ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಕಿಸಾನ್ ಏಕ್ತಾ ಮೋರ್ಚಾ, ಕಾರವಾನ್ ಇಂಡಿಯಾ ಸೇರಿ ಹಲವು ಪ್ರಮುಖ ಸಂಸ್ಥೆ, ಸಂಘಟನೆ ಹಾಗೂ ಸಾರ್ವಜನಿಕ ವ್ಯಕ್ತಿಗಳ ಟ್ವಿಟರ್ ಖಾತೆಯನ್ನು ಟ್ವಿಟರ್ ಇಂಡಿಯಾ ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಇದನ್ನು ಅಘೋಷಿತ ತುರ್ತುಪರಿಸ್ಥಿತಿ ಎಂದು ಕರೆಯಲಾಗಿದೆ.
ಮೇಲ್ನೋಟಕ್ಕೆ ಟ್ವಿಟರ್ ಯಾವ ಯಾವ ಖಾತೆಗಳನ್ನು ತಡೆಹಿಡಿದಿದೆಯೋ ಅವೆಲ್ಲವೂ ಸಹ ಪ್ರಸ್ತುತ ನಡೆಸುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿದ ಖಾತೆಗಳೇ ಆಗಿವೆ. ಹಾಗಾಗಿ ರೈತ ಹೋರಾಟವನ್ನು ಹಣಿಯುವ ಸಲುವಾಗಿಯೇ ಟ್ವಿಟರ್ ಈ ಕೆಲಸ ಮಾಡಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬಂದಿದೆ.
ರೈತ ಹೋರಾಟದ ಹೆಸರಿನಲ್ಲಿ ಅಶಾಂತಿ ಸೃಷ್ಟಿಸಲು ಯೋಜಿಸಿದ್ದ 250ಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಬೇಕು ಎಂಬ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಟ್ವಿಟರ್ ಇಂಡಿಯಾ ಈ ಕ್ರಮ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಇದನ್ನು ಜಾರಿಗೊಳಿಸಲಾಗಿದೆ ಎನ್ನಲಾಗಿದೆ.
#ModiPlanningFarmerGenocide ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಕ್ಕಾಗಿ ಅವು ನಕಲಿ, ಬೆದರಿಸುವ ಮತ್ತು ಪ್ರಚೋದನಕಾರಿ ಟ್ವೀಟ್‌ಗಳಾಗಿವೆ ಎಂದು ಟ್ವಿಟರ್ ಇಂಡಿಯಾ ಹೇಳಿದ್ದು, ಅರ್ಹ ಕಾರಣ ತಿಳಿಸಿದರೆ ಅವನ್ನು ಪರಿಶೀಲಿಸಲಾಗುವುದು ಎಂದಿದೆ. ಟ್ವಿಟರ್‌ನ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿ
“ಆಘಾತಕಾರಿ! ಟ್ವಿಟರ್ ಇಂಡಿಯಾ ‘ಕಾನೂನು ಬೇಡಿಕೆ’ಗಳಿಗೆ ಪ್ರತಿಕ್ರಿಯೆಯಾಗಿ ರೈತರ ಪ್ರತಿಭಟನೆಯ ಬಗ್ಗೆ ಮಾಹಿತಿ ನೀಡುವ ಹ್ಯಾಂಡಲ್‌ಗಳ ಹಲವಾರು ಖಾತೆಗಳನ್ನು ಅಮಾನತುಗೊಳಿಸುತ್ತದೆ! ಇದು ಯಾರ ಆದೇಶ? ಸರ್ಕಾರದ್ದೆ? ಖಂಡಿತವಾಗಿಯೂ ಯಾವುದೇ ನ್ಯಾಯಾಲಯದಲ್ಲ. ಟ್ವಿಟರ್ ಸರ್ಕಾರದ ಬೇಡಿಕೆಯಂತೆ ಕಾರ್ಯನಿರ್ವಹಿಸಿದರೆ ಅದು ತನ್ನನ್ನು ತಾನು ಸ್ವತಂತ್ರ ವೇದಿಕೆ ಎಂದು ಹೇಗೆ ಕರೆದುಕೊಳ್ಳಬಹುದು ಎಂದು ಪ್ರಶ್ನಿಸಿದ್ದಾರೆ.
Shocking! @TwitterIndia suspends several accounts of handles giving information about Farmers protests in response to 'legal demands'! Of whom? Govt? Certainly not of any court. If Twitter is going to kowtow to govt demands, how can it call itself an independent platform for FOE? https://t.co/98Wmnqrsga
— Prashant Bhushan (@pbhushan1) February 1, 2021
Undeclared emergency. pic.twitter.com/t9qwGHskim
— PuNsTeR™ (@Pun_Starr) February 1, 2021
ಪನ್‌ಸ್ಟೆರ್ ಎಂಬುವವರು ಟ್ವಿಟರ್‌ನ ಕ್ರಮವನ್ನು ಅಘೋಷಿತ ತುರ್ತುಪರಿಸ್ಥಿತಿ ಎಂದು ಕರೆದಿದ್ದಾರೆ.
So @thecaravanindia released this superb magazine cover this morning.
Now, “@thecaravanindia’s account has been withheld in India in response to a legal demand.” pic.twitter.com/9aVYI60zZv
— Raja Sen (@RajaSen) February 1, 2021
ಇಂದು ಬೆಳಿಗ್ಗೆ ಕಾರವಾನ್ ಪತ್ರಿಕೆಯು ನಟಿ ಅಕ್ಷಯ್ ಕುಮಾರ್ ಕುರಿತು ಆಕರ್ಷಕ ಮುಖಪುಟ ಪ್ರಕಟಿಸಿದೆ. ಮಧ್ಯಾಹ್ನವೇ ಅವರ ಟ್ವಿಟರ್ ಖಾತೆ ಬ್ಲಾಕ್ ಆಗಿದೆ ಎಂದು ರಾಜಾ ಸೆನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
Can we now use the word 'fascist'? https://t.co/RA2j8aiH2F
— Pratik Sinha (@free_thinker) February 1, 2021
ನಾವೀಗ ಫ್ಯಾಸಿಸ್ಟ್ ಎಂಬ ಪದವನ್ನು ಬಳಸಬಹುದೇ? ಎಂದು ಆಲ್ಟ್ ನ್ಯೂಸ್ ಸ್ಥಾಪಕ ಪ್ರತೀಕ್ ಸಿನ್ಹಾ ಪ್ರಶ್ನಿಸಿದ್ದಾರೆ.
ಕಿಸಾನ್ ಏಕ್ತಾ ಮೋರ್ಚಾ, ಕಾರವಾನ್ ಇಂಡಿಯಾ, ಟ್ರ್ಯಾಕ್ಟರ್ ಟು ಟ್ವಿಟರ್, ಜಾಟ್ ಜಂಕ್ಷನ್, ಸಿಪಿಐ(ಎಂ) ಮುಖಂಡ ಎಂ.ಡಿ ಸಲೀಂ, ಸಿಪಿಐ(ಎಂ) ಪಾಂಡಿಚೇರಿ, ಆಮ್ ಆದ್ಮಿ ಪಕ್ಷದ ಆರತಿ, ಪ್ರೀತಿ ಎಸ್ ಮೆನನ್, ಶಾಸಕ ಜರ್ನಲ್ ಸಿಂಗ್, ನಟ ಸುಶಾಂತ್, ಬಿಕೆಯು ಉಗ್ರಾಣ್ ಮುಂತಾದವರ ಖಾತೆಗಳನ್ನು ತಡೆಹಿಡಿಯಲಾಗಿದೆ. ಪ್ರಸಾರ್ ಭಾರಸಿ ಸಿಇಒ ಶಶಿ ಎಸ್‌ರವರ ಖಾತೆಯನ್ನು ಸಹ ಟ್ವಿಟರ್ ತಡೆಹಿಡಿದಿತ್ತು. ನಂತರ ಅದನ್ನು ತಪ್ಪು ಎಂದು ಪರಿಗಣಿಸಿ ಖಾತೆಯನ್ನು ಚಾಲ್ತಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕಿಸಾನ್ ಏಕ್ತಾ ಮೋರ್ಚಾ ಸೇರಿ ಹಲವರ ಟ್ವಿಟರ್ ಖಾತೆ ತಾತ್ಕಾಲಿಕ ಅಮಾನತು! ಭುಗಿಲೆದ್ದ ಆಕ್ರೋಶ


