Homeಮುಖಪುಟಈ ಬಜೆಟ್ ಶ್ರೀಮಂತರು ಮತ್ತು ಕಾರ್ಪೋರೇಟ್‌‌ಗಳಿಗೆ ಮಾತ್ರ: ನೆಟ್ಟಿಗರ ಆಕ್ರೋಶ

ಈ ಬಜೆಟ್ ಶ್ರೀಮಂತರು ಮತ್ತು ಕಾರ್ಪೋರೇಟ್‌‌ಗಳಿಗೆ ಮಾತ್ರ: ನೆಟ್ಟಿಗರ ಆಕ್ರೋಶ

- Advertisement -
- Advertisement -

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ (ಇಂದು) 2021–22ನೇ ಸಾಲಿನ ಕೇಂದ್ರ ಬಜೆಟ್‌ ಮಂಡಿಸಿದ್ದಾರೆ. ಕೊರೊನಾ ಹಿನ್ನಲೆಯಲ್ಲಿ ಎಂದಿನ ಸಂಪ್ರದಾಯವನ್ನು ಮುರಿದು ಈ ಬಾರಿ ಕಾಗದ ರಹಿತ ಬಜೆಟ್ ಮಂಡನೆ ಮಾಡಲಾಗಿದೆ. ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಎರಡನೇ ಅವಧಿಯ ಮೂರನೆ ಬಜೆಟ್ ಇದಾಗಿದೆ. ಅಲ್ಲದೆ, ಹಣಕಾಸು ಸಚಿವೆಯಾಗಿ ಇದು ನಿರ್ಮಲಾ ಸೀತಾರಾಮ್ ಮಂಡಿಸುವ ಮೂರನೆ ಬಜೆಟ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಹಲವಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಬಜೆಟ್ ಮಂಡಿಸುತ್ತಿದ್ದಂತೆ ಶೇರು ಸೂಚ್ಯಾಂಕ 5% ಹೆಚ್ಚಳವಾಗಿದೆ. ಈ ಹಿನ್ನಲೆಯಲ್ಲಿ ಈ ಬಜೆಟ್ ಯಾರಿಗೆ ಎಂದು ಸ್ಪಷ್ಟವಾಗುತ್ತಿದೆ, ಇದು ಬಂಡವಾಳಶಾಹಿಗಳಿಗೆ ಮತ್ತು ಶ್ರೀಮಂತರ ಪರವಿರುವ ಬಜೆಟ್ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಸಂಪತ್ತನ್ನು ಮೋದಿ ತನ್ನ ಕ್ರೋನಿ ಕ್ಯಾಪಿಟಲಿಸ್ಟ್‌ ಗೆಳೆಯರಿಗೆ ಧಾರೆಯೆರೆಯುತ್ತಿದ್ದಾರೆ: ರಾಹುಲ್ ಗಾಂಧಿ

ಕಾಂಗ್ರೆಸ್ ಸಂಸದ ಶಶಿ ತರೂರ್‌, “ಬಿಜೆಪಿ ಸರ್ಕಾರವು ಕೆಲಸ ಮಾಡಲು ಗೊತ್ತಿಲ್ಲದ ಗ್ಯಾರೇಜ್ ಮೆಕ್ಯಾನಿಕ್‌ನನ್ನು ನೆನಪಿಸುತ್ತದೆ. ಅವನು ತನ್ನ ಗ್ರಾಹಕರಿಗೆ ’ನನಗೆ ನಿಮ್ಮ ಬ್ರೇಕ್‌ಗಳನ್ನು ಸರಿಪಡಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ನಾನು ನಿಮ್ಮ ಹಾರ್ನ್ ಸದ್ದನ್ನು ಜೋರಾಗಿ ಮಾಡಿದೆ’ ಎಂದು ಹೇಳಿದ್ದನ್ನು ನೆನಪಿಸುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ.

ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, “ಬಜೆಟ್ ದಿನದಂದು ಮೋದಿ ಸರ್ಕಾರವು ಭಾರತವನ್ನು ಬೆರಳೆಣಿಕೆಯಷ್ಟು ಕಾರ್ಪೊರೇಟ್‌ಗಳಿಗೆ ಮಾರಾಟ ಮಾಡಲು ನಿರ್ಧರಿಸಿದೆ. ಅಲ್ಲದೆ ಹಲವಾರು ರೈತ ಪರ, ಬಡವರ ಪರ, ಜಾತಿ ವಿರೋಧಿ ಧ್ವನಿಗಳನ್ನು ಟ್ವಿಟರ್‌ನಲ್ಲಿ ತಡೆಹಿಡಿದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ ಹೋರಾಟಕ್ಕೆ ಬೆಂಬಲ ನೀಡುವ ಹಲವಾರು ಸಮಾಜಿಕ ಕಾರ್ಯಕರ್ತರ ಹಾಗೂ ಪತ್ರಿಕೆಗಳ ಟ್ವಿಟ್ಟರ್‌ ಅಕೌಂಟುಗಳಿಗೆ ಟ್ವಿಟ್ಟರ್‌ ಈಗಷ್ಟೇ ತಡೆ ಮಾಡಿದೆ.

ಇದನ್ನೂ ಓದಿ: ರಾಕೇಶ್ ಟಿಕಾಯತ್ (2013-21)ರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ‘ಹರ್ ಹರ್ ಮಹಾದೇವ್, ಅಲ್ಲಾಹು ಅಕ್ಬರ್’…

ಬಿಹಾರ ವಿಧಾನ ಸಭೆಯ ವಿಪಕ್ಷ ನಾಯಕ ತೇಜಸ್ವಿ ಯಾದವ್‌, “ಇದು ದೇಶವನ್ನು ಮಾರಾಟ ಮಾಡುವ ಬಜೆಟ್. ಇದು ಸರ್ಕಾರಿ ಸಂಸ್ಥೆಗಳು ಮತ್ತು ಆಸ್ತಿಗಳನ್ನು ಮಾರಾಟ ಮಾಡುವ ಸೇಲ್ ಆಗಿದ್ದು, ಇದು ಬಜೆಟ್ ಅಲ್ಲ. ರೈಲು, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಕೆಂಪು ಕೋಟೆ, ಬಿಎಸ್ಎನ್ಎಲ್, ಎಲ್ಐಸಿ ಮಾರಾಟ ಮಾಡಿದ ನಂತರ, ಬಿಜೆಪಿ ಈಗ ಬ್ಯಾಂಕುಗಳು, ಬಂದರುಗಳು, ವಿದ್ಯುತ್ ಮಾರ್ಗಗಳು , ರಾಷ್ಟ್ರೀಯ ರಸ್ತೆಗಳು, ಕ್ರೀಡಾಂಗಣ, ತೈಲ ಪೈಪ್‌ಲೈನ್‌ನಿಂದ ಗೋದಾಮಿನವರೆಗೆ ಬಿಜೆಪಿ ಮಾರಾಟ ಮಾಡಲು ನಿರ್ಧರಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್, “2020-21 ರಲ್ಲಿ ಪಿಎಂ ಕಿಸಾನ್‌‌ ಯೋಜನೆಯು 75 ಸಾವಿರದಿಂದ 2021-22ರಲ್ಲಿ 65 ಸಾವಿರಕ್ಕೆ ಇಳಿದಿದೆ. ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ಮತ್ತು ಬೆಲೆ ಬೆಂಬಲ ಯೋಜನೆಗೆ (ಎಂಐಎಸ್-ಪಿಎಸ್ಎಸ್) ಬಜೆಟ್‌ನಲ್ಲಿ 2000 ಕೋಟಿಯಿಂದ 1501 ಕೋಟಿಗೆ ಇಳಿಸಲಾಗಿದೆ. ಇದು ಬಜೆಟ್ ಭಾಷಣವನ್ನು ಮೀರಿದ ನಿಜವಾದ ಬಜೆಟ್ ಸುದ್ದಿ!” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಿಸಾನ್‌ ಏಕ್ತಾ ಮೋರ್ಚಾ ಸೇರಿ ಹಲವರ ಟ್ವಿಟರ್‌ ಖಾತೆ ತಾತ್ಕಾಲಿಕ ಅಮಾನತು! ಭುಗಿಲೆದ್ದ ಆಕ್ರೋಶ

ಸಿಪಿಐಎಂ ಪಕ್ಷವು, “ಆತ್ಮನಿರ್ಭರ್ ಹೆಸರಿನಲ್ಲಿ, ಸರ್ಕಾರವು ಖಾಸಗೀಕರಣಕ್ಕೆ ಮುಂದಾಗಿದೆ. ವಿಮೆಯಲ್ಲಿ ಎಫ್‌ಡಿಐ, ರೈಲ್ವೆಯಲ್ಲಿ ಪಿಪಿಪಿ ಮಾದರಿ. ಈ ಬಜೆಟ್ ಕಾರ್ಪೋರೇಟ್‌ಗಳಿಗೆ ಮಾತ್ರ” ಎಂದು ಹೇಳಿದೆ.

ಆವಿ ಎಂಬ ಟ್ವಿಟ್ಟರ್‌ ಅಕೌಂಟ್, “ಶೇರುಪೇಟೆ ಶೂಚ್ಯಂಕ 5% ಹೆಚ್ಚಾಗಿದೆ. ಈ ಬಜೆಟ್‌‌ನಿಂದ ಯಾರಿಗೆ ಖುಷಿಯಾಗಿದೆ ಎಂದು ತಿಳಿಯುತ್ತದೆ. ಶ್ರೀಮಂತರು ಮತ್ತು ಬಂಡವಾಳಶಾಹಿಗಳು ಮಾತ್ರ ಎಂದು ಹೇಳಿದೆ.

ಇದನ್ನೂ ಓದಿ: ಕೇಂದ್ರ ಮಿನಿ ಬಜೆಟ್‌ 2021: ಇಲ್ಲಿವೆ ಪ್ರಮುಖಾಂಶಗಳು

 

ಇದನ್ನೂ ಓದಿ: ವಿದೇಶಿ ಕಂಪನಿಗಳು ಈ ನೆಲದ ಕಾನೂನನ್ನು ಗೌರವಿಸಲಿ: ಟೊಯೊಟಾ ಕಾರ್ಮಿಕರ ಹೊರಾಟದಲ್ಲಿ ಸಿದ್ದರಾಮಯ್ಯ

ವಿಧಾನಸಭಾ ಅಧಿವೇಶನದ ಲೈವ್‌ ವಿಡಿಯೋ►►

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...