Homeಚಳವಳಿನಿರುದ್ಯೋಗದ ಟೈಮ್ ಬಾಂಬ್‍ನ ಟೈಮರ್ ಶುರುವಾಗಿದೆ!

ನಿರುದ್ಯೋಗದ ಟೈಮ್ ಬಾಂಬ್‍ನ ಟೈಮರ್ ಶುರುವಾಗಿದೆ!

- Advertisement -
- Advertisement -

ಎರಡು ವರ್ಷದ ಹಿಂದೆ ಆರ್ಥಿಕ ತಜ್ಞರೊಬ್ಬರು ‘ದೇಶ ನಿರುದ್ಯೋಗದ ಟೈಮ್ ಬಾಂಬ್ ಮೇಲೆ ಕೂತಿದೆ’ ಎಂದು ಎಚ್ಚರಿಕೆ ನೀಡಿದ್ದರು. ನೋಟು ರದ್ದತಿಯ ನಂತರವಂತೂ ಉದ್ಯೋಗ ನಷ್ಟದ ಕುರಿತು ಹಲವು ಸೂಚನೆಗಳು ಬರುತ್ತಲಿದ್ದವು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದವರು ನಿರುದ್ಯೋಗದ ಸೂಚನೆ ನೀಡುತ್ತಿರುವವರ ಮೇಲೆಯೇ ದಾಳಿ ಮಾಡಿದರು. ಎಚ್ಚೆತ್ತುಕೊಳ್ಳದ ಸರ್ಕಾರಗಳು ಅದೊಂದು ಸಮಸ್ಯೆಯೇ ಅಲ್ಲ ಎಂಬಂತೆ ವರ್ತಿಸಿದವು. ಇದರ ಪರಿಣಾಮವಾಗಿ ಕಳೆದ ಎರಡು ತಿಂಗಳಿಂದ ನೂರಾರು ಸಣ್ಣ ಹಾಗೂ ಅತೀ ಸಣ್ಣ ಕೈಗಾರಿಕೆಗಳು ಮುಚ್ಚಿ ಉದ್ಯೋಗಗಳು ಕಡಿತಗೊಂಡಿದೆ. ದೊಡ್ಡ ಬಂಡವಾಳಿಗರ ಕೈಗಾರಿಕೆಗಳೂ ಸಹ ನಷ್ಟದಲ್ಲಿದ್ದು ಹಲವು ಕಾರ್ಮಿಕರು ಉದ್ಯೋಗಗಳನ್ನು ಕಳೆದುಕೊಂಡಿದ್ದು ಮತ್ತಷ್ಟು ಉದ್ಯೋಗಗಳು ಅಪಾಯದಲ್ಲಿದೆ. ಇದೆಲ್ಲವನ್ನೂ ಗಮನಿಸಿದರೆ ನಿರುದ್ಯೋಗದ ಆ ಟೈಮ್ ಬಾಂಬ್‍ನ ಟೈಮರ್ ಈಗ ಶುರುವಾಗಿದೆ ಎಂದೇ ಹೇಳಬಹುದು.

ವಾಹನಗಳ ಮಾರಾಟವು 2018ಕ್ಕೆ ಹೋಲಿಸಿ ನೋಡಿದರೆ ಜುಲೈ 2019ರ ಹೊತ್ತಿಗೆ ಶೇ.18.7ರಷ್ಟು ಕಡಿಮೆಯಾಗಿದೆ. ಇದು ಕಳೆದ 20 ವರ್ಷದಲ್ಲೇ ಅತ್ಯಂತ ಕಡಿಮೆಯಾಗಿದ್ದು, ನಿರುದ್ಯೋಗವು ಇನ್ನಷ್ಟು ಹೆಚ್ಚುವ ಅಪಾಯ ಕಾಣಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ ಆಟೋಮೊಬೈಲ್ ಕ್ಷೇತ್ರ ಒಂದರಲ್ಲೇ 2 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಇಲ್ಲವಾಗಿದೆ. ಅಲ್ಲದೆ ಇನ್ನೂ 10 ಲಕ್ಷ ಉದ್ಯೋಗಗಳ ಕಡಿತವಾಗಬಹುದು ಎಂದು ತಜ್ಞರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಸುಝುಕಿ ಮಾನೇಸರ್

ದೇಶದ ಅತೀ ದೊಡ್ಡ ಕಾರು ಉತ್ಪಾದಕ ಕಂಪನಿ ಎಂದು ಹೆಸರು ಪಡೆದಿರುವ ಹರಿಯಾಣದ ಗುರುಗಾಂವ್‍ನ ಸುಝುಕಿ ಮಾನೇಸರ್‍ನ ವಿವಿಧ ಘಟಕಗಳಲ್ಲಿ 2019ನೇ ಸಾಲಿನಿಂದ ಉತ್ಪಾದನೆಯನ್ನು ಕಡಿಮೆ ಮಾಡಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಶೇ.17ರಷ್ಟು ಉತ್ಪಾದನೆಯನ್ನು ಕಡಿತಗೊಳಿಸಿದ್ದು, ಮೇ 27ರಂದು ಮೊದಲ ಬಾರಿಗೆ ಒಂದು ದಿನದ ಉತ್ಪಾದನೆಯನ್ನೇ ನಿಲ್ಲಿಸಿತ್ತು. ಈ ಟ್ರೆಂಡ್ ಮೇ ಇಂದಲೇ ಶುರವಾಗಿದ್ದು ಕಳೆದ ಆರು ತಿಂಗಳಿನಿಂದ ಉತ್ತರ ಭಾರತದ ಮಾನೇಸರ್ ಘಟಕಗಳಲ್ಲಿ 15 ವರ್ಷ ಕೆಲಸ ಮಾಡಿದ ಅನುಭವ ಇರುವವರನ್ನೂ ಒಳಗೊಂಡಂತೆ ಒಂದೆರುಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ 50,000 ಸಾವಿರಕ್ಕೂ ಹೆಚ್ಚು ಜನರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಹಾಗೂ ಕಳೆದ ಒಂದು ತಿಂಗಳಿಂದ ಉದ್ಯೋಗನಿರತ ಕಾರ್ಮಿಕರಿಗೆ ‘ಕೆಲಸ ಏನು ಇಲ್ಲ ಮನೆಗೆ ಹೋಗಿ’ ಎಂದು ಹೇಳಲಾಗುತ್ತಿದೆ.

ತಮಿಳುನಾಡು

ಈ ರಾಜ್ಯವು ಹುಂಡೈ, ನಿಸ್ಸಾನ್, ಡೈಮ್ಲರ್, ಬಿಎಮ್‍ಡಬ್ಲು, ಯಮಾಹ, ಟಿವಿಎಸ್ ಮುಂತಾದ ಕಂಪನಿಗಳನ್ನು ಹೊಂದಿದ್ದು ವರ್ಷಕ್ಕೆ 1.4 ಮಿಲಿಯನ್ ಕಾರುಗಳನ್ನು ಉತ್ಪಾದಿಸುವ ತಮಿಳುನಾಡನ್ನು ಒಂದು ಕಾಲದಲ್ಲಿ ‘ಏಷಿಯಾದ ಡಿಟ್ರಾಯ್ಟ್’ ಎಂದೇ ಕರೆಯಲಾಗುತ್ತಿತ್ತು. ಇದೀಗ ತಮಿಳುನಾಡಿನ ಆಟೋಮೊಬೈಲ್ ಕ್ಷೇತ್ರದಲ್ಲಿ 5,000ಕ್ಕೂ ಹೆಚ್ಚು ಜನರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಮತ್ತು ಟಿವಿಎಸ್ ಕಂಪೆನಿಯು ಆಗಸ್ಟ್ 16 ಮತ್ತು 17ರಂದು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದೂ ವರದಿಯಾಗಿದೆ. ಇದಲ್ಲದೆ ಜವಳಿ ಉದ್ಯಮದಲ್ಲಿ ಶೇ.34.6ರಷ್ಟು ಉತ್ಪಾದನೆ ಕುಸಿದಿದ್ದು ಕಳೆದು ಎರಡು ವರ್ಷದಲ್ಲಿ 200ಕ್ಕು ಹೆಚ್ಚು ಕಾರ್ಖಾನೆಗಳು ಬೀಗ ಹಾಕಿವೆ. ಹೆಚ್ಚು ದಾಸ್ತಾನುಗಳಿರುವ ತಿರಪ್ಪೂರು ಹಾಗೂ ಕೊಯಮತ್ತೂರಿನಲ್ಲಿಯೂ ಮತ್ತಷ್ಟು ಕಾರ್ಖಾನೆಗಳು ಮುಚ್ಚಿಹೋಗುವ ಆತಂಕದಲ್ಲಿದೆ. ಒಟ್ಟಾರೆಯಲ್ಲಿ ಇದರಿಂದಾಗಿ 1 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ.

ಕರ್ನಾಟಕದ ಬೆಂಗಳೂರಿನ ಬಳಿಯ ಟೊಯೋಟಾ ಉತ್ಪಾದನಾ ಘಟಕದಲ್ಲಿ 1.2 ನಿಮಿಷಕ್ಕೆ ಒಂದು ಕಾರು ತಯಾರಾಗುತ್ತಿತ್ತು. ಆ ಘಟಕದಲ್ಲಿಯೂ ಇದೀಗ ತಿಂಗಳಿಗೆ 15 ದಿನ ಮಾತ್ರ ಕೆಲಸ ಎಂಬಂತಾಗಿದೆ. ಟೊಯೋಟಾ ಕಂಪನಿಯಲ್ಲಿಯೂ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ದಕ್ಷಿಣ ಏಷ್ಯಾದಲ್ಲೇ ಅತ್ಯಂತ ದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ 10 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಮುಚ್ಚುವ ಅಂಚಿನಲ್ಲಿದೆ. ಆಟೋಮೊಬೈಲ್ ಕ್ಷೇತ್ರ ಕುಸಿಯುತ್ತಿರುವ ಪರಿಣಾಮ ಎದುರಿಸುತ್ತಿರುವ ಈ ಸಣ್ಣ ಕೈಗಾರಿಕೆಗಳ ವಹಿವಾಟು ಶೇ.70ರ ಭಾರೀ ಕುಸಿತ ಕಂಡಿದೆ. ದೇಶದಲ್ಲಿ ಆಟೋಮೊಬೈಲ್ ಘಟಕಗಳಿಗೆ ಸಣ್ಣ ಉಪಕರಣಗಳನ್ನು ಪೂರೈಸುತ್ತಿದ್ದ 280 ಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳು ಈಗಾಗಲೇ ದೇಶದ ಉದ್ದಗಲಕ್ಕೂ ಮುಚ್ಚಿವೆ. ಇದರ ಬೆನ್ನಲ್ಲೇ ಈಗ 10 ಸಾವಿರ ಕೈಗಾರಿಕೆಗಳ ಸ್ಥಿತಿ ಚಿಂತಾಜನಕವಾಗಿದೆ.

2013ರಲ್ಲಿ ದೇಶದ ನಂಬರ್ 1 ಬ್ರಾಂಡ್ ಆಗಿದ್ದ ಪಾರ್ಲೆ-ಜಿ ಕಂಪನಿಯೂ ಇದೀಗ ನಷ್ಟ ಅನುಭವಿಸುತ್ತಿದ್ದು 10,000 ಉದ್ಯೋಗಗಳನ್ನು ಕಡಿತ ಮಾಡಲು ಚಿಂತನೆ ನಡೆಸಿದೆ. ಇನ್ನು ಟಾಟಾ ಸ್ಟೀಲ್ ಕಂಪನಿಯ ಲಾಭದಲ್ಲಿ ಶೇ.63ರಷ್ಟು ಇಳಿಮುಖವಾಗಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ನಷ್ಟದಲ್ಲಿದ್ದು ತನ್ನ ಸಿಬ್ಬಂದಿಗಳಿಗೆ ನೀಡಬೇಕಿದ್ದ ಸಂಬಳವನ್ನು ತಡೆಹಿಡಿದು ಜೂನ್ 29ರಂದು ನೀಡಿತ್ತು. ಖಾಸಗಿ ವ್ಯಕ್ತಿಯಾದ ಅಂಬಾನಿಯ ಜಿಯೋ ಸಿಮ್ ಪ್ರಚಾರಕ್ಕೆ ಸ್ವತಃ ಪ್ರಧಾನ ಮಂತ್ರಿಗಳೇ ಅಖಾಡಕ್ಕಿಳಿದು ರಾಯಭಾರಿಯಾಗಿದ್ದರು. ಆದರೆ ಸರ್ಕಾರಿ ಸಂಸ್ಥೆಯ ಬಿಎಸ್‍ಎನ್‍ಎಲ್‍ಅನ್ನು ಕೇಳೋರೇ ಇಲ್ಲವಾಗಿ ಜಿಯೋ ಮುಂದೆ ಮತ್ತಷ್ಟು ಮಂಕಾಗಿ ನಷ್ಟದಲ್ಲಿದೆ. ದೇಶದ ಪ್ರತಿಷ್ಟಿತ ಸಂಸ್ಥೆಯಾದ ಎಚ್‍ಎಎಲ್ ಕೂಡ ಇತಿಹಾಸದಲ್ಲಿ ಮೊದಲ ಬಾರಿಗೆ ತನ್ನ ಸಿಬ್ಬಂದಿಗಳಿಗೆ ಸಂಬಳ ನೀಡಲು ಹಣವಿಲ್ಲದೆ ಜನವರಿಯಲ್ಲಿ 1,000 ಕೋಟಿಯಷ್ಟು ಸಾಲವನ್ನು ಮಾಡಿತ್ತು.

ಜಾಹೀರಾತು ಬದಲು, ಇತಿಹಾಸದಲ್ಲಿ ಮೊದಲು?!
ಮೊನ್ನೆ ಮೊನ್ನೆವರೆಗೂ ಕೆಲಸಕ್ಕೆ ಬೇಕಾಗಿದ್ದಾರೆ ಎನ್ನುವ ಜಾಹಿರಾತುಗಳು ಕಾಣಸಿಗುತ್ತಿದ್ದವು. ಆದರೆ ಈಗ ಬೇರೆ ರೀತಿಯ ಜಾಹೀರಾತುಗಳು ಕಾಣಬರುತ್ತಿವೆ. ಭಾರತದ ನೇಕಾರರ ಸಂಸ್ಥೆಯವರು ‘ಭಾರತೀಯ ಸರ್ಕಾರಕ್ಕೆ ಮನವಿ, ನೇಯ್ಗೆ ಉದ್ಯೋಮ ಕುಸಿಯುತ್ತಿದ್ದು ಭಾರಿ ಉದ್ಯೋಗ ನಷ್ಟವಾಗಲಿದೆ. ಇದರಿಂದ ನಮ್ಮನ್ನು ಪಾರು ಮಾಡಿ’ ಎಂಬ ಮನವಿಯ ಪತ್ರಿಕಾ ಜಾಹಿರಾತನ್ನು ನೀಡಿದ್ದಾರೆ. ಅಲ್ಲದೇ ಇದೇ ರೀತಿಯಾಗಿ ‘ಬಿಕ್ಕಟ್ಟಿನಿಂದ ನಮ್ಮನ್ನು ಉಳಿಸಿ’ ಎಂದು ಭಾರತೀಯ ಟೀ ಆಸೋಸಿಯೇಷನ್‍ನವರು ಪತ್ರಿಕಾ ಜಾಹಿರಾತು ನೀಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ! ಈ ಜಾಹಿರಾತುಗಳು ದೇಶಕ್ಕೆ ಬರುತ್ತಿರುವ ಅಪಾಯದ ಮುನ್ಸೂಚನೆಯನ್ನು ತೋರುತ್ತದೆ.

ಭಾರತೀಯ ಸೇನೆಯಲ್ಲಿಯೂ ಸಿಬ್ಬಂದಿಗಳ ಕಡಿತ?
ಸುಮಾರು 12.5 ಲಕ್ಷ ಯೋಧರನ್ನು ಹೊಂದಿರುವ ಭಾರತ ವಿಶ್ವದಲ್ಲಿ ಎರಡನೇ ಅತಿದೊಡ್ಡ ಸೇನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಸೇನೆಯ ಸಮರೇತರ ವಿಭಾಗಗಳಿಂದ ಸುಮಾರು 27 ಸಾವಿರ ಯೋಧರನ್ನು ಸೇವೆಯಿಂದ ತೆಗೆದುಹಾಕಲು ಚಿಂತನೆ ನಡೆದಿದೆ ಹಾಗೂ ಇದರಿಂದ ಸರ್ಕಾರಕ್ಕೆ 1600 ಕೋಟಿ ಉಳಿಸಬಹುದು ಎಂದು ಸೇನಾ ಡೈರೆಕ್ಟರ್ ಜನರಲ್ ಅವರ ನೇತೃತ್ವದ ಉನ್ನತ ಅಧಿಕಾರಿಗಳ ತಂಡ ಶಿಫಾರಸ್ಸು ಮಾಡಿದೆ ಎಂದು ವರದಿಯಾಗಿದೆ. ಈಗಾಗಲೇ ಇತಿಹಾಸದಲ್ಲಿ ಪ್ರಥಮ ಬಾರಿಗೆ ರಿಸರ್ವ್ ಬ್ಯಾಂಕ್‍ನ ತಿಜೋರಿಯಲ್ಲಿರುವ ಹಣದಲ್ಲಿ ಲಕ್ಷಾಂತರ ಕೋಟಿ ರೂ.ಗಳನ್ನು ಸರ್ಕಾರಕ್ಕೆ ವರ್ಗಾಯಿಸಲು ಸೂಚಿಸಲಾಗಿದ್ದು, ಅದರಂತೆ ಮಾಡಲಾಗಿದೆ. ಸರ್ಕಾರವು ಸಹಾ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿಲ್ಲದಿರುವುದು ಇವೆಲ್ಲಕ್ಕೆ ಕಾರಣವೇ ಎಂಬ ಪ್ರಶ್ನೆ ಇದರಿಂದ ಏಳುತ್ತದೆ.

ಒಟ್ಟಾರೆಯಾಗಿ ಆರ್ಥಿಕ ಕುಸಿತದಿಂದಾಗಿ ಉದ್ಯೋಗದ ಮೇಲೆ ಆಗುತ್ತಿರುವ ಪರಿಣಾಮ ಆತಂಕಕಾರಿಯಾಗಿದೆ. ಇದಕ್ಕಾಗಿ ಸರ್ಕಾರಗಳು ಯಾವುದೇ ಮುನ್ನೋಟವನ್ನು ಇಟ್ಟುಕೊಂಡಂತೆ ಕಾಣುತ್ತಿಲ್ಲ. ದೊಡ್ಡ ಬಂಡವಾಳಶಾಹಿಗಳು ಜಿಎಸ್‍ಟಿಯನ್ನು ಶೇ.18ಕ್ಕೆ ಇಳಿಸಬೇಕೆಂದು ಕೇಳುತ್ತಿದ್ದಾರೆ. ವಿತ್ತ ಸಚಿವರು ಸಹ ಸಿಎಸ್‍ಆರ್‍ಅನ್ನು ಕ್ರಿಮಿನಲ್ ವ್ಯಾಪ್ತಿಯಿಂದ ತೆಗೆದು ಹಾಕುವ ಹಾಗೂ ಸ್ಟಾರ್ಟ್‍ಅಪ್ಸ್‍ಗಳಲ್ಲಿ, ತೆರಿಗೆಗಳಲ್ಲಿ ವಿನಾಯಿತಿಗಳನ್ನು ನೀಡುವ ಕ್ರಮವನ್ನು ಮಾಡಲಾಗುತ್ತಿದೆ. ಆದರೆ ಇದರಿಂದ ಸಮತೋಲನವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ದೊಡ್ಡ ಬಂಡವಾಳದ ಉದ್ಯಮಗಳು ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡುವುದಿಲ್ಲ ಎನ್ನುವುದು ಈವರೆಗಿನ ಸತ್ಯವಾಗಿದೆ. ಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕೆಗಳನ್ನು ಬಲವರ್ಧನೆ ಮಾಡುವ ಯಾವ ಕ್ರಮವೂ ಸರ್ಕಾರ ಕೈಗೊಳ್ಳುತ್ತಿಲ್ಲ. ಅಲ್ಲದೆ ಭಾರತದ ದೊಡ್ಡ ಉದ್ಯೋಗದಾತ ಕ್ಷೇತ್ರವಾದ ಕೃಷಿ ಸ್ಥಳೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡುವ ಕುರಿತೂ ಯಾವ ಅಲೋಚನೆಗಳು ಸರ್ಕಾರಗಳಿಗಿಲ್ಲದಿರುವುದು ಮತ್ತಷ್ಟು ಶೋಚನೀಯವಾಗಿದೆ.

ಇದು ಉತ್ಪ್ರೇಕ್ಷೆಯಷ್ಟೇ – ಇದು ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡುವ ವರದಿ!! – ಇನ್ನೊಂದು ಅಭಿಪ್ರಾಯ
‘ಜವಳಿ ಉದ್ಯಮದಲ್ಲಿ ಏಪ್ರಿಲ್ ನಂತರದಿಂದ ಜುಲೈವರೆಗು ಪ್ರತಿ ವರ್ಷ ಸಹಜವಾಗಿ ವಹಿವಾಟು ಕಡಿಮೆ ಇರುತ್ತದೆ. ಇದು ಕಳೆದ 40 ವರ್ಷದಿಂದ ಇರುವ ವಿದ್ಯಮಾನವಾಗಿದೆ. ಇದೇ ಸಮಯದಲ್ಲಿ ಈಗ ಉದ್ಯೋಗಗಳು ನಷ್ಟದಲ್ಲಿದೆ ಎಂದು ದೊಡ್ಡ ವಿಷಯವಾಗಿ ತೋರಿಸುತ್ತಿರುವುದು ಸರಿ ಅಲ್ಲ. ಅಲ್ಲದೆ ಕರ್ನಾಟಕದಲ್ಲಿ 82 ಅನುಸೂಚಿತ ಉದ್ಯೋಗಗಳಲ್ಲಿ 75 ಉದ್ದಿಮೆಗಳ ಕಾರ್ಮಿಕರಿಗೆ ಕನಿಷ್ಟ ವೇತನ 11,557 ರೂ ಪ್ರತಿ ತಿಂಗಳಿಗೆ ಎಂದು ನಿಗದಿಯಾಗಿದ್ದು ಇದೀಗ ಹೈ ಕೋರ್ಟಿನ ಡಿವಿಷನಲ್ ಬೆಂಚ್ ಮುಂದಿದೆ. ಇದರ ತೀರ್ಪು ಆಗಸ್ಟ್ ಕೊನೆಯಲ್ಲಿ ಬರಬೇಕಿದೆ. ಇದರ ಬೆನ್ನಲ್ಲೇ ಈ ರೀತಿಯ ವರದಿಗಳು ಬರುತ್ತಿರುವುದರ ಹಿಂದೆ ಬಂಡವಾಳಿಗರ ಪರವಾದ ಸಂಚು ಇರಬಹುದು. ಜವಳಿ ಉದ್ಯಮ ನಷ್ಟದಲ್ಲಿದೆ ಅನ್ನುವ ವರದಿಗಳು ಮಾಧ್ಯಮದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ಆಗುತ್ತಿದ್ದರೆ ಕೋರ್ಟಿನ ತೀರ್ಪಿನ ಮೇಲೆ ಪರಿಣಾಮ ಬೀರಲಿದೆ. ತೀರ್ಪು ವ್ಯತಿರಿಕ್ತವಾಗಿ ಮಾಲೀಕರ ಪರವಾಗಿ ಬಂದಿದ್ದೇ ಆದರೆ 7 ಲಕ್ಷ ಕಾರ್ಮಿಕರಿಗೆ ಅನ್ಯಾಯವಾಗಲಿದೆ.” ಎಂದು ಗಾರ್ಮೆಂಟ್ಸ್ ಕಾರ್ಮಿಕರ ಜೊತೆ ಕೆಲಸ ಮಾಡುತ್ತಿರುವ ಸಂಘಟನೆಯ ಜಯರಾಮ್ ಅವರು ಅಭಿಪ್ರಾಯ ಪಡುತ್ತಾರೆ.

ಸರೋವರ್ ಬೆಂಕಿಕೆರೆ

ಸಂಚಾಲಕರು, ಉದ್ಯೋಗಕ್ಕಾಗಿ ಯುವಜನರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. Aaa ಉತ್ತಮ ಬರಹ. ಕೊನೆಗೆ ನೀಡಲಾಗಿರುವ ಎಚ್ಚರಿಕೆ ಬಗ್ಗೆಯೂ ಗಮನಹರಿಸಬೇಕು. ಮಾಲಕರು ಯಾವತ್ತೂ ಯಾಂತ್ರೀಕರಣ ಮತ್ತು ಉದ್ಯೋಗ ಕಡಿತಕ್ಕೆ ಒಲವು ತೋರಿಸುತ್ತಾಬಂದಿರುವವರು. ಅವರು ಈ ಪರಿಸ್ಥಿತಿಯನ್ನು ನೆಪವಾಗಿಸಿ ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆ ತರುವ ಸಾಧ್ಯತೆಗಳು ತೀರಾ ಇವೆ. ಇದೇ ಹೊತ್ತಿಗೆ ಬಿಎಸ್ಎನ್‌ಎಲ್ ಸುಮಾರು 13,000 ಕೋಟಿ ರೂ. ಮೌಲ್ಯದ ಆಸ್ತಿ ಮಾರುತ್ತಿದೆ ಎಂಬ ಸುದ್ದಿಯನ್ನೂ ಗಮನಿಸಬೇಕು. ಇದನ್ನು ಕೊಳ್ಳಲಿರುವುದು ಜಿಯೋ ಎಂಬ ಕುರಿತು ಸಂಶಯವಿದೆಯೆ?

  2. There are many journalists out there, and many news paper and tv channels out there, we need why this change has happened and who is responsible for all these and what is the solution for all these losses. Modi have not given any notification regarding note Ban and he changed everything overnight, and later brought GST and keeps on telling Achha din aayega Achha din aayega, now all the rates are high and can’t afford even if I want to afford I need more salary and I’m not getting it and to get more salary I can’t keep on jumping to companies like monkey or like our politicians, You bloody politicians are ruining and screwing our county. Definitely I’ll make a sharp content on this subject and upload it in YouTube. Jab Achha din aayega na tab log mujhe Pagal Bole, agar nahin aaya toh muje Bharathvasi Bole. Jai Hind Jai Karnataka

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...