Homeಮುಖಪುಟಅಧಿಕಾರಕ್ಕೆ ಸವಾಲೆಸೆದ ತಮಿಳುನಾಡಿನ ಇಬ್ಬರು ಯುವಪ್ರತಿಭೆಗಳು

ಅಧಿಕಾರಕ್ಕೆ ಸವಾಲೆಸೆದ ತಮಿಳುನಾಡಿನ ಇಬ್ಬರು ಯುವಪ್ರತಿಭೆಗಳು

- Advertisement -
- Advertisement -

ಇತ್ತೀಚೆಗಿನ ದಿನಗಳಲ್ಲಿ ತಮ್ಮ ವೃತ್ತಿ ಕುರಿತಾದ ಅಸಾಧಾರಣ ಬದ್ಧತೆಯ ಮೂಲಕ ಇಡೀ ದೇಶದ ಗಮನ ಸೆಳೆದ ಚಿತ್ರನಟಿ ಸಾಯಿಪಲ್ಲವಿ ಹಾಗೂ ಕರೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಸಂಸದೆಯಾಗಿ ಆಯ್ಕೆಯಾಗಿರುವ ಜ್ಯೋತಿ ಮಣಿ ಎಂಬ ಯುವ ಪ್ರತಿಭೆಗಳು ಇಂದಿನ ಯುವತಲೆಮಾರಿಗೆ ಮಾದರಿಯಾಗುವ ತಮ್ಮ ನಡೆನುಡಿಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಚಿತ್ರ ನಟಿಯಾಗಿರುವ ಸಾಯಿಪಲ್ಲವಿ ತಮಿಳುನಾಡಿನ ಊಟಿ ಬಳಿ ಇರುವ ಕೋಟಗಿರಿ ಎಂಬ ಸ್ಥಳದ ಬಡಗ ಜನಾಂಗ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದ ಹೆಣ್ಣು ಮಗಳು. ಜೊತೆಗೆ ವೈದ್ಯಕೀಯ ಪದವಿಯನ್ನು ಪಡೆದಿರುವ ಪ್ರತಿಭಾವಂತೆ. ಆಕೆಯ ತಂದೆ ಮತ್ತು ತಾಯಿ ಇಬ್ಬರೂ (ಸೆಂತಮಾರೈ ಕಣ್ಣನ್ ಮತ್ತು ರಾಧಾ) ಉದ್ಯೋಗದ ನಿಮಿತ್ತ ಕೊಯಮತ್ತೂರಿನಲ್ಲಿದ್ದವರು. 1992ರಲ್ಲಿ ಜನಸಿದ ಸಾಯಿ ಬಾಲ್ಯದ ಶಿಕ್ಷಣವನ್ನೆಲ್ಲಾ ಕೊಯಮತ್ತೂರು ಕಾನ್ವೆಂಟ್ ಶಾಲೆಯಲ್ಲಿ ಪಡೆದವಳು. ನೃತ್ಯದಲ್ಲಿ ಆಸಕ್ತಿ ಇದ್ದ ಕಾರಣದಿಂದಾಗಿ ಉತ್ತಮ ನೃತ್ಯಗಾತಿಯಾಗಿ ರೂಪುಗೊಂಡಿದ್ದ ಸಾಯಿ ಪಲ್ಲವಿ ಅನಿರೀಕ್ಷಿತವಾಗಿ ಕಲಾವಿದೆಯಾಗಿ ಗುರುತಿಸಿಕೊಂಡವಳು. ಜೊತೆಗೆ ತಮಿಳು, ಮಲೆಯಾಳಂ ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಎಲ್ಲಾ ಪ್ರೇಕ್ಷಕರ ಮನಗೆದ್ದವಳು. ಈಗಾಗಲೇ ದಕ್ಷಿಣ ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದಾದ ಫಿಲಂಫೇರ್ ಪ್ರಶಸ್ತಿಗೆ ಸಾಯಿಪಲ್ಲವಿ ಪಾತ್ರರಾಗಿದ್ದಾರೆ. ಅಪಾರ ಓದು ಮತ್ತು ವಿದ್ಯಾರ್ಹತೆ ಹಾಗೂ ಈ ಜಗತ್ತನ್ನು ಸೂಕ್ಷ್ಮವಾಗಿ ಗ್ರಹಿಸುವ ಗುಣ ಇವೆಲ್ಲವೂ ಆಕೆಯನ್ನು ಪ್ರಬುದ್ಧ ನಟಿಯನ್ನಾಗಿ ರೂಪಿಸಿವೆ. ಈಗ ಬಿಡುಗಡೆಯಾಗಿರುವ ನಕ್ಸಲ್ ಚಳುವಳಿಯ ಕಥೆಯಾಧಾರಿತ (ವಾರಂಗಲ್‌ನ ಸರಳ ಎಂಬ ತೊಂಬತ್ತರ ದಶಕದ ನಕ್ಸಲ್ ಕಾರ್ಯಕರ್ತೆಯ ಜೀವನಾಧಾರಿತ ಕಥೆ) ’ವಿರಾಟ ಪರ್ವಂ’ ತೆಲುಗು ಸಿನಿಮಾದಲ್ಲಿನ ಸಾಯಿ ಪಲ್ಲವಿಯ ಅಭಿನಯ ಕುರಿತಾಗಿ ಎಲ್ಲರಿಂದ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ.

2015ರಲ್ಲಿ ’ಪ್ರೇಮಂ’ ಎಂಬ ಮಲೆಯಾಳಂ ಸಿನಿಮಾದ ಮಲರ್ ಎಂಬ ಪಾತ್ರದ ಮೂಲಕ ಗಮನ ಸೆಳೆದ ಈಕೆ ಮತ್ತೆ ಹಿಂತಿರುಗಿ ನೋಡಿಲ್ಲ. ಮತ್ತೋರ್ವ ಪ್ರತಿಭಾವಂತೆ ಕೀರ್ತಿ ಸುರೇಶ್ ಎಂಬ ಕಲಾವಿದೆಯ ಜೊತೆಗೆ ಸಾಯಿಪಲ್ಲವಿ ಕುರಿತಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಇತ್ತೀಚೆಗೆ ’ವಿರಾಟ ಪರ್ವಂ’ ಸಿನಿಮಾ ಪ್ರಚಾರ ಕುರಿತ ಪತ್ರಿಕಾಗೋಷ್ಠಿಯಲ್ಲಿ ತಾನು ನಂಬಿದ ಸಿದ್ಧಾಂತಗಳ ಕುರಿತು ಮಾತನಾಡುತ್ತಾ, ಧರ್ಮಕ್ಕಿಂತ ಮನುಷ್ಯ ಜೀವ ದೊಡ್ಡದು; ಕಾಶ್ಮೀರದಲ್ಲಿ ಹಿಂದೂ ಪಂಡಿತರ ಹತ್ಯೆಯಾಗುವುದು ಅಮಾನುಷ ಕೃತ್ಯ ನಿಜ; ಅದೇ ರೀತಿ ಗೋವುಗಳನ್ನು ಹಿಡಿದುಕೊಂಡು ಹೋಗುತ್ತಿರುವ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿ ಜೈ ಶ್ರೀರಾಂ ಎಂದು ಘೋಷಣೆ ಕೂಗುವುದು ಕೂಡ ಅಮಾನುಷ ಕ್ರಿಯೆ ಎಂದು ಸಾಯಿ ಪ್ರತಿಕ್ರಿಯಿಸಿದ್ದಳು.

ಸಾಯಿಪಲ್ಲವಿಯ ಈ ಪ್ರಬುದ್ಧತೆಯ ಮಾತುಗಳು ಮಾರಿಕೊಂಡ ಮಾಧ್ಯಮಗಳ ಬೃಹಸ್ಪತಿಗಳನ್ನು ಕೆರಳಿಸಿತು. ಈಕೆಯ ಕುರಿತಾಗಿ ಇಲ್ಲಸಲ್ಲದ ಅಪಪ್ರಚಾರ ಮಾಡಿದರು. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಎದುರಿಗೆ
ಮೈಕ್ ಮತ್ತು ಕ್ಯಾಮರಾ ಇದ್ದರೆ ಸಾಕು ಹನುಮಂತನ ಪಾತ್ರಧಾರಿಗಳಂತೆ ಕುಣಿಯುವ ಪತ್ರಕರ್ತರೆಂಬ ಮಂಡೂಕಗಳಿಗೆ ನಾವು ಬದುಕುತ್ತಿರುವ ಗ್ರಾಮೀಣ ಜಗತ್ತಿನ ಪರಿಸ್ಥಿತಿಯ ಅರಿವಿಲ್ಲ. ಇಂದಿಗೂ ಕೂಡ ನಮ್ಮ ಕರ್ನಾಟಕ ಸೇರಿದಂತೆ ಭಾರತದ ಹಲವಾರು ರಾಜ್ಯಗಳಲ್ಲಿ ಕೃಷಿಯನ್ನು ಮೂಲ ವೃತ್ತಿಯಾಗಿಸಿಕೊಂಡ ಮುಸ್ಲಿಮರಿದ್ದಾರೆ, ಜೊತೆಗೆ ಪಶು ಸಾಕಾಣಿಕೆಯ ಮೂಲಕ ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡ ಅನೇಕ ಬಡ ಮುಸ್ಲಿಂ ಕುಟುಂಬಗಳು ಇವೆ. ಆದರೆ, ಈಗಿನ ’ನವ ದೇಶ ಭಕ್ತ’ರು ಮತ್ತು ’ಹಿಂದೂಭಕ್ತ’ರು ಎಂಬ ಅಸಭ್ಯರ ಕಾರಣದಿಂದಾಗಿ ಯಾವೊಬ್ಬ ಮುಸ್ಲಿಂ ವ್ಯಕ್ತಿ ಸಾರ್ವಜನಿಕವಾಗಿ ಹಸುಗಳನ್ನು ಹಿಡಿದುಕೊಂಡು ಪಶು ವೈದ್ಯಕೀಯ ಕೇಂದ್ರಗಳಿಗೆ ಹೋಗುವುದು ಅಥವಾ ಮಾರಾಟಕ್ಕೆ ಇಲ್ಲವೆ ಕೊಳ್ಳುವುದಕ್ಕೆ ಜಾನುವಾರುಗಳ ಸಂತೆಗೆ ಹೋಗಲು ಅಸಾಧ್ಯವಾಗುತ್ತಿದೆ. ತಮ್ಮ ಪರಿಚಯದ ಹಿಂದೂಧರ್ಮದ ಗೆಳೆಯರನ್ನು ಆಶ್ರಯಿಸಿ ಬದುಕಬೇಕಾದ ಸ್ಥಿತಿ ಅವರದು.

ಹಿಂದುಳಿದ ಸಮುದಾಯದಲ್ಲಿ ಜನಿಸಿ ಗ್ರಾಮೀಣ ಭಾರತದ ಅನುಭವಗಳನ್ನು ದಕ್ಕಿಸಿಕೊಂಡಿರುವ ನಟಿ ಸಾಯಿಪಲ್ಲವಿಗೆ ಇರುವ ಇಂತಹ ಸೂಕ್ಷ್ಮತೆಯನ್ನು ನಮ್ಮ ಮಾಧ್ಯಮಗಳ ಅವಿವೇಕಿಗಳು ದಕ್ಕಿಸಿಕೊಂಡಿದ್ದರೆ ಅವರ ಮಾತು ಮತ್ತು ಬರವಣಿಗೆಗೆ ಅರ್ಥ ಬರುತ್ತಿತ್ತು.

ಇನ್ನು ಎರಡನೆಯದಾಗಿ ಜ್ಯೋತಿ ಮಣಿ ಎಂಬ ತಮಿಳು ಭಾಷೆಯ ಯುವ ಕಥೆಗಾರ್ತಿಯೊಬ್ಬಳು ತನ್ನ ಬದ್ಧತೆಯ ಹೋರಾಟದ ಬದುಕಿನ ಮೂಲಕ ಸತತ ಹದಿನೈದು ವರ್ಷಗಳ ಕಾಲ ತಮಿಳುನಾಡು ಯುವ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡ ಸೂಕ್ಷ್ಮ ಮನಸ್ಸಿನ ಹೆಣ್ಣು ಮಗಳು. 2009 ಮತ್ತು 2014ರ ಎರಡು ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರೂ ಎದೆಗುಂದದೆ ಹಾಗೂ ಪಕ್ಷ ನಿಷ್ಟೆಯನ್ನು ಬದಲಾಯಿಸದೆ 2019ರಲ್ಲಿ ಕರೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾಳೆ. ಬೆಂಗಳೂರು-ಮಧುರೈ ಮತ್ತು ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇಲಂ ನಂತರ ಸಿಗುವ ಕರೂರು ಮುಂದುವರಿದ ವಾಣಿಜ್ಯ ಹಾಗೂ ಕೈಗಾರಿಕಾ ಜಿಲ್ಲಾ ಕೇಂದ್ರವಾಗಿದೆ. ಜ್ಯೋತಿ ಮಣಿ ಸಂಸದೆಯಾದ ನಂತರವೂ ತನ್ನ ಹಳ್ಳಿಯ ವಾಸಸ್ಥಳವನ್ನು ಬದಲಾಯಿಸಿಲ್ಲ. ಪೆರಿಯತಿರು ಮಂಗಲಂ ಎಂಬ ಹಳ್ಳಿಯಲ್ಲಿ ಜನಸಾಮಾನ್ಯರ ನಡುವೆ ಸಾಮಾನ್ಯಳಂತೆ ಬದುಕುವ ಜ್ಯೋತಿ ಮಣಿಗೆ ಸಾಹಿತ್ಯದ ಓದು ಮತ್ತು ಬರವಣಿಗೆ ಒಬ್ಬ ಜನಪ್ರತಿನಿಧಿ ಹೇಗಿರಬೇಕು ಎಂಬುದನ್ನು ಕಲಿಸಿಕೊಟ್ಟಿದೆ. ಅಣ್ಣಾ ಮಲೈ ವಿ.ವಿ.ಯ ಪದವೀಧರೆಯಾದ ಈಕೆಯ ’ಒಟ್ಟು ವಾಸನೈ’ ಎಂಬ ಕಥಾ ಸಂಕಲನ, ’ಸಿಥಿರಕ್ ಕೂಡು’ ಎಂಬ ಕಾದಂಬರಿಯ ಜೊತೆಗೆ ’ನಾಯಕತ್ವಕ್ಕೆ ಅಡ್ಡದಾರಿಗಳಿಲ್ಲ’ (ನೀರ್ ಪಿರಕ್ಕು ಮನ್) ಎಂಬ ಅನುಭವ ಕಥನ ಪುಸ್ತಕಗಳು ಜ್ಯೋತಿ ಮಣಿಯನ್ನು ತಮಿಳು ಜನತೆ ಪಕ್ಷ ಭೇದವಿಲ್ಲದೆ ಪ್ರೀತಿಸುವಂತೆ ಮಾಡಿದೆ.

ಕಳೆದ ವಾರ ದೆಹಲಿಯ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಜಾರಿ ನಿರ್ದೆಶನಾಲಯದ ವಿರುದ್ಧ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ದೆಹಲಿ ಪೊಲೀಸರ ವಿರುದ್ಧ ಜ್ಯೋತಿ ಮಣಿ ಗುಡುಗಿದ ವೈಖರಿಯು ದೇಶಾದ್ಯಂತ ಮಾಧ್ಯಮಗಳ ಗಮನ ಸೆಳೆಯಿತು. ತಾನೋರ್ವ ಸಂಸದೆ ಎಂಬುದನ್ನು ಕಡೆಗಣಿಸಿ ತೊಟ್ಟಿದ ಬಟ್ಟೆಗಳು ಹರಿದು ಹೋಗುವಂತೆ ಎಳೆದಾಡಿದ ಪೊಲೀಸರ ಅಮಾನವೀಯ ವರ್ತನೆಯ ಬಗ್ಗೆ ಮಾತನಾಡುತ್ತ ಯಾವುದೇ ಸಂಕೋಚವಿಲ್ಲದೆ ಧರಿಸಿದ್ದ ಪೈಜಾಮಿನ ಹರಿದ ಭಾಗವನ್ನು ತೋರಿಸಿ, ಅದಕ್ಕೆ ಕಾರಣಕಾದವರನ್ನು ತರಾಟೆಗೆ ತೆಗೆದುಕೊಂಡ ಬಗೆ ನಿಜಕ್ಕೂ ಮೆಚ್ಚುವಂತಹದ್ದು. ಕುಡಿಯಲು ನೀರು ಕೇಳಿದರೂ ಸಹ ನೀಡದೆ ಸತತ ಮೂರು ಗಂಟೆಗಳ ಕಾಲ ಪೊಲೀಸ್ ವಾಹನದಲ್ಲಿ ಕೂಡಿ ಹಾಕಿದ್ದ ಬಗೆಯನ್ನು ಈ ಹೆಣ್ಣುಮಗಳು ಇಂಗ್ಲಿಷ್ ಭಾಷೆಯಲ್ಲಿ ವಿವರಿಸುವುದರ ಮೂಲಕ ದೆಹಲಿ ಪೊಲೀಸರ ಗೂಂಡಾಗಿರಿಯನ್ನು ಜಗತ್ತಿಗೆ ಪರಿಚಯಿಸಿದಳು.

ಅಧಿಕಾರ, ಸ್ಥಾನಮಾನ ಹಾಗೂ ಹಣಕ್ಕಾಗಿ ನಿಷ್ಠೆ ಬದಲಿಸಿ ಪಕ್ಷದಿಂದ ಪಕ್ಷಕ್ಕೆ ಹಾರುವ ಇಂದಿನ ಎಡಬಿಡಂಗಿ ಜಾಯಮಾನದ ಅವಿವೇಕಿಗಳಿಗೆ ಈ ಹೆಣ್ಣುಮಗಳ ರಾಜಕೀಯ ಜೀವನಗಾಥೆ ಪಾಠವಾಗಬೇಕು. ಜೊತೆಗೆ ಯುವಕ/ ಯುವತಿಯರಿಗೆ ಜ್ಯೋತಿ ಮಣಿಯ ಬದ್ಧತೆ ಆದರ್ಶವಾಗಬೇಕು.

ಡಾ.ಎನ್.ಜಗದೀಶ್ ಕೊಪ್ಪ

ಡಾ.ಎನ್.ಜಗದೀಶ್ ಕೊಪ್ಪ
ಹಿರಿಯ ಪತ್ರಕರ್ತರು, ಬರಹಗಾರರು ಮತ್ತು ಸಾಮಾಜಿಕ ಹೋರಾಟಗಾರರು. ಬಿಳಿ ಸಾಹೇಬನ ಭಾರತ, ಮರುಭೂಮಿಯ ಹೂವು, ಪುತ್ರಶೋಕ ಅವರು ರಚಿಸಿದ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ಸಾಯಿ ಪಲ್ಲವಿಯವರಿಂದ ಮಾಧ್ಯಮಗಳು ಕಲಿಯುವುದು ಬಹಳಷ್ಟಿದೆ: ಬೆಂಬಲಕ್ಕೆ ನಿಂತ ನಟ ಕಿಶೋರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...