ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಹತ್ಯೆಯಾದ ಇಬ್ಬರು ಸಾಧುಗಳ ಕೊಲೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಘಟನೆಯನ್ನು ಕೋಮುವಾದಿಕರಣ ಮಾಡಬಾರದೆಂದು ಯೋಗಿ ಆದಿತ್ಯನಾಥ್ ಅವರಿಗೆ ಉದ್ಧವ್ ಠಾಕ್ರೆ ಪಾಠ ಹೇಳಿದ್ದಾರೆ.
52 ಮತ್ತು 35 ವರ್ಷದ ಸಾಧುಗಳ ನ್ನು ಸೋಮವಾರ ರಾತ್ರಿ ಹತ್ಯೆಗೆಯ್ಯಲಾಗಿದ್ದು, ಈ ಸಂಬಂಧ ರಾಜು ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಈ ಹಿಂದೆ ಸಾಧುಗಳು ಕೊಲೆಗಾರನ ವಿರುದ್ದ ಕಳ್ಳತನದ ಆರೋಪ ಹೊರಿಸಿದ್ದರು ಎನ್ನಲಾಗಿದೆ.
“ಯೋಗಿ ಆದಿತ್ಯನಾಥ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ ಮತ್ತು ಘಟನೆಯ ಬಗ್ಗೆ ಚರ್ಚಿಸಿದ್ದೇನೆ. ಇಂತಹ ಘೋರ ಅಪರಾಧದ ವಿರುದ್ಧ ನಾವು ನಿಮ್ಮೊಂದಿಗಿದ್ದೇವೆ ಎಂದು ನಾನು ಅವರಿಗೆ ಹೇಳಿದೆ. ಮಹಾರಾಷ್ಟ್ರದಲ್ಲಿಯೂ ಇದೇ ರೀತಿಯ ಘಟನೆ ಜರುಗಿತ್ತು. ಆಗ ನಾವು ಅದನ್ನು ಕೋಮುವಾದೀಕರಿಸಲು ಬಿಡಲಿಲ್ಲ. ಆರೋಪಿಗಳನ್ನಷ್ಟೇ ಬಂಧಿಸಿದೆವು. ಅದೇ ರೀತಿ ನೀವು ಸಹ ಘಟನೆಗೆ ಕೋಮುವಾದದ ಆಯಾಮ ನೀಡುವುದನ್ನು ತಪ್ಪಿಸಬೇಕೆಂದು ನಾನು ಬಯಸುತ್ತೇನೆ” ಎಂದು ಉದ್ಧವ್ ಠಾಕ್ರೆ ಟ್ವೀಟ್ ಮಾಡಿದ್ದಾರೆ.
मुख्यमंत्री उद्धव बाळासाहेब ठाकरे यांनी आज उत्तर प्रदेशचे मुख्यमंत्री @myogiadityanath जी यांच्याशी फोनवर चर्चा करून उत्तर प्रदेशमधील बुलंदशहर येथे घडलेल्या दोन साधूंच्या अमानुष हत्येवरून चिंता व्यक्त केली. अशा अमानुष घटने विरुद्ध आम्ही सर्व तुमच्यासोबत आहोत.
— Office of Uddhav Thackeray (@OfficeofUT) April 28, 2020
ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಈ ಹತ್ಯೆಗಳ ಬಗ್ಗೆ ಅಧಿಕಾರಿಗಳಲ್ಲಿ ವರದಿ ಕೇಳಿದ್ದಾರೆ.
ಮಹಾರಾಷ್ಟ್ರದ ಪಾಲ್ಘರ್‌ಲ್ಲಿ ಇಬ್ಬರು ಸಾಧುಗಳ ನ್ನು ಜನಸಮೂಹ ಹತ್ಯೆ ಮಾಡಿದ ನಂತರ ತನಿಖೆಗೆ ಒತ್ತಾಯಿಸಿದ ಬಿಜೆಪಿ ನಾಯಕರಲ್ಲಿ ಯೋಗಿ ಆದಿತ್ಯನಾಥ್ ಸಹ ಇದ್ದರು. ಮಹಾರಾಷ್ಟ್ರ ಸರ್ಕಾರವು ಘಟನೆಗೆ ಯಾವುದೇ ಕೋಮು ಸಂಬಂಧವನ್ನು ನಿರಾಕರಿಸಿದರೂ, ಹಲವಾರು ಬಿಜೆಪಿ ನಾಯಕರು ಇದು ಹಿಂದೂ ಸಾಧುಗಳ ಹತ್ಯೆ ಎಂಬ ಪ್ರಶ್ನೆಗಳನ್ನು ಎತ್ತಿದ್ದರು. ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಕರೆದು ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಿದರು
ಅನೇಕ ಶಿವಸೇನಾ ನಾಯಕರು ಈ ಹತ್ಯೆಗಳ ಬಗ್ಗೆ ಟ್ವೀಟ್ ಮಾಡಿ, ಇದಕ್ಕೆ ಕೋಮುವಾದಿ ತಿರುವು ನೀಡದಂತೆ ಎಚ್ಚರಿಕೆ ನೀಡಿದ್ದಾರೆ.
ಶಿವಸೇನೆ ನಾಯಕ ಸಂಜಯ್ ರೌತ್ “ಭಯಾನಕ! ಯುಪಿ ಯ ಬುಲಂದ್‌ಶಹರ್‌ನಲ್ಲಿರುವ ದೇವಸ್ಥಾನವೊಂದರಲ್ಲಿ ಇಬ್ಬರು ಸಂತರನ್ನು ಕೊಲ್ಲಲಾಗಿದೆ, ಆದರೆ ಮಹಾರಾಷ್ಟ್ರದ ಪಾಲ್ಘರ್ ಘಟನೆಯನ್ನು ಕೋಮುವಾದ ಮಾಡಲು ಪ್ರಯತ್ನಿಸಿದ ರೀತಿ ಇದನ್ನೂ ಕೋಮುವಾದಿಕರಣ ಮಾಡದಂತೆ ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
भयानक! बुलंदशहर, यूपी के एक मंदिर में दो साधुओं की हत्या, लेकिन मैं सभी से अपील करता हूं कि वे इसे सांप्रदायिक न बनाएं, जिस तरह से कुछ लोगों ने पालघर मामले में करने की कोशिश की।
— Sanjay Raut (@rautsanjay61) April 28, 2020
ರಾಜು ಭಾಂಗ್ (ಗಾಂಜಾ) ಸೇವಿಸಿ ನಂತರ ದೇವಸ್ಥಾನಕ್ಕೆ ಹೋಗಿ ಪುರೋಹಿತರನ್ನು ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾಗಿ ವರದಿಯಾಗಿವೆ.
ಬುಲಂದ್‌ಶಹರ್ ಕೊಲೆಗಳಲ್ಲಿ ಯಾವುದೇ ಕೋಮು ಆಯಾಮವನ್ನು ಉತ್ತರ ಪ್ರದೇಶ ಪೊಲೀಸರು ನಿರಾಕರಿಸಿದ್ದಾರೆ. ಆರೋಪಿ ವ್ಯಕ್ತಿ ಇನ್ನೂ “ಮತ್ತಿನಲ್ಲಿದ್ದು” ಅಮಲು ಸರಿಯಾದ ನಂತರ ಪ್ರಶ್ನಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಯುಪಿ ಹತ್ಯೆಯನ್ನು ರಾಜಕೀಯಗೊಳಿಸಬಾರದು ಮತ್ತು ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಇಬ್ಬರು ಸಾಧುಗಳ ಹತ್ಯೆ: ಆರೋಪಿ ಬಂಧನ


