Homeಅಂತರಾಷ್ಟ್ರೀಯಗಾಲ್ವಾನ್‌ನಲ್ಲಿ ಸೈನಿಕರ ಹತ್ಯೆ ಖಂಡನೀಯ; ಭಾರತದ ಪರ ನಾವಿದ್ದೇವೆ: ಮೈಕ್ ಪೊಂಪಿಯೋ

ಗಾಲ್ವಾನ್‌ನಲ್ಲಿ ಸೈನಿಕರ ಹತ್ಯೆ ಖಂಡನೀಯ; ಭಾರತದ ಪರ ನಾವಿದ್ದೇವೆ: ಮೈಕ್ ಪೊಂಪಿಯೋ

ನಮ್ಮ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯ ಬೆದರಿಕೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಅಮೇರಿಕಾ ಭಾರತದೊಂದಿಗೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.

- Advertisement -
- Advertisement -

ಚೈನೀಸ್ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಮತ್ತು ಭಾರತದ ನಡುವಿನ ಘರ್ಷಣೆಯ ಭಾಗವಾಗಿ ಜೂನ್‌ನಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ 20 ಭಾರತೀಯ ಸೈನಿಕರ ಹತ್ಯೆಗೆ ಸಂಬಂಧಿಸಿದಂತೆ ಅಮೇರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಇಂದು ಮಾತನಾಡಿ ಭಾರತಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು.

“ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಭಾರತೀಯ ಸಶಸ್ತ್ರ ಪಡೆಗಳ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರನ್ನು ಗೌರವಿಸಲು ನಾವು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದೇವೆ. ಈ ಸ್ಮಾರಕದಲ್ಲಿ ಗಾಲ್ವಾನ್ ಕಣಿವೆಯಲ್ಲಿ ಕೊಲ್ಲಲ್ಪಟ್ಟ 20 ಮಂದಿ ಭಾರತೀಯ ಸೈನಿಕರೂ ಇದ್ದಾರೆ. ನಮ್ಮ ಸಾರ್ವಭೌಮತ್ವ, ಸ್ವಾತಂತ್ರ್ಯ ಬೆದರಿಕೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಅಮೇರಿಕಾ ಭಾರತದೊಂದಿಗೆ ನಿಲ್ಲುತ್ತದೆ” ಎಂದು 2+2 ಭಾರತ-ಅಮೇರಿಕಾ ಸಂವಾದದ ನಂತರ ಮೈಕ್ ಪೊಂಪಿಯೊ  ಜಂಟಿ ಹೇಳಿಕೆ ನೀಡಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ: ತೆಲಂಗಾಣ ಉಪಚುನಾವಣೆ: ಪೊಲೀಸರು ವಶಪಡಿಸಿಕೊಂಡ ಹಣ ಕಸಿದು ದುರ್ವರ್ತನೆ ತೋರಿದ ಬಿಜೆಪಿ ಕಾರ್ಯಕರ್ತರು!

“ಅಮೇರಿಕಾ ಮತ್ತು ಭಾರತವು ಎಲ್ಲಾ ರೀತಿಯ ಬೆದರಿಕೆಗಳ ವಿರುದ್ಧ ನಮ್ಮ ಸಹಕಾರವನ್ನು ಬಲಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕಳೆದ ವರ್ಷ ನಾವು ಸೈಬರ್ ವಿಷಯಗಳ ಬಗ್ಗೆ ನಮ್ಮ ಸಹಕಾರವನ್ನು ವಿಸ್ತರಿಸಿದ್ದೇವೆ. ಈಗಾಗಲೇ ನಮ್ಮ ನೌಕಾಪಡೆಗಳು ಹಿಂದೂ ಮಹಾಸಾಗರದಲ್ಲಿ ಜಂಟಿ ಕಾರ್ಯಾಚರಣೆಯನ್ನು ನಡೆಸಿವೆ” ಎಂದು ಹೇಳಿದ್ದಾರೆ.

ಚೀನಾದ ಆಡಳಿತ ಪಕ್ಷವು ಕಾನೂನಿನ ನಿಯಮ ಮತ್ತು ಪಾರದರ್ಶಕತೆಯನ್ನು ಅನುಸರಿಸುತ್ತಿಲ್ಲ ಎಂದು ಪೊಂಪಿಯೊ ಆರೋಪಿಸಿದ್ದಾರೆ.


ಇದನ್ನೂ ಓದಿ: ಬಿಹಾರ ದುರ್ಗಾ ಮೂರ್ತಿ ವಿಸರ್ಜನೆಯಲ್ಲಿ ಗಲಾಟೆ, ಪೊಲೀಸರಿಂದ ಅಮಾನವೀಯ ದಾಳಿ: ಓರ್ವ ಬಲಿ, 27…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...