ರೈತರ ಭೂ ದಾಖಲೆಗಳ ಪರಿಶೀಲನೆಗೆ ಒಕ್ಕೂಟ ಸರ್ಕಾರ ಮುಂದಾಗಿದ್ದು, ಅಕ್ಟೋಬರ್‌ನಿಂದ ಪರಿಶೀಲನೆಗೆ ಚಾಲನೆ ನೀಡಲಾಗುತ್ತಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಂದ್ರ ಆಹಾರ ಮತ್ತು ಸರಬರಾಜು ಕಾರ್ಯದರ್ಶಿ ಸುಧಾಂಶು ಪಾಂಡೆ, “ಕನಿಷ್ಠ ಬೆಂಬಲ ಬೆಲೆಯ ಲಾಭ ರೈತರಿಗೆ ತಲುಪುತ್ತಿದೆಯೋ, ವ್ಯಾಪಾರಿಗಳಿಗೆ ತಲುಪುತ್ತಿದೆಯೋ ಎಂದು ತಿಳಿದು ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಮುಂದಿನ ತಿಂಗಳು ಭತ್ತ ಖರೀದಿಸುವ ಮೊದಲು ಭೂ ದಾಖಲೆಗಳನ್ನು ಹೋಲಿಸಿ ನೋಡಲು ಸರ್ಕಾರ ಮುಂದಾಗಿದೆ” ಎಂದು ತಿಳಿಸಿದ್ದಾರೆ.
“ಅಸ್ಸಾಂ ಮತ್ತು ಉತ್ತರಖಾಂಡ್ ರಾಜ್ಯಗಳನ್ನು ಹೊರತುಪಡಿಸಿ ಬಹುತೇಕ ಉಳಿದೆಲ್ಲ ರಾಜ್ಯಗಳಲ್ಲೂ ಪರಿಶೀಲನೆ ನಡೆಯಲಿದೆ. ಭತ್ತ ಖರೀದಿ ರಾಜ್ಯಗಳು, ಒಕ್ಕೂಟ ಸರ್ಕಾರದ ನೋಡಲ್ ಖರೀದಿ ಸಂಸ್ಥೆ ಭಾರತ ಆಹಾರ ನಿಗಮದೊಂದಿಗೆ ಸಮಗ್ರ ಭೂದಾಖಲೆಗಳನ್ನು ಸಂಯೋಜಿಸಲು ಸಿದ್ಧವಾಗಿವೆ. ರೈತರು ಗೇಣಿ ಭೂಮಿಯಲ್ಲಾಗಲಿ, ಸ್ವತಃ ಭೂಮಿಯಲ್ಲಾಗಲಿ ಬೆಳೆದ ಬೆಳೆಯನ್ನು ಸರ್ಕಾರ ಖರೀದಿಸಲಿದೆ” ಎಂದು ಹೇಳಿರುವ ಅವರು, “ಬೆಳೆದ ಬೆಳೆಗೆ ಅನುಗುಣವಾಗಿ ಬೆಲೆ ನೀಡಿ ರೈತರಿಂದಲೇ ಉತ್ಪನ್ನ ಖರೀದಿಸುವುದು ಈ ಪರಿಶೀಲನೆಯ ಉದ್ದೇಶವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.



ನಾವು ಅತಿಕ್ರಮನ್ ಜಮೀನಿಗೆ ಅರ್ಜಿ ಕೊಟ್ಟು 5 ವರ್ಷವಾಯಿತು ಇನ್ನು ನಮಗೆ ಇನ್ನು ಪಟ್ಟ ಸಿಗಲಿಲ್ಲ ದಯವಿಟ್ಟು ನಮ್ಮ ಜಮೀನಿನ ಪಟ್ಟವನ್ನು ಉತ್ತರಿಸಬೇಕಾಗಿ ವಿನಂತಿ ಸರ್ ನನ್ನ ಹೆಸರು. ಸುಂದರವ ಗಂಗಪ್ಪ ಇಂಗಳಗಕಿ ಸಾಕಿನ್ ರಾಮಪುರ ತಾಲೂಕ್ ಮುಂಡಗೋಡ ಜಿಲ್ಲಾ ಉತ್ತರಕನ್ನಡ ನಾನು ಮೂವತ್ತು ವರ್ಷದಿಂದ ಕೃಷಿ ಮಾಡುತ್ತಾ ಇದ್ದೇನೆ. ನನಗೆ ಪಟ್ಟ ಸಿಗಲಿಲ್ಲ ದಯವಿಟ್ಟು ಇದನ್ನು ಪರಿಶೀಲಿಸಿ ವಂದನೆಗಳು