Homeಕರೋನಾ ತಲ್ಲಣಲಸಿಕಾ ನೀತಿಯಲ್ಲಿ ಯು-ಟರ್ನ್: ಲಸಿಕೆ ಜವಾಬ್ದಾರಿ ಕೇಂದ್ರದ್ದು ಎಂದ ಮೋದಿ

ಲಸಿಕಾ ನೀತಿಯಲ್ಲಿ ಯು-ಟರ್ನ್: ಲಸಿಕೆ ಜವಾಬ್ದಾರಿ ಕೇಂದ್ರದ್ದು ಎಂದ ಮೋದಿ

- Advertisement -
- Advertisement -

ಇಷ್ಟು ದೊಡ್ಡ ಜನಸಂಖ್ಯೆಯನ್ನು ನಾವು ಹೇಗೆ ಉಳಿಸಲಿದ್ದೇವೆ ಎಂಬುದರ ಬಗ್ಗೆ ಇಡೀ ದೇಶ ಮಾತನಾಡುತ್ತಿತ್ತು. ಒಂದು ವರ್ಷದಲ್ಲಿ, ನಾವು ಎರಡು ಲಸಿಕೆಗಳನ್ನು ಪ್ರಾರಂಭಿಸಿದ್ದೇವೆ. ಈವರೆಗೆ 23 ಕೋಟಿ ಜನರಿಗೆ ಚುಚ್ಚುಮದ್ದು ನೀಡಲಾಗಿದೆ. ಇನ್ನು ಮುಂದೆ ಕೇಂದ್ರ ಸರ್ಕಾರವೇ ಲಸಿಕೆಗಳನ್ನು ಖರೀದಿಸಿ, ರಾಜ್ಯಗಳಿಗೆ ಶೇ.75 ರಷ್ಟು ಲಸಿಕೆಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದೇವೆ’ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸೋಮವಾರ ಸಂಜೆ 5ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಂಕ್ರಾಮಿಕದ ಎರಡನೆ ಅಲೆ ಮತ್ತು ಲಸಿಕಾ ಕಾರ್ಯಕ್ರಮಗಳ ಕುರಿತು ಮಾತನಾಡಿದರು. ಇದೇ ವೇಳೆ ಲಸಿಕೆ ಕುರಿತಂತೆ ವಿವಿಧ ರಾಜ್ಯಗಳು ಎತ್ತಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ರೂಪಿಸುವ ಭರವಸೆ ನೀಡಿದರು.

‘ಲಸಿಕಾ ಅಭಿಯಾನದಲ್ಲಿ ರಾಜ್ಯಗಳು ವಿಕೇಂದ್ರಿಕರಣ ಬಯಸಿದವು. ಆರೋಗ್ಯ ರಾಜ್ಯದ ವಿಷಯವಾಗಿದ್ದರಿಂದ ಅದು ಸೂಕ್ತವಾಗಿತ್ತು. ಆದರೆ ರಾಜ್ಯ ಸರ್ಕಾರಗಳು ತಮಗೆ ಎದುರಾದ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ವಿಫಲವಾದವು’ ಎಂದು ಮೋದಿ ರಾಜ್ಯ ಸರ್ಕಾರಗಳನ್ನು ದೂರಿದರು.

‘ಇನ್ನು ಮುಂದೆ 18-44 ವಯೋಮಾನದವರಿಗೂ ಉಚಿತ ಲಸಿಕೆ ಸಿಗಲಿದೆ. ಜೂನ್‍ 21ರಿಂದ ಉತ್ಪಾದಕರಿಂದ ಕೇಂದ್ರವು ಶೇ. 75 ಲಸಿಕೆಗಳನ್ನು ಖರೀದಿಸಲಿದ್ದು ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ. ಉಳಿದ ಶೇ. 25ರಷ್ಟನ್ನು ಖಾಸಗಿ ವಲಯ ನೇರ ಉತ್ಪಾದಕರಿಂದ ಖರೀದಿಸಲಿದೆ’ ಎಂದು ಮೋದಿ ಮೊದಲಿನ ಲಸಿಕಾ ನೀತಿಗೆ ವಿಭಿನ್ನವಾದ ಹೊಸ ಲಸಿಕಾ ನೀತಿಯನ್ನು ಘೋಷಿಸಿದರು.

ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯು ದೇಶದ ಕೆಲವು ಭಾಗಗಳಲ್ಲಿ ಕಡಿಮೆಯಾಗುವ ಲಕ್ಷಣಗಳನ್ನು ತೋರಿಸುತ್ತಿರುವ ಸಮಯದಲ್ಲಿ ಮತ್ತು ಅನೇಕ ರಾಜ್ಯಗಳು ಲಾಕ್‌ಡೌನ್‌ಗಳನ್ನು ಸರಾಗಗೊಳಿಸಲು ಆರಂಭಿಸಿದ ಸಂದರ್ಭದಲ್ಲಿ ಮೋದಿಯವರು ಇಂದು ಭಾಷಣ ಮಾಡಿದ್ದಾರೆ. ಪ್ರಕರಣಗಳು ಹೆಚ್ಚಾಗುತ್ತಿದ್ದಾಗ ಪ್ರಧಾನಿ ಮೋದಿ ಕೊನೆಯ ಬಾರಿಗೆ ರಾಷ್ಟ್ರವನ್ನು ಉದ್ದೇಶಿಸಿ ಏಪ್ರಿಲ್‍ 20ರಂದು ಮಾತನಾಡಿದ್ದರು.

‘ಎರಡನೇ ಅಲೆಯು ಚಂಡಮಾರುತದಂತೆ ಭಾರತವನ್ನು ಅಪ್ಪಳಿಸಿದೆ. ಆದರೆ ಲಾಕ್‍ಡೌನ್‍ಗಳನ್ನು ಕೊನೆಯ ಉಪಾಯವಾಗಿ ಮಾತ್ರ ಬಳಸಬೇಕೆಂದು ರಾಜ್ಯಗಳಿಗೆ ಹಿಂದೆಯೇ ಮನವಿ ಮಾಡಿದ್ದೆ’ ಎಂದು ಅವರು ನೆನಪಿಸಿದ್ದಾರೆ.

‘ನಮ್ಮ ವಿಜ್ಞಾನಿಗಳಲ್ಲಿ ನಮಗೆ ನಂಬಿಕೆ ಇತ್ತು, ಅದಕ್ಕಾಗಿಯೇ ಅವರು ತಮ್ಮ ಸಂಶೋಧನೆ ನಡೆಸುತ್ತಿರುವಾಗ, ನಾವು ಲಸಿಕಾ ಅಭಿಯಾನಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಸಿದ್ಧಪಡಿಸಿದ್ದೆವು…’ ಎಂದು ಪ್ರಧಾನಿ ತಮ್ಮ ಸರ್ಕಾರದ ಪೂರ್ವಸಿದ್ಧತೆಯ ಬಗ್ಗೆ ವಿವರಿಸಿದರು.

ಈ ಅದೃಶ್ಯ ವೈರಸ್ ವಿರುದ್ಧದ ಹೋರಾಟದಲ್ಲಿ ಆಂಟಿ-ಕೋವಿಡ್ ಪ್ರೋಟೋಕಾಲ್ ಪ್ರಮುಖ ಅಂಶವಾಗಿದೆ. ಲಸಿಕೆ ಇದರ ವಿರುದ್ಧ ರಕ್ಷಣೆಯ ಹೊದಿಕೆಯಂತಿದೆ … ನಮ್ಮಲ್ಲಿ ಭಾರತ ನಿರ್ಮಿತ ಲಸಿಕೆ ಇಲ್ಲದಿದ್ದರೆ ಸನ್ನಿವೇಶ ಹೇಗಿರುತ್ತಿತ್ತು ಎಂದು ಊಹಿಸಿ’ ಎಂದು ಪ್ರಧಾನಿ ಹೇಳಿದರು.

‘ಪೋಲಿಯೊ ಅಥವಾ ಹೆಪಟೈಟಿಸ್ ಬಿ ಆಗಿರಲಿ, ದೇಶವು ದಶಕಗಳವರೆಗೆ ಕಾಯಬೇಕಾಗಿತ್ತು. 2014ರಲ್ಲಿ ದೇಶವು ನಮಗೆ ಅವಕಾಶ ನೀಡಿದಾಗ, ವ್ಯಾಕ್ಸಿನೇಷನ್ ವ್ಯಾಪ್ತಿ ಆಗ ಕೇವಲ ಶೇ.60 ಆಗಿತ್ತು. ಅದು ಆತಂಕಕಾರಿ ಪರಿಸ್ಥಿತಿ. ಅದಕ್ಕೆ ಪರಿಹಾರವಾಗಿ ನಾವು ಮಿಷನ್ ಇಂದ್ರಧನುಷ್ ಅನ್ನು ಪ್ರಾರಂಭಿಸಿದ್ದೇವೆ. ನಾವು ಸಮರೋಪಾದಿಯಲ್ಲಿ ಕೆಲಸ ಮಾಡಿದ್ದೇವೆ. ಕೇವಲ 5-6 ವರ್ಷಗಳಲ್ಲಿ, ಲಸಿಕೆ ವ್ಯಾಪ್ತಿಯನ್ನು ಶೇ 60 ರಿಂದ 90ಕ್ಕೆ ಹೆಚ್ಚಿಸಲಾಗಿದೆ’ ಎಂದು ಇತರ ಲಸಿಕಾ ಅಭಿಯಾನಗಳ ಕುರಿತು ತಿಳಿಸಿದರು.

‘ಈಗ ಐಸಿಯು ಹಾಸಿಗೆಗಳು, ವೆಂಟಿಲೇಟರ್‌ಗಳು ಮತ್ತು ಇತರ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲಾಯಿತು. ಏಪ್ರಿಲ್-ಮೇನಲ್ಲಿ ಎರಡನೇ ಅಲೆಯಲ್ಲಿ ವೈದ್ಯಕೀಯ ಆಮ್ಲಜನಕಕ್ಕೆ ಊಹಿಸಲೂ  ಆಗದಷ್ಟು ಬೇಡಿಕೆ ಇತ್ತು. ನಾವು ಆಕ್ಸಿಜನ್‍ ಎಕ್ಸ್‌ಪ್ರೆಸ್‌ಗಳನ್ನು ಓಡಿಸುತ್ತಿದ್ದೇವೆ. ಸೈನ್ಯ ಮತ್ತು ನೌಕಾಪಡೆಯು ಕೂಡ ಭಾಗಿಯಾಗಿದ್ದವು. ಈಗ ಆಮ್ಲಜನಕ ಉತ್ಪಾದನೆಯನ್ನು ಹತ್ತು ಪಟ್ಟು ಹೆಚ್ಚಿಸಲಾಗಿದೆ’ ಎಂದು ಎರಡನೆ ಅಲೆ ಎದುರಿಸಲು ಮಾಡಲಾದ ಸಿದ್ಧತೆಗಳ ಬಗ್ಗೆ ತಿಳಿಸಿದರು.

‘ನಾವು ಕೊರನಾ ಎರಡನೇ ಅಲೆಯೊಂದಿಗೆ ಹೋರಾಡುತ್ತಿದ್ದೇವೆ. ಇತರ ದೇಶಗಳಂತೆ, ಈ ಅಲೆಯ ಸಮಯದಲ್ಲಿ ಭಾರತವು ಪ್ರಕ್ಷುಬ್ಧ ಸಮಯವನ್ನು ಅನುಭವಿಸಿತು. ಬಹಳಷ್ಟು ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ, ನನ್ನ ಸಂತಾಪ ಅವರೊಂದಿಗೆ ಇದೆ’ ಎಂದರು.

ಇದು ಕಳೆದ 100 ವರ್ಷಗಳಲ್ಲಿ ಅತಿದೊಡ್ಡ ಸಾಂಕ್ರಾಮಿಕ ರೋಗವಾಗಿದೆ. ಈ ಪ್ರಮಾಣದ ಸಾಂಕ್ರಾಮಿಕ ರೋಗಕ್ಕೆ ಆಧುನಿಕ ಪ್ರಪಂಚ ಸಾಕ್ಷಿಯಾಗಿಲ್ಲ. ಹೀಗಾಗಿ ಸವಾಲಿನಿಂದ ಇದರ ನಿರ್ಮೂಲನೆಗೆ ಎಲ್ಲರೂ ಯತ್ನಿಸಬೇಕಿದೆ’ ಎಂದರು.

ರಾಜಕೀಯ ಪಂಡಿತರು, ತಜ್ಞರ ಪ್ರಕಾರ, ಕೇಂದ್ರ ಸರ್ಕಾರಕ್ಕೆ ಲಸಿಕಾ ನೀತಿ ಬದಲಿಸುವ ಅಗತ್ಯವಿತ್ತು. 18-44 ವಯೋಮಾನದವರಿಗೂ ಉಚಿತ ನೀಡಲೇಬೇಕಿತ್ತು. ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ಸಂಶೋಧನಾ ಸಂಸ್ಥೆಗಳು ಇದನ್ನೇ ಹೇಳಿದ್ದವು. ಜನರಲ್ಲೂ ಸರ್ಕಾರದ ಬಗ್ಗೆ ಅಸಮಾಧಾನ ಶುರುವಾಗಿತ್ತು. ಈಗ ಎಚ್ಚೆತ್ತುಕೊಂಡ ಮೋದಿ ಸರ್ಕಾರ ಲಸಿಕಾ ನೀತಿಯಲ್ಲಿ ಯು-ಟರ್ನ್ ತೆಗೆದುಕೊಂಡಿದೆ, ಇದು ಜನಾಗ್ರಹಕ್ಕೆ ಸಿಕ್ಕ ಗೆಲುವು’ ಎಂದಿದ್ದಾರೆ.


ಇದನ್ನೂ ಓದಿ: ದೇಶವನ್ನು ಉದ್ದೇಶಿಸಿ ಪ್ರಧಾನಿ ಮಾತು- ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. 1947 ರಿಂದ 2013 ರವರೆಗೆ ದೇಶದಲ್ಲಿ ಯಾವುದೆ ರೋಗಗಳು ಬಂದರೆ ಅದರ ಲಸಿಕೆ ಗಳನ್ನು ಕಂಡು ಹಿಡಿಯಲು ಹಿಂದಿನ ಸರ್ಕಾರ ಗಳು ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತಿದ್ದರು.
    ಈಗಿನ ಬಿಜೆಪಿ ಸರ್ಕಾರ ತಮ್ಮ ಪಕ್ಷದ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಲು ಜನರ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ.
    ಹಾಗೂ ಕರೋನಾ ಬಗ್ಗೆ ಜನರಿಗೆ ಧೈರ್ಯ ತೋರಲಿಲ್ಲ. ಸರ್ಕಾರ ಜನರಿಗೆ ಹೆದರಿಸಿ ಜೀವ ಹೋಗೋ ಹಾಗೆ ಮಾಡ್ತಾಯಿದ್ದಾರೆ.ಇವರು ಲಸಿಕೆ ಕಂಡುಹಿಡದಿದ್ದೆವೆ ಅಂತಾರೆ ಜನ ಸಾಯ್ತಾಯಿದ್ದಾರೆ. ಈ ಸರ್ಕಾರ ಉಂಡು ಹೋದಾ,ಕೊಂಡು ಹೋದಾ ಅಂತ ನೇಡ್ಸತಾಯಿದ್ದರೆ. ಈ ಸರ್ಕಾರ ಕ್ಕೆ ಮಾನ,ಮರ್ಯಾದೆ, ನಾಚಿಕೆ ಇಲ್ಲಾ.ಇವರಿಗೆ ದುಡ್ಡೆ ಬೇಕು.

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....