Homeಮುಖಪುಟಪ್ಲೇಸ್ಟೋರ್‌ನಿಂದ 2 ಸಾವಿರ ಸಾಲ ನೀಡುವ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದ ಗೂಗಲ್‌!

ಪ್ಲೇಸ್ಟೋರ್‌ನಿಂದ 2 ಸಾವಿರ ಸಾಲ ನೀಡುವ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದ ಗೂಗಲ್‌!

ಮೊಬೈಲ್‌‌ ಆಪ್‌ ಸ್ಟೋರ್‌ಗಳಲ್ಲಿ ತ್ವರಿತ ಸಾಲದ ಅಪ್ಲಿಕೇಶನ್‌ಗಳ ಕಿರುಕುಳದ ವರದಿಗಳು ಹೊರ ಬರುತ್ತಿದ್ದಂತೆ ಗೂಗಲ್‌‌ ಮಧ್ಯಪ್ರವೇಶಿಸಿ ಕ್ರಮ ಕೈಗೊಂಡಿದೆ

- Advertisement -
- Advertisement -

2022 ರ ಜನವರಿ ತಿಂಗಳಿನಿಂದ ಕಂಪನಿಯ ನೀತಿಗಳಿಗೆ ಬದ್ಧವಾಗಿಲ್ಲದ ಕಾರಣ ‘ಗೂಗಲ್‌ ಅಂಡ್ರಾಯಿಡ್‌ ಪ್ಲೇ ಸ್ಟೋರ್‌‌’ನಲ್ಲಿದ್ದ 2 ಸಾವಿರಕ್ಕೂ ಹೆಚ್ಚು ಸಾಲ-ಸಂಬಂಧಿತ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.

“ನಿಷೇಧಿಸಲಾಗಿರುವ 2 ಸಾವಿರ ಅಪ್ಲಿಕೇಶನ್‌ಗಳು ಭಾರತದ ಪ್ಲೇ ಸ್ಟೋರ್‌‌ನಲ್ಲಿ ಇದ್ದವುಗಳಾಗಿವೆ. ಅಪ್ಲಿಕೇಶನ್ ನಮ್ಮ ಗುರಿ ಅಥವಾ ನಮ್ಮ ನೀತಿಯನ್ನು ಪೂರೈಸದಿದ್ದರೆ ಅದರ ಮೇಲೆ ಕಾರ್ಯನಿರ್ವಹಿಸಲಿದ್ದೇವೆ” ಎಂದು ಗೂಗಲ್ ಏಷ್ಯಾ-ಪೆಸಿಫಿಕ್‌ನ ಹಿರಿಯ ನಿರ್ದೇಶಕ ಹಾಗೂ ಟ್ರಸ್ಟ್ ಮತ್ತು ಸುರಕ್ಷತೆಯ ಮುಖ್ಯಸ್ಥ ಸೈಕತ್ ಮಿತ್ರಾ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಮ್ಮ ವ್ಯವಹಾರವೂ ಸ್ವತಂತ್ರವಾಗಿ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಮೌಲ್ಯಮಾಪನ ಮಾಡುತ್ತವೆ. ನಂತರ ಆಫ್‌ಲೈನ್, ಹೊರಗಿನ ಮೂಲಗಳಿಂದ ಕೂಡಾ ಸಂಗ್ರಹಿಸಲಾಗುತ್ತದೆ” ಎಂದು ಮಿತ್ರ ಹೇಳಿದ್ದಾರೆ.

ಇದನ್ನೂ ಓದಿ: 100ಕ್ಕೂ ಹೆಚ್ಚು ಅಪ್ಲಿಕೇಷನ್‌ ಬಳಸಿ ಸುಲಿಗೆ; ₹ 500 ಕೋಟಿ ಚೀನಾಕ್ಕೆ ಕಳುಹಿಸಿದ ಯುಪಿ ಗ್ಯಾಂಗ್‌ ಅರೆಸ್ಟ್‌‌!

ತ್ವರಿತ ಸಾಲ ಸೇವೆಗಳಿಂದ ಮಾಡಿದ ಫೋನ್ ಕರೆಗಳಿಂದ ಗ್ರಾಹಕರಿಗೆ ಕಿರುಕುಳ ನೀಡುವ ಘಟನೆಗಳ ಬಗ್ಗೆ ದೇಶದಾದ್ಯಂತ ಹಲವು ಪ್ರಕರಣಗಳು ಬೆಳಕಿಗೆ ಬಂದ ನಂತರ ಗೂಗಲ್ ಪ್ಲೇ ಸ್ಟೋರ್‌‌ ಕ್ರಮವನ್ನು ಕೈಗೊಂಡಿರಬಹುದು ಎಂದು ವರದಿಯಾಗಿದೆ.

ಮೊಬೈಲ್ ಆಪ್ ಸ್ಟೋರ್‌ಗಳಲ್ಲಿ ತ್ವರಿತ ಸಾಲದ ಅಪ್ಲಿಕೇಶನ್‌ಗಳ ಕಿರುಕುಳದ ವರದಿಗಳು ಪ್ರಸಾರವಾಗಲು ಪ್ರಾರಂಭವಾದ ನಂತರ ಗೂಗಲ್‌‌ ಮಧ್ಯಪ್ರವೇಶಿಸಿದೆ. ಈ ಅಪ್ಲಿಕೇಶನ್‌ಗಳು ಸಾಮಾನ್ಯವಾಗಿ 2,000 ರೂ.ನಿಂದ ಪ್ರಾರಂಭವಾಗಿ 10 ಸಾವಿರ ರೂ.ಗಳ ನಡುವೆ ಸಾಲವನ್ನು ಒದಗಿಸುವ ಮೂಲಕ ಕಡಿಮೆ ಆದಾಯದ ಜನರನ್ನ ಗುರಿಯಾಗಿಸುತ್ತದೆ.

ಇದನ್ನೂ ಓದಿ: ಟಿಕ್‌ಟಾಕ್‌ ಅಪ್ಲಿಕೇಷನ್‌ ಮೇಲಿನ ನಿಷೇಧ ಮುಂದುವರಿಕೆ; ಶಾಶ್ವತ ನಿಷೇಧಕ್ಕೆ ಚಿಂತನೆ?

ಈ ಅಪ್ಲಿಕೇಶನ್‌ಗಳು ವಾರ್ಷಿಕವಾಗಿ 50% ವರೆಗೆ ಬಡ್ಡಿದರವನ್ನು ವಿಧಿಸುತ್ತಾರೆ. “ಭಾರತದ 80 ಆಪ್ ಸ್ಟೋರ್‌ಗಳಲ್ಲಿ (ಕಳೆದ ವರ್ಷದವರೆಗೆ) ಈ ರೀತಿಯ 1,100 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದ್ದು, ಈ 600 ಆ್ಯಪ್‌ಗಳು ಕಾನೂನುಬಾಹಿರವಾಗಿದೆ” ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...