Homeಕರೋನಾ ತಲ್ಲಣಹಳ್ಳಿಗಳಲ್ಲಿ ದಾಖಲಾಗದ ಕೋವಿಡ್ ಸಾವುಗಳು: ಸಾಲುತ್ತಿಲ್ಲ ಕರ್ನಾಟಕದ ಆರೋಗ್ಯ ವ್ಯವಸ್ಥೆ..

ಹಳ್ಳಿಗಳಲ್ಲಿ ದಾಖಲಾಗದ ಕೋವಿಡ್ ಸಾವುಗಳು: ಸಾಲುತ್ತಿಲ್ಲ ಕರ್ನಾಟಕದ ಆರೋಗ್ಯ ವ್ಯವಸ್ಥೆ..

- Advertisement -
- Advertisement -

‘ನಮ್ಮ ರಾಜ್ಯದ ಆರೋಗ್ಯ ವ್ಯವಸ್ಥೇಯೇ ಹಳ್ಳ ಹಿಡಿದಿದೆ ಎಂಬುದು ಸಾಬೀತಾಗುತ್ತಿದೆ’ ಎಂದು ಅದೇ ತಾನೇ ಕೋವಿಡ್ ಕೇರ್ ಸೆಂಟರ್‌ನಿಂದ ಹೊರಬಂದ ಧಾರವಾಡದ ಸರ್ಕಾರಿ ವೈದ್ಯರೊಬ್ಬರು ತುಂಬ ಕಳವಳದಲ್ಲಿ ನಾನುಗೌರಿ.ಕಾಂಗೆ ಹೇಳಿದರು.

ಈಗ ಕೋವಿಡ್ ಎರಡನೇ ಅಲೆ ಹಳ್ಳಿಗಳಿಗೆ ದಾಳಿ ಇಟ್ಟಿದೆ. ಇದೇನೂ ಅನಿರೀಕ್ಷಿತವಲ್ಲ. ನಮ್ಮ ಪ್ರಭುತ್ವ ತೋರಿದ ಹೊಣೆಗೇಡಿತನವೇ ಇದಕ್ಕೆ ಕಾರಣ. ಉತ್ತರಪ್ರದೇಶ, ಬಿಹಾರ್ ರಾಜ್ಯಗಳ ಕೋವಿಡ್ ಶವಗಳು ಗಂಗೆಯಲ್ಲಿ ತೇಲಿ ಹೋಗಿದ್ದು ಕಣ್ಣಿಗೆ ರಾಚಿ ಹೋದ ದೃಶ್ಯಗಳಾಗಿದ್ದವು. ಪ್ರಧಾನಿ ಕೂಡ ಅತ್ತಂತೆ ಮಾಡಿದರು. ಆದರೆ ಇಲ್ಲಿ ಕರ್ನಾಟಕದ ಹಳ್ಳಿಗಳಲ್ಲಿ ಕೋವಿಡ್ ಸಾವುಗಳು ವರದಿಯಾಗದೇ ಹೋಗುತ್ತಿವೆ.

ಕಲಬುರಗಿ ಜಿಲ್ಲೆಯ ಹಳ್ಳಿ ಹಳ್ಳಿಗಳನ್ನು ಸುತ್ತಿದ ಪ್ರಜಾವಾಣಿ ವರದಿಗಾರ ಮನೋಜ್ ಕುಮಾರ್ ಗುದ್ದಿ, ‘ಹಳ್ಳಿಗಳಲ್ಲಿ ಪರೀಕ್ಷೆಯೇ ಆಗ್ತಿಲ್ಲ. ಲಸಿಕೆಯಂತೂ ದೂರದ ಮಾತು. ಕೋವಿಡ್‌ಗೆ ಅಪ್ಪ ಸತ್ತರೆ ಅಂತ್ಯಸಂಸ್ಕಾರ ಮಾಡಲು ಮಗನಿಲ್ಲ. ಏಕೆಂದರೆ ಆತನೂ ಕೋವಿಡ್ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಂದೇ ಕುಟುಂಬದಲ್ಲಿ 3-4 ಕೋವಿಡ್ ಸಾವು ಸಂಭವಿಸುತ್ತಿವೆ. ಪರಿಸ್ಥಿತಿ ಭೀಕರವಾಗಿದೆ’ ಎಂದು ನಾನುಗೌರಿ. ಕಾಂಗೆ ತಿಳಿಸಿದರು.

ಇತ್ತೀಚೆಗೆ ಪ್ರಮುಖ ದಿನಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಉಲ್ಲೇಖಿಸಿದ ಧಾರವಾಡದ ಸರ್ಕಾರಿ ವೈದ್ಯರು, ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಕಳೆದ 15 ದಿನಗಳಲ್ಲಿ 60 ಸಾವು ಸಂಭವಿಸಿವೆ. ಇದರಲ್ಲಿ ಕೇವಲ 4 ಸಾವುಗಳನ್ನು ಕೋವಿಡ್ ಸಾವುಗಳು ಎಂದು ದಾಖಲಿಸಲಾಗಿದೆ. ಇದನ್ನು ನಂಬಲಾಗುತ್ತದೆಯೇ? ಕೋವಿಡ್ ಸಂಬಂಧಕ್ಕೇ ಹೃದಯಾಘಾತ ಹೊಂದಿದವರ ಸಾವನ್ನು ಹೃದಯಾಘಾತ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ತಮ್ಮ ತಮ್ಮ ಜವಾಬ್ದಾರಿಗಳನ್ನು ಮರೆತ ವೈದ್ಯ ಸಿಬ್ದಂದಿ ಅಸಹಾಯಕವಾಗಿದೆಯೋ ಅಥವಾ ದಾರಿ ತಪ್ಪಿಸುತ್ತಿದೆಯೋ ಗೊತ್ತಾಗುತ್ತಿಲ್ಲ’ ಎನ್ನುತ್ತಾರೆ.

ಕಲಬುರ್ಗಿ ಕತೆ

ನಿತ್ಯ ದುಡಿದು ಮನೆಯನ್ನು ನಡೆಸುವ ಯುವಕರು, ಚಿಕ್ಕವರಿಗೆ ಮಾರ್ಗದರ್ಶನ ಮಾಡುತ್ತಿದ್ದ ಹಿರಿಯರು, ಮೊಮ್ಮಕ್ಕಳಿಗೆ ಚಂದಮಾಮನ ಕಥೆ ಹೇಳಿ ರಂಜಿಸುತ್ತಿದ್ದ ಅಜ್ಜ, ಅಜ್ಜಿ ಹೀಗೆ ಮನೆಗೆ, ಗ್ರಾಮಗಳಿಗೆ ಊರುಗೋಲಾಗಿದ್ದವರನ್ನೇ ಕೊರೋನಾದ ಎರಡನೇ ಅಲೆ ಆಪೋಶನ ತೆಗೆದುಕೊಂಡಿದೆ. ಅವರ ಬದುಕನ್ನು ನುಂಗಿ ನೀರು ಕುಡಿದಿದೆ ಎಂದು ಪ್ರಜಾವಾಣಿಯ ಮನೋಜ್ ಬರೆಯುತ್ತಾರೆ. ಹಲವಾರಿ ಹಳ್ಳಿಗಳನ್ನು ಸುತ್ತಿ ವಿಡಿಯೋ ವರದಿ ಮಾಡಿದ ಮನೋಜ್, ನಾನುಗೌರಿಯೊಂದಿಗೆ ಮಾತನಾಡುತ್ತ, 20ನೇ ಶತಮಾನದಲ್ಲಿ ಕಾಣಿಸಿಕೊಂಡ ಪ್ಲೇಗ್ ಮಹಾಮಾರಿ, 1970ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡ ‘ಡೌಗಿ’ ಬರದ ಬಳಿಕ ಕೊರೋನಾ ಹಾವಳಿಯಿಂದಾಗಿ ಇಷ್ಟೊಂದು ಸಾವುಗಳು ಸಂಭವಿಸಿದ್ದರಿಂದ ಗ್ರಾಮಗಳು ಅಕ್ಷರಶಃ ತತ್ತರಿಸಿ ಹೋಗಿವೆ’ ಎನ್ನುತ್ತಾರೆ.

ಆಳಂದ ತಾಲ್ಲೂಕಿನ ಗಡಿ ಗ್ರಾಮಗಳಾದ ಆಳಂಗಾ, ಖಜೂರಿ, ಅಫಜಲಪುರ ತಾಲ್ಲೂಕಿನ ಬಂದರವಾಡ, ಗೊಬ್ಬುರ (ಬಿ), ಚೌಡಾಪುರ, ಕಲಬುರ್ಗಿ ತಾಲ್ಲೂಕಿನ ಸಣ್ಣೂರ, ಹಾಗರಗಾ, ದಾರ್ಯ ನಾಯಕ ತಾಂಡಾ, ಖಾಜಾ ಕೋಟನೂರ, ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ, ಮಾಡಬೂಳ, ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಸೇಡಂ ತಾಲ್ಲೂಕಿನ ಮಳಖೇಡ, ರಾಜಶ್ರೀ ಸಿಮೆಂಟ್ ಕಾರ್ಖಾನೆಗೆ ಹೊಂದಿಕೊಂಡಂತಿರುವ ಹೂಡಾ (ಬಿ) ಸೇರಿದಂತೆ ಹಲವು ಗ್ರಾಮಗಳಲ್ಲಿ ತಮ್ಮ ಸಂಬಂಧಿಕರು, ನೆರೆ ಹೊರೆಯವರನ್ನು ಕಳೆದುಕೊಂಡ ದುಃಖ, ಬೇಸರ ಕುದಿ ಮೌನದ ರೂಪದಲ್ಲಿದೆ ಎಂದು ಮನೋಜ್ ನಮಗೆ ತಿಳಿಸಿದರು.

ವಿಚಿತ್ರ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಕೋವಿಡ್‌ನಿಂದ ಮೃತಪಟ್ಟ ತಂದೆಗೆ ಅಂತ್ಯಸಂಸ್ಕಾರ ಮಾಡಬೇಕಿದ್ದ ಮಗ ಆಸ್ಪತ್ರೆಯಲ್ಲಿ ಅದೇ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾನೆ. ಪತಿ ಸತ್ತ ಸುದ್ದಿ ಪಕ್ಕದ ಕೋವಿಡ್ ವಾರ್ಡ್ನಲ್ಲಿರುವ ಪತ್ನಿಗೂ ತಿಳಿಸಲಾಗದೇ ಅಂತ್ಯಸಂಸ್ಕಾರ ಮಾಡುವ ಅನಿವಾರ್ಯತೆ ಎದುರಾಗಿದೆ ಈಗ.
3 ಸಾವಿರ ಜನಸಂಖ್ಯೆ ಹೊಂದಿರುವ ಪುಟ್ಟ ಊರಲ್ಲಿ ಒಂದೇ ದಿನ ನಾಲ್ಕು ಜನ ತೀರಿಕೊಂಡ, ಬೆಳಿಗ್ಗೆ ತಂದೆ, ಸಂಜೆ ಮಗ ತೀರಿಕೊಂಡ, ಸ್ವತಃ ವೈದ್ಯ ಪತಿಯ ಕಣ್ಣೆದುರೇ ಉಸಿರುಗಟ್ಟಿ ಅಪಾರ ಯಾತನೆಯಿಂದ ಪತ್ನಿ ಮೃತಪಟ್ಟ ಉದಾಹರಣೆಗಳೂ ಇವೆ ಎನ್ನುತ್ತಾರೆ ಮನೋಜ್.

ಮಾರ್ಚ್ ಕೊನೆಯ ಹಾಗೂ ಏಪ್ರಿಲ್ ಮೊದಲ ವಾರದಲ್ಲಿ ಜಿಲ್ಲೆಯ ಗ್ರಾಮಗಳಿಗೆ ಹರಡಿದ ಕೊರೋನಾ ಸೋಂಕು ಸದ್ದಿಲ್ಲದೇ ಜನರ ಸಾವಿಗೆ ಕಾರಣವಾಯಿತು. ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಆಳಂದ, ಅಫಜಲಪುರ ತಾಲ್ಲೂಕುಗಳಲ್ಲಿ ಚೆಕ್ ಪೋಸ್ಟ್ ಆರಂಭಿಸಲಾಯಿತಾದರೂ ಕಟ್ಟುನಿಟ್ಟಿನ ತಪಾಸಣೆ ನಡೆಯಲಿಲ್ಲ. ಕೊರೊನಾ ನೆಗೆಟಿವ್ ಪ್ರಮಾಣಪತ್ರವನ್ನು ಪರಿಶೀಲಿಸದೆಯೇ ಎಷ್ಟೋ ಸಂದರ್ಭಗಳಲ್ಲಿ ಜಿಲ್ಲೆಗೆ ಪ್ರವೇಶ ನೀಡಲಾಯಿತು.

ಅಲ್ಲಿ ಏರುಗತಿ, ಇಲ್ಲಿ ಚೆಕಿಂಗ್ ಇಲ್ಲ!

ಕಲಬುರಗಿ ಜಿಲ್ಲೆಯ ಕೆಲಭಾಗ ಮಹಾರಾಷ್ಟ್ರದ ಗಡಿಗಳಿಗೆ ಹೊಂದಿಕೊಂಡಿದೆ ಮತ್ತು ಎರಡೂ ಕಡೆ ಕೊಡಕೊಳ್ಳುವ ಸಂಬಂಧವಿದೆ. ಇಲ್ಲಿಯವರು ಅಲ್ಲಿ, ಅಲ್ಲಿನವರು ಇಲ್ಲಿ ಕೆಲಸ ಮಾಡುತ್ತಾರೆ. ಜೊತೆಗೆ ವೈವಾಹಿಕ ಸಂಬಂಧಗಳಂತೂ ಸಹಜವಾಗಿವೆ. ಮಹಾರಾಷ್ಟ್ರದಲ್ಲಿ ಪ್ರಕರಣಗಳು ಏರುಗತಿಯಲ್ಲಿದ್ದ ಸಂದರ್ಭದಲ್ಲಿಯೂ ಕಲಬುರ್ಗಿ ಜಿಲ್ಲೆಗೆ ಬರುವ ಮಹಾರಾಷ್ಟ್ರ ಸಾರಿಗೆ ಬಸ್ ಹಾಗೂ ಇಲ್ಲಿಂದ ಪ್ರಯಾಣ ಆರಂಭಿಸಿ ವಾಪಸ್ ಜಿಲ್ಲೆಗೆ ಮುಂಬೈ, ಪುಣೆಯಲ್ಲಿದ್ದ ಜನರನ್ನು ಕರೆತಂದ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ತಪಾಸಣೆ ಮಾಡಲೇ ಇಲ್ಲ.
ಆಳಂದ ತಾಲ್ಲೂಕಿನ ಗಡಿ ಗ್ರಾಮ ಖಜೂರಿ ಚೆಕ್‌ಪೋಸ್ಟ್‌ನಲ್ಲಿ ಹೇಳಿಕೊಳ್ಳುವಂಥ ಕಟ್ಟುನಿಟ್ಟು ಕಂಡು ಬರಲೇ ಇಲ್ಲ.

ಧಾರವಾಡ ಮತ್ತು ಬೆಳಗಾವಿ ಕೂಡ ಮಹಾರಾಷ್ಟ್ರದ ಜೊತೆ ಗಡಿ ಹಂಚಿಕೊಂಡಿವೆ ಮತ್ತು ಆಪ್ತ ಸಂಬಂಧಗಳನ್ನು ಹೊಂದಿವೆ ಎಂಬುದನ್ನು ಇಲ್ಲಿ ನೆನಪಿಡಬೇಕು. ಹತ್ತು ದಿನಗಳ ಹಿಂದೆ ಮುಂಬೈ ಕರ್ನಾಟಕದಲ್ಲಿ ಸುತ್ತಾಡಿ ಹೋದ ಆರೋಗ್ಯ ಸಚಿವರಿಗೆ ಈ ಖಬರು ಇಲ್ಲವೇ ಇಲ್ಲ.
ಇದು ಕೇವಲ ಧಾರವಾಡ, ಕಲಬುರಗಿ ವಿಷಯವಷ್ಟೇ ಅಲ್ಲ, ರಾಜ್ಯದ ಬಹುಪಾಲು ಜಿಲ್ಲೆಗಳ ಹಳ್ಳಿಗಳಿಗೆ ಕೋವಿಡ್ ಎರಡನೇ ಅಲೆ ದಾಳಿ ಇಟ್ಟಿದೆ. ಹಳ್ಳಿಗಳಲ್ಲಿ ಸಂಭವಿಸುತ್ತಿರುವ ಸಾವುಗಳು ಕೋವಿಡ್ ಸಾವು ಎಂದು ಕೌಂಟ್ ಆಗುತ್ತಿಲ್ಲ. ಒಮ್ಮಿಂದೊಮ್ಮೇಲೆ ಒಂದು ಹಳ್ಳಿಯಲ್ಲಿ ಸಾವಿನ ಸಂಖ್ಯೆ ಏರತೊಡಗಿದರೆ, ಅದು ಕೋವಿಡ್ಡೋ ಅಥವಾ ಇನ್ನೊಂದೋ ಆಗಿರಲಿ, ಸರ್ಕಾರದ ಆರೋಗ್ಯ ವ್ಯವಸ್ಥೆ ಗಮನ ಹರಿಸಬೇಕಲ್ಲವೇ?

ಜನರೇ ಜಾಗೃತರಾಗಬೇಕು. ಈ ಕೊಳಕು ವ್ಯವಸ್ಥೆಯಿಂದ ಮೂರನೇ ಅಲೆಯೂ ಬರಲಿದೆ, ನಮ್ಮ ಮಕ್ಕಳನ್ನಾದರೂ ಕಾಪಾಡಿಕೊಳ್ಳೋಣ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ:ಲಾಕ್‌ಡೌನ್‌ನ ನೀರವ ಮೌನ ಮತ್ತು ಸಾಂಕ್ರಾಮಿಕದ ಶೋಕ ಗೀತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...