ದಲಿತ ವಾಚ್‌ಮನ್‌ಗೆ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಗಳು ಅಮಾನವೀಯವಾಗಿ ಥಳಿಸಿರುವ ಘಟನೆ ಉತ್ತರಪ್ರದೇಶದ ಬರೇಲಿಯ ನವಾಬ್‌ಗಂಜ್ ತಹಸಿಲ್‌ನಲ್ಲಿ ನಡೆದಿದೆ.
ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ಘಟನೆ ನಡೆದಿದ್ದು, ವಾಚ್ ಮ್ಯಾನ್‌ಗೆ ಬೂಟು ಕಾಲಿನಿಂದ ಒದ್ದು, ಲಾಠೀ ಚಾರ್ಜ್ ಮಾಡುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಕಾವಲುಗಾರನ ಬಗ್ಗೆ ಹೋಮ್ ಗಾರ್ಡ್ ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾನೆ. ಇದರಿಂದಾಗಿ ತಹಸಿಲ್ ಗೇಟ್‌ನಲ್ಲಿದ್ದ ಗೃಹರಕ್ಷಕ ಮತ್ತು ವಾಚ್‌ಮನ್ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಮತ್ತೊಬ್ಬ ಗೃಹ ರಕ್ಷಕ ದಳದ ಸಿಬ್ಬಂದಿ ಕೂಡ ಸ್ಥಳಕ್ಕೆ ಬಂದಿದ್ದಾನೆ. ಇಬ್ಬರು ಸೇರಿ ವಾಚ್‌ಮನ್‌ನನ್ನು ನೆಲಕ್ಕೆ ತಳ್ಳಿ ಬೂಟು ಕಾಲಿನಿಂದ ಥಳಿಸಿದ್ದಾರೆ ಹಾಗೂ ರೈಫಲ್‌ನಿಂದ ಮತ್ತು ಕೈಯಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಇದರ ಬೆನ್ನಲ್ಲಿ ಆರೋಪಿತ ಹೋಮ್ ಗಾರ್ಡ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ವಾಚ್‌ಮನ್ ನವಾಬ್‌ಗಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಯುಪಿ ಸಿಎಂಗೆ ಕೂಡ ಪತ್ರ ಬರೆದಿದ್ದಾರೆ.
ನವಾಬ್‌ಗಂಜ್ ನಗರಕ್ಕೆ ಹೊಂದಿಕೊಂಡಿರುವ ಬಹೋರಂಗಲ ಗ್ರಾಮದ ಪರಿಶಿಷ್ಟ ಜಾತಿಯ ವೀರೇಂದ್ರ ಕುಮಾರ್ ಮೇಲೆ ಹಲ್ಲೆ ನಡೆದಿದೆ. ಗೃಹ ರಕ್ಷಕರಾದ ವೀರ್ ಬಹದ್ದೂರ್ ಮತ್ತು ರಾಂಪಾಲ್ ಅವರು ಸರ್ಕಾರದಿಂದ ಉಚಿತ ರೇಷನ್ ತೆಗೆದುಕೊಳ್ಳುತ್ತಾರೆ ಮತ್ತು ಮತ ಹಾಕುವುದಿಲ್ಲ ಎಂದು ವೀರೇಂದ್ರ ಕುಮಾರ್‌ಗೆ ಟೀಕಿಸಿದ್ದಾರೆ ಮತ್ತು ರಾಂಪಾಲ್ ಜಾತಿ ಉಲ್ಲೇಖಿಸಿ ನಿಂದನೆ ಮಾಡಿದ್ದಾರೆ ಎಂದು ಅರೋಪಿಸಲಾಗಿದೆ.
ತಹಸೀಲ್ದಾರ್ ರಜನೀಶ್ ಸಕ್ಸೇನಾ ಈ ಬಗ್ಗೆ ಮಾತನಾಡಿದ್ದು, ಈ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ. ಇಡೀ ದಿನ ತಹಸಿಲ್‌ನಲ್ಲಿ ಇದ್ದೇವೆ. ಗೃಹ ರಕ್ಷಕರು ಯಾರಿಗಾದರೂ ಥಳಿಸಿದ್ದರೆ, ತನಿಖೆ ನಡೆಸಲಾಗುವುದು. ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ, ಕಾವಲುಗಾರ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ತನಿಖೆಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
A Dalit watchman was beaten and assaulted by two Home Guards in Uttar Pradesh's Bareilly district as the public looked on. According to local reports, the victim protested after the Home Guards allegedly made casteist remarks on him. the Dalit watchman lying on the ground while… pic.twitter.com/O5Mq8ruEho
— The Siasat Daily (@TheSiasatDaily) May 15, 2024



Why u ppl identify victim in caste basis victim is victim no caste should come here and did police started beating after they know that he is dalit or what