Homeಅಂತರಾಷ್ಟ್ರೀಯ'ಕೊಳಕ ಹಿಂದೂ': ಅಮೆರಿಕಾದಲ್ಲಿ ಮತ್ತೊಂದು ಜನಾಂಗೀಯ ನಿಂದನೆ ಪ್ರಕರಣ

‘ಕೊಳಕ ಹಿಂದೂ’: ಅಮೆರಿಕಾದಲ್ಲಿ ಮತ್ತೊಂದು ಜನಾಂಗೀಯ ನಿಂದನೆ ಪ್ರಕರಣ

- Advertisement -
- Advertisement -

ಅಮೆರಿಕಾದಲ್ಲಿ ಭಾರತೀಯ ಮೂಲದ ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿ ಥಳಿಸಿದ್ದು ಇತ್ತೀಚೆಗೆ ವರದಿಯಾಗಿತ್ತು. ಅದರ ಬೆನ್ನಿಗೆ ಮತ್ತೊಂದು ಜನಾಂಗೀಯ ನಿಂದನೆ ಮಾಡಿರುವ ಘಟನೆ ಅಮೆರಿಕಾದಲ್ಲಿ ವರದಿಯಾಗಿದೆ. ಅದಾಗ್ಯೂ ಈ ಬಾರಿ ಜನಾಂಗೀಯ ನಿಂದನೆ ಮಾಡಿರುವುದು ಭಾರತೀಯ ಮೂಲದ ವ್ಯಕ್ತಿಯೆ ಎಂದು ತಿಳಿದು ಬಂದಿದೆ. ಹೊಸ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗದೆ.

ಆಗಸ್ಟ್ 21 ರಂದು ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಕೃಷ್ಣನ್ ಜಯರಾಮನ್ ಎಂಬ ವ್ಯಕ್ತಿಯನ್ನು ತೇಜಿಂದರ್ ಸಿಂಗ್ ಎಂಬವರು ನಿಂದಿಸಿದ್ದು, ‘ಕೊಳಕು ಹಿಂದೂ’ ಎಂದು ಕರೆದಿದ್ದಾರೆ. ಮಾಧ್ಯಮ ವೆಬ್‌ಸೈಟ್ KTLA ಪ್ರಕಾರ, ತೇಜಿಂದರ್‌‌ ಸಿಂಗ್ ಅವರು ಕೃಷ್ಣನ್ ಜಯರಾಮನ್‌ ಮೇಲೆ ಉಗುಳಿ, ಜನಾಂಗೀಯ ನಿಂದನೆ ಮಾಡಿದ್ದಾರೆ. “ನೀವು ಹಿಂದೂಗಳು ನಾಚಿಕೆಗೇಡಾಗಿದ್ದು, ಅಸಹ್ಯಕರ” ಎಂದು ತೇಜಿಂದರ್‌ ಸಿಂಗ್ ಹೇಳಿದ್ದಾರೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ವೀಡಿಯೊದಲ್ಲಿ ತೇಜಿಂದರ್‌‌ ಅವರು ಅಶ್ಲೀಲ ಪದ ಬಳಿಸಿದ್ದಾರೆ. ಆರೋಪಿ ತೇಜಿಂದರ್‌ ಸಿಂಗ್‌ ಕೃಷ್ಣನ್ ಅವರನ್ನು ‘ಅಸಹ್ಯಕರ’ ಎಂದು ಪದೇ ಪದೇ ಕರೆಯುತ್ತಾರೆ. ‘ಇದು ಭಾರತವಲ್ಲ’ ಎಂದು ತೇಜಿಂದರ್‌ ಹೇಳುತ್ತಾರೆ.

ತನ್ನ ಮೇಲೆ ದೌರ್ಜನ್ಯ ಎಸಗುವ ವ್ಯಕ್ತಿಯೂ ಭಾರತೀಯನೇ ಎಂಬ ಕಾರಣಕ್ಕೆ ಕೃಷ್ಣನ್ ವಿಚಲಿತರಾಗಿದ್ದು, ತನ್ನ ಮೇಲೆ ದೌರ್ಜನ್ಯ ಎಸಗುತ್ತಿರುವ ವ್ಯಕ್ತಿ ಇನ್ನೂ ಹೆಚ್ಚಿನ ದಾಳಿಗೆ ಇಳಿಯಬಹುದು ಎಂದು ಅವರು ಭಯಭೀತರಾಗಿದ್ದರು ಎಂದು ಇಂಡಿಯಾ ಟುಡೆ ಉಲ್ಲೇಖಿಸಿದೆ. ಕೊನೆಗೆ ಪೊಲೀಸರು ತೇಜಿಂದರ್‌ ಸಿಂಗ್ ಅವರನ್ನು ಹೊರಗೆ ಕರೆದುಕೊಂಡು ಹೋಗಿದ್ದಾರೆ. ಫ್ರೀಮಾಂಟ್ ಪೊಲೀಸರು ತೇಜಿಂದರ್ ಸಿಂಗ್ ವಿರುದ್ಧ ನಾಗರಿಕ ಹಕ್ಕುಗಳ ಉಲ್ಲಂಘನೆ, ಹಲ್ಲೆ ಮತ್ತು ಆಕ್ಷೇಪಾರ್ಹ ಭಾಷೆ ಬಳಸಿ ಶಾಂತಿ ಕದಡುವ ದ್ವೇಷದ ಅಪರಾಧದ ಆರೋಪ ಹೊರಿಸಿದ್ದಾರೆ.

ಇದನ್ನೂ ಓದಿ: ಅಮೆರಿಕ: ಭಾರತೀಯ ಮೂಲದ ಮಹಿಳೆಯರ ಮೇಲೆ ಜನಾಂಗೀಯ ದಾಳಿ

ಪೊಲೀಸ್ ಮುಖ್ಯಸ್ಥ ಸೀನ್ ವಾಷಿಂಗ್ಟನ್ ಸಾಮಾಜಿಕ ಮಾಧ್ಯಮದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದು, ಘಟನೆಯನ್ನು ಹೇಯ ಎಂದು ಬಣ್ಣಿಸಿದ್ದು, ದ್ವೇಷದ ಅಪರಾಧಗಳ ವಿರುದ್ಧ ಕಾನೂನುಬದ್ಧ ಕ್ರಮವನ್ನು ಭರವಸೆ ನೀಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -