Homeಮುಖಪುಟಇಂದು ನೋಯ್ಡಾದಲ್ಲಿ ನೆಲಕ್ಕುರುಳಲಿವೆ 103 ಮೀ. ಎತ್ತರದ ಕಟ್ಟಡಗಳು: ಏನೆಲ್ಲ ಸಿದ್ಧತೆ ನಡೆದಿದೆ?

ಇಂದು ನೋಯ್ಡಾದಲ್ಲಿ ನೆಲಕ್ಕುರುಳಲಿವೆ 103 ಮೀ. ಎತ್ತರದ ಕಟ್ಟಡಗಳು: ಏನೆಲ್ಲ ಸಿದ್ಧತೆ ನಡೆದಿದೆ?

- Advertisement -
- Advertisement -

ಇಂದು ಮಧ್ಯಾಹ್ನ 2.30ಕ್ಕೆ ನೋಯ್ಡಾದಲ್ಲಿ ಬೃಹತ್‌ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿದೆ. ಸೆಕ್ಟರ್ 93Aನಲ್ಲಿರುವ ಎರಡು ಬೃಹತ್ ಕಟ್ಟಡಗಳು ನಿಯಮಗಳಿಗೆ ವಿರುದ್ಧವಾಗಿ ನಿರ್ಮಿಸಲಾಗಿದೆ ಎಂಬ ಕಾರಣಕ್ಕೆ ನೆಲಸಮ ಮಾಡಲಾಗುತ್ತಿದೆ.

ಈ ಕಟ್ಟಡದ ವಿಶೇಷವೇನು? ನೆಲಸಮಕ್ಕೆ ಏನೆಲ್ಲ ಸಿದ್ಧತೆ ನಡೆದಿದೆ

40 ಮಹಡಿ: ಪ್ರತಿ ಕಟ್ಟಡದಲ್ಲಿ ನಲವತ್ತು ಮಹಡಿಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು. ನ್ಯಾಯಾಲಯವು ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸಿದ್ದರಿಂದ ಕೆಲವು ಮಹಡಿ ನಿರ್ಮಿಸಲು ಸಾಧ್ಯವಾಗಿಲ್ಲ. ಈ ಟವರ್‌ಗಳಲ್ಲಿ ಈಗ 32 ಮಹಡಿಗಳಿವೆ. 900+ ಫ್ಲಾಟ್‌ಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು. ಅದರಲ್ಲಿ ಮೂರನೇ ಎರಡರಷ್ಟು ಬುಕ್ ಆಗಿವೆ ಅಥವಾ ಮಾರಾಟ ಮಾಡಲಾಗಿದೆ. ಬಡ್ಡಿ ಸಮೇತ ಮರುಪಾವತಿ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

103 ಮೀಟರ್‌ಗಳು: ಈ ಕಟ್ಟಡಗಳು 103 ಮೀಟರ್‌ ಎತ್ತರವಿವೆ. ಮೂರು ವರ್ಷಗಳ ಹಿಂದೆ ಜೋಹಾನ್ಸ್‌ಬರ್ಗ್‌ನಲ್ಲಿ ಬ್ಯಾಂಕ್ ಕಟ್ಟಡವನ್ನು ಕೆಡವಲಾಗಿತ್ತು. ಅದು 108 ಮೀಟರ್ ಇತ್ತು. ಕೇರಳದಲ್ಲಿ ಕೆಳಗುರುಳಿಸಲಾದ 68 ಮೀಟರ್‌ ಎತ್ತರದ ಕಟ್ಟಡವು ಭಾರತದ ಮಟ್ಟಿಗೆ ನೆಲಸಮವಾದ ಎತ್ತರದ ಕಟ್ಟಡವಾಗಿತ್ತು. 2020ರಲ್ಲಿ ಕೇರಳದಲ್ಲಿ ಕೆಡವಲಾಗಿತ್ತು. ಅದೇ ವರ್ಷ ಅಬುಧಾಬಿಯಲ್ಲಿ 168 ಮೀಟರ್ ಎತ್ತರದ ಕಟ್ಟಡವನ್ನು ನೆಲಸಮಗೊಳಿಸಿದ್ದು ವಿಶ್ವದಾಖಲೆಗೆ ಸೇರಿತ್ತು.

8 ಮೀಟರ್: ಈಗ ನೆಲಸಮಗೊಳಿಸಲಾಗುವ ಎರಡು ಕಟ್ಟಡಗಳ ಪಕ್ಕದಲ್ಲಿ ಕೆಲವು ಅಪಾರ್ಟ್‌ಮೆಂಟ್‌ಗಳು ಸುಮಾರು ಎಂಟು ಮೀಟರ್‌ ಅಂತರದಲ್ಲಿವೆ. 9-12 ಮೀಟರ್‌ಗಳ ಒಳಗೆ ಹಲವಾರು ಅಪಾರ್ಟ್‌ಮೆಂಟ್‌ಗಳಿವೆ. ಧೂಳು ನುಗ್ಗುವುದನ್ನು ಕಡಿಮೆ ಮಾಡಲು ಅಕ್ಕಪಕ್ಕದ ಕಟ್ಟಡಗಳನ್ನು ವಿಶೇಷ ಬಟ್ಟೆಯಿಂದ ಮುಚ್ಚಲಾಗುತ್ತದೆ.

7,000 ಸ್ಟೋಟಕಗಳು: ಪಿಲ್ಲರ್‌ಗಳ ಸುಮಾರು 7,000 ರಂಧ್ರಗಳಲ್ಲಿ ಸ್ಫೋಟಕಗಳನ್ನು ಅಳವಡಿಸಲಾಗಿದೆ. ಈ ರಂಧ್ರಗಳು ತಲಾ ಎರಡು ಮೀಟರ್ ಅಂತರದಲ್ಲಿವೆ. ಸ್ಪೋಟಿಸಿದಾಗ ಗೋಪುರಗಳು ನೇರವಾಗಿ ಕೆಳಗೆ ಬೇಳುವಂತೆ ಯೋಜನೆ ರೂಪಿಸಲಾಗಿದೆ. ಇದನ್ನು ‘ಜಲಪಾತ ತಂತ್ರ’ ಎಂದು ಕರೆಯಲಾಗಿದೆ.

9 ಸೆಕೆಂಡುಗಳು: 9 ಸೆಕೆಂಡ್‌ಗಳಲ್ಲಿ ಕಟ್ಟಡ ನೆಲಕ್ಕುರಲಿದೆ ಎಂದು ಪ್ರಾಜೆಕ್ಟ್ ಎಂಜಿನಿಯರ್ ಹೇಳುತ್ತಾರೆ. ಎಂಜಿನಿಯರ್‌‌, ಬ್ಲಾಸ್ಟರ್‌ನ ಪಕ್ಕದಲ್ಲಿ ಇರುತ್ತಾರೆ. ನೋಯ್ಡಾ ಆಡಳಿತ ವರ್ಗ, ಜೊತೆಗೆ ಆಫ್ರಿಕಾದ ಮೂವರು ತಜ್ಞರು ಮತ್ತು ಇತರ ಕೆಲವು ಸರ್ಕಾರಿ ಅಧಿಕಾರಿಗಳು (ಒಟ್ಟಾರೆಯಾಗಿ 10 ಜನರಿಗಿಂತ ಹೆಚ್ಚಿಲ್ಲ) ಕನಿಷ್ಠ 100 ಮೀಟರ್ ದೂರದಲ್ಲಿ ನಿಲ್ಲುತ್ತಾರೆ. ಅರ್ಧಗಂಟೆ ಕಾಲ ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇ ಸಂಚಾರವನ್ನು ಈ ಭಾಗದಲ್ಲಿ ಸ್ಥಗಿತಗೊಳಿಸಲಾಗುತ್ತಿದೆ.

12 ನಿಮಿಷಗಳು:  ಕಟ್ಟಡ ಉರುಳಿಸಿದ ಬಳಿಕ ಧೂಳು ಕಡಿಮೆಯಾಗಲು ಸುಮಾರು 12 ನಿಮಿಷಗಳ ಕಾಲ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಗಾಳಿಯ ಏರಿಳಿತದ ಮೇಲೆ ಧೂಳಿನ ಉದುಗುವಿಕೆ ನಿರ್ಧಾರವಾಗುವ ಸಾಧ್ಯತೆಯೂ ಇದೆ.

ಪ್ರತಿ ಸೆಕೆಂಡಿಗೆ 30 ಮಿಮೀ: ಸ್ಫೋಟದ ನಂತರ ಕಂಪನಗಳು 30 ಮೀಟರ್‌ಗಳವರೆಗೆ ಸಂಭವಿಸಬಹುದು. ಆದರೆ ಕೆಲವೇ ಸೆಕೆಂಡ್‌ ಇರಬಹುದು. ಸರಳವಾಗಿ ಹೇಳುವುದಾದರೆ, ಇದು ರಿಕ್ಟರ್ ಮಾಪಕದಲ್ಲಿ 0.4ರ ಭೂಕಂಪಕ್ಕೆ ಸಮಾನವಾಗಿದೆ.

7,000: ಸುಮಾರು 150 ಸಾಕುಪ್ರಾಣಿಗಳು ಮತ್ತು 2,500 ವಾಹನಗಳೊಂದಿಗೆ ಪಕ್ಕದ ಪ್ರದೇಶಗಳ 7000 ನಿವಾಸಿಗಳು ಡೆಮಾಲಿಷನ್ ದಿನದಂದು ಬೆಳಿಗ್ಗೆ 7 ಗಂಟೆಗೆ ಹೊರಹೋಗಬೇಕು ಎಂದು ಸೂಚನೆ ನೀಡಲಾಗಿದೆ. ಗ್ಯಾಸ್‌ ಮತ್ತು ವಿದ್ಯುತ್ ಪೂರೈಕೆಯನ್ನು ಸಂಜೆ 4 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ. ಇಲ್ಲಿನ ನಿವಾಸಿಗಳಿಗೆ 5.30ರ ಬಳಿಕ ಹಿಂತಿರುಗಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿರಿ: ಪ್ಲೇಸ್ಟೋರ್‌ನಿಂದ 2 ಸಾವಿರ ಸಾಲ ನೀಡುವ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದ ಗೂಗಲ್‌!

9 ವರ್ಷಗಳು: ಸೂಪರ್‌ಟೆಕ್ ಎಮರಾಲ್ಡ್ ಕೋರ್ಟ್ ಸೊಸೈಟಿಯ ನಿವಾಸಿಗಳು, ಈ ಕಟ್ಟಡಗಳ ನಿರ್ಮಾಣದ ವಿರುದ್ಧ 2012ರಲ್ಲಿ ನ್ಯಾಯಾಲಯಕ್ಕೆ ಮೊರೆಹೋದರು. ಆಗಸ್ಟ್ 2021ರಲ್ಲಿ ಅಂತಿಮ ತೀರ್ಪು ಬಂದಿತು. ಅಲಹಾಬಾದ್ ಹೈಕೋರ್ಟ್ 2014ರಲ್ಲಿ ಕಟ್ಟಡ ಕೆಡವಲು ಆದೇಶ ನೀಡಿತ್ತು. ಪ್ರಕರಣವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಕಳೆದ ಆಗಸ್ಟ್‌ನಲ್ಲಿ ಕಟ್ಟಡಗಳನ್ನು ಕೆಡವಲು ನ್ಯಾಯಾಲಯ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಆದರೆ ತಾಂತ್ರಿಕ ತೊಂದರೆಗಳಿಂದಾಗಿ ಒಂದು ವರ್ಷ ತೆಗೆದುಕೊಂಡಿತು.

100 ಕೋಟಿ ರೂ.: ಇಡೀ ನೆಲಸಮಕ್ಕೆ ನೂರು ಕೋಟಿ ರೂ. ವಿಮೆ ಮಾಡಲಾಗಿದೆ. ಪಕ್ಕದ ಕಟ್ಟಡಗಳಿಗೆ ಹಾನಿಯಾದರೆ ವೆಚ್ಚವನ್ನು ಭರಿಸಬೇಕು, ಒಂದು ವೇಳೆ ವಸ್ತುಗಳು ಪಕ್ಕಕ್ಕೆ ಸಿಡಿದರೆ ನಷ್ಟವನ್ನು ತುಂಬಿಕೊಡಬೇಕು. ನೆಲಸಮ ಯೋಜನೆಗೆ ₹ 20 ಕೋಟಿಗಿಂತ ಹೆಚ್ಚು ವೆಚ್ಚವಾಗಬಹುದು. ಆದರೆ ಕಟ್ಟಡವನ್ನು ಕೆಡವುತ್ತಿರುವುದರಿಂದ ಸುಮಾರು 50 ರೂ. ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...