Homeಅಂಕಣಗಳುನೂರರ ನೋಟ: ಎಗ್ಗಿಲ್ಲದೆ ನಡೆಯುತ್ತಿರುವ ’ಬಿಜೆಪಿ ಸೇರಿದರೆ ಆರೋಪಮುಕ್ತವಾಗುವ’ ರಾಜಕಾರಣ

ನೂರರ ನೋಟ: ಎಗ್ಗಿಲ್ಲದೆ ನಡೆಯುತ್ತಿರುವ ’ಬಿಜೆಪಿ ಸೇರಿದರೆ ಆರೋಪಮುಕ್ತವಾಗುವ’ ರಾಜಕಾರಣ

- Advertisement -
- Advertisement -

ಮೋದಿ ಸರ್ಕಾರ ಶಕ್ತಿಶಾಲಿಗಳಾದ ರಾಜಕಾರಣಿಗಳನ್ನು ಬಗ್ಗುಬಡಿದು ತಮ್ಮ ಅಧೀನರನ್ನಾಗಿ ಮಾಡಿಕೊಳ್ಳುತ್ತಿದೆ. ಮಿಥುನ್ ಚಕ್ರವರ್ತಿ ಮತ್ತು ಶತಾಬ್ದಿ ರೇ ಉದಾಹರಣೆಯನ್ನೇ ತೆಗೆದುಕೊಳ್ಳಿ. ಇವರುಗಳ ಹೆಸರು ಪಶ್ಚಿಮ ಬಂಗಾಳದಲ್ಲಿ ಮನೆ ಮಾತಾಗಿತ್ತು. ಇವರು ನಡೆಸುತ್ತಿದ್ದ ಶಾರದಾ ಚಿಟ್ ಫಂಡ್ ಸ್ಕೀಮ್‌ನಲ್ಲಿ 17 ಲಕ್ಷ ಹೂಡಿಕೆದಾರರು 2461 ಕೋಟಿ ರೂಪಾಯಿಗಳನ್ನು ಹೂಡಿದ್ದರು. ಇವರು ಹುಟ್ಟು ಹಾಕಿದ 200 ಖಾಸಗಿ ಕಂಪೆನಿಗಳು ಭಾಗಿಯಾಗಿದ್ದವು. 16000 ನೌಕರರು ಈ ಕಂಪೆನಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿಚಾರಣೆ ನಡೆಯುತ್ತಿದ್ದಂತೆ ಮಿಥುನ್ ಚಕ್ರವರ್ತಿ ಭಾರತೀಯ ಜನತಾ ಪಕ್ಷ ಸೇರಿಕೊಂಡರು. ಶತಾಬ್ದಿ ರೇ ತೃಣಮೂಲ ಕಾಂಗ್ರೆಸ್ಸಿನಲ್ಲೇ ಸದಸ್ಯರಾಗಿ ಉಳಿದುಕೊಂಡರು. ಶತಾಬ್ದಿ ರೇ ಅವರ ಆಸ್ತಿಯನ್ನು ಇ.ಡಿ ವಶಪಡಿಸಿಕೊಂಡಿತು. ಯುಪಿಎ ಸರ್ಕಾರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿದ್ದ ಮುಕುಲ್ ರಾಯ್ ಹಾಗೂ ಅಸ್ಸಾಂನ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಹಿಮಂತ ಬಿಸ್ವಾ ಶರ್ಮಾ ಅವರುಗಳಿಗೂ ಕೇಂದ್ರ ಬೇಹುಗಾರಿಕೆ ಸಂಸ್ಥೆಯ ತನಿಖಾಧಿಕಾರಿಗಳು ಬಿಸಿ ಮುಟ್ಟಿಸಿದರು. ಈ ಮಧ್ಯ ಅವರಿಬ್ಬರೂ ಬಿಜೆಪಿ ಸೇರಿಕೊಂಡರು. ಅದಾದ ನಂತರ ಅವರ ಮೇಲೆ ಏನೂ ಕ್ರಮ ಕೈಗೊಂಡ ಸುದ್ದಿ ಇಲ್ಲ.

ಈ ಪ್ರಕರಣಗಳು ಒಂದು ಅಂಶವನ್ನು ಹೊರಗೆಡುತ್ತದೆ. ನೀವು ಬಿಜೆಪಿಗೆ ಸೇರಿಬಿಟ್ಟರೆ, ಮೋದಿ ಷಾಗಳ ಪಾದ ಹಿಡಿದುಕೊಂಡುಬಿಟ್ಟರೆ, ನೀವು ಎಂತಹ ಘನಘೋರ ಕೃತ್ಯ ಎಸಗಿದ್ದರೂ ನಿಮಗೆ ರಕ್ಷಣೆ ಸಿಗುತ್ತದೆ. ನೀವು ಅವರಿಗೆ ಶರಣಾಗತರಾಗದಿದ್ದರೆ, ನಿಮ್ಮ ಭವಿಷ್ಯಕ್ಕೇ ಕುತ್ತು ಬರುತ್ತದೆ.

ಅಣ್ಣಾ ಹಜಾರೆ ತಮ್ಮ ನೈತಿಕ ಶಕ್ತಿಯ ಮೇಲೆ ಭರವಸೆ ಇಟ್ಟು ಹೋರಾಟ ಮಾಡುವವರು. ಲೋಕಾಯುಕ್ತ ಮಸೂದೆಯನ್ನು ಜಾರಿಗೆ ತರಲು ಒತ್ತಾಯಿಸಿ ಮನಮೋಹನ ಸಿಂಗ್ ಸರ್ಕಾರದ ವಿರುದ್ಧ, ಕ್ರಿಯಾಹೀನ ಪಾರ್ಲಿಮೆಂಟ್ ಸದಸ್ಯರ ವಿರುದ್ಧ ಸತ್ಯಾಗ್ರಹ ಹೂಡಿದರು. ಪಾರ್ಲಿಮೆಂಟಿನಲ್ಲಿ ಹತ್ತಾರು ವರ್ಷಗಳ ಹಿಂದೆ ಮಂಡಿಸಲಾದ ಲೋಕಾಯುಕ್ತ ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳದೆ ಕಾಲಹರಣ ಮಾಡಿದ ಲೋಕಸಭಾ ಸದಸ್ಯರನ್ನು ಅಣ್ಣಾಹಜಾರೆ ತರಾಟೆಗೆ ತೆಗೆದುಕೊಂಡಿದ್ದರು. ’ಈ ಸದಸ್ಯರು ತಮ್ಮ ಪಾತ್ರವನ್ನೇ ಯೋಗ್ಯವಾಗಿ ನಿರ್ವಹಿಸಿದ್ದರೆ, ಪ್ರಜೆಯಾದ ನಾನು ಸರ್ಕಾರದ ಬಾಗಿಲು ತಟ್ಟುವ ಕೆಲಸ ಮಾಡುತ್ತಿರಲಿಲ್ಲ. ಆದರೆ ನನ್ನ ಪ್ರತಿನಿಧಿಗಳು ನಿಷ್ಕ್ರಿಯರಾದಾಗ ಅದನ್ನು ಪ್ರಶ್ನಿಸುವ ಹಕ್ಕು ಪ್ರಜೆಯಾದ ನನಗಿದೆ’ ಎಂದು ಅಣ್ಣಾ ಹಜಾರೆ ವಾದ ಮಾಡಿದ ಮೇಲೆ ಪ್ರಧಾನಿಗಳು ಅವರಿಗೆ ಗೌರವಕೊಟ್ಟು ಲೋಕಾಯುಕ್ತ ಮಸೂದೆಯನ್ನು ಮಂಡಿಸಿ ಮಸೂದೆಗೆ ಪಾರ್ಲಿಮೆಂಟಿನ ಅನುಮೋದನೆ ಪಡೆದರು.

ಈ ಬಗೆಯ ನೈತಿಕ ಶಕ್ತಿಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಷಾಗಳಿಗೆ ನಂಬಿಕೆ ಇಲ್ಲ. ಅವರದೇನಿದ್ದರೂ ಕಿರುಕುಳ ಕೊಟ್ಟು ವಿರೋಧಿ ರಾಜಕಾರಣಿಗಳನ್ನು ಶರಣಾಗತರಾಗಿಸುವುದರಲ್ಲೇ ದೃಢವಾದ ನಂಬಿಕೆ. ಅಧಿಕಾರದ ದುರುಪಯೋಗ ಒಂದರಿಂದಲೇ ಸರ್ವಸ್ವವನ್ನೂ ಸಾಧಿಸಿಬಿಡುವೆವೆಂಬ ಅಹಂಕಾರ.
ಯಾರೇ ಮಾಡಬಾರದ್ದನ್ನೆಲ್ಲ ಮಾಡಿದ್ದರೂ, ಅವರು ಯಾವುದೇ ಪಾತಕ ಮಾಡಿದ್ದರೂ, ಅವರು ಬಿಜೆಪಿಗೆ ಶರಣಾಗತರಾದರೆ, ಅದು ಪಾತಕವೇ ಅಲ್ಲ. ಯಾರು ಮೋದಿಯವರನ್ನ ವಿರೋಧಿಸುತ್ತಾರೋ ಶರಣಾಗತರಾಗುವುದಿಲ್ಲವೋ ಅವರು ಮೋದಿ ಷಾಗಳ ದೃಷ್ಟಿಯಲ್ಲಿ ದೇಶದ್ರೋಹಿಗಳು.

ರಫೇಲ್ ಯುದ್ಧ ವಿಮಾನಗಳ ಖರೀದಿಯ ಸಂದರ್ಭದಲ್ಲಿ ಒಬ್ಬ ಖಾಸಗಿ ಭಾರತೀಯ ವ್ಯಕ್ತಿಗೆ ಕೋಟ್ಯಂತರ ರೂಗಳು ಹರಿದುಬರುವಂತೆ ಸರ್ಕಾರ ಮಸಲತ್ತು ಮಾಡಿದೆ ಎಂದು ಒಂದು ಫ್ರೆಂಚ್ ಮೂಲದ ಸುದ್ದಿವಾಹಿನಿ ವರದಿ ಮಾಡಿದೆ.

ರಫೇಲ್ ಯುದ್ಧ ವಿಮಾನಗಳನ್ನು ಕೊಳ್ಳುವ ಜವಾಬ್ದಾರಿಯನ್ನು ಮೊದಲು ಸರ್ಕಾರ ರಕ್ಷಣಾ ಸಚಿವಾಲಯಕ್ಕೆ ವಹಿಸಿತ್ತು. ರಕ್ಷಣಾ ಸಚಿವಾಲಯ ಉನ್ನತ ಸೈನ್ಯಾಧಿಕಾರಿಗಳ ಸಮಿತಿ ರಚಿಸಿ, ಅವರಿಗೆ ರಫೇಲ್ ಕೊಳ್ಳುವ ಬಗೆಗೆ ವ್ಯವಹರಿಸಲು ಅಧಿಕಾರ ನೀಡಿತು. ಅವರು ನಾಲ್ಕಾರು ಸಭೆಗಳನ್ನು ನಡೆಸಿ ವ್ಯವಹಾರ ಕುದುರಿಸುವ ಕೆಲಸ ಮಾಡುತ್ತಿರುವಾಗಲೇ ಮೋದಿಯವರ ಸರ್ಕಾರ ನೇರವಾಗಿ ತಾನೂ ಈ ಡೀಲ್‌ನಲ್ಲಿ ವ್ಯವಹರಿಸಲು ತೊಡಗುತ್ತದೆ. ಬೇಸರಗೊಂಡ ಸೈನ್ಯಾಧಿಕಾರಿಗಳ ಸಮಿತಿ ಬೇಸರಪಟ್ಟುಕೊಂಡು ಇನ್ನು ಮೇಲೆ ಸರ್ಕಾರವೇ ಈ ಸಂಬಂಧ ವ್ಯವಹಾರ ನಡೆಸಲಿ ಎಂದು ಹೇಳಿ ಮಾತುಕತೆಯಲ್ಲಿ ತೊಡಗಿಸಿಕೊಳ್ಳಲು ನಿರಾಕರಿಸಿತು. ಉನ್ನತಾಧಿಕಾರಿಗಳಿಗೆ ವಹಿಸಿದ್ದ ಕೆಲಸದಲ್ಲಿ ಮಧ್ಯೆ ತಲೆಹಾಕಿದ್ದು ತಪ್ಪು ಎಂದು ಮೋದಿಯವರಿಗೆ ಅನಿಸಲೇ ಇಲ್ಲ. ಯುದ್ಧ ವಿಮಾನದ ವಿಚಾರದಲ್ಲಿ ಏನೂ ತಿಳಿವಳಿಕೆ ಇಲ್ಲದ ಅಂಬಾನಿಯ ರಿಲಯನ್ಸ್ ಕಂಪನಿಯನ್ನು ಈ ವ್ಯವಹಾರದಲ್ಲಿ ಒಬ್ಬ ಪಾಲುದಾರರನ್ನಾಗಿಸುವಲ್ಲಿ ಯಶಸ್ವಿಯಾದರು. ವಿಮಾನ ನಿರ್ಮಾಣದಲ್ಲೇ ನಿರತವಾಗಿರುವ ರಕ್ಷಣಾ ಇಲಾಖೆಯ ಭಾಗವಾಗಿರುವ ಹಿಂದೂಸ್ತಾನ್ ಏರ್ ಕ್ರಾಫ್ಟ್‌ನವರು (ಹೆಚ್‌ಎಎಲ್) ತಮಗೆ ಈ ವಿಮಾನಗಳ ನಿರ್ಮಾಣದ ಕೆಲಸವನ್ನು ವಹಿಸುವುದಾದರೆ ಯುದ್ಧ ವಿಮಾನಗಳನ್ನು ತಯಾರಿಸಿಕೊಡುವುದಾಗಿ ನಿವೇದಿಸಿಕೊಂಡರೂ ಅದನ್ನು ಮೋದಿ ಸರ್ಕಾರ ತಳ್ಳಿಹಾಕಿತು.

ಈಗ ಈ ವ್ಯವಹಾರದಲ್ಲಿ ಭಾರತೀಯರೊಬ್ಬರಿಗೆ ಅಪಾರ ಹಣ ದೊರೆಯುವಂತೆ ಹುನ್ನಾರ ಮಾಡಿದೆಯೆಂದು ಆರೋಪಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ.

ಈ ಪ್ರಮುಖ ಪ್ರಕರಣದ ತನಿಖೆಯನ್ನು ಏಪ್ರಿಲ್ 24ರಂದು ನಿವೃತ್ತರಾದ ಮುಖ್ಯನ್ಯಾಯಾಧೀಶರ ನೇತೃತ್ವದ ಪೀಠವೇ ವಿಚಾರಣೆಗೆ ತೆಗೆದುಕೊಂಡಿತ್ತು. ಈಗ ಬೊಬ್ಡೆ ಅವರು ನಿವೃತ್ತರಾಗಿದ್ದು ಮುಂದಿನ ಮುಖ್ಯ ನ್ಯಾಯಮೂರ್ತಿಗಳು ಈ ವಿಚಾರಣೆಯ ನೇತೃತ್ವ ವಹಿಸುತ್ತಾರೆಯೇ ಕಾದು ನೋಡಬೇಕಿದೆ.

(ಇದು ಎಚ್ ಎಸ್ ದೊರೆಸ್ವಾಮಿಯವರು ಮೇ 5ರ ನ್ಯಾಯಪಥ ಸಂಚಿಕೆಗೆ ಬರೆದಿದ್ದ ಅಂಕಣ ಬರಹ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...