ಕಳೆದ ತಿಂಗಳು ಸಿನೆಮಾ ಮಂದಿರ, ಕ್ರೀಡಾ ತರಬೇತಿಗಾಗಿ ಈಜುಕೊಳಗಳು ಹಾಗೂ ಹಲವು ನಿರ್ಬಂಧಗಳೊಂದಿಗೆ ಕೂಟಗಳಿಗೆ ಅನುಮತಿಸಿದ್ದ ಅನ್‌ಲಾಕ್ 5 ಮಾರ್ಗಸೂಚಿಗಳು, ನವೆಂಬರ್ 30 ರವರೆಗೆ ಮುಂದುವರೆಯುತ್ತದೆ ಎಂದು ಗೃಹ ಸಚಿವಾಲಯ ಆದೇಶಿಸಿದೆ.
“30.09.2020 ರಂದು ಹೊರಡಿಸಲಾದ ಅನ್‌ಲಾಕ್ 5 ಮಾರ್ಗಸೂಚಿಗಳನ್ನು 30.11.2020 ರವರೆಗೆ ಜಾರಿಗೆ ತರಲು ಗೃಹ ಸಚಿವಾಲಯ ಇಂದು ಆದೇಶ ಹೊರಡಿಸಿದೆ” ಎಂದು PIB ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಲಾಕ್‌ಡೌನ್ ಅವಧಿಯಲ್ಲಿ 1,550 ಟನ್ ಆಹಾರಧಾನ್ಯ ಹಾಳು!
ಕೊರೊನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅತ್ಯುನ್ನತ ಕಾರ್ಯಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಸಚಿವಾಲಯವು ಸೆಪ್ಟೆಂಬರ್‌ನಲ್ಲಿ ಸಿನೆಮಾ ಮಂದಿರಗಳನ್ನು 50% ಸೀಟುಗಳು ತುಂಬುವಂತೆ ಪುನರಾರಂಭಿಸಲು ಅನುಮತಿ ನೀಡಿತ್ತು.
ಅಂತರರಾಷ್ಟ್ರೀಯ ವಿಮಾನ ಪ್ರಯಾಣ ಮತ್ತು ಮುಚ್ಚಿದ ಸ್ಥಳದ ಕೂಟಗಳಲ್ಲಿ 200 ಜನರು ಮೀರದಂತೆ 50% ತುಂಬುವಂತೆ ಸಚಿವಾಲಯವು ಅನುಮತಿ ನೀಡಿತ್ತು; ಅದರಂತೆ ಮುಂದಿನ ಆದೇಶದವರೆಗೂ ಈ ಎಲ್ಲಾ ಚಟುವಟಿಕೆಗಳು ಮೊದಲಿನಂತೆ ಕಾರ್ಯನಿರ್ವಹಿಸುತ್ತವೆ.
ಇದನ್ನೂ ಓದಿ: ಲಾಕ್‌ಡೌನ್‌ನಿಂದಾಗಿ ಆರ್ಥಿಕತೆ ನೆಲಕಚ್ಚಿದ್ದಾಗ ಅಂಬಾನಿ ಪ್ರತಿ ಗಂಟೆಗೆ ಸಂಪಾದಿಸಿದ್ದು ಎಷ್ಟು ಗೊತ್ತೇ?


