ಯುಎಪಿಎ ಪ್ರಕರಣದಲ್ಲಿ ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರಿಗೆ ನೀಡಲಾಗಿದ್ದ ಜಾಮೀನು ಷರತ್ತನ್ನು ಸುಪ್ರೀಂ ಕೋರ್ಟ್ ಸೋಮವಾರ ಸಡಿಲಿಸಿದೆ. ನ್ಯಾಯಮೂರ್ತಿ ಪಿಎಸ್ ನರಸಿಂಹ ನೇತೃತ್ವದ ಪೀಠವು 2022 ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಮಾರ್ಪಡಿಸಿದೆ. “ಅರ್ಜಿದಾರರು ಸ್ಥಳೀಯ ಪೊಲೀಸ್ ಠಾಣೆಗೆ ವರದಿ ಮಾಡುವ ಅಗತ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಯುಎಪಿಎ ಪ್ರಕರಣ
2020 ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿಯ ಮೇಲೆ ನಡೆಸ ಸಾಮೂಹಿಕ ಅತ್ಯಾಚಾರದ ಬಗ್ಗೆ ವರದಿ ಮಾಡಲು ತೆರಳುತ್ತಿದ್ದಾಗ ಅವರನ್ನು ರಾಜ್ಯದ ಆದಿತ್ಯನಾಥ್ ಸರ್ಕಾರ ಬಂಧಿಸಿತ್ತು. ಬಂಧನದ ನಂತರ ಅವರ ವಿರುದ್ಧ ಪೊಲೀಸರು ಯುಎಪಿಎ ಪ್ರಕರಣ ದಾಖಲಿಸಿದ್ದರು. ಯುಎಪಿಎ ಪ್ರಕರಣ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಎರಡು ವರ್ಷಗಳ ಜೈಲು ಬಂಧನದ ನಂತರ 2022 ರ ಸೆಪ್ಟೆಂಬರ್ 9 ರಂದು ಸರ್ವೋಚ್ಚ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು. ಜಾಮೀನಿನ ವೇಳೆ ಪ್ರತಿಯೊಬ್ಬ ವ್ಯಕ್ತಿಗೂ ಮುಕ್ತ ಅಭಿವ್ಯಕ್ತಿಗೆ ಹಕ್ಕಿದೆ ಎಂದು ಸುಪ್ರಿಂಕೋರ್ಟ್ ಹೇಳಿತ್ತು.
ಜೈಲಿನಿಂದ ಬಿಡುಗಡೆಯಾದ ನಂತರ ಮುಂದಿನ ಆರು ವಾರಗಳ ಕಾಲ ದೆಹಲಿಯಲ್ಲಿಯೇ ಇದ್ದು ಪ್ರತಿ ವಾರ ಸೋಮವಾರ ಇಲ್ಲಿನ ನಿಜಾಮುದ್ದೀನ್ ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂಬ ಷರತ್ತಿನ ಜೊತೆಗೆ, ಹಲವು ಷರತ್ತುಗಳನ್ನು ಜಾಮೀನು ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ವಿಧಿಸಿತ್ತು. ಆರು ತಿಂಗಳ ನಂತರ ಕೇರಳದ ಮಲಪ್ಪುರಂನಲ್ಲಿರುವ ತನ್ನ ಸ್ವಗ್ರಾಮಕ್ಕೆ ಪ್ರಯಾಣಿಸಬಹುದು ಮತ್ತು ಪ್ರತಿ ಸೋಮವಾರ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ ಅಂದು ಹೇಳಿತ್ತು.
“ಕಪ್ಪನ್ ಅವರು ವಿಚಾರಣಾ ನ್ಯಾಯಾಲಯದ ಒಪ್ಪಿಗೆಯಿಲ್ಲದೆ ದೆಹಲಿಯ ಅಧಿಕಾರ ವ್ಯಾಪ್ತಿಯನ್ನು ತೊರೆಯಬಾರದು ಮತ್ತು ಅವರು ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಪ್ರತಿ ದಿನ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಬೇಕು. ಮೇಲ್ಮನವಿದಾರನು ತನ್ನ ಪಾಸ್‌ಪೋರ್ಟ್ ಅನ್ನು ತನಿಖಾ ಯಂತ್ರಕ್ಕೆ ಠೇವಣಿ ಇಡಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.
ಕಪ್ಪನ್ ಸೇರಿದಂತೆ ನಾಲ್ವರ ವಿರುದ್ಧ ಪಿಎಫ್‌ಐ ಜೊತೆಗೆ ಸಂಪರ್ಕ ಹೊಂದಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸರು ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳು ಹತ್ರಾಸ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದರು.
ಇದನ್ನೂ ಓದಿ: 370 ವಿಧಿ ರದ್ದತಿ ವಿರುದ್ಧ ನಿರ್ಣಯ | ಜಮ್ಮು ಕಾಶ್ಮೀರದ ಮೊದಲ ಅಧಿವೇಶನದಲ್ಲಿ ಗದ್ದಲ
370 ವಿಧಿ ರದ್ದತಿ ವಿರುದ್ಧ ನಿರ್ಣಯ | ಜಮ್ಮು ಕಾಶ್ಮೀರದ ಮೊದಲ ಅಧಿವೇಶನದಲ್ಲಿ ಗದ್ದಲ


