Homeಅಂತರಾಷ್ಟ್ರೀಯವಿಶ್ವಸಂಸ್ಥೆ: ಆಡಳಿತ & ಹಣಕಾಸು ಪ್ರಶ್ನೆಗಳ ಸಲಹಾ ಸಮಿತಿಗೆ ಭಾರತದ ವಿದಿಷಾ ಮೈತ್ರಾ ಆಯ್ಕೆ

ವಿಶ್ವಸಂಸ್ಥೆ: ಆಡಳಿತ & ಹಣಕಾಸು ಪ್ರಶ್ನೆಗಳ ಸಲಹಾ ಸಮಿತಿಗೆ ಭಾರತದ ವಿದಿಷಾ ಮೈತ್ರಾ ಆಯ್ಕೆ

ಏಷ್ಯಾ ಪೆಸಿಫಿಕ್‌ ಭಾಗದಿಂದ ಈ ಸಲಹಾ ಸಮಿತಿಗೆ ಆಯ್ಕೆಯಾದ ಮೊದಲ ಭಾರತೀಯ ಪ್ರಜೆ ಮೈತ್ರಾ ಆಗಿದ್ದು...

- Advertisement -
- Advertisement -

ವಿಶ್ವಸಂಸ್ಥೆಯ ಆಡಳಿತಾತ್ಮಕ ಹಾಗೂ ಹಣಕಾಸು ಪ್ರಶ್ನೆಗಳ ಸಲಹಾ ಸಮಿತಿಗೆ (ACABQ) ನಡೆದ ಚುನಾವಣೆಯಲ್ಲಿ, ಭಾರತೀಯ ರಾಜತಾಂತ್ರಿಕ ಅಧಿಕಾರಿ ವಿದಿಷಾ ಮೈತ್ರಾ ಕಠಿಣ ಸ್ಪರ್ಧೆಯ ನಡುವೆ ಆಯ್ಕೆಯಾಗಿದ್ದಾರೆ.

ಏಷ್ಯಾ ಪೆಸಿಫಿಕ್‌ ಭಾಗದಿಂದ ಈ ಸಲಹಾ ಸಮಿತಿಗೆ ಆಯ್ಕೆಯಾದ ಮೊದಲ ಭಾರತೀಯ ಪ್ರಜೆ ವಿದಿಷಾ ಮೈತ್ರಾ ಆಗಿದ್ದು, ಉಳಿದ ಅಭ್ಯರ್ಥಿಗಳು ಇರಾಕ್ ಮೂಲದವರಾಗಿದ್ದಾರೆ. ಇವರೆಲ್ಲರೂ ACABQನಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ.

193 ಸದಸ್ಯರನ್ನೊಳಗೊಂಡ ಸಾಮಾನ್ಯ ಸಭೆಯು ACABQ ಸಮಿತಿಗೆ ಸದಸ್ಯರನ್ನು ನೇಮಕ ಮಾಡುತ್ತದೆ. ಭೌಗೋಳಿಕ ಪ್ರಾತಿನಿಧ್ಯ, ವೈಯಕ್ತಿಕ ಅರ್ಹತೆ ಹಾಗೂ ಅನುಭವಗಳನ್ನು ಪರಿಗಣಿಸಿ ಈ ನೇಮಕಾತಿ ನಡೆಯುತ್ತದೆ. ಮತ್ತೊಬ್ಬ ಅಭ್ಯರ್ಥಿ ಇರಾಕ್‌ನ ಆಲಿ ಮೊಹಮ್ಮದ್‌ ಫೇಕ್‌ ಆಲ್‌ ದಬಾಕ್‌ ಎದುರು 126 ಮತಗಳಿಗೆ 64 ಮತಗಳನ್ನು ಪಡೆಯುವ ಮೂಲಕ ವಿದಿಶಾ ಮೈತ್ರಾ ಅಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಮಾನವಹಕ್ಕು ಹೋರಾಟಗಾರರ ಬಂಧನವಾಗುತ್ತಿದೆ: ವಿಶ್ವಸಂಸ್ಥೆ ಕಳವಳ

ACABQ ಸದಸ್ಯರಾಗಿ ಆಯ್ಕೆಯಾಗಿರುವ ವಿದಿಷಾ ಮೈತ್ರಾ ಅವರ ಅವಧಿ ಮೂರೂವರೆ ವರ್ಷಗಳಾಗಿದ್ದು, 2021 ಜನವರಿ 1ರಂದು ಆರಂಭವಾಗಲಿದೆ.

ಭಾರತವು ಭದ್ರತಾ ಮಂಡಳಿಯಲ್ಲಿ ಖಾಯಂ ಅಲ್ಲದ ಸದಸ್ಯ ದೇಶವಾಗಿ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿರುವ ಬೆನ್ನಲ್ಲೇ ಮೈತ್ರಾ ಅವರು ವಿಶ್ವಸಂಸ್ಥೆಯ ಸಲಹಾ ಸಮಿತಿಗೆ ನೇಮಕವಾಗಿದ್ದಾರೆ. ಈ ಸಮಿತಿಯು 16 ಸದಸ್ಯರನ್ನೊಳಗೊಂಡಿರುತ್ತದೆ.

ಈ ಸಮಿತಿ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಅವರು ಸಾಮಾನ್ಯ ಸಭೆಗೆ ಸಲ್ಲಿಸಿದ ಬಜೆಟ್ ಪರಿಶೀಲನೆ ಮತ್ತು ಆಡಳಿತಾತ್ಮಕ ಮತ್ತು ಬಜೆಟ್ ವಿಷಯಗಳ ಬಗ್ಗೆ ಸಾಮಾನ್ಯ ಸಭೆಗೆ ಸಲಹೆ ನೀಡುವುದು ಸೇರಿದಂತೆ ಹಲವಾರು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ.


ಇದನ್ನೂ ಓದಿ: ಹತ್ರಾಸ್ ಕುರಿತು ಹೇಳಿಕೆ: ವಿಶ್ವಸಂಸ್ಥೆಯ ಭಾರತೀಯ ಅಧಿಕಾರಿ ವಿರುದ್ಧ ವಿದೇಶಾಂಗ ಸಚಿವಾಲಯ ಗರಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...