Homeಕರ್ನಾಟಕಭಾರತ ಒಕ್ಕೂಟ ವ್ಯವಸ್ಥೆ; ಯಾವುದನ್ನೂ ಹೇರಲು ಸಾಧ್ಯವಿಲ್ಲ: ಸಾಮಾಜಿಕ ಚಿಂತಕ ಪ್ರೊ. ರಹಮತ್ ತರೀಕೆರೆ

ಭಾರತ ಒಕ್ಕೂಟ ವ್ಯವಸ್ಥೆ; ಯಾವುದನ್ನೂ ಹೇರಲು ಸಾಧ್ಯವಿಲ್ಲ: ಸಾಮಾಜಿಕ ಚಿಂತಕ ಪ್ರೊ. ರಹಮತ್ ತರೀಕೆರೆ

- Advertisement -
- Advertisement -

“ಭಾರತವು ಕೇಂದ್ರೀಯ ವ್ಯವಸ್ಥೆಯಲ್ಲ; ಒಕ್ಕೂಟ ವ್ಯವಸ್ಥೆ. ಯಾರೂ ಯಾರ ಮೇಲೂ ಯಾವುದನ್ನೂ ಹೇರಲು ಸಾಧ್ಯವಿಲ್ಲ” ಎಂದು ಸಾಮಾಜಿಕ ಚಿಂತಕ ಪ್ರೊ. ರಹಮತ್ ತರೀಕೆರೆ ಹೇಳಿದರು.

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ನೆನಪಿನಲ್ಲಿ ಆಯೋಜಿಸಲಾಗಿದ್ದ ‘ಗಂಡಾಂತರದಲ್ಲಿ ಗಣರಾಜ್ಯ’ ಚಿಂತನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ಕವಿರಾಜಮಾರ್ಗದ ಪದ್ಯದಲ್ಲಿ ಕಾವೇರಿಯಿಂದ ಗೋದಾವರಿವರೆಗೆ ಕರ್ನಾಟಕ ನಾಡು ಇದೆ ಎಂದು ಹೇಳುತ್ತದೆ. ಕರ್ನಾಟಕಕ್ಕೆ ಕನ್ನಡ ನಾಡು ಎಂದು ಹೇಳುತ್ತದೆ. ಈ ಕನ್ನಡ ನಾಡಿಗೆ ಸಂವಿಧಾನ ಯಾವುದು? ಪರ ಧರ್ಮ, ಪರ ವಿಚಾರಗಳನ್ನು ಸಹಿಸುವುದೇ ಅದರ ನೀತಿ ಎಂದು ಪದ್ಯ ಹೇಳುತ್ತದೆ. ಆ ಒಂದು ಪದ್ಯ, ಕರ್ನಾಟಕದ ಭೂಮಿ, ಜನರು, ವಿಶಿಷ್ಟತೆ, ಹೆಸರು, ಇರಬೇಕಾದ ಪ್ರಮುಖ ನೀತಿಗಳ ಕುರಿತು ವ್ಯಾಖ್ಯಾನ ಮಾಡುತ್ತದೆ” ಎಂದರು.

“ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವು ಸದಸ್ಯ ರಾಜ್ಯವಾಗಿದೆ. ಪ್ರತಿ ಒಕ್ಕೂಟವು ನೈಸರ್ಗಿಕವಾದ ಹಕ್ಕುಗಳನ್ನು ಹೊಂದಿರುತ್ತದೆ. ಅದರಲ್ಲಿ ಭಾಷೆಯನ್ನ ಕೇಂದ್ರೀಕರಿಸಿ, ರಾಜ್ಯವು ಸಂಘಟಿತವಾಗಬಹುದು. ಹೀಗಾಗಿಯೇ, ಸ್ವಾತಂತ್ರ್ಯ ಹೋರಾಟದ ಜೊತೆಗೆ ನಮ್ಮ ಹಿರಿಕರು ಏಕೀಕರಣ ಚಳುವಳಿಯನ್ನೂ ನಡೆಸಿದರು” ಎಂದು ವಿವರಿಸಿದರು.

“ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಏಕೀಕರಣ ಚಳುವಳಿಯಲ್ಲಿಯೂ ಭಾಗಿಯಾಗಿದ್ದರು. ಕರ್ನಾಟಕದ ರಾಷ್ಟ್ರೀಯತೆ ಬಗ್ಗೆ ನಮ್ಮ ಹಿರಿಯರು ದೇಶದ ಸ್ವಾತಂತ್ರ್ಯ ಮತ್ತು ರಾಜ್ಯದ ಏಕೀಕರಣ ಎರಡೂ ಒಟ್ಟಿಗೆ ನಡೆಯಬೇಕು ಎಂದು ಹೇಳಿದ್ದರು. ಆಲೂರು ವೆಂಕಟರಾಯರು ‘ಕರ್ನಾಟಕತ್ವದ ಸೂತ್ರಗಳು’ ಎಂದು ಪುಸ್ತಕವನ್ನು ಬರೆದಿದ್ದರು. ಅದರಲ್ಲಿ ಹಲವು ಸಮಸ್ಯೆಗಳಿದ್ದರೂ, ಅದು ಬಹಳ ಮಹತ್ವದ ಸಂಗತಿಗಳನ್ನು ಒಳಗೊಂಡಿದೆ. ಕರ್ನಾಟಕ ಏಕೀಕರಣದ ಬಳಿಕ ಅವರು ಕರ್ನಾಟಕತ್ವದ ಬಗ್ಗೆ ಬರೆದಿದದ್ದು ಮಹತ್ವದ್ದು. ಕರ್ನಾಟಕದ ಮೂಲಕವೇ ಜಗತ್ತನ್ನು ನೋಡಬೇಕೆಂದು ಅವರು ಹೇಳಿದ್ದರು. ನಮ್ಮ ಹಿರಿಯರೂ ಕೂಡ ಅದನ್ನೇ ಹೇಳಿದ್ದರು” ಎಂದು ತಿಳಿಸಿದರು.

“ನಮ್ಮ ‘ಜನಗಣಮನ’ ಭಾರತವನ್ನು ಒಂದು ಒಕ್ಕೂಟ ಎಂದೇ ಹೇಳುತ್ತದೆ. ಭಾರತದ ಎಲ್ಲ ರಾಜ್ಯಗಳು, ಭೂಪ್ರದೇಶದ ಬಗ್ಗೆ ಠ್ಯಾಗೂರ್ ಬರೆದಿದ್ದಾರೆ. ಭಾರತದ ಸರ್ಕಾರ ಕೇಂದ್ರ ಸರ್ಕಾರವಲ್ಲ; ಒಕ್ಕೂಟ ಸರ್ಕಾರ. ಯಾರೂ ಯಾವುದೇ ರಾಜ್ಯದ ಮೇಲೆ ಯಾವುದನ್ನೂ ಹೇರಲು ಸಾಧ್ಯವಿಲ್ಲ. ಹಾಗೆ ಹೇರಲು ಯತ್ನಿಸಿದಾಗ, ನಾವು ಅದನ್ನು ವಿರೋಧಿಸುತ್ತೇವೆ. ವಿರೋಧಿಸುವ ಹಕ್ಕು ನಮಗಿದೆ. ಕರ್ನಾಟಕವಾಗಲೀ, ಭಾರತವಾಗಲೀ ಎರಡೂ ಬೇರೆ-ಬೇರೆ ಎಂಟಿಟಿಯನ್ನು ಹೊಂದಿವೆ. ಅವುಗಳಲ್ಲಿರುವ ಸಮಾನ ಸಂಗತಿ ಎಂದರೆ, ಬಹು ಧರ್ಮೀಯ, ಬಹು ಭಾಷಿಕ, ಬಹು ಸಾಂಸ್ಕೃತಿಕ ಹಾಗೂ ಬಹು ಒಳ ಪ್ರಾಂತೀಯತೆಯನ್ನು ಹೊಂದಿವೆ. ಬಹುತ್ವವು ಶಾಪವಲ್ಲ. ಅದು ಪ್ರಜಾಪ್ರಭುತ್ವದ ಮೂಲವಾಗಿದೆ. ಬಹುತ್ವವನ್ನು ಕಳೆದುಕೊಂಡಾಗ ದೇಶವು ಸಮಸ್ಯೆಯನ್ನು ಎದುರಿಸುತ್ತದೆ” ಎಂದು ರಹಮತ್ ತರೀಕೆರೆ ಹೇಳಿದರು.

“ಕುವೆಂಪುಅವರ ‘ಸರ್ವರಿಗೂ ಸಮ ಪಾಲು–ಸರ್ವರಿಗೂ ಸಮ ಬಾಳು’ ಎಂಬುದು ಆರ್ಥಿಕವಾದ ಫೆಡರಲಿಸಂ ಅನ್ನು ವಿವರಿಸುತ್ತದೆ. ಅಂತೆಯೇ, ‘ಇಲ್ಲಿ ಯಾರೂ ಮುಖ್ಯರಲ್ಲ’ ಎಂದು ಹೇಳುವಾಗ, ಕೇವಲ ಮನುಷ್ಯರಷ್ಟೆ ಮುಖ್ಯವಲ್ಲ; ಮನುಷ್ಯೇತರ ಜೀವಿಗಳಿಗೂ ಭೂಮಿಯಲ್ಲಿ ಹಕ್ಕಿದೆ ಎಂದು ಹೇಳುತ್ತಾರೆ. ರಾಮಯಣ, ಮಹಾಭಾರತದಂತಹ ಗ್ರಂಥಗಳು ಭಾರತಕ್ಕಿರಬಹುದು. ಆದರೆ, ಕರ್ನಾಟಕಕ್ಕೆ ಅಂತಹ ಗ್ರಂಥಗಳನ್ನು ನೀಡಿದವರಲ್ಲಿ ಮೊದಲಿಗರು ಪಂಪ. ಸ್ವಂತಿಕೆಯ ಬಗ್ಗೆ ಕನ್ನಡವು ಯಾವಾಗಲೂ ಯೋಚಿಸಿದೆ. ನಮ್ಮ ತನವನ್ನು ನಾವು ಕಾಪಾಡಿಕೊಳ್ಳಬೇಕೆಂದು ಹಲವಾರು ಚಿಂತಕರು ಹೇಳಿದ್ದಾರೆ” ಎಂದು ತಿಳಿಸಿದರು.

“ಹಲವಾರು ಸಂದರ್ಭಗಳಲ್ಲಿ, ರಾಜರ ಆಳ್ವಿಕೆ ಇದ್ದಾಗ, ಬ್ರಿಟಿಷ್ ಆಳ್ವಿಕೆ ಇದ್ದಾಗ ಕನ್ನಡಿಗರ ಮೇಲೆ ಹಲವಾರು ರೀತಿಯ ಹೇರಿಕೆಗಳು ಕಂಡುಬಂದಿವೆ. ಈಗ, ಸಂಸ್ಕೃತ, ಹಿಂದಿ ಹೇರಿಕೆ ನಡೆಯುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂಬ ಬೋರ್ಡು ಕೆಳಗಿಳಿದು, ಎಸ್‌ಬಿಐ ಬೋರ್ಡು ಮೇಲೇರುವಾಗಲೂ ನಮ್ಮ ಮೇಲಿನ ಹೇರಿಕೆ ಕಾಣಸಿಗುತ್ತಿತ್ತು. ಇಂತಹ ಹೇರಿಕೆಗಳನ್ನು ಕನ್ನಡಿಗರು ನಿರಂತವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಈಗಲೂ ವಿರೋಧಿಸುವುದು ನಡೆಯುತ್ತಲೇ ಇದೆ” ಎಂದು ವಿವರಿಸಿದರು.

“ನಮ್ಮದೆರು ಇರುವ ಈ ಸಂದರ್ಭದಲ್ಲಿ ನಾವು ಎದುರಿಸಬೇಕಿರುವ ಬಿಕ್ಕಟ್ಟಿನ ಕುರಿತು ಹೆಚ್ಚು ಚಿಂತನೆ ನಡೆಸಿದವರು ಗೌರಿ ಮತ್ತು ಕಲ್ಬುರ್ಗಿ ಅವರು. ಈ ಇಬ್ಬರೂ ಫೆಡರಲಿಸಂನ ಪ್ರತಿಪಾದಕರು. ಅವರು ಒಂದು ಧರ್ಮ, ಒಂದು ರಾಷ್ಟ್ರ, ಒಂದು ಭಾಷೆಯಂತೆ ಒಂದು ಎಂಬುದನ್ನು ನಿರಂತರವಾಗಿ ವಿರೋಧಿಸುತ್ತಾ ಬಂದವರು. ಅವರ ಆಲೋಚನೆಗಳು ಅರ್ಥಪೂರ್ಣ ಪ್ರಜಾಪ್ರಭುತ್ವವನ್ನು, ಅರ್ಥಪೂರ್ಣ ಭಾರತವನ್ನು ಹಾಗೂ ಆರ್ಥಪೂರ್ಣ ಸಂವಿಧಾನದ ವ್ಯಾಖ್ಯಾನವನ್ನು ಹುಡುಕುತ್ತಿದ್ದವು. ಆ ಕಾರಣಕ್ಕಾಗಿಯೇ ಗೌರಿ ಹತ್ಯೆಯಾದರು. ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ನಾವು ಚರ್ಚಿಸುವ ಅಗತ್ಯವಿದೆ” ಎಂದರು.

ಇದನ್ನೂ ಓದಿ; ತುಮಕೂರು | ಜೀತ ಪದ್ದತಿ ಇನ್ನೂ ಜೀವಂತ : 36 ಕೂಲಿ ಕಾರ್ಮಿಕರ ರಕ್ಷಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...