Homeಕರ್ನಾಟಕಹಸಿವಿನಿಂದ ಮಕ್ಕಳ ಸಾವು: ನಾವು ‘ನಾರ್ಮಲ್’ ಆಗಿರಬಹುದೇ?

ಹಸಿವಿನಿಂದ ಮಕ್ಕಳ ಸಾವು: ನಾವು ‘ನಾರ್ಮಲ್’ ಆಗಿರಬಹುದೇ?

- Advertisement -
| ಮುತ್ತುರಾಜ್ |
ಚಿಕ್ಕಬಳ್ಳಾಪುರ ಜಿಲ್ಲೆಯ ಕಂದಮ್ಮಗಳೆರಡು ತಿನ್ನಲು ಆಹಾರವಿಲ್ಲದೇ ಮಣ್ಣು ತಿಂದ ಪರಿಣಾಮ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜರುಗಿದೆ. ಈ ಮಕ್ಕಳ ಪೋಷಕರಿಬ್ಬರೂ ಸಹ ಕುಡುಕರಾಗಿದ್ದ ಕಾರಣಕ್ಕಾಗಿ ಗಮನಹರಿಸದೇ ಹೋದದ್ದರಿಂದ ಈ ದುರ್ಘಟನೆ ನಡೆದು ಹೋಗಿದೆ ಹೇಳಲಾಗುತ್ತಿದೆ. ಇದರ ಕುರಿತು ಬಹಳಷ್ಟು ಜನರು ಕಂಬನಿ ಮಿಡಿದಿದ್ದು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ರೀತಿಯ ಘಟನೆಗಳು ನಡೆದಾಗ ಸಹಜವಾಗಿಯೇ ಬಹುತೇಕ ಮಂದಿ ಮರುಗುತ್ತಾರೆ. ಆದರೆ ದುರಂತದ ಸಂಗತಿಯೆಂದರೆ ಈ ರೀತಿಯ ದುರ್ಘಟನೆಗಳು ಪ್ರತಿನಿತ್ಯವೂ ನಡೆಯುತ್ತಲೇ ಇವೆ.
ಕಳೆದ ವರ್ಷ ಜುಲೈನಲ್ಲಿ ದೆಹಲಿಯಲ್ಲಿ ಇದೇ ರೀತಿ ಹಸಿವಿನಿಂದ ಬಳಲಿ ಮೂವರು ಮಕ್ಕಳು ಅಸುನೀಗಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಕಳೆದ ಹಲವು ದಿನಗಳಿಂದ ಮಕ್ಕಳು ಏನನ್ನು ತಿಂದಿಲ್ಲದ ಕಾರಣಕ್ಕೆ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಿದ್ದರು. ವಿಚಾರಣೆಗಾಗಿ ಆ ಮಕ್ಕಳ ತಾಯಿಯನ್ನು ಪೋಲಿಸರು ಪ್ರಶ್ನಿಸಿದರೆ ಆಕೆ ಹೇಳಿದ್ದು ‘ಮೊದಲು ನನಗೆ ಊಟ ಕೊಡಿ’ ಎಂದು.. ಆ ಮಕ್ಕಳ ತಂದೆ ಪಶ್ಚಿಮ ಬಂಗಾಳದಿಂದ ಉದ್ಯೋಗ ಅರಸಿ ದೆಹಲಿಗೆ ಬಂದಿದ್ದು ಯಾವುದೇ ಉದ್ಯೋಗ ಸಿಗದೇ ಕೊನೆಗೆ ರಿಕ್ಷಾಗಾಡಿ ತಳ್ಳಲು ಸೇರಿದ್ದರು. ಅಲ್ಲಿಯೂ ಸ್ಥಳೀಯ ರೌಡಿಗಳು ಆತನ ಗಾಡಿಯನ್ನು ವಶಪಡಿಸಿಕೊಂಡು ಕಿರುಕುಳ ಕೊಟ್ಟ ಕಾರಣದಿಂದ ಆತ ದಿಕ್ಕುತೋಚದೆ ಅಲೆಯುತ್ತಿದ್ದನು.. ಈ ಘಟನೆಗೆ ಯಾರು ಹೊಣೆ?
ಈಗ ಚಿಕ್ಕಬಳ್ಳಾಪುರದ ಕಂದಮ್ಮಗಳ ವಿಚಾರಕ್ಕೆ ಬರುವುದಾದರೆ ಇವರ ಪೋಷಕರು ಉದ್ಯೋಗಕ್ಕಾಗಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗೆ ವಲಸೆ ಹೋಗಿದ್ದರು. ತಮ್ಮ 5 ಮಕ್ಕಳ ಜೊತೆಗೆ ತನ್ನ ತಂಗಿಯ ಮಗಳನ್ನು ಸಾಕಿಕೊಂಡಿದ್ದ ನಾಗಮಣಿ ಮತ್ತು ಗಿರೀಶ್ ಇಬ್ಬರು ತೀವ್ರ ಮದ್ಯಪಾನ ವ್ಯಸನಿಗಳಾಗಿದ್ದರು. ಇವರು ದಿನ ಕುಡಿದು ಕೆಲಸ ಅರಸಿ ಹೋಗುತ್ತಿದ್ದರಿಂದ ಮಕ್ಕಳ ಊಟದ ಬಗ್ಗೆ ಯೋಚಿಸಿಲ್ಲ. ಇದರಿಂದ ಕಂಗೆಟ್ಟ ಮಕ್ಕಳು ವಿಧಿಯಿಲ್ಲದೇ ಎರಡು ಮೂರು ದಿನ ಮಣ್ಣು ತಿಂದ ಕಾರಣ ಸಾವನಪ್ಪಿವೆ. ಆರು ತಿಂಗಳ ಹಿಂದೆಯು ಸಹ ಇವರ ಸಂತೋಷ್ ಎಂಬ ಮಗುವು ಸಹ ಹಸಿವಿನಿಂದಲೇ ಸಾವನ್ನಪ್ಪಿತ್ತು ಎಂದು ತಿಳಿದು ಬಂದಿದೆ. ಆ ಕುಟುಂಬದ ಇನ್ನುಳಿದ ಮೂರು ಮಕ್ಕಳನ್ನು ಜಿಲ್ಲಾಡಳಿತದ ವತಿಯಿಂದ ಸ್ಥಳೀಯ ಅಂಗನವಾಡಿಗೆ ಸೇರಿಸಲಾಗಿದೆಯಂತೆ.
ಈ ಘಟನೆಯನ್ನು ನೆನೆಸಿಕೊಂಡರೆ ಮೈ ಜುಂ ಎನ್ನುತ್ತದೆ. ಈಗ ಈ ಘಟನೆಗೆ ಯಾರನ್ನು ಹೊಣೆ ಮಾಡೋಣ? ಈ ರೀತಿಯ ಘಟನೆಗಳು ನಮ್ಮನ್ನು ಅಲ್ಲಾಡಿಸುತ್ತವೆ. ಆದರೆ ಭಾರತದಲ್ಲಿ ದಿನವೊಂದಕ್ಕೆ 3000 ಮಕ್ಕಳು ಅಪೌಷ್ಟಿಕತೆಯಿಂದ ಸಾವನಪ್ಪುತ್ತಿದ್ದಾರೆ. ಹಸಿವಿನಿಂದ ಸಾಯುವುದಕ್ಕೂ, ಅಪೌಷ್ಟಿಕತೆಯಿಂದ ಸಾಯುವುದಕ್ಕೂ ಏನಾದರೂ ವ್ಯತ್ಯಾಸವಿದೆಯೇ? ನಮ್ಮ ಕುತಂತ್ರಿ ಸರ್ಕಾರಗಳು ಅಪೌಷ್ಟಿಕತೆಯಿಂದ ಸಾವು ಎಂದು ಹೇಳುತ್ತವೆಯೇ ಹೊರತು ಹಸಿವಿನಿಂದ ಸಾವು ಎನ್ನುವುದಿಲ್ಲ.
ಈ ದೇಶದಲ್ಲಿ 1000ಕ್ಕೆ 34 ಮಕ್ಕಳು ತಾಯಿಯ ಅಪೌಷ್ಠಿಕತೆಯ ಕಾರಣದಿಂದ ಗರ್ಭದಲ್ಲೇ ಅಸುನೀಗುತ್ತಿವೆ. ಈ ಅಪೌಷ್ಠಿಕತೆಯಿಂದ 9ಲಕ್ಷಕ್ಕೂ ಹೆಚ್ಚು ಮಕ್ಕಳು 5 ವರ್ಷ ತುಂಬುವ ಮೊದಲೇ ಮರಣಹೊಂದಿವೆ. ಈಗಲೂ ಭಾರತದಲ್ಲಿ ಸುಮಾರು 19 ಕೋಟಿ ಜನರು ಹಸಿವಿನಿಂದ ಜೀವನ ದೂಡುತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಇದರ ಬಗ್ಗೆ ಯಾರು ಯೋಚಿಸಬೇಕು? ಇವರ ಕುರಿತು ಆಳುವ ಸರ್ಕಾರಗಳ ಕ್ರಮವೇನು? ಅದೆಷ್ಟೋ ಸಾವಿರ ಟನ್‍ಗಳಷ್ಟು ಆಹಾರ ಗೋದಾಮುಗಳಲ್ಲಿ ಕೊಳೆಯುತ್ತಿದೆ ಎಂದು ವರದಿಗಳು ಹೇಳುತ್ತಿವೆ, ಈ ವಿರೋಧಾಭಾಸಕ್ಕೆ ಏನು ಮಾಡೋಣ?
ಈಗ ನಮ್ಮ ಪಾತ್ರಕ್ಕೆ ಬರೋಣ. ಆಹಾರ ಎಂಬ ಮೂಲಭೂತ ಅಗತ್ಯದ ಹಕ್ಕಿನ ಕುರಿತು ನಾವೆಷ್ಟು ಚರ್ಚಿಸಿದ್ದೇವೆ? ಇದಕ್ಕೆ ಹೊಂದಿಕೊಂಡಿರುವ ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ವಿಚಾರಕ್ಕಾಗಿ ಎಷ್ಟು ಹೋರಾಡಿದ್ದೇವೆ? ಜನರ ನೈಜ ಸಮಸ್ಯೆಗಳನ್ನು ಮರೆಮಾಚಿ ಜಾತಿ, ಧರ್ಮ, ಸೈನ್ಯ ಇತ್ಯಾದಿ ಭಾವನಾತ್ಮಕ ವಿಚಾರಗಳಿಗೆ ಎಳೆಯುವ ಕಪಟ ಸರ್ಕಾರಗಳ ಜಾಲದಲ್ಲಿಯೇ ನಾವಿದ್ದೇವೆಯೇ? ಈ ದೇಶದ 73% ಸಂಪತ್ತನ್ನು ಕೇವಲ 1% ಬಂಡವಾಳಶಾಹಿ ಶ್ರೀಮಂತರು ಲೂಟಿ ಹೊಡೆಯುತ್ತಿರುವಾಗ ನಾವು ದನಿ ಎತ್ತಿದ್ದೇವೆಯೇ? ಓಟು ಹಾಕುವ ಮುನ್ನ ಬಡಜನರ ಪರ ಈ ನೀತಿ ತನ್ನಿ ಎಂದು ರಾಜಕಾರಣಿಗಳಿಗೆ ಒತ್ತಡ ತಂದಿದ್ದೇವೆಯೇ?
ಅದೆಲ್ಲಾ ಹೋಗಲಿ ಕೇರಳದಲ್ಲಿ ಮಧು ಎಂಬಾತ ಹಸಿವು ತಾಳಲಾರದೇ 2 ಕೆ.ಜಿ ಅಕ್ಕಿ ಕದ್ದ ಎಂಬ ಕಾರಣಕ್ಕೆ ಆತನನ್ನು ಹೊಡೆದು ಸಾಯಿಸಿಯೇಬಿಟ್ಟರು. ಊಟ ಡೆಲಿವರಿ ಮಾಡುವ ಹುಡುಗನೊಬ್ಬ ಸ್ವಲ್ಪ ಆಹಾರ ತಿಂದಿದ್ದಕ್ಕೆ ಪ್ರಪಂಚವೇ ಮುಳುಗಿ ಹೋಯಿತು ಎಂಬು ಬೊಬ್ಬಿರದಲ್ಲ? ಆತನನ್ನ ಹೇಗೆ ನಡೆಸಿಕೊಂಡಿತು ನಮ್ಮ ಸಮಾಜ? ಇದೆಲ್ಲವನ್ನು ಎಷ್ಟು ಜನ ಪ್ರಶ್ನಿಸಿದ್ದೇವೆ?
ಇಲ್ಲದಿದ್ದಲ್ಲಿ ಈ ಮಕ್ಕಳ ಸಾವಿಗೆ ಮರುಗಲು ನಮಗೆ ಅರ್ಹತೆ ಇದೆಯೇ? ಎಲ್ಲಿಯವರೆಗೂ ಆಳುವ ವರ್ಗಗಳ ಜನಪರವಾಗಿ ಕೆಲಸ ಮಾಡುವಂತೆ ನಾವು ಒತ್ತಾಯಿಸುವುದಿಲ್ಲವೋ ಅಲ್ಲಿಯವರೆಗೆ ಚಿಕ್ಕಬಳ್ಳಾಪುರದಿಂದ ದೆಹಲಿಯವರೆಗೂ ಈ ಸಾವುಗಳು ನಡೆಯುತ್ತಲೇ ಇರುತ್ತವೆ. ನಾವು ಒಂದಷ್ಟು ಕಂಬನಿ ಸುರಿಸಿ ನಂತರ ನಾರ್ಮಲ್ ಆಗಿ ಇದ್ದುಬಿಡುತ್ತೇವೆ. ಇನ್ನು ಮುಂದೆ ತುಂಬಾ ನಾರ್ಮಲ್ ಆಗಿರುವುದು ಬೇಡ; ಏಕೆಂದರೆ ಈ ದೇಶ ನಾರ್ಮಲ್ ಆಗಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...