡುತ್ತಿರುವ ಈ ಪ್ರಯಾಣವನ್ನು ಕೆಳಗಿನ ವಿಡಿಯೊದಲ್ಲಿ ನೋಡಬಹುದಾಗಿದೆ.


ಇದನ್ನೂ ಓದಿ: ಬೆಳ್ಳಿಚುಕ್ಕಿ: ಅನ್ಯಗ್ರಹದಲ್ಲಿ ನಡೆದ ಮೊದಲ ವೈಮಾನಿಕ ಹಾರಾಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...