Homeದಲಿತ್ ಫೈಲ್ಸ್ರಾಜಸ್ಥಾನ: ದಲಿತ ವಿದ್ಯಾರ್ಥಿಯ ಮೇಲೆ ಶಿಕ್ಷಕನ ಹಲ್ಲೆ; ಮತ್ತೊಂದು ಪ್ರಕರಣ ಬಯಲು

ರಾಜಸ್ಥಾನ: ದಲಿತ ವಿದ್ಯಾರ್ಥಿಯ ಮೇಲೆ ಶಿಕ್ಷಕನ ಹಲ್ಲೆ; ಮತ್ತೊಂದು ಪ್ರಕರಣ ಬಯಲು

- Advertisement -
- Advertisement -

ರಾಜಸ್ಥಾನದಲ್ಲಿ ದಲಿತರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿದ್ದು, ಇಲ್ಲಿನ ದೌಸಾದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು 5ನೇ ತರಗತಿಯ ದಲಿತ ವಿದ್ಯಾರ್ಥಿಯ ತೋಳುಗಳನ್ನು ತಿರುಚಿ, ಝಾಡಿಸಿ ಒದೆಯುವ ಮೂಲಕ ಹಿಂಸೆ ನೀಡಿದ್ದಾನೆ.

ಆಗಸ್ಟ್ 6ರಂದು ಈ ಘಟನೆ ನಡೆದಿದ್ದು, ರಾಮೇಶ್ವರ್ ಗುರ್ಜರ್ ಎಂಬ ಇಂಗ್ಲಿಷ್ ಶಿಕ್ಷಕ, ರೋಹಿತ್ ಎಂಬ ವಿದ್ಯಾರ್ಥಿಯನ್ನು ಹಿಡಿದು ಥಳಿಸಿದ್ದಾನೆ.

ರೋಹಿತ್ ಕೈ ಮುರಿದುಕೊಂಡು ಮನೆಗೆ ಬಂದಿದ್ದನು. ವಿಚಾರಿಸಿದಾಗ ಘಟನೆಯ ಕುರಿತು ತಿಳಿಸಿದ್ದಾನೆ. ಕುಟುಂಬ ಸದಸ್ಯರು ಶಾಲೆಗೆ ಧಾವಿಸಿದರು. ಈ ಕುರಿತು ಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ಮನವಿ ಮಾಡಿದರೂ ಅವರು ಗಮನಹರಿಸಲಿಲ್ಲ. ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಪ್ರತಿಕ್ರಿಯೆ ನೀಡಿ ಸುಮ್ಮನಾಗಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಾಲಕನ ಮೇಲೆ ಹಲ್ಲೆ ನಡೆಸಿದ ಶಿಕ್ಷಕ ಆರೋಪವನ್ನು ನಿರಾಕರಿಸಿದ್ದನು. ಜೊತೆಗೆ ದಲಿತ ಕುಟುಂಬದ ಮೇಲೆ ಒತ್ತಡ ತರಲು ಯತ್ನಿಸಿದ್ದನು ಎನ್ನಲಾಗಿದೆ.

ಬಾಯಿ ಮುಚ್ಚಿಕೊಂಡಿರಲು ಬೆದರಿಕೆ: ಬಾಲಕನ ಕುಟುಂಬ ಆರೋಪ

ಸಹಾಯ ಕೋರಿ ಸಂತ್ರಸ್ತ ಕುಟುಂಬ ಸದಸ್ಯರು ಡಿಇಒ ಘನಶ್ಯಾಮ್ ಮೀನಾ ಅವರ ಬಳಿಗೆ ಹೋದರು. ಸಂತ್ರಸ್ತ ಬಾಲಕನು ಡಿಇಒಗೆ ಇಡೀ ಘಟನೆಯನ್ನು ವಿವರಿಸಿದನು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

“ಪದೇ ಪದೇ ಗಮನಕ್ಕೆ ತಂದರೂ ಯಾರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬಾಯಿ ಮುಚ್ಚಿಕೊಂಡಲು ಕೆಲವರು ಒತ್ತಡ ಹೇರಿದರು” ಎಂದು ಕುಟುಂಬ ಆರೋಪಿಸಿದೆ.

ಘಟನೆಯ ಬಗ್ಗೆ ಶಾಲೆಯು ಸುಳ್ಳುಗಳನ್ನು ಹೇಳುತ್ತಿದೆ ಎಂದು ಬಾಲಕನ ಸಹೋದರ ಹರಿ ಮೋಹನ್ ಬಹಿರಂಗಪಡಿಸಿದ್ದಾರೆ. ರೋಹಿತ್ ಮತ್ತು ಆತನ ಸಹೋದರಿಯ ಟಿಸಿಗಳನ್ನು ವಾಪಸ್ ಪಡೆದು ಬೇರೆ ಶಾಲೆಗೆ ಸೇರುವಂತೆ ಕುಟುಂಬದ ಮೇಲೆ ಶಾಲೆಯೇ ಒತ್ತಡ ಹೇರುತ್ತಿದೆ ಎಂದು ಅವರು ದೂರಿದ್ದಾರೆ.

ಈ ವಿಚಾರವನ್ನು ಮಾಧ್ಯಮಗಳು ತರಾಟೆಗೆ ತೆಗೆದುಕೊಂಡ ನಂತರವೇ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎಸ್‌ಟಿ ಎಸ್‌ಸಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತನಿಖೆ ಮುಂದುವರಿದಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ರಾಜಸ್ಥಾನದಲ್ಲಿ ಹೆಚ್ಚಾದ ದಲಿತರ ಮೇಲಿನ ದೌರ್ಜನ್ಯ

ಇತ್ತೀಚಿನ ದಿನಗಳಲ್ಲಿ ರಾಜಸ್ಥಾನದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಉತ್ತರ ಪ್ರದೇಶ, ಮಧ್ಯಪ್ರದೇಶವಷ್ಟೇ ಅಲ್ಲ, ರಾಜಸ್ಥಾನವು ಈಗ ಅಟ್ರಾಸಿಟಿ ವಿಚಾರದಲ್ಲಿ ಕುಖ್ಯಾತಿ ಪಡೆಯುತ್ತಿದೆ.

ಪಾತ್ರೆ ಮುಟ್ಟಿದ್ದಕ್ಕೆ ಬಾಲಕನನ್ನು ಕೊಂದ ಶಿಕ್ಷಕ: 9 ವರ್ಷದ ದಲಿತ ಬಾಲಕನನ್ನು ಶಿಕ್ಷಕನೊಬ್ಬ ಥಳಿಸಿ ಕೊಂದಿರುವ ಘಟನೆ ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ನಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಅಹಮದಾಬಾದ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನನ್ನಪ್ಪಿತ್ತು.

ಜುಲೈ 20 ರಂದು ಶಿಕ್ಷಕ ಹಲ್ಲೆ ನಡೆಸಿದ್ದನು ಎಂದು ಕುಟುಂಬ ಸದಸ್ಯರು ಆರೋಪಿಸಿತ್ತು. ಸವರ್ಣಿಯರಿಗೆ ಮೀಸಲಿರಿಸಿದ್ದ ಪಾತ್ರೆಯಲ್ಲಿದ್ದ ನೀರನ್ನು ಕುಡಿದ ಕಾರಣ ದಲಿತ ಮಗುವಿಗೆ ಭೀಕರವಾಗಿ ಶಿಕ್ಷಕ ಥಳಿಸಿದ್ದನು. ಆರೋಪಿ ಶಿಕ್ಷಕನನ್ನು ಬಂಧಿಸಿ ಕೊಲೆ ಪ್ರಕರಣ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

“ಜಲೋರ್‌ನ ಸರಸ್ವತಿ ವಿದ್ಯಾಮಂದಿರದಲ್ಲಿ 3ನೇ ತರಗತಿಯ ವಿದ್ಯಾರ್ಥಿಯಾಗಿದ್ದ ನನ್ನ ಮಗ ಇಂದ್ರ ಕುಮಾರ್, ಸಿಂಗ್‌ಗಳಿಗೆ ಮೀಸಲಾಗಿದ್ದ ಮಣ್ಣಿನ ಪಾತ್ರೆಯಲ್ಲಿದ್ದ ನೀರು ಕುಡಿದ ಕಾರಣ ಶಿಕ್ಷಕ ಚೈಲ್ ಸಿಂಗ್ ಥಳಿಸಿದನು. ಈ ಮಡಕೆ ಮೇಲ್ಜಾತಿಗೆ ಸೇರಿದ ಸಿಂಗ್‌ಗಳಿಗೆ ಮೀಸಲಾಗಿದೆ ಎಂದು ನನ್ನ ಮಗನಿಗೆ ತಿಳಿದಿರಲಿಲ್ಲ” ಎಂದು ಮಗುವಿನ ತಂದೆ ಮತ್ತು ಜಲೋರ್ ಜಿಲ್ಲೆಯ ಸುರಾನಾ ಗ್ರಾಮದ ನಿವಾಸಿ ದೇವರಾಮ್ ಮೇಘವಾಲ್ ಸಂಕಟ ವ್ಯಕ್ತಪಡಿಸಿದ್ದರು.

ಮದ್ಯಪಾನ ಮಾಡಲು ನಿರಾಕರಿಸಿದ ಬುಡಕಟ್ಟು ಯುವಕನ ಮೇಲೆ ಅಮಾನುಷ ಹಲ್ಲೆ: ರಾಜಸ್ಥಾನದ ಉದಯಪುರದಲ್ಲಿ ಮದ್ಯಪಾನ ಮಾಡಲು ನಿರಾಕರಿಸಿದ ಬುಡಕಟ್ಟು ಸಮುದಾಯದ ಯುವಕನ ಮೇಲೆ ನಾಲ್ವರು ಸವರ್ಣಿಯ ಸಮುದಾಯದ ಯುವಕರು ಅಮಾನುಷವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ನಡೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿತ್ತು.

ನಾಲ್ವರು ಯುವಕರು ಸಂತ್ರಸ್ತ ಪ್ರಕಾಶ್ ಲೋಗಾರ್ (30) ಎಂಬರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದು ವಿಡಿಯೊದಲ್ಲಿ ದಾಖಲಾಗಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ಹಲ್ಲೆಯ ವಿಡಿಯೋ ವೈರಲ್ ಆಗಿ ದಲಿತಪರ ಸಂಘಟನೆಗಲು, ನಾಯಕರು ಸೇರಿದಂತೆ ಹಲವು ಮಂದಿ ಆಕ್ರೋಶ ವ್ಯಕ್ತಪಡಿಸಿದ ನಂತರ ಹಲ್ಲೆ ನಡೆಸಿದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ವಿಜಯ್ ಸಿಂಗ್, ರಘುನಾಥ್ ಸಿಂಗ್ ಮತ್ತು ಯಶಪಾಲ್ ಸಿಂಗ್ ಎಂದು ಗುರುತಿಸಲಾಗಿತ್ತು.

ಮೀಸೆ ಬಿಟ್ಟಿದ್ದಕ್ಕೆ, ಚೆಂದವಾಗಿ ಕಾಣುತ್ತಿದ್ದಕ್ಕೆ ದಲಿತನ ಕೊಲೆ: ರಾಜಸ್ಥಾನದ ಪಾಲಿ ಜಿಲ್ಲೆಯ ಬರ್ವಾ ಗ್ರಾಮದಲ್ಲಿ ವಾಸಿಸುತ್ತಿದ್ದ ಕೋವಿಡ್‌‌ ಆರೋಗ್ಯ ಸಹಾಯಕ, ದಲಿತ ಸಮುದಾಯದ ಜಿತೇಂದ್ರಪಾಲ್ ಮೇಘವಾಲ್ ಅವರನ್ನು ಮಾರ್ಚ್ 15ರಂದು ಕೊಲ್ಲಲಾಗಿತ್ತು. “ಜಿತೇಂದ್ರಪಾಲ್‌ ನೋಡಲು ಚೆನ್ನಾಗಿದ್ದರು ಹಾಗೂ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದರು. ಹೀಗಾಗಿ ಕೊಲೆಯಾಗಿದ್ದಾರೆ” ಎಂದು ಕುಟುಂಬ ಆರೋಪಿಸಿತ್ತು.

ಇದನ್ನೂ ಓದಿರಿ: ಅಂಬೇಡ್ಕರ್‌ವಾದಿ ದೃಷ್ಟಿಯಲ್ಲಿ ಸಾವರ್ಕರ್‌ ನೋಡುತ್ತಿದ್ದೇನೆ: ಎನ್‌.ಮಹೇಶ್‌

ಆರೋಪಿಗಳಾದ ಸೂರಜ್ ಸಿಂಗ್ ಮತ್ತು ರಮೇಶ್ ಸಿಂಗ್ ಅವರನ್ನು ಬಾರ್ಮರ್ ಜಿಲ್ಲೆಯ ದುಡ್ವಾ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದರು.

ಜಿತೇಂದ್ರಪಾಲ್ ತಮ್ಮ ಹಲವಾರು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ‘ಕುನ್ವರ್ ಸಾ ಜೀತ್’ ಎಂಬ ಹೆಸರಿರುವ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದರು. ಅವರ ಪೋಸ್ಟ್‌ಗಳಲ್ಲಿ ಅವರ ಮೀಸೆ ಗಮನ ಸೆಳೆದಿದೆ. “ನಾನು ಶ್ರೀಮಂತನಲ್ಲ, ಆದರೆ ಹೃದಯದಲ್ಲಿ ರಾಜನಾಗಿದ್ದೇನೆ” ಎಂದು ಅವರು ಟ್ಯಾಗ್‌ಲೈನ್‌ನಲ್ಲಿ ಬರೆದಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ ತನ್ನನ್ನು ಗೋಡ್ವಾಡ್ ರಾಜ ಎಂದು ಕರೆದುಕೊಂಡಿದ್ದ ಆರೋಪಿ ಸೂರಜ್ ಸಿಂಗ್, 2020ರಲ್ಲಿ ಸಣ್ಣ ವಿಚಾರಕ್ಕೆ ಪಾಲ್ ಮೇಲೆ ಹಲ್ಲೆ ನಡೆಸಿದ್ದ ಎಂದು ಆತನ ಸಹೋದರ ಓಂಪ್ರಕಾಶ್ ಹೇಳಿದ್ದರು. “ನನ್ನ ಸಹೋದರ ನೋಡಲು ಚೆನ್ನಾಗಿ ಇದ್ದದ್ದರಿಂದ, ಒಳ್ಳೆಯ ವ್ಯಕ್ತಿತ್ವದವರಾಗಿದ್ದರಿಂದ ಸೂರಜ್‌ ಸಿಂಗ್ ಅಸೂಹೆ ಹೊಂದಿದ್ದ ಎಂಬುದು ಗ್ರಾಮಸ್ಥರಿಗೆ ತಿಳಿದಿತ್ತು” ಎಂದು ತಿಳಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...